ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಡೇರಹೋಬಳಿ ಗ್ರಾಮದ ಬಿ.ಸಿ ರಸ್ತೆ ಕಾಂತರಬೆಟ್ಟು ನಿವಾಸಿ ಜಯೇಂದ್ರ (26) ಎಂಬ ಯುವಕನು ಜೂನ್ 23 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಕೋಲು ಮುಖ, ಸದೃಢ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ ಹೊಂದಿರುತ್ತಾರೆ. ಸದ್ರಿ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-230338, ಡಿ.ವೈ.ಎಸ್.ಪಿ ಕುಂದಾಪುರ ಮೊ.ನಂ: 9480805422, ಪಿ.ಐ ಕುಂದಾಪುರ ಠಾಣೆ ಮೊ.ನಂ: 9480805455, ಪಿ.ಎಸ್.ಐ ಕುಂದಾಪುರ ಠಾಣೆ ಮೊ.ನಂ: 8277988957 ಹಾಗೂ 8277988959 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ ಇಲ್ಲಿನ ವಿದ್ಯಾದಾಯಿನಿ ಸಭಾಭವನದಲ್ಲಿ ಈ ದಿನ ವಿಜ್ಞಾನ ಪ್ರಯೋಗಾಲಯಕ್ಕೆ ಅಗತ್ಯವಿರುವ ಉಪಕರಣಗಳನ್ನು ಮತ್ತು ತರಗತಿಗಳಿಗೆ ಗ್ರೀನ್ ಬೋರ್ಡ್ ಗಳನ್ನು ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಇವರ ವತಿಯಿಂದ ನೀಡಲಾಯಿತು. ರೋಟರಿ ಕುಂದಾಪುರ ಮಿಡ್ ಟೌನ್ ಇದರ ಅಧ್ಯಕ್ಷರಾದ ರೊಟೇರಿಯನ್ ಶೇಖರ್. ಎನ್. ಶೆಟ್ಟಿ aವರು ತಮ್ಮ ಅಧ್ಯಕ್ಷೀಯ ಅವಧಿಯ ಕೊನೆಯ ದಿನದ ಕೊನೆಯ ಕಾರ್ಯಕ್ರಮವನ್ನು ತಮ್ಮ ಊರಿನ ಶಾಲೆಗೆ ದೇಣಿಗೆ ನೀಡಿ, ಮಕ್ಕಳಿಗೆ ಉತ್ತಮ ಕಿವಿಮಾತು ಹೇಳುವ ಮೂಲಕ ನಡೆಸಿಕೊಟ್ಟರು ಮತ್ತು ಇದರೊಂದಿಗೆ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಮಾಡಿದ ಅನೇಕಾನೇಕ ಸಮಾಜ ಸೇವೆಗಳಿಂದ ಸಾರ್ಥಕತೆ ಕಂಡು ಕೊಂಡಿರುವುದಾಗಿ ತಿಳಿಸಿದರು. ಗ್ರಾಮೀಣ ಭಾಗದ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯದ ಕನಸು ನನಸಾಗಿಸುವಲ್ಲಿ ರೊಟೇರಿಯನ್ ಶೇಖರ್. ಎನ್. ಶೆಟ್ಟಿ ಅವರ ದೇಣಿಗೆ ಬೃಹತ್ ಕೊಡುಗೆಯಾಗಿದೆ ಎಂದು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮರವಂತೆಯ ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ವತಿಯಿಂದ ಮರವಂತೆ ಬ್ರೇಕ್ ವಾಟರ್ ಸಮೀಪದ ಕಡಲ ತೀರದಲ್ಲಿ ಸಮುದ್ರ ಪೂಜೆ ಸೋಮವಾರ ನಡೆಯಿತು. ಇಂದು ಬೆಳಿಗ್ಗೆ ಮರವಂತೆಯ ಶ್ರೀ ರಾಮ ಮಂದಿರದ, ಶ್ರೀ ಗಂಗಾಧರೇಶ್ವರ ದೇವಸ್ಥಾನ ಹಾಗೂ ವರಾಹ ಸ್ವಾಮಿ ದೇವಸ್ಥಾನದ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದರು. ಕರಾವಳಿ ಮಹಾ ಬೊಬ್ಬರ್ಯ ದೇವಸ್ಥಾನದಲ್ಲಿ ಗಣಹೋಮ ಸೇವೆ ಸಲ್ಲಿಸಿದ ಬಳಿಕ ಮರವಂತೆ ಬ್ರೇಕ್ವಾಟರ್ನ ಕಡಲ ತೀರದಲ್ಲಿ ಸಮುದ್ರ ರಾಜನಿಗೆ ಹಾಲು, ಅಣಬೆ, ಹಣ್ಣು, ಹಳದಿ ಕುಂಕುಮದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ಮಹಾಬಲೇಶ್ವರ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆಯ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡಿತು. ಮುಂದಿನ ಮೀನುಗಾರಿಕಾ ಋತುವಿನಲ್ಲಿ ಸಮೃದ್ಧ ಮತ್ಸ್ಯ ಸಂಪತ್ತು ದೊರೆಯುವಂತಾಗಲಿ, ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಯಾವುದೇ ಅಪಾಯ ಎದುರಾಗದಿರಲಿ, ಪ್ರಕೃತಿ ವಿಕೋಪಗಳು ಬಾರದಿರಲಿ, ಎಲ್ಲಾ ಮೀನುಗಾರರ ಬಾಳಿನಲ್ಲಿ ಸುಖ ಶಾಂತಿ ನೆಮ್ಮದಿ ಇರುವಂತಾಗಲಿ, ಸಮಸ್ತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಿದರೆ ಮುಂದಿನ ದಿನಗಳು ಹಸಿರು ಕ್ರಾಂತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೆ.ಎಂ.ಎಫ್ ನಿರ್ದೇಶಕ ಕೆ. ಶಿವಮೂರ್ತಿ ಉಪಾಧ್ಯಾಯ ಹೇಳಿದರು. ಅವರು ಕೋಟತಟ್ಟು ಪಡುಕರೆ ಡೈರಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಜೆಸಿಐ ಸಿನಿಯರ್ ಲಿಜನ್ ಕೋಟ ಇವರ ಸಹಯೋಗದೊಂದಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ ಕೋಟತಟ್ಟು ಪಡುಕರೆ ಇವರ ಸಂಯೋಜನೆಯೊಂದಿಗೆ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಅನ್ನಪೂರ್ಣ ನರ್ಸರಿ ಪೇತ್ರಿ, ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ ಇವರು ಕೊಡ ಮಾಡಿದ ಗಿಡಗಳನ್ನು ನಡುವ 261ನೇ ಭಾನುವಾರದ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿದರು. ಪ್ರಕೃತಿಗಾಗಿ ಪಂಚವರ್ಣ ಸಂಘಟನೆ ತನ್ನನ್ನು ತಾನು ಅರ್ಪಿಸಿಕೊಂಡಿದೆ ಇದು ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ ಪ್ರಸ್ತುತ ಮನುಕುಲದಲ್ಲಿ ಈ ರೀತಿಯ ಸಾಮಾಜಿಕ ಸೇವೆ ಅಮೋಘವಾದದ್ದು ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಕರಾವಳಿ ಕಾವಲು ಪೋಲಿಸ್ ಠಾಣೆಯಿಂದ ವರ್ಗಾವಣೆಗೊಂಡ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭವು ಗಂಗೊಳ್ಳಿಯ ಕರಾವಳಿ ಕಾವಲು ಪೋಲಿಸ್ ಠಾಣೆಯಲ್ಲಿ ನಡೆಯಿತು. ಗಂಗೊಳ್ಳಿ ಕರಾವಳಿ ಕಾವಲು ಪೋಲಿಸ್ ಠಾಣೆಯಿಂದ ವರ್ಗಾವಣೆಗೊಂಡ ಎಎಸ್ಸೈ ಭಾಸ್ಕರ, ಸಿಬ್ಬಂದಿಗಳಾದ ಸುರೇಂದ್ರ ಡಿ., ಉದಯ ಗೌಡ ಹಾಗೂ ಯಶೋಧ ಅವರನ್ನು ಠಾಣೆಯ ಪರವಾಗಿ ಇನ್ಸಪೆಕ್ಟರ್ ವಸಂತ ರಾಮ ಆಚಾರ್ ಸನ್ಮಾನಿಸಿ ಬೀಳ್ಕೊಟ್ಟರು. ಉಪನಿರೀಕ್ಷಕರಾದ ಸುಬ್ರಹ್ಮಣ್ಯ ಎಚ್. ಮತ್ತು ಮುಕ್ತಾ ಬಾಯಿ, ಸಹಾಯಕ ಉಪನಿರೀಕ್ಷಕರಾದ ಬಾಬು ಪೂಜಾರಿ ಮತ್ತು ಮಂಜುನಾಥ ಗಾಣಿಗ, ಸ್ಥಳೀಯ ಮುಖಂಡ ಹರೀಶ್ ಕೊಡಪಾಡಿ, ಠಾಣೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ರಾಘವೇಂದ್ರ ದೇವಾಡಿಗ ಸ್ವಾಗತಿಸಿ, ದಿನೇಶ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಂದು ಓದುವ ವಿಧಾನ ಬದಲಾಗಿ ವಿದ್ಯಾರ್ಥಿಗಳಿಗೆ ಓದಿದ ವಿಷಯಗಳು ಮರೆತು ಹೋಗುತ್ತಿದೆ. ಕೇವಲ ಪರೀಕ್ಷೆಗೋಸ್ಕರ ಓದದೆ ಜ್ಞಾನಕೋಸ್ಕರ ಓದುವಂತವರಾಗಬೇಕು. ಆಗ ಮಾತ್ರ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ರಾಷ್ಟ್ರೀಯ ಮಟ್ಟದ ಜೆಸಿಐ ತರಬೇತುದಾರರು ಹಾಗೂ ಖ್ಯಾತ ವಾಗ್ಮಿಗಳಾದ ಕೆ. ರಾಜೇಂದ್ರ ಭಟ್ ತಿಳಿಸಿದರು. ಅವರು ಕಾರ್ಕಳದ ಕ್ರಿಯೇಟಿವ್ ಕಾಲೇಜು ಹೊಸ ಪರಿಕಲ್ಪನೆಯಿಂದ ಹುಟ್ಟಿಕೊಂಡಿರುವ ಕ್ರಿಯೇಟಿವ್ ಸ್ಪೂರ್ತಿ ಮಾತು ಸರಣಿ ಕಾರ್ಯಕ್ರಮದ 9ನೇ ಆವೃತ್ತಿಯ ಕಾರ್ಯಕ್ರಮವು ಕಲಿಯುವುದು ಒಂದು ಹಬ್ಬ- ಸಂಭ್ರಮಿಸೋಣ ಎಂಬ ಶೀರ್ಷಿಕೆಯಲ್ಲಿ ಮಾತನಾಡಿದರು. ಶರೀರದ ಒಳಗಿನಿಂದ ಎನರ್ಜಿ ಸೃಷ್ಟಿಸಿಕೊಂಡಾಗ ದೊರೆಯುವುದೇ ಸ್ಫೂರ್ತಿ, ವಿದ್ಯಾರ್ಥಿಗಳು ಪ್ರಯೋಗ ಮಾಡಬಹುದಾದ 10 ಸ್ಪೂರ್ತಿಗಳ ಬಗ್ಗೆ ಉದಾಹರಣೆಗಳನ್ನು ನೀಡಿದರು. ಎಲ್ಲ ಮಕ್ಕಳು ಅದ್ಭುತವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಓದುವಿಕೆಯಲ್ಲಿ ಮೌನ ಓದುವಿನಿಂದಾಗುವ ಅನೇಕ ಲಾಭಗಳನ್ನು ತಿಳಿಸುತ್ತಾ, ಸ್ಮಾರ್ಟ್ ವರ್ಕ್ ಮಾಡಿದರೆ ಯಾವುದೇ ವಿಷಯಗಳು ಕಠಿಣವೆನಿಸುವುದಿಲ್ಲ. ಕಡಿಮೆ ಪರಿಶ್ರಮ ಹಾಕಿ, ಆಸಕ್ತಿಯಿಂದ ಕೆಲಸ ಮಾಡುವುದೇ ಸ್ಮಾರ್ಟ್ ವರ್ಕ್ ಎಂದು ತಿಳಿಸುತ್ತಾ ಸುದೀರ್ಘವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ 2021ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ‘ಸಂಪನ್ನಂ‘ ಬೀಳ್ಕೊಡುಗೆ ಸಮಾರಂಭ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಡಾ. ಎಂ. ಮೋಹನ ಆಳ್ವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ನಿರಂತರ ಸಫಲತೆಯನ್ನು ಸಾಧಿಸಿದೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಕೇವಲ ಪಡೆದುಕೊಳ್ಳಬೇಕು ಎಂಬುದಕ್ಕೆ ಮಾತ್ರ ಸೀಮಿತರಾಗದೆ, ಅದನ್ನು ಉಳಿಸಿಕೊಂಡು, ತಾವು ಅಪೇಕ್ಷಿಸಿದ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಮತ್ತಷ್ಟು ಬೆಳೆಯಬೇಕಾದ ಜವಾಬ್ದಾರಿಯು ಇದೆ ಎಂದರು. ಇಂದಿನ ಯುಗದಲ್ಲಿ ಆಯುರ್ವೇದದ ಜೊತೆಗೆ ವೈಜ್ಞಾನಿಕ, ತಾಂತ್ರಿಕ ಮತ್ತು ಸಂಶೋಧನಾ ವಿಚಾರಗಳನ್ನು ಸಮನ್ವಯಗೊಳಿಸಿ ಹೊಸ ದಿಕ್ಕಿನಲ್ಲಿ ಉತ್ತಮ ಸಾಧನೆಗಳನ್ನು ಮಾಡಬಹುದಾದ ಅನೇಕ ಅವಕಾಶಗಳು ಲಭ್ಯವಿವೆ. ಅಂತಹ ಅವಕಾಶಗಳನ್ನು ವಿದ್ಯಾರ್ಥಿಗಳೇ ತಾವಾಗಿ ಅನ್ವೇಷಿಸಿ, ಮುಂದಕ್ಕೆ ಸಾಗಬೇಕಾಗಿದೆ. ‘ಇಂದಿನಿಂದ ನೀವು ಹೊಸ ಜಗತ್ತಿಗೆ ಹೆಜ್ಜೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ನಮ್ಮ ಜೀವನ ಪರಿಭಾಷೆಗೆ ಅಳಿವಿಲ್ಲ ಅದು ನಮ್ಮ ಹಿರಿಯರು ನೀಡಿದ ಬಳುವಳಿಯಾಗಿದೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು ಅವರು ಭಾನುವಾರ ಶ್ರೀ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಕೋಟದ ಹರ್ತಟ್ಟು ಗಿಳಿಯಾರು ನಾಗರಿಕರ ಆಶ್ರಯದಲ್ಲಿ ಗಮ್ಮತ್ತಿಗೆ ಆಟ ಗಂಜಿ ಊಟ ಎಂಬ ಗ್ರಾಮೀಣ ಸೋಗಡುಗಳ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ನಮ್ಮ ಜೀವನ ಕ್ರಮಗಳು ಬದಲಾವಣೆಗೊಳ್ಳುತ್ತಿದೆ. ಅದಲ್ಲೂ ಬಹುಮುಖ್ಯವಾಗಿ ಕೃಷಿ ಪದ್ದತಿಗಳು ಆಧುನಿಕತೆಯಲ್ಲಿ ಒಗ್ಗಿ ಹೋಗಿದ್ದು ಅತಿಯಾಗಿ ಬಳಸುವ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಮನುಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರ ತೊಂದರೆಗಳನ್ನು ಅರಿಯುವ ಅಗತ್ಯತೆಯನ್ನು ಒತ್ತಿ ಹೇಳಿದರ ಅವರು ಬದಲಾವಣೆ ಇರಬೇಕು. ಅದು ಆರೋಗ್ಯಕರವಾಗಿ ಮನುಕುಲದ ಒಳಿತಿಗಾಗಿ ಪ್ರಜ್ವಲಿಸಬೇಕು, ಕರಾವಳಿಯ ವಿವಿಧ ಪ್ರಕಾರಗಳಲ್ಲಿ ಕಂಬಳವು ಒಂದು ಅದರ ಉಳಿಗಾಗಿ ಸಾಕಷ್ಟು ಶ್ರಮಿಸಿದ್ದೇವೆ, ಯಾವುದೇ ಆಟಗಳಲ್ಲಿ ಜೂಜು ಒಳ್ಳೆಯದಲ್ಲ ಅದರ ಬದಲಾಗಿ ನಾವುಗಳು ನಮ್ಮ ಕುಶಿ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ 2025–26ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಚಟುವಟಿಕೆಗಳಾದ ಸಂಗೀತ, ನೃತ್ಯ, ಶ್ಲೋಕ ಪಠಣ, ಕಥೆ ಹೇಳುವಿಕೆ, ಕರಾಟೆ ಮೊದಲಾದ ಪ್ರತಿಭೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯುವುದರ ಜೊತೆಗೆ, ವೇದಿಕೆಯ ಭಯ ನಿವಾರಣೆಗಾಗಿಯೂ ಸಹಕಾರಿ ಆಯಿತು. ಮಕ್ಕಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಹಾಗೂ ಆತ್ಮವಿಶ್ವಾಸದಿಂದ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ರೋಟರಿ ಕ್ಲಬ್ನ ನೂತನ ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ ಮಲ್ಯಾಡಿ ಹಾಗೂ ಕಾರ್ಯದರ್ಶಿಯಾಗಿ ಟಿ. ರಾಜೀವ್ ಶೆಟ್ಟಿ ಆಯ್ಕೆಗೊಂಡಿದ್ದಾರೆ. ಪದಗ್ರಹಣ ಕಾರ್ಯಕ್ರಮ ಜುಲೈ 6 ರಂದು ತೆಕ್ಕಟ್ಟೆ ಪ್ರೆಸಿಡೆಂಟ್ ಹಾಲ್ನ ಕ್ರೌನ್ ಆಡಿಟೋರಿಯಂ ನಲ್ಲಿ ನಡೆಯಲಿದೆ.
