ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಗುರು ಅಬಾಕಸ್ ಮತ್ತು ವೇದಿಕ್ ಮ್ಯಾಥ್‌ಸೆಂಟರ್ ಪುಣೆ, ಮಹಾರಾಷ್ಟ್ರ ಇವರಿಂದ ಆಯೋಜಿಸಲ್ಪಟ್ಟ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಪರೀಕ್ಷೆಯಲ್ಲಿ ಇಲ್ಲಿನ ಮದರ್ ತೆರೇಸಾ ಶಾಲೆಯ ಮೂರನೇ ತರಗತಿಯ ಹೆಮ್ಮೆಯ ವಿದ್ಯಾರ್ಥಿ ಪ್ರಿಯಾಂಶ್ ಶಂಕರ್ ನಾಯ್ಕ್ ಗೆ ಚಿನ್ನದ ಪದಕ ಲಭಿಸಿದೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಆತನ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.










