Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ. 04 ರಂದು ನಡೆಸಿದ ನೀಟ್‌ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಸುಮಂತ ಗೌಡ ಎಸ್. ಡಿ. 99.92 ಪರ್ಸಂಟೈಲ್‌ ನೊಂದಿಗೆ 596 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ 1623ನೇ ರ‍್ಯಾಂಕ್‌, ಪ್ರಜ್ವಲ್ ಎಸ್. ಎನ್ 99.68 ಪರ್ಸಂಟೈಲ್‌ ನೊಂದಿಗೆ 588 ಅಂಕಗಳನ್ನು ಗಳಿಸಿ, ರಾಷ್ಟ್ರಮಟ್ಟದಲ್ಲಿ 2483ನೇ ರ‍್ಯಾಂಕ್‌, ರಾಜೇಶ್ ಹೆಚ್ ಎ 99.85 ಪರ್ಸಂಟೈಲ್‌ ನೊಂದಿಗೆ 583 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ 3025ನೇ ರ‍್ಯಾಂಕ್‌ ಪಡೆದು ಅಭೂತಪೂರ್ವ ಸಾಧನೆಗೈದಿದ್ದಾರೆ. ಇತರ ವಿದ್ಯಾರ್ಥಿಗಳಾದ ಸಾತ್ವಿಕ್ ಭಂಡಾರಿ 560, ಹೇಮಂತ್ ಕುಮಾರ್ 551, ಪ್ರಾಪ್ತಿ ಶೆಟ್ಟಿ 541, ಪ್ರಥಮ್ ಪಟೇಲ್ ಹೆಚ್. ಡಿ 539, ಸಂಗೀತಾ ಬಿ. ಎಮ್ 536, ಶ್ರೀನಿಧಿ ಡಿ 531, ವಿನಯ್ ಎಸ್ 523, ಸ್ನೇಹಾ ಬಸವರಾಜ್ ಬಿ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಟದ ಪಂಚವರ್ಣ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಅವರ ಪರಿಸರ ಕಾಳಜಿ ಆಂದೋಲನ ಮನೆ ಮನಗಳನ್ನು ತಲುಪುತ್ತಿದೆ ಇದು ಅಭಿನಂದನೀಯ ಎಂದು ಶಿಕ್ಷಣ ತಜ್ಞ, ಯಕ್ಷಗುರು ಎಂ.ಎನ್. ಮಧ್ಯಸ್ಥ ಅಭಿಪ್ರಾಯಪಟ್ಟರು. ಅವರು ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಜೆಸಿಐ ಸಿನಿಯರ್ ಲಿಜನ್ ಕೋಟ ಇವರ ಸಹಯೋಗದೊಂದಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ ಮಣೂರು ಇವರ ಸಂಯೋಜನೆಯೊಂದಿಗೆ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಅನ್ನಪೂರ್ಣ ನರ್ಸರಿ ಪೇತ್ರಿ ಕೊಡ ಮಾಡಿದ ಗಿಡಗಳನ್ನು ನಡುವ 256ನೇ ಭಾನುವಾರದ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ, ಮಾತನಾಡಿದರು. ಸಂಘ ಸಂಸ್ಥೆಗಳು ಸಮಾಜಮುಖಿ ಚಿಂತನೆಗಳೊಂದಿಗೆ ಕಾರ್ಯನಿರ್ವಹಿಸುವುದು ಸಹಜ ಆದರೆ ಪಂಚವರ್ಣ ಸಂಘಟನೆ ಪರಿಸರಕ್ಕಾಗಿ ಪ್ರತಿ ಭಾನುವಾರ ತಮ್ಮನ್ನು ಅರ್ಪಿಸಿಕೊಂಡಿದೆ. ಕಳೆದ ಐದಾರು ವರ್ಷಗಳಿಂದ ಕೋಟ ಸುತ್ತಮುತ್ತಲಿನ ಪರಿಸರದಲ್ಲಿ ಹಸಿರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಯಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳ ಪ್ರವರ್ಗ-3 ಎ ನಲ್ಲಿ ಬರುವ ಒಕ್ಕಲಿಗ ಸಮುದಾಯಗಳಿಗೆ ಸೇರಿದ ಕ್ರಮ ಸಂಖ್ಯೆ 1 ರ (ಎ) ಯಿಂದ (ಟಿ) ವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾಒðಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ ಒಕ್ಕಲಿಗ, ದಾಸ್‌ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಹಳ್ಳಿಕಾರ್, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮ, ರಡ್ಡಿ, ಗೌಂಡರ್, ನಾಮಧಾರಿಗೌಡ, ಉಪ್ಪಿನಕೊಳಗ/ ಉತ್ತಮ ಕೊಳಗ ಸಮುದಾಯಕ್ಕೆ ಸೇರಿದ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಶೈಕ್ಷಣಿಕ ಸಾಲ ಯೋಜನೆ ಹಾಗೂ ವಿದೇಶ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗ ಸಾಲ ಯೋಜನೆಯಡಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಪ್ರಸ್ತುತ ಪೋಷಕರ ಅಭಿರುಚಿಗಿಂತ ವಿದ್ಯಾರ್ಥಿಗಳ ಅಭಿರುಚಿಗೆ ಪ್ರೋತ್ಸಾಹ ದೊರೆಯಬೇಕು ಎಂಬ ನೆಲೆಯಲ್ಲಿ ಅತ್ಯಂತ ಹಿಂದುಳಿದ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಮೂಲ ಸೌಕರ್ಯದ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸುವಲ್ಲಿ ಹಾಗೂ ಸಮಾಜದ ಕಟ್ಟಕಡೆಯ ಮಗುವೂ ಕೂಡ ಶಿಕ್ಷಣವನ್ನು ಪಡೆಯಬೇಕೆಂಬ ಉದ್ದೇಶದಿಂದ ನಮ್ಮ ಸಂಘದ ಅಧ್ಯಕ್ಷರು ಕೈಲಾದ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಗುಡೇ ಶ್ರೀ ಮಹಾಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಕಿರಣ್ ಶೆಟ್ಟಿ ಹೇಳಿದರು. ಅವರು ಹೇರಂಜಾಲು ಹಲಸಿನಕಟ್ಟೆಮನೆ ದಿ. ಗುಲಾಬಿ ನಾರಾಯಣ ಶೆಟ್ಟಿ ಸ್ಮರಣಾರ್ಥ ಪುತ್ರ ಎಚ್. ಜಯಶೀಲ ಶೆಟ್ಟಿ ಅವರು ಸುಳ್ಸೆ ಮತ್ತು ಅರೆಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ವಾಹನವನ್ನು ಸೋಮವಾರ ಸಂಸ್ಥೆ ಅಧ್ಯಕ್ಷ ಎಚ್. ಜಯಶೀಲ ಶೆಟ್ಟಿ ಅನುಪಸ್ಥಿತಿಯಲ್ಲಿ ಹಸ್ತಾಂತರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಸೌಲಭ್ಯ ಕೊಟ್ಟಾಗ ಅಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುತ್ತದೆ. ಅನುಭವಿ ಶಿಕ್ಷಕರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಬೇರೆ ಬೇರೆ ಭಾಷೆಗಳಲ್ಲಿರುವ ಸಾಹಿತ್ಯಗಳ ನಡುವೆ  ವಿನಿಮಯಗಳು ನಡೆಯುವ ಮೂಲಕವಷ್ಟೇ ಯಾವುದೇ ಸಾಹಿತ್ಯ ಬೆಳವಣಿಗೆ ಸಾಧಿಸಲು ಸಾಧ್ಯ. ಎರಡು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ  ಭಾಷಾಂತರಕಾರರಿಲ್ಲದೆ ಆ ರೀತಿಯ ವಿನಿಮಯ ಸಾಧ್ಯವಿಲ್ಲ ಎಂದು ಕನ್ನಡದ ಹಿರಿಯ ಲೇಖಕಿ ವೈದೇಹಿ ಹೇಳಿದರು. ಅವರು ಮಣಿಪಾಲದ ಅವರ ಮನೆ ‘ಇರುವಂತಿಗೆ’ಯಲ್ಲಿ ನಡೆದ ಪುಸ್ತಕ ಬಿಡುಗಡೆಯ ಸರಳ ಸಮಾರಂಭದಲ್ಲಿ ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಮಾಹೆ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ವರದೇಶ್ ಹಿರೇಗಂಗೆ, ಕೃತಿಕಾರ್ತಿ ಪಾರ್ವತಿ ಐತಾಳ್, ಸಾಂಸ್ಕೃತಿಕ ಸಂಘಟಕರಾದ ಶ್ರೀನಿವಾಸ ಮೂರ್ತಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಸ್ರೂರು ಶಾರದಾ ಕಾಲೇಜಿನ ಕನ್ನಡ ಉಪನ್ಯಾಸಕ ಕುಮಾರ್ ಸ್ವಾಗತಿಸಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಶೋಧಕಿ ಕೌಸ್ತುಭ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಸಾಲಿಗ್ರಾಮದ ತರಕಾರಿ ವ್ಯಾಪಾರಿ ವಿಠ್ಠಲ ಪೈ (57) ಅವರು ಸೋಮವಾರದಂದು ವಿಧಿವಶರಾದರು. ಸಾಲಿಗ್ರಾಮ ಪರಿಸರದಲ್ಲಿ ಭಜನಾ ಪ್ರವೀಣರಾಗಿ ಹೆಸರಾಂತರಾಗಿದ್ದ ಅವರು ರಾಮನ ಅನನ್ಯ ಭಕ್ತರಾಗಿದ್ದರು. ಆಗಿಂದಾಗ್ಗೆ ನಮ್ಮ ಶ್ರೀ ಗುರು ನರಸಿಂಹ ದೇವಳಕ್ಕೆ ತರಕಾರಿಯನ್ನು ಸೇವಾ ರೂಪದಲ್ಲಿ ತಂದು ಒಪ್ಪಿಸುತ್ತಿದ್ದರು. ಪೈ ಅವರಿಗೆ ಅದೆಷ್ಟು ಬಾರಿ ಶ್ರೀ ದೇವರ ಪ್ರಸಾದವನ್ನು ನೀಡಿ ಶುಭವನ್ನು ಹಾರೈಸಿದ್ದೇವೋ ಅದರ ಲೆಕ್ಕವೇ ಸಿಗುತ್ತಿಲ್ಲ. ತೆಕ್ಕಟ್ಟೆ ಕೊಮೆಯಲ್ಲಿ ಪೈ ಮತ್ತು ಸಮಾನ ಮನಸ್ಕ ರಾಮಭಕ್ತರ ತನು ಮನ ಧನ ಸೇವೆಯಿಂದ ಅಲ್ಲಿನ ಶ್ರೀ ರಾಮ ಮಂದಿರವು ನಿತ್ಯ ಪೂಜಾಯುಕ್ತ ಶ್ರದ್ಧಾಕೇಂದ್ರವಾಗಿ ರೂಪುಗೊಂಡಿದೆ. ಮೃತರು ಪತ್ನಿ ಹಾಗೂ ಮೂವರು ಪುತ್ರಿಯವರನ್ನು ಅಗಲಿದ್ದಾರೆ

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ,ಜೂ.16: ತಾಲೂಕಿನ ಕುಂದಾಪುರ ರೈಲ್ವೆ ನಿಲ್ದಾಣದ ಸಮೀಪದ ಕಳಂಜೆ ಎಂಬಲ್ಲಿ ಬೆಳಿಗ್ಗೆ 8:30ರ ಸುಮಾರಿಗೆ ಕೊಂಕಣ್‌ ರೈಲ್ವೆ ಮಾರ್ಗದ ಹಳಿಗಳ ಮೇಲೆ ಮರ ಬಿದ್ದು ವಿದ್ಯುತ್‌ ತಂತಿಗಳು ತುಂಡಾಗಿದ್ದರಿಂದ ಎಲ್ಲಾ ರೈಲುಗಳು 4 ಗಂಟೆಗೂ ಹೆಚ್ಚು ಕಾಲ ವಿಳಂಬ ಸಂಚಾರ ಮಾಡಿದ ಘಟನೆ ಸೋಮವಾರ ನಡೆದಿದೆ. ಕಳಂಜೆ ಬಳಿ ಮರ ಬಿದ್ದು ರೈಲ್ವೆ ವಿದ್ಯುತ್‌ ತಂತಿಗಳು ತುಂಡಾಗಿದ್ದವು. ಇಲಾಖೆಯಿಂದ ಮರವನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಯಿತಾದರೂ ಮಳೆಯ ನಡುವೆ ವಿದ್ಯುತ್‌ ತಂತಿಗಳನ್ನು ಜೋಡಿಸುವ ಕಾರ್ಯ ವಿಳಂಬವಾಗಿತ್ತು. ಈ ನಡುವೆ ಮಧ್ಯಾಹ್ನ 12:30ರ ವೇಳೆಗೆ ರೈಲ್ವೆ ಹಳಿಗಳು ಕ್ಲೀಯರ್‌ ಮಾಡಿದ್ದರಿಂದ ಡಿಸೆಲ್‌ ಇಂಜಿನ್‌ ಬಳಸಿ ಬೈಂದೂರು ಕಡೆಯಿಂದ ಬಂದ ರೈಲನ್ನು ಕುಂದಾಪುರ ಕಡೆಗೂ, ಕುಂದಾಪುರ ಕಡೆಯಿಂದ ಬಂದ ರೈಲನ್ನು ಸೇನಾಪುರದ ತನಕ ಎಳೆದೊಯ್ಯಲಾಯಿತು. ಅಲ್ಲಿಂದ ಮುಂದೆ ವಿದ್ಯುತ್ ಇಂಜಿನ್‌ ಮೂಲಕ ರೈಲನ್ನು ಮುನ್ನಡೆಸಲಾಯಿತು. ಅಷ್ಟರಲ್ಲಾಗಲೇ ಎಲ್ಲಾ ರೈಲುಗಳನ್ನು ನಾಲ್ಕು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿದ್ದವು. ಸಂಜೆ ವೇಳೆಗೆ ತುಂಡಾಗಿದ್ದ ವಿದ್ಯುತ್‌…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜೂ.16: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 17ರಂದು ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ, ಪಿಯುಸಿ ಹಾಗೂ ಐಟಿಐ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅವರು ರಜೆ ಘೋಷಿಸಿ ಆದೇಶಿಸಿದ್ದಾರೆ. ಉಳಿದಂತೆ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕಳೆದ ಆರು ದಿನಗಳಿಂದ ರೆಡ್‌ ಅಲರ್ಟ್‌ ಇದ್ದುದರಿಂದ ಗುರುವಾರ ಹಾಗೂ ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು. ಶನಿವಾರ ಮಳೆ ಕಡಿಮೆಯಿದ್ದುದರಿಂದ ಎಂದಿನಂತೆ ತರಗತಿಗಳು ನಡೆದಿದ್ದವು. ಸೋಮವಾರ ಆರೆಂಜ್‌ ಅಲರ್ಟ್‌ ಇದ್ದುದರಿಂದ ಜಿಲ್ಲಾಡಳಿತ ನೇರವಾಗಿ ರಜೆ ಘೋಷಿಸದೇ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವ ನಿರ್ಧಾರವನ್ನು ಶಾಲಾಡಳಿತಕ್ಕೆ ಬಿಟ್ಟಿದ್ದು, ಕೆಲವು ಶಾಲೆಗಳು ಅದಾಗಲೇ ರಜೆಯನ್ನೂ ಘೋಷಿಸಿಕೊಂಡಿದ್ದವು. ಆದರೆ ಅಂತಿಮವಾಗಿ ಜಿಲ್ಲಾಡಳಿತವೇ ರಜೆ ನೀಡಿತ್ತು. ಮಂಗಳವಾರವೂ ಅಧಿಕ ಮಳೆ ಮುನ್ಸೂಚನೆ ಇರುವುದರಿಂದ ರಜೆ ಘೋಷಿಸಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ,ಜೂ.16: ತಾಲೂಕಿನ ಹೆಮ್ಮಾಡಿ – ಕೊಲ್ಲೂರು ಮಾರ್ಗದಲ್ಲಿ ಬಸ್ಸಿಗೆ ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಅಪಘಾತದ ಸಂದರ್ಭ ಬೈಕಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ. ಮೃತ ಬೈಕ್ ಸವಾರನನ್ನು ಸಿಗಂದೂರಿನ ಶರತ್‌ (25) ಎಂದು ಗುರುತಿಸಲಾಗಿದೆ. ಸಿಗಂದೂರಿನಿಂದ ಕುಂದಾಪುರಕ್ಕೆ ಸಂಬಂಧಿಕರ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕೆಂಚನೂರು ಮಲ್ಲಾರಿ ರಸ್ತೆಯ ತಿರುವಿನಲ್ಲಿ ಸವಾರ ನಿಯಂತ್ರಣ ತಪ್ಪಿ ಹೆಮ್ಮಾಡಿ ಕಡೆಯಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸಂಪೂರ್ಣ ಬೆಂಕಿಯಿಂದಾಗಿ ಸುಟ್ಟು ಕರಕಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕಳೆದ ಐದು ದಿನಗಳ ಹಿಂದಷ್ಟೇ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನು ಏಕಾಏಕಿ ಬದಲಾವಣೆ ಮಾಡಲಾಗಿದ್ದು, ನೂತನ ಅಧ್ಯಕ್ಷರಿಗೆ ಪಟ್ಟ ಕಟ್ಟಲಾಗಿದೆ. ಸೋಮವಾರ ಉಡುಪಿಯಲ್ಲಿ ಜರುಗಿದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಈ ನಡೆದ ಬಗ್ಗೆ ನಿರ್ಗಮಿತ ಅಧ್ಯಕ್ಷ ಬಿ. ಕಿಶೋರ್‌ ಕುಮಾರ್‌ ಕುಂದಾಪುರ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 2024ರ ಜನವರಿಯಲ್ಲಿ ಕಿಶೋರ್‌ ಕುಮಾರ್‌ ಅವರನ್ನು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಏಕಾಏಕಿ ಅಧ್ಯಕ್ಷ ಅವಧಿಗೆ ಪೂರ್ವದಲ್ಲೇ ನಿರ್ದಿಷ್ಟ ಕಾರಣ ನೀಡದೇ ಅವರಿಂದ ಅಧ್ಯಕ್ಷ ಸ್ಥಾನವನ್ನು ಕಸಿದುಕೊಳ್ಳಲಾಗಿದೆ. ಈ ಮೂಲಕ ಬಿಜೆಪಿಯ ಬಣ ರಾಜಕೀಯದ ಬಣ ಮತ್ತೊಮ್ಮೆ ಬಯಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶೋರ್‌ ಕುಮಾರ್‌ ಅವರು ಮೊದಲಿನಿಂದಲೂ ನನಗೆ ಕಾರ್ಯಕರ್ತರ ಜೊತೆಗೆ ಹೆಚ್ಚಿನ ಒಡನಾಟವಿದ್ದು, ಜಿಲ್ಲಾಧ್ಯಕ್ಷನಾದ ಬಳಿಕವೂ ಅದನ್ನೇ ಮುಂದುವರಿಸಿದ್ದೆ. ನಾಯಕ ಹಿಂದೆ ತಿರುಗುವು ಕೆಲಸ ಮಾಡಿಲ್ಲ. ಜಿಲ್ಲಾಧ್ಯಕ್ಷನಾದ…

Read More