ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಮಂಗಳೌಆರದಂದು ನಡೆದ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಪ್ರಮುಖ ಬಿ. ಪೂಜಾರಿ ಅವರು ಏಳು ವರ್ಷ ವಯೋಮಿತಿಯ ವಿಭಾಗದ ಚದುರಂಗ ಸ್ಪರ್ಧೆಯಲ್ಲಿ ಐದೂ ಸುತ್ತಿನಲ್ಲೂ ವಿಜೇತನಾಗಿ ಜಿಲ್ಲಾ ಚಾಂಪಿಯನ್ ಆಗಿ ಹೊರಹೊಮ್ಮಿ, ಅತ್ಯುನ್ನತ ಸಾಧನೆಯನ್ನು ಮಾಡಿರುತ್ತಾನೆ.
ವಿದ್ಯಾರ್ಥಿಯ ಈ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದಂತಹ ಗಣೇಶ ಮೊಗವೀರ, ಶಾಲಾ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಅವರು ಶುಭಾಶಯಗಳನ್ನು ಕೋರಿದ್ದಾರೆ. ಭೋದಕ – ಬೋಧಕೇತರ ವೃಂದದವರು ವಿದ್ಯಾರ್ಥಿಯ ಈ ಸಾಧನೆಯನ್ನು ಕೊಂಡಾಡಿದ್ದಾರೆ.










