Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಗುಲ್ವಾಡಿ ಗ್ರಾಮದ ಅರೆಕಲ್ಲು ಹುಣ್ಣೆಮನೆ ಎಂಬಲ್ಲಿ ನಡೆಯುತ್ತಿದ್ದ ಅಂದರ್-ಬಹರ್ ಇಸ್ಪೀಟ್‌ ಜುಗಾರಿ ಅಡ್ಡೆಗೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಚಂದ್ರಕಲಾ ಪತ್ತಾರ ಹಾಗೂ ಪೋಲಿಸರು ದಾಳಿ ನಡೆಸಿದ್ದಾರೆ. ಆರೋಪಿಗಳಾದ ಸಮರ್ಥ ಕಾರ್ಕಳ (27), ಕಿಶನ್ ತಗ್ಗರ್ಸೆ (45), ಪ್ರದೀಪ್ ಮಂಗಳೂರು (42), ನಿಸಾರ್ ಶೇಖ್ ಗುಲ್ವಾಡಿ (42) ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆಟದಲ್ಲಿ ಭಾಗಿಯಾಗಿದ್ದ ಕೆಲವರು ತಪ್ಪಿಸಿಕೊಂಡಿದ್ದಾರೆ. ಆರೋಪಿಗಳಿಂದ ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 11,620 ರೂಪಾಯಿ, 4 ಮೊಬೈಲ್, 1 ಕಾರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ವಂಡ್ಸೆ ನಿವಾಸಿ ನಾರಾಯಣ ಶೆಟ್ಟಿ ಅವರ ಮೊಬೈಲ್ ಹ್ಯಾಕ್ ಮಾಡಿ ಅವರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ ಬಗ್ಗೆ ಇತ್ತೀಚಿಗೆ ಪ್ರಕರಣ ದಾಖಲಾಗಿದೆ. ಸೆ.17ರಂದು ಮೊಬೈಲ್‌ಗೆ ಬಂದ ಕರೆಯನ್ನು ಸ್ವೀಕರಿಸಿದಾಗ ರಾಹುಲ್ ಎಂಬಾತ ಹಿಂದಿಯಲ್ಲಿ ಮಾತನಾಡಿದ್ದು, ರಾಂಗ್ ನಂಬರ್ ಎಂದು ಕರೆ ಕಟ್ ಮಾಡಲಾಗಿತ್ತು. ಬಳಿಕ ಮೊಬೈಲ್‌ಗೆ ಓಟಿಪಿ ನಂಬ್ರವಿರುವ ಮೆಸೆಜ್ ಬಂದಿತ್ತು. ಅನುಮಾನಗೊಂಡು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಕೇವಲ 54ರೂ. ಇರುವುದಾಗಿ ಹಿಂದಿಯಲ್ಲಿ ಕಂಡುಬಂದಿದೆ. ಖಾತೆಯಲ್ಲಿದ್ದ 1.27ಲಕ್ಷ ಹಣದಲ್ಲಿ 54 ರೂ.ಬಿಟ್ಟು ಉಳಿದ ಹಣ ಬೇರೆಯ ವರ ಬ್ಯಾಂಕ್ ಖಾತೆಗೆ ವರ್ಗಾವಣೆಗೊಂಡಿತ್ತು. 1930 ನಂಬ್ರಕ್ಕೆ ಫೋನ್ ಮಾಡಿದ ಬಳಿಕ 27000 ರೂ. ಹಣ ಖಾತೆಗೆ ಮರು ಜಮೆಯಾಗಿದೆ. ಎಸ್ ಡಿಸಿಸಿ ಬ್ಯಾಂಕ್‌ನಲ್ಲಿರುವ ತಂದೆ ಅವರ ಖಾತೆಗೆ ನನ್ನ ಮೊಬೈಲ್ ಲಿಂಕ್ ಆಗಿದ್ದು ರಾಹುಲ್ ಹೆಸರಿನ ವ್ಯಕ್ತಿ 9008081056 ನಂಬ್ರದಿಂದ ಕರೆ ಮಾಡಿ ನನ್ನ ಮೊಬೈಲ್ ಹ್ಯಾಕ್ ಮಾಡಿ 1ಲಕ್ಷ ರೂ. ಹಣವನ್ನು ಮೋಸದಿಂದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಟೆಕ್ ಪಾರ್ಕ್‌ನಲ್ಲಿ ಸ್ವಿಚ್‌ಗೇರ್ ಅಂಡ್ ಕಂಟ್ರೋಲ್ ಟೆಕ್ನಿಕ್ಸ್ ಪ್ರೈವೇಟ್ ಲಿಮಿಟೆಡ್ (SCTPL)ನ ಹೊಸ ಘಟಕವನ್ನು ಉದ್ಘಾಟಿಸಲಾಯಿತು. ಘಟಕ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು, “ಇಂತಹ ಅಂತರರಾಷ್ಟ್ರೀಯ ಕಂಪನಿಗಳು ಕರಾವಳಿ ಭಾಗದಲ್ಲಿ ಸ್ಥಾಪನೆಯಾಗುವುದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳು ದೊರೆತು, ಅವರ ಪ್ರತಿಭೆಗೆ ಪೂರಕ ಪ್ರೋತ್ಸಾಹ ದೊರೆಯಲಿದೆ ಎಂದು ಹೇಳಿದರು. ಪ್ರಸ್ತುತ ಆಳ್ವಾಸ್ ಟೆಕ್ ಪಾರ್ಕ್ನಲ್ಲಿ 8 ಕಾರ್ಪೊರೇಟ್ ಕಂಪನಿಗಳು, 4 ಸ್ಟಾರ್ಟ್ಅಪ್‌ಗಳು ಮತ್ತು 2 ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿವೆ. ಈಗಾಗಲೇ 75 ವಿದ್ಯಾರ್ಥಿಗಳು ತಮ್ಮ 12 ಹೊಸ ಸ್ಟಾರ್ಟ್ಅಪ್ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸಕ್ರಿಯ ತರಬೇತಿ ಪಡೆಯುತ್ತಿದ್ದಾರೆ. ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಟೈ ((TiE),), ಸಿಐಐ ((CII)) ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳ ಸಹಕಾರ ಲಭ್ಯವಾಗಿದೆ ಎಂದರು. SCTPL ನಿರ್ದೇಶಕ ಹರ್ಷಿತ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಪ್ರತಿನಿಧಿಗಳ ನೇರ ನೇಮಕಾತಿಗೆ ಸಂದರ್ಶನವು ಅಕ್ಟೋಬರ್ 9 ರಂದು ಬೆಳಗ್ಗೆ 10.30 ಕ್ಕೆ ಉಡುಪಿಯ ಪ್ರಧಾನ ಅಂಚೆ ಕಚೇರಿಯ ಮೊದಲ ಮಹಡಿಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ. ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ 18 ವರ್ಷ ಮೇಲ್ಪಟ್ಟ, ಉತ್ತಮ ಸಂವಹನ ಕೌಶಲ್ಯ ಹಾಗೂ ವಿಮಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅರ್ಹರು ಸಂದರ್ಶನ ನಡೆಯುವ ದಿನದಂದು ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ ಅಂಚೆ ಜೀವವಿಮೆ ಅಭಿವೃದ್ಧಿ ಅಧಿಕಾರಿ, ಉಡುಪಿ ಅಂಚೆ ವಿಭಾಗ ಮೊ.ನಂ: 9482914676 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಡಾ. ಶಯದೇವಿಸುತೆ ಮರವಂತೆ (ಡಾ. ಜ್ಯೋತಿ ಜೀವನ್‌ಸ್ವರೂಪ್) ಅವರ ಮಹಾ ಕಾದಂಬರಿಯು ವಿನೋದ್‌ಕುಮಾರ್ ಪಿ. ಅವರ ಪರಿಕಲ್ಪನೆಯಲ್ಲಿ ಸಿನಿಮಾ ಶೈಲಿಯ ಬರಹದೊಂದಿಗೆ ಪುನಃ ಸಿದ್ಧತೆಗೊಂಡಿದ್ದು, ಕೃತಿಯನ್ನು ಇತ್ತೀಚೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ತಮ್ಮ ಸ್ವಗೃಹದಲ್ಲಿ ಲೋಕಾರ್ಪಣೆಗೊಳಿಸಿದರು. ಚಲನಚಿತ್ರ ನಿರ್ಮಾಣದಲ್ಲಿ ಚಿತ್ರಕಥೆ ಹಾಗೂ ಸಂಭಾಷಣೆ ಸಮಯದಲ್ಲಿ ಸಹ ಬರಹಗಾರರಾಗಿ ಚಲನಚಿತ್ರ ನಿರ್ದೇಶಕ ಪನ್ನಗ ಸೋಮ್‌ಶೇಖರ್ ಹಾಗೂ ಕಲಾವಿದ ರಂಗಾಯಣ ಜಗನ್‌ ಅವರು ಡಾ. ಶಯದೇವಿಸುತೆ ಮರವಂತೆ ಅವರಿಗೆ ಬಲು ವಿಶೇಷವಾಗಿ ಸಹಕರಿಸಿದ್ದು, ಸಿನಿಮಾ ಕಾದಂಬರಿಯನ್ನು ಸಿನಿಮಾ ನಿರ್ಮಾಪಕ ಆದಿತ್ಯ ವಿನೋದ್‌ ಅವರ ಹೆಸರಿಗೆ ಕಾನೂನುಬದ್ಧವಾಗಿ ಹಸ್ತಾಂತರಿಸಿಕೊಡಲಾಯ್ತು. ಸದ್ಯದಲ್ಲಿಯೇ, ಅಪ್ರಮೇಯ ಫಿಲಂಸ್‌ ಅವರ ಪ್ರೊಡಕ್ಷನ್‌ನಲ್ಲಿ “ಕೆಂದಾವರೆ” – ಎಂಬ ಇದೇ ಮಹಾ ಕಾದಂಬರಿಯ ಹೆಸರಿನ ಶೀರ್ಷಿಕೆಯಡೀಯಲ್ಲಿ ಕಾದಂಬರಿ ಆಧಾರಿತ ಕನ್ನಡ ಭಾಷೆಯ ಹೊಸ ಚಲನಚಿತ್ರವೊಂದು ನಿರ್ಮಾಣವಾಗಿದ್ದು ಅತೀ ಶೀಘ್ರದಲ್ಲಿಯೇ ಅದನ್ನು ಬೆಳ್ಳಿತೆರೆ ಮೇಲೆ ತರಲು ಕೆಲಸಗಳು ಪ್ರಗತಿಯಲ್ಲಿವೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಡಾ. ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟು ಹಬ್ಬದ ಸಲುವಾಗಿ ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘ ತ್ರಾಸಿ ಇವರ ವತಿಯಿಂದ ನಾರಾಯಣ ವಿಶೇಷ ಮಕ್ಕಳ ಶಾಲೆ, ತಲ್ಲೂರು ಮತ್ತು ಚೈತನ್ಯ ಸ್ಪೆಶಲ್ ಸ್ಕೂಲ್, ವಡೇರ ಹೋಬಳಿ ಕುಂದಾಪುರ ಇವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಹಾಗೂ ಮೊವಾಡಿ ತ್ರಾಸಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಘುರಾಮ ದೇವಾಡಿಗ ಸಹಿತ ಅಭಿಮಾನಿಗಳಾದ ಮಿಥುನ್ ಎಂ. ಡಿ. ಬಿಜೂರು, ರವಿ ಶೆಟ್ಟಿಗಾರ್, ತ್ರಾಸಿ., ಪಾಂಡುರಂಗ ದೇವಾಡಿಗ, ಗಣೇಶ ದೇವಾಡಿಗ, ಮಹೇಶ ದೇವಾಡಿಗ, ಕಿರಣ್ ದೇವಾಡಿಗ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ  ಇಂಡಕ್ಷನ್ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗವರ್ನ್‌ಮೆಂಟ್ ಟೆಕ್ ಕೆಪಿಎಮ್‌ಜಿ ಇಂಡಿಯಾದ ಸಹಾಯಕ ನಿರ್ದೇಶಕರಾದ ಡಾ. ರತನ್ ಮುರಳೀದರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಒಬ್ಬ ವಿದ್ಯಾರ್ಥಿಯಾಗಿ, ನಿಮ್ಮ ಸುತ್ತಲಿನ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸಲು ನಿಮ್ಮ ಕೌಶಲ್ಯಗಳನ್ನು ಬಳಸಿಕೊಳ್ಳಬೇಕು, ಆ ನಿಟ್ಟಿನಲ್ಲ್ ವಿದ್ಯಾರ್ಥಿಗಳು ಪ್ರಯತ್ನ ಪಡುತ್ತಲೇ ಇರಬೇಕು ಎಂದು ಪ್ರೋತ್ಸಾಹಿಸಿದರು.” ವಿವಿಧ ವಿಭಾಗದ ಡೀನ್ ಅವರು ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳು , ಪ್ಲೇಸ್ಮೆಂಟ್ ವಿಭಾಗದ ತರಭೇತಿ ಇನ್ನಿತರ ವಿಷಯಗಳ ಬಗ್ಗೆ ವಿವರಣೆ ನೀಡಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಬ್ರ್ಯಾಂಡ್ ಬಿಲ್ಡಿಂಗ್ ವಿಭಾಗದ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ ಅವರು ಮಾತನಾಡಿ, ವಿದ್ಯಾರ್ಥಿಗಳು ಈಗ ಕೇವಲ ವ್ಯಕ್ತಿಗಳಲ್ಲ, ನಮ್ಮ ಸಂಸ್ಥೆಯ ಪ್ರತಿನಿಧಿಗಳು ಎನ್ನುತ್ತ ತಾವು ಶಿಸ್ತನ್ನು ಕಾಪಾಡಿಕೊಳ್ಳುವುದು, ಬಲವಾದ ವೈಯಕ್ತಿಕ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸುವುದು ಮತ್ತು ನಾಯಕತ್ವ, ಆತ್ಮವಿಶ್ವಾಸ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯಂತಹ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಯೋಗಾಸನ ಭಾರತ್ ಆಶ್ರಯದಲ್ಲಿ ಛತ್ತೀಸ್‌ಗಡ್‌ನ ಅಗ್ರಸೇನ್ ಭವನದಲ್ಲಿ ನಡೆದ 2025-26ನೇ ಸಾಲಿನ 6ನೇ ರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಬ್ಯಾಕ್ ಬೆಂಡಿಂಗ್ ಯೋಗಾಸನದಲ್ಲಿ ತಾಲೂಕಿನ ಸಂದೀಪ್ ಪೂಜಾರಿ ತ್ರಾಸಿ ಅವರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ, ಸೆಮಿಫೈನಲ್‌ನಲ್ಲಿ 4ನೇ ಸ್ಥಾನ ಹಾಗೂ ಫೈನಲ್‌ನಲ್ಲಿ 5ನೇ ಸ್ಥಾನವನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ರಾಷ್ಟ್ರ ಮಟ್ಟದ ಈ ಯೋಗಾಸನ ಸ್ಫರ್ಧೆಯಲ್ಲಿ 22 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ಅನೇಕ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸಂದೀಪ ಪೂಜಾರಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಅವರು ತ್ರಾಸಿ ಗ್ರಾಮ ಪಂಚಾಯತ್ ಉದ್ಯೋಗಿಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪಂಚ ಗ್ಯಾರೆಂಟಿಯಲ್ಲಿ ಮಹಿಳೆಯನ್ನು ಕೇಂದ್ರಿಕರಿಸಿ ಯೋಜನೆಯನ್ನು ರೂಪಿಸಲಾಗಿದ್ದು, ಮಹಿಳೆಯರ ನಿರಂತರ ಶ್ರಮಕ್ಕೆ ಮಾನ್ಯತೆ ನೀಡುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಉಡುಪಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು. ಅವರು ಗುರುವಾರ ಶಿರೂರು ಪೇಟೆ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ತಾಲೂಕು ಪಂಚಾಯತ್ ಬೈಂದೂರು, ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬೈಂದೂರು ಹಾಗೂ ಗ್ರಾಮ ಪಂಚಾಯತ್ ಶಿರೂರು ನೇತೃತ್ವದಲ್ಲಿ ಆಯೋಜಿಸಲಾದ ಗ್ಯಾರೆಂಟಿ ಸಮಾವೇಶ ಹಾಗೂ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ಯಾರೆಂಟಿ‌ ಯೋಜನೆಯಿಂದ ರಾಜ್ಯದ ಯಾವೊಂದು ಕಲ್ಯಾಣ ಕಾರ್ಯಕ್ರಮಗಳಿಗೂ ಹಿನ್ನಡೆಯಾಗಿಲ್ಲ. ಕಾಲಕಾಲಕ್ಕೆ ಸರಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ. ಅಲ್ಲದೇ ಗ್ಯಾರೆಂಟಿ‌ ಯೋಜನೆಯಿಂದಾಗಿ ತಲಾ ಆದಾಯವೂ ಪ್ರಗತಿ ಕಂಡಿದ್ದು, ಜನರ ಆರ್ಥಿಕ ವಹಿವಾಟು ಹೆಚ್ಚಿದೆ ಎಂದರು. ಬೈಂದೂರು ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಕ್ಷೇತ್ರ ಅಕ್ರಮ ಸಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ತಾಲೂಕಿನ ಕಮಲಶಿಲೆ ಗ್ರಾಮದ ಬರೆಗುಂಡಿ ನಿವಾಸಿ ಉದಯ ಚಾತ್ರ (43) ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಿದ್ದಾಪುರ ಚಾತ್ರ ಎಂಟರ್‌ಪೈಸಸ್ ಮಾಲಕರಾಗಿರುವ ಉದಯ ಚಾತ್ರ ಅವರು ಬುಧವಾರ ಬೆಳಿಗ್ಗೆ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಗೆ ತನ್ನ ತಂದೆ, ತಾಯಿ ಹಾಗೂ ಪತ್ನಿಯ ಜತೆಯಲ್ಲಿ ತೆರಳಿದ್ದರು. ಬಳಿಕ ಅವರನ್ನು ಮಹಾಸಭೆಯಲ್ಲಿ ಬಿಟ್ಟು ಸಿದ್ದಾಪುರದಲ್ಲಿರುವ ಚಾತ್ರ ಎಂಟರ್‌ಪೈಸಸ್‌ಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಆದರೆ ಕಮಲಶಿಲೆಯಿಂದ ತನ್ನ ಅಂಗಡಿಗೆ ಹೋಗದೆ ನೇರವಾಗಿ ಮನೆಗೆ ಹೋಗಿ ಮಹಡಿ ಮೇಲಿನ ಕೋಣೆಗೆ ತೆರಳಿ ಫ್ಯಾನಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕುಟುಂಬಿಕರು ಸಂಘದ ಸಭೆ ಮುಗಿಸಿ ಮನೆಗೆ ಮರಳಿದಾಗ ಅವರ ವಾಹನ ಅಲ್ಲೇ ಇರುವುದರಿಂದ ಮನೆಯ ಸುತ್ತಮುತ್ತ ಹಾಗೂ ಒಳಗೆ ಹುಡುಕಾಟ ನಡೆಸಿ ನಂತರ ಮಹಡಿಯ ಕೋಣೆಗೆ ಹೋಗಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ…

Read More