Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಾವ್ಯ ಪಿ.ಶೆಟ್ಟಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾಳೆ. ಉತ್ತಮ ಅಂಕ ಗಳಿಕೆಯಿಂದ ಸಂತಸಗೊಂಡಿರುವ ಪ್ರಾವ್ಯ ಪಿ. ಶೆಟ್ಟಿ ಮಾತನಾಡುತ್ತಾ “ತನ್ನ ಈ ಉತ್ಕೃಷ್ಟವಾದ ಫಲಿತಾಂಶವನ್ನು ನಾನು ಮೊದಲೇ ನಿರೀಕ್ಷಿಸಿದ್ದೆ. ತನ್ನ ಈ ಸಾಧನೆಗೆ ಶಾಲಾ ಶಿಕ್ಷಕರು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯ ಸಹಕಾರವೇ ಕಾರಣ. ಶಾಲೆಯಲ್ಲಿನ ಅತ್ಯುತ್ತಮವಾದ ಬೋಧನೆ, ನಿರಂತರವಾಗಿ ನಡೆಸುತ್ತಿದ್ದ ಪೂರ್ವ ತಯಾರಿ ಪರೀಕ್ಷೆಗಳು, ಪರೀಕ್ಷಾ ಸಮಯದಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಗಾರಗಳು, ಸಹಪಠ್ಯ ಚಟುವಟಿಕೆಗಳು ತುಂಬಾ ಸಹಾಯವಾಗಿದ್ದು ಉತ್ತಮ ಸಾಧನೆಗೆ ಸಹಾಯವಾಯಿತು. ನಾನು ಹಾಸ್ಟೆಲ್ ನ ವಿದ್ಯಾರ್ಥಿನಿಯಾಗಿದ್ದು ಹಾಸ್ಟೆಲ್ ನ ಸ್ಟಡಿ ಅವರ್ಸ್, ಹಾಸ್ಟೆಲ್ ಶಿಕ್ಷಕರು, ಹಾಸ್ಟೆಲ್ ವಾರ್ಡನ್ ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು. ವಿಶೇಷವಾಗಿ ನಮ್ಮ ಶಾಲೆಯಲ್ಲಿ ಆರನೇ ತರಗತಿಯಿಂದಲೇ ಬೋಧಿಸುತ್ತಿರುವ ಐಐಟಿ/ನೀಟ್ ಫೌಂಡೇಶನ್ ಕೋರ್ಸ್ ನ ಮಾಸಿಕ ಪರೀಕ್ಷೆಗಳು ಜಟಿಲವಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್‍ನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಶಾಲೆಯ ಎಲ್ಲಾ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿ 100 ಶೇಕಡಾ ಫಲಿತಾಂಶ ದಾಖಲಿಸಿದ್ದಾರೆ. 36 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 16 ಮಂದಿನ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶ ದಾಖಲಿಸಿರುತ್ತಾರೆ. ಪ್ರಣತಿ ಎಸ್ ಶೆಟ್ಟಿ 613 (98.08%) ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಅಭಿಜ್ಞಾ ಜೆ.ಎಸ್ 611 (97.76%) ಅಂಕ ಗಳಿಸಿ ದ್ವಿತೀಯ ಸ್ಥಾನ, ದಿಗಂತ ಕೆ.ಎಸ್ 609 (97.44%) ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಮುಖ್ಯೋಪಾಧ್ಯಾಯಿನಿ ಮಮತಾ ತಿಳಿಸಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ವರ್ಗ, ಮುಖ್ಯೋಪಾಧ್ಯಾಯಿನಿ ಹಾಗೂ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕುಂದಾಪುರ ಎಜ್ಯುಕೇಶನ್‍ ಸೊಸೈಟಿ ರಿ. ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಈ ಬಾರಿ ಎಸ್. ಎಸ್. ಎಲ್‍. ಸಿ ಪರೀಕ್ಷೆಗೆ 106 ವಿದ್ಯಾರ್ಥಿಗಳು ಹಾಜರಾಗಿದ್ದು, 56 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ ಮತ್ತು 41 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಶಾಲೆಗೆ ಶೇಕಡಾ 99.05 ಫಲಿತಾಂಶ ಲಭಿಸಿರುತ್ತದೆ. ವಿದ್ಯಾರ್ಥಿಗಳಾದ ಸಾಯಿಸ್ಪರ್ಶ ಕೆ. 623 (99.68%), ಬಿ.ವಿ. ಜಯಸೂರ್ಯ 622 (99.52%), ಪ್ರಿಯಾ 622 (99.52%), ಭಕ್ತಿ ಶೆಟ್ಟಿ 621 (99.36%), ನಿರೀಕ್ಷಾ ಎನ್‌. ಶೆಟ್ಟಿಗಾರ್‌ 621 (99.36%), ಸನ್ವಿತ್‌ ಶೆಟ್ಟಿ 619 (99.04%), ವಿನ್ಯಾಸ್‌ ಅಡಿಗ (619 (99.04%), ಸಮನ್ವಿ ಎಸ್‌ 616 (98.56%) ಅನ್ವಿತ್‌ ಕೆ. 615 (98.405) ಸಿಂಚನಾ ಎಸ್‌. ಶೆಟ್ಟಿ 614( 98.24%) ನಿಹಾಲ್‌ ಅಮಿನ್‌ 610 ( 97.60%) ರವಿನಾ ಬಿ. 610 ( 97.60%) ಅದ್ವೈತ್‌ ಟಿ 609…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: 2024-2025ನೇ ಸಾಲಿನ ರಾಜ್ಯದ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಕ್ರಮವಾಗಿ 91.12% ಮತ್ತು 89.96% ಫಲಿತಾಂಶದೊಂದಿಗೆ ರಾಜ್ಯದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿವೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ. 22 ವಿದ್ಯಾರ್ಥಿಗಳು 625 ಅಂಕಗಳಲ್ಲಿ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ಉನ್ನತ ರ‍್ಯಾಂಕ್ ಗಳಿಸಿದ್ದಾರೆ. ಈ ವರ್ಷದ ಉತ್ತೀರ್ಣ ಶೇಕಡಾವಾರು 66.14% ಆಗಿದ್ದು, ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಹೋಲಿಸಿದರೆ 8% ಹೆಚ್ಚಳವಾಗಿದೆ. 2025 ಮಾರ್ಚ್​ 21ರಿಂದ ಏಪ್ರಿಲ್​ 4 ರವರೆಗೆ ರಾಜ್ಯದ 2,818 ಕೇಂದ್ರಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲಾಗಿತ್ತು. 4,61563 ಹುಡುಗರು ಮತ್ತು 4,34,884 ಹುಡಗಿಯರು ಪರೀಕ್ಷೆ ಬರೆದಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪ್ರತಿಭಟನೆ ಹಾಗೂ ಸಂತಾಪ ಸಭೆ ಬೈಂದೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಕ್ಷಯ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು. ಮಾಜಿ ಶಾಸಕರಾದ ಕೆ. ಗೋಪಾಲ್ ಪೂಜಾರಿ, ಹಿರಿಯ ಕಾಂಗ್ರೆಸ್ ನಾಯಕರಾದ ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮೋಹನ್ ಪೂಜಾರಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೂರಜ್ ಜಿ. ಪೂಜಾರಿ, ಬೈಂದೂರು ಪಪಂ ನಾಮನಿರ್ದೇಶಿತ ಸದಸ್ಯ ನಾಗರಾಜ ಗಾಣಿಗ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವಿಕಾಸ್ ಹೆಗ್ಡೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಬೈಂದೂರು ಬ್ಲಾಕ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಬ್ಬೀರ್‌ ಬೈಂದೂರು, ಕಿಸಾನ್‌ ಘಟಕದ ಅಧ್ಯಕ್ಷ ವೀರಭದ್ರ ಗಾಣಿಗ, ಸುಬ್ರಹ್ಮಣ್ಯ ಪೂಜಾರಿ ಯಡ್ತರೆ, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗ ಉಪಾಧ್ಯಕ್ಷರಾದ ಕೆ. ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಮೋದ್ ಪೂಜಾರಿ ನಾವುಂದ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಚಂಡೀಗಢದಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಅಥ್ಲೆಟಿಕ್ಸ್ ಕೂಟದ 2ನೇ ಆವೃತ್ತಿಯಲ್ಲಿ ಬೈಂದೂರಿನ ಮಣಿಕಂಠ ಒಳಗೊಂಡ ರಿಲಯನ್ಸ್ ಪುರುಷರ ತಂಡ 4X100  ರಿಲೇ ತಂಡ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಪುರುಷರ ರಿಲೇ ಫೈನಲ್‌ನಲ್ಲಿ ಕರ್ನಾಟಕದ ಮಣಿಕಂಠ ಹೋಬಳಿದಾರ್ ಹಾಗೂ ವಿವಿಧ ರಾಜ್ಯಗಳ ಗುರುವೀಂದರ್‌ ಸಿಂಗ್, ಅನಿಮೇಶ್ ಕುಜುರ್ ಹಾಗೂ ಅರ್ಮನ್ ಬೋರ್ಗೋಹೈನ್ ಒಳಗೊಂಡ ತಂಡ 38.69 ಸೆಕೆಂಡ್ ಗಳಲ್ಲಿ ಗುರಿ ತಲುಪಿ ನೂತನ ದಾಖಲೆ ರಚಿಸಿತು. 2010ರಲ್ಲಿ 38.89 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದ್ದು, ಹಿಂದಿನ ದಾಖಲೆ ಆಗಿದೆ. 2023ರಲ್ಲಿ ನಡೆದ 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸಿದ್ದ ಮಣಿಕಂಠ ಹೋಬಳಿದಾರ್ ಅವರು, 100ಮೀ ಓಟದಲ್ಲಿ ಭಾರತದ ಅತ್ಯಂತ ವೇಗದ ಓಟಗಾರರಾಗಿ ದಾಖಲೆ ಮಾಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಬೈಂದೂರು ಪಡುವರಿಯ ಮಂಜುನಾಥ ಹೋಬಳಿದಾರ್ ಹಾಗೂ ದಿ. ಸುಂದರಿ ಅವರ ಪುತ್ರರಾದ ಮಣಿಕಂಠ ಅವರು 2020ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಥ್ಲೆಟಿಕ್ಸ್ನಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‌ನವರು ನಡೆಸಿದ ನ್ಯಾಷನಲ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ನಾಟಾ) ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 19 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.   ಉತ್ತೀರ್ಣರಾದ ವಿದ್ಯಾರ್ಥಿಗಳು ಸಂಚಿತಾ ಆರ್ ರಾವ್, ರಾಜ್ ಬಂಗೇರ, ಪಾರ್ಥ ಎಲ್ಲಪ್ಪಾ ಚಿಕಲ್ಕರ್, ದೇವಾನಂದ, ರೇಣುಕಾ, ಕಲೇಬ್ ಜೇಶ್ರುನ್, ಅಭಿಷೇಕ್ ಶೆಟ್ಟಿ, ಪವನ್ ಬಿಡಿ, ಭಾನುಪ್ರಕಾಶ್, ನಿಖಿಲ್ ಗೌಡ, ಲೈಶುನ್ ಬೆನ್ಡಿಕ್ಟ್ ಫೆರ್ನಾಂಡೀಸ್, ಪ್ರತೀಕ್, ರಿಶಭ್, ಪೂಜಿತಾ ಗೌಡ, ನಾಗರಾಜ್, ನಿಖಿತಾ, ಸುರೇಶ್ ಪಾಟೀಲ್, ವಿಭಾ ವಿ., ಆಕಾಶ್ ಜಿ.. ಆಳ್ವಾಸ್ ಪದವಿ ಪೂರ್ವ ಕಾಲೇಜಿನ 19 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದು, ಪರೀಕ್ಷೆ ಎದುರಿಸಿದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಯಕ್ಷಗಾನ ನಮ್ಮ ನಾಡಿನ ಹೆಮ್ಮೆಯ ಕಲೆ ದಿವ್ಯ ಕಲೆ ರಂಗದಲ್ಲಿ ಪಾತ್ರ ನಿರ್ವಹಣೆ ಮಾಡಲು ಅವಿರತ ಶ್ರಮ ಅಗತ್ಯ. ಕಲಾವಿದರಿಗೆ ಅಭಿಮಾನಿಗಳ ಪ್ರೋತ್ಸಾಹವೇ ಶ್ರೀ ರಕ್ಷೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶದ ಜೊತೆಗೆ ಇಂತಹ ಪುರಸ್ಕಾರಗಳು ಈ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ ಹೇಳಿದರು. ಅವರು ಕೋಟ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಳದ ಶ್ರೀ ಮನ್ಮಮಹಾರಥೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಬೆಂಗಳೂರಿನ ಯಕ್ಷದೇಗುಲ ತಂಡದ ರಾವಣ ವಧೆ ಪ್ರಸಂಗ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು. ಉದ್ಘಾಟನೆ ನೆರವೇರಿಸಿದ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಮಾತನಾಡಿ, ದೇವಾಲಯಗಳು ಸಮಾಜದ ಆತ್ಮ ಇದ್ದಂತೆ. ಆಧ್ಯಾತ್ಮಿಕ ಶ್ರದ್ಧೆಯನ್ನು ಹೆಚ್ಚಿಸುವುದರೊಂದಿಗೆ ಸಾಮರಸ್ಯವನ್ನು ಬೆಸೆಯುವ ಕೆಲಸ ಮಾಡಬೇಕು. ದೇವಳದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ:  ಶಿಕ್ಷಣದ ಗುಣಮಟ್ಟ, ಶಿಸ್ತಿನ ವಾತಾವರಣ ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಹೆಸರು ವಾಸಿಯಾದ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿ 2024- 25ನೇ ಶೈಕ್ಷಣಿಕ ವರ್ಷದಲ್ಲಿ ಐಸಿಎಸ್ಇ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿಗಳಾದ ದೀಕ್ಷಾ ಕೋರಿ  98.80% ಅಂಕದೊಂದಿಗೆ  ಪ್ರಥಮ ಸ್ಥಾನ, ನಿಧಿ ಶೆಟ್ಟಿ 98.60%  ದ್ವಿತೀಯ ಸ್ಥಾನ ಹಾಗೂ ಹರ್ಷಿತಾ ಎಸ್. ಪೂಜಾರಿ 98.20% ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಈ ಶಾಲೆ, ಕಳೆದ 22 ವರ್ಷದಿಂದ ನೂರಕ್ಕೆ ನೂರು ಫಲಿತಾಂಶ ದಾಖಲಿಸಿರುವ ಸಾಧನೆ ಮಾಡಿರುವುದು ತಾಲೂಕಿನ ಏಕೈಕ ಐಸಿಎಸ್ಇ ಪಠ್ಯಕ್ರಮದ ಶಾಲೆ ಇದಾಗಿದೆ. ಈ ವಿದ್ಯಾ ಸಂಸ್ಥೆಯಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ ಸುಮಾರು 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ 660 ಮಕ್ಕಳಿಗೆ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: 2024-25ನೇ ಸಾಲಿನ ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶಿರೂರಿನ ಗ್ರೀನ್‌ ವ್ಯಾಲಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ಪ್ರತೀಕ್‌ ಪ್ರಭು ಶೇ.98.4 ಅಂಕ ಪಡೆದು, ಶಾಲೆಗೆ ಟಾಪರ್‌ ಆಗಿರುವುದಲ್ಲದೇ, ರಾಷ್ಟ್ರಮಟ್ಟದಲ್ಲಿ 8ನೇ ರ್ಯಾಂಕ್‌ ಪಡೆದಿದ್ದಾರೆ. ಪ್ರತೀಕ್‌ ಪ್ರಭು ಅವರು ಶಿರೂರಿನ ಉದ್ಯಮಿ ಪ್ರಸಾದ್ ಪ್ರಭು ಹಾಗೂ ಜಾನ್ವಿ ಪ್ರಭು ದಂಪತಿಗಳ ಪುತ್ರರಾಗಿದ್ದಾರೆ.

Read More