ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀಸಿದ್ದಿ ವಿನಾಯಕ ಚೆಸ್ ಅಕಾಡೆಮಿ ಕುಂದಾಪುರ ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಓಪನ್ ರ್ಯಾಪಿಡ್ ಚೆಸ್- 45ನೇ ಸಿದ್ದಿ ವಿನಾಯಕ ಟ್ರೋಫಿ ಪಂದ್ಯಾಟವು ಕುಂದಾಪುರ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ನಡೆಯಿತು. ಚೆಸ್ ಆಡುವ ಮೂಲಕ ಉದ್ಘಾಟಿಸಿದ ವಕೀಲ ರವಿಕಿರಣ್ ಮುರ್ಡೇಶ್ವರ ಮಾತನಾಡಿ, ಚೆಸ್ ಕೇವಲ ಮಾನಸಿಕ ವಾಗಿ ಮಾತ್ರವಲ್ಲ, ದೈಹಿಕವಾಗಿಯೂ ನಿಮ್ಮನ್ನು ಸದೃಢಗೊಳಿಸುವ ಕ್ರೀಡೆಯಾಗಿದೆ. ಚೆಸ್ ಗ್ರಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರಂತಹ ಶ್ರೇಷ್ಠ ಕ್ರೀಡಾಪಟುಗಳು ಪಂದ್ಯಾ ಕೂಟಕ್ಕೂ ಮೊದಲು ನಡೆಸುವ ತಯಾರಿ ಎಲ್ಲ ಚದುರಂಗ ಪಟುಗಳಿಗೆ ಮಾದರಿಯಾಗಬೇಕು ಎಂದರು. ಕುಂದಾಪುರ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ ಸೋಲು – ಗೆಲುವು ಮುಖ್ಯವಲ್ಲ. ಕ್ರೀಡಾ ಚಟುವಟಿಕೆಗಳಿಗೆ ನಮ್ಮ ಸಂಘವು ನಿರಂತರ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು. ಬಿಲ್ಲವ ಸಂಘದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗೋಕರ್ಣ: ಊಟವಿಲ್ಲದೇ ಕೆಲವು ಕಾಲ ಬದುಕಬಹುದು ಆದರೆ ಉಸಿರಾಟವಿಲ್ಲದೇ ಬದುಕಿರಲು ಸಾಧ್ಯವೇ ಇಲ್ಲ. ಯೋಗಿಯ ಸಮಾಧಿಸ್ಥಿತಿಯಲ್ಲಿ ಮಾತ್ರ ಉಸಿರಾಟವಿಲ್ಲದೆಯೂ ಬದುಕಿರಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಮಂಗಳವಾರದಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಉಸಿರಾಟದ ಸೂಕ್ಷ್ಮಗಳ ಕುರಿತಾಗಿ ಪ್ರವಚನವನ್ನು ಅನುಗ್ರಹಿಸುತ್ತಾ, ಸರಿಯಾದ ಉಸಿರಾಟವು ಮೂಲಾಧಾರ ಚಕ್ರದವರೆಗೆ ಸಂಚರಿಸಬೇಕು. ಉಸಿರಾಡುವಾಗ ಶ್ವಾಸಕೋಶದವರೆಗೆ ಗಾಳಿರೂಪದಲ್ಲಿ ಸಂಚರಿಸಿದರೆ, ಮುಂದೆ ಮೂಲಾಧಾರ ಚಕ್ರದವರೆಗೆ ಶ್ವಾಸವು ಚೈತನ್ಯದ ರೂಪದಲ್ಲಿ ಸಂಚರಿಸುತ್ತದೆ. ಉಸಿರಾಟದ ಗತಿಯು ಹಂಸದಂತೆ ಧಾವಂತ ಇಲ್ಲದೇ ಸರಾಗವಾಗಿ ಆದಾಗ ಸಮಾಧಾನವನ್ನು ಸಾಧಿಸಿಕೊಳ್ಳಲು ಸಾಧ್ಯ. ಸಮಾಧಾನದಿಂದ ಶರೀರ, ಮನಸ್ಸು, ಜೀವನಕ್ಕೆ ಅಪಾರವಾದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ವಿವರಿಸಿದರು. ಉಸಿರಾಟದ ಮೂಲಕ ಜೀವಿಯು ಗೊತ್ತಿದ್ದೋ ಗೊತ್ತಿಲ್ಲದೆಯೋ ‘ಹಂಸಃ ಹಂಸಃ’ ಎಂಬ ಜಪವನ್ನು ನಿರಂತರವಾಗಿ ಜಪಿಸುತ್ತಲೇ ಇರುತ್ತಾನೆ. ‘ಹಂ’ ಎಂಬುದು ಉಸಿರನ್ನು ಹೊರಬಿಡುವಾಗ ಮತ್ತು ‘ಸಃ’ ಎಂಬುದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕೋಲಾರದ ನೀರಿನ ಕೊರತೆ ನೀಗಿಸಲು ಹೊರಗಿನಿಂದ ನೀರನ್ನು ಹರಿಸುವುದಕ್ಕಿಂತ, ಆ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಸಂರಕ್ಷಿಸಿ, ಅಂತರ್ಜಲವನ್ನು ಮರುಪೂರಣಗೊಳಿಸುವ ಸಮಗ್ರ ಜಲ ನಿರ್ವಹಣಾ ತಂತ್ರವನ್ನು ರೂಪಿಸಬೇಕು. ಹೊರಗಿನಿಂದ ನೀರನ್ನು ತರುವ ಯೋಜನೆಗಳು ಪರಿಸರ ವ್ಯವಸ್ಥೆಯಲ್ಲಿರುವ ನಮಗೆ ಗೋಚರಿಸದ ಕೊಂಡಿಗಳನ್ನು ಕಳಚುವ ಅಪಾಯವನ್ನು ಹೊಂದಿವೆ ಎಂದು ಕೃಷಿ ವಿಜ್ಞಾನಿ, ಕಾದಂಬರಿಕಾರ ಹಾಗೂ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ. ಕೆ.ಎನ್. ಗಣೇಶಯ್ಯ ಹೇಳಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟçಮ್ ವೇದಿಕೆಯವತಿಯಿಂದ ಮಂಗಳವಾರ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪ್ರಕೃತಿಯ ಅದೃಶ್ಯ ಕೊಂಡಿಗಳು: ಪರಿಸರ ವ್ಯವಸ್ಥೆಯ ನಿಯಂತ್ರಣ ಸೂತ್ರಗಳು’ ವಿಷಯದ ಕುರಿತು ಅವರು ಮಾತನಾಡಿದರು. “ಇದನ್ನು ನಾನು ವಿವಾದವಾಗಿ ನೋಡುವುದಿಲ್ಲ. ಬಹಳ ಹಿಂದಿನಿಂದಲೂ ಈ ವಿಚಾರವನ್ನು ಹೇಳುತ್ತಾ ಬಂದಿದ್ದೇನೆ. 2014ರಲ್ಲಿ ಕೋಲಾರದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರ ಅಧ್ಯಕ್ಷನಾಗಿದ್ದಾಗಲೂ ನಮ್ಮ ಜನರಿಗೆ ಹೊರಗಿನಿಂದ ಬರುವ ನೀರಿನ ಮೇಲೆ ಅವಲಂಬಿತರಾಗಬೇಡಿ ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ನಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ನಡೆಯುತ್ತಿರುವ ’ಅಖಂಡ ಭಜನಾ ಸಪ್ತಾಹ’ ಮಹೋತ್ಸವ ಮಂಗಳವಾರ ಬೆಳಿಗ್ಗೆ ದೀಪ ವಿಸರ್ಜನೆಯೊಂದಿಗೆ ಸಮಾಪನಗೊಂಡಿತು. ಮಧ್ಯಾಹ್ನ ದೇವರಿಗೆ ವಿಶೇಷ ಪೂಜೆ, ಸಂತರ್ಪಣೆ, ಸಂಜೆ ಭಜನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ದೇವಳದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ಮತ್ತು ಪುರೋಹಿತರಾದ ಜಿ. ವಿಠಲದಾಸ ಭಟ್ ನೇತೃತ್ವದಲ್ಲಿ ಜರಗಿತು. ಅಖಂಡ ಭಜನಾ ಸಪ್ತಾಹ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ನಗರ ಭಜನೆ, ರಾತ್ರಿ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್, ದೇವಳದ ಆಡಳಿತ ಮಂಡಳಿ ಸದಸ್ಯರು, ಜಿ.ಎಸ್.ಬಿ ಮಹಿಳಾ ಮಂಡಳಿ ಸದಸ್ಯರು, ಜಿಎಸ್ಬಿ ಸಮಾಜಬಾಂಧವರು, ಊರಿನ ಹತ್ತು ಸಮಸ್ತರು. ಮತ್ತಿತರರು ಉಪಸ್ಥಿತರಿದ್ದರು. ಅಖಂಡ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮ್ಯಾನೇಜ್ಮೆಂಟ್ನಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್ಡಿ) ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಚೇತನಾ ಬಾಲಕೃಷ್ಣ ಮದ್ದೋಡಿ ಅವರಿಗೆ TAPMI, MAHE, ಮಣಿಪಾಲದಿಂದ ಡಾಕ್ಟರೇಟ್ ಪದವಿ ಪ್ರದಾನವಾಗಿದೆ. “ಬ್ರಾಂಡೆಡ್ ಅಪ್ಲಿಕೇಶನ್ಗಳಲ್ಲಿ ಅಪ್ಲಿಕೇಶನ್ನಲ್ಲಿ ಜಾಹೀರಾತು ಒಳನುಗ್ಗುವಿಕೆ: ವರ್ತನೆಯ ಪರಿಣಾಮಗಳ ಮೇಲೆ ಭಾವನಾತ್ಮಕ ಮತ್ತು ವರ್ತನೆಯ ಪ್ರತಿಕ್ರಿಯೆಗಳ ಪರಿಣಾಮ” ಎಂಬ ಶೀರ್ಷಿಕೆಯ ಅವರ ಡಾಕ್ಟರೇಟ್ ಸಂಶೋಧನೆಯನ್ನು ಮಣಿಪಾಲದ MAHE, T.A. ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನ ಮಾಹಿತಿ ವ್ಯವಸ್ಥೆಗಳು ಮತ್ತು ವಿಶ್ಲೇಷಣಾ ಪ್ರದೇಶದ ಅಸೋಸಿಯೇಟ್ ಪ್ರೊಫೆಸರ್ ಡಾ. ಪಲ್ಲವಿ ಉಪಾಧ್ಯಾಯ ಅವರ ತಜ್ಞ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಈ ಗಮನಾರ್ಹ ಸಾಧನೆಯು ಡಾ. ಚೇತನಾ ಅವರ ಸಮರ್ಪಣೆ, ಪರಿಶ್ರಮ, ಬೌದ್ಧಿಕ ಕುತೂಹಲ ಮತ್ತು ವಿದ್ವತ್ಪೂರ್ಣ ಶ್ರೇಷ್ಠತೆಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರು ಡಿಕ್ಕಿ ಹೊಡೆದು ಪಾದಚಾರಿಯೋರ್ವ ಸಾವನ್ನಪ್ಪಿದ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಗೊಬ್ಬರಬೆಟ್ಟುವಿನ ಬೊಬ್ಬರ್ಯ ಕಟ್ಟೆ ಸಮೀಪ ಸಂಭವಿಸಿದೆ. ಮೃತಪಟ್ಟ ಪಾದಚಾರಿ ಗಿಳಿಯಾರು ಮಂಜು ಪೂಜಾರಿ (67) ಎಂದು ಗುರುತಿಸಲಾಗಿದೆ. ಮಂಜು ಅವರು ಕೋಟದಿಂದ ಗಿಳಿಯಾರಿಗೆ ಹೋಗಲು ಹೆದ್ದಾರಿ ದಾಟಲೆಂದು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಉಡುಪಿಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಕಾರೊಂದು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಮಂಜು ಪೂಜಾರಿ ಅವರಿಗೆ ನೇರ ಡಿಕ್ಕಿ ಹೊಡೆದಿರುತ್ತಾರೆ. ಡಿಕ್ಕಿಯ ರಭಸಕ್ಕೆ ಮಂಜು ಪೂಜಾರಿ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಟೋಲ್ ಆಂಬುಲೆನ್ಸ್ ನಲ್ಲಿ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಗಾಯಾಳುವನ್ನು ಪರೀಕ್ಷಿಸಿದ ವೈಧ್ಯರು ಮಂಜು ಪೂಜಾರಿ ಅವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ನೂತನವಾಗಿ ಸೇರ್ಪಡೆಯಾದ ಎನ್ಸಿಸಿ ಕೆಡೆಟ್ಗಳಿಗಾಗಿ ಎನ್ಸಿಸಿ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ವಹಿಸಿದ್ದರು. 6 ಕರ್ನಾಟಕ ನೌಕಾದಳ ಎನ್ಸಿಸಿ ಘಟಕ, ಉಡುಪಿಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅತಿಥಿಗಳನ್ನು ಅಸೋಸಿಯೇಟ್ ಎನ್ಸಿಸಿ ಅಧಿಕಾರಿ ಸಬ್ ಲೆಫ್ಟಿನೆಂಟ್ ಮಹೇಶ್ ಆರ್. ಶೆಣೈ ಕೆ. ವೇದಿಕೆಗೆ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಪಿಐ ಸ್ಟಾಫ್ ನೃಪತ್ರಾಜ್ ಸಿಂಗ್ ಉಪಸ್ಥಿತರಿದ್ದರು. ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮುಖ್ಯ ಅತಿಥಿಗಳು ಎನ್ಸಿಸಿಯ ಉದ್ದೇಶ, ಶಿಸ್ತು, ನಾಯಕತ್ವ, ದೇಶಭಕ್ತಿ ಹಾಗೂ ಎನ್ಸಿಸಿ ಮೂಲಕ ದೊರೆಯುವ ವಿವಿಧ ತರಬೇತಿ ಮತ್ತು ವೃತ್ತಿ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಅವರು ವಿದ್ಯಾರ್ಥಿಗಳು ಎನ್ಸಿಸಿಯ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ರಾಷ್ಟ್ರಸೇವೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗೋಕರ್ಣ: ಔಷಧಿಯ ಅಂಗಡಿಯಲ್ಲಿ ಎಲ್ಲಾ ಔಷಧಗಳನ್ನೂ ಎಲ್ಲರಿಗೂ ಕೊಡುವುದಿಲ್ಲ. ಕೆಲವು ಔಷಧಗಳನ್ನು ವೈದ್ಯರಿಂದ ಸೂಕ್ತ ಚೀಟಿಯನ್ನು ಹೊಂದಿದವರಿಗಷ್ಟೇ ನೀಡಲಾಗುತ್ತದೆ. ಹಾಗೆಯೇ ಕೆಲವು ಔಷಧಗಳಿಗೆ ಅದನ್ನು ಮಕ್ಕಳಿಗೆ ನೀಡುವಂತಿಲ್ಲ ಎಂಬ ನಿಯಮಗಳಿರುತ್ತದೆ. ಹಾಗೆಯೇ ಎಲ್ಲಾ ಯೋಗ – ಪ್ರಾಣಾಯಾಮಗಳನ್ನು ಎಲ್ಲರೂ ಮಾಡಬಾರದು. ಪ್ರತಿಯೊಂದಕ್ಕೂ ಅದರದ್ದೇ ಆದ ನಿಯಮಗಳಿವೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೋಮವಾರದಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅಮೃತಾಹಾರವೆಂಬ ಯೋಗ ಸೂಕ್ಷ್ಮದ ಕುರಿತಾಗಿ ಪ್ರವಚನವನ್ನು ಅನುಗ್ರಹಿಸುತ್ತಾ, ಯೋಗ ಸೂಕ್ಷ್ಮವಾದ ಅಮೃತಪಾನವನ್ನು ಸಿದ್ಧಿಸಿಕೊಂಡವನಿಗೆ ತಕ್ಷಕ ಸರ್ಪದ ಮಹಾವಿಷದಿಂದಲೂ ಕೂಡ ಏನೂ ಆಗದು. ಒಮ್ಮೆ ಈ ಅಮೃತವನ್ನು ಆಸ್ವಾದಿಸಲು ಕಲಿತ ಯೋಗಿಯು ಮತ್ತೆ ಮತ್ತೆ ಅದನ್ನು ಬಯಸುತ್ತಾನೆ. ಈ ಅಮೃತದ ಆಸ್ವಾದನೆಗೆ ಸಮಾನವಾದದ್ದು ಯಾವುದೂ ಇಲ್ಲ ಎಂದ ಶ್ರೀಗಳು, ಜಾಲಂಧರ ಬಂಧ, ಮೂಲಬಂಧ, ಖೇಚರಿ, ವಿಪರೀತ ಕರಣಿ ಮುಂತಾದವುಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ , ವೃತ್ತಿ ಮಾರ್ಗದರ್ಶನ ಮತ್ತು ಪ್ಲೇಸ್ ಮೆಂಟ್ ಕೋಶ ಮತ್ತು ಬೆಂಗಳೂರಿನ ಮ್ಯಾಜಿಕ್ ಬಸ್ ಇವರ ಸಹಯೋಗದಲ್ಲಿ ನಡೆದ 4ದಿನಗಳ ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಕೌಶಲಗಳಲ್ಲಿ ತರಬೇತಿ ಪಡೆದಾಗ ಉದ್ಯೋಗ ಪಡೆಯುವಲ್ಲಿ ಹೆಚ್ಚಿನ ಅವಕಾಶಗಳು ನಿಮಗಾಗಿ ಸೃಷ್ಟಿಯಾಗುತ್ತದೆ. ಇಂತಹ ತರಬೇತಿ ಕಾರ್ಯಕ್ರಮಗಳು ನಿಮ್ಮ ಕೌಶಲ್ಯ ಹೆಚ್ಚಿಸಲು ಅನುಕೂಲವಾಗುತ್ತವೆ ಎಂದು ಹೇಳಿದರು. ಮ್ಯಾಜಿಕ್ ಬಸ್ ಇದರ ಮಾಹಿತಿ ತಂತ್ರಜ್ಞಾನ ತರಬೇತುದಾರರಾದ ಶಕ್ತಿ ಅವರು ಮಾತನಾಡಿ ಮೊದಲು ನಿಮ್ಮಲ್ಲಿ ಇರುವಂತಹ ವೈಶಿಷ್ಟ್ಯಪೂರ್ಣ ಕೌಶಲ್ಯ ಮತ್ತು ಪ್ರತಿಭೆ ಅರಿತು ಅದಕ್ಕೆ ಪೂರಕವಾಗಿ ತರಬೇತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮ್ಯಾಜಿಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೆಸಿಐ ಸಂಸ್ಥೆ ವತಿಯಿಂದ ಸಮಾಜಮುಖಿ ಹಾಗೂ ಸಾಧನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪ್ರತಿಷ್ಠಿತ ‘ಸಾಧನಾಶ್ರೀ’ ಪ್ರಶಸ್ತಿಗೆ ಜೇಸಿಐ ಬೈಂದೂರು ಸಿಟಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ರಾಜು ಮೊಗವೀರ ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಡಂತ್ಯಾರಿನಲ್ಲಿ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಜೆಸಿಐ ಭಾರತ ವಲಯ 15ರ ವಲಯಾಧ್ಯಕ್ಷರಾದ ಜೆಎಪ್ಎಸ್. ಸಂತೋಷ್ ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ವಲಯ ಉಪಾಧ್ಯಕ್ಷರಾದ ಜೆಎಪ್ಎಂ. ಪ್ರದೀಪ್ ಶೆಟ್ಟಿ ಇನ್ನಾ, ಪಿಆರ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾದ ಜೆಸಿ ಸ್ವರಾಜ್ ಶೆಟ್ಟಿ, ವ್ಯವಹಾರ ವಿಭಾಗದ ನಿರ್ದೇಶಕರಾದ ಜೆಸಿ ವಿಕೇಶ್ ಮಾನ್ಯ, ಬೈಂದೂರು ಸಿಟಿ ಜೆಸಿಐ ಅಧ್ಯಕ್ಷರಾದ ಜೆಸಿ ಚೈತ್ರ ಸತೀಶ್, ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಇವರ ಸಾಮಾಜಿಕ ಸೇವೆ, ರಕ್ತದಾನ ಸೇವೆ ಹಾಗೂ ಅವರ ಸಾಧನೆಯನ್ನು ಗುರುತಿಸಿ. ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
