Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿಸ್ತರಣಾ ಚಟುವಟಿಕೆ ಭಾಗವಾಗಿ ಶಿಬಿರಾರ್ಥಿಗಳು ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭ ಕುಟುಂಬದ ಸದಸ್ಯರಾದ ರೇಖಾ ಶೆಟ್ಟಿ, ಮನೆಯ ಇತಿಹಾಸ ಹಾಗೂ ವಡ್ಡರ್ಸೆಯವರ ಕುರಿತು ಅನುಭವಗಳನ್ನು ಹಂಚಿಕೊAಡರು. ವಡ್ಡರ್ಸೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೊತ್ತಾಡಿ ವಿಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು. ಈ ಸಂದರ್ಭ ಶಿಬಿರಧಿಕಾರಿಗಳಾದ ಡಾ| ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ, ಸಹ ಶಿಬಿರಧಿಕಾರಿಗಳಾದ ಪ್ರವೀಣ್ ಮೊಗವೀರ ಗಂಗೊಳ್ಳಿ, ಹರೀಶ್ ಕಾಂಚನ್, ರಜತ್ ಬಂಗೇರ, ಸುಹಾಸ್ ಜಟ್ಟಿಮನೆ, ಕಿಶೋರ್ ಕೃಷ್ಣ ಕಾಂಚನ್ ಹಾಗೂ ಕಚೇರಿ ಸಿಬ್ಬಂದಿಗಳಾದ ಸಚಿನ್, ಮಂಜುನಾಥ್ ಕುಲಾಲ್, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಮಾಜಿ ಶಾಸಕ ಎ. ಜಿ. ಕೊಡ್ಗಿ ಅವರ ಕನಸಿನ ಕೂಸಾದ ಪಶ್ಚಿಮವಾಹಿನಿ ಯೋಜನೆಯಿಂದ ಕರಾವಳಿಯ ಮೂರು ಜಿಲ್ಲೆಯ ಕೃಷಿಕರಿಗೆ ಸಾಕಷ್ಟು ಅನುಕೂಲವಾಗಿದ್ದರೂ, ಸಂಬಂತ ಅಧಿಕಾರಿಗಳ ಅಸಮಪರ್ಕಕ ಕಾರ್ಯನಿರ್ವಹಣೆಯಿಂದಾಗಿ ಇತ್ತೀಚಿನ ಬಹುತೇಕ ಕಿಂಡಿ ಅಣೆಕಟ್ಟುಗಳ ಕಾಮಗಾರಿ ಕಳಪೆಯಾಗಿದ್ದು, ರೈತರಿಗೆ ಸಾಕಷ್ಟು ಅನಾನುಕೂಲತೆ ಸೃಷ್ಟಿಸುತ್ತಿದೆ ಎಂದು ಜಿಲ್ಲಾ ರೈತರ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಕಿಡಿಕಾರಿದರು. ಹೇರಂಜಾಲು ಗುಡೇ ದೇವಸ್ಥಾನ ಏತ ನೀರಾವರಿ ಯೋಜನೆಯ ಸಂತ್ರಸ್ತರ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ಕಾಮಗಾರಿ ಪರಿಪೂರ್ಣ ಆಗಬೇಕಾದರೆ ಸ್ಥಳೀಯರು ಕಾಮಗಾರಿಯ ಆರಂಭದಲ್ಲೇ ಜಾಗ್ರತೆಯಿಂದ ಎಚ್ಚರಿಕೆ ವಹಿಸುವುದು ಅಗತ್ಯ, ನಮಗೆ ಅಕಾರಿಗಳೇ ಉತ್ತರದಾಯಿಗಳೇ ಹೊರತು ಗುತ್ತಿಗೆದಾರರಲ್ಲ ಎಂದ ಅವರು ರೈತರ ಹೋರಾಟಕ್ಕೆ ಹಾಗೂ ಸಂತ್ರಸ್ತರ ಜೊತೆಗೆ ನಿಲ್ಲುತ್ತೇವೆ, ನ್ಯಾಯುತ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು. ರೈತ ಸಂಘದ ಮುಖಂಡ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಯೋಜನೆ ಕುರಿತು ಮಾಹಿತಿ ತಿಳಿದುಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಭಾರತ ದೇಶದಲ್ಲಿ ಯುವಜನತೆ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಶೇ.55ಕ್ಕಿಂತ ಯುವಸಂಪತ್ತು ನಮ್ಮ ದೇಶದಲ್ಲಿದೆ. ಜಾಗೃತ ಯುವಶಕ್ತಿ ಸಂಘಟಿತವಾಗಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುತ್ತಿರುವುದು ಕಾಣುತ್ತಿದ್ದೇವೆ. ಸಶಕ್ತ ಯುವಜನತೆ ಸದುದ್ದೇಶದಿಂದ  ಜಾತಿಮತ ಧರ್ಮಬೇಧವಿಲ್ಲದೆ ಗ್ರಾಮದ ಒಳಿತಿಗೆ ತೊಡಗಿಸಿಕೊಳ್ಳುವುದರಿಂದ ಸಮಾಜದ ಏಳಿಗೆ ಸಾಧ್ಯ ಎಂದು ಎಂ.ಎಸ್ ಮಂಜ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸಿ ಪುರಸ್ಕೃತ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹೇಳಿದರು. ಅವರು ವಂಡ್ಸೆ ಆತ್ರಾಡಿಯ ಕಂಬಳಗದ್ದೆ ವಠಾರದಲ್ಲಿ ಜರಗಿದ  ಮಾತೃಭೂಮಿ ಯುವ ಸಂಘಟನೆಯ 8ನೇ ವರ್ಷದ ವರ್ಷೋತ್ಸವ ‘ಯುವ ಸಂಭ್ರಮ-2025’ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರ ಮೇಲು ಹಲವು ಋಣಗಳು ಇರುತ್ತದೆ. ಸಮಾಜದ ಋಣವನ್ನು ಪ್ರತಿಯೊಬ್ಬರು ತೀರಿಸಬೇಕು. ಈ ಸಂಘಟನೆಯನ್ನು ನಾನೇ ಉದ್ಘಾಟಿಸಿದ್ದೆ. ಅಂದಿನಿಂತ ಇಂದಿನ ತನಕ ನಿರಂತರವಾಗಿ ಕಾರ್ಯಚಟುವಟಿಕೆಯಿಂದ ಮುನ್ನೆಡೆಯುತ್ತಿರುವುದು ಸಂತೋಷದ ವಿಚಾರ ಎಂದರು. ಮಾತೃಭೂಮಿ ಯುವ ಸಂಘಟನೆಯ ಅಧ್ಯಕ್ಷ ಶಶಿಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಕೈಗಾರಿಕೋದ್ಯಮಿ ಎನ್. ರಮೇಶ ದೇವಾಡಿಗ ಅಡಿಕೆಕೊಡ್ಲು ಅವರನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಮತ್ತು ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ ರಿ. ಮೈಸೂರು – ಇವರ ಸಂಯುಕ್ತ ಆಶ್ರಯದಲ್ಲಿ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಅಂಗವಾಗಿ “ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ”ವು 2025 ಮೈಸೂರಿನ ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್‌ ಆಡಿಟೋರಿಯಂನಲ್ಲಿ ಇತ್ತೀಚಿಗೆ ನಡೆಯಿತು. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ನಾಡೋಜ ಡಾ. ಮಹೇಶ್ ಜೋಷಿ ಅವರು ತಮ್ಮ ಅಮೃತಹಸ್ತದಿಂದ ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕದ ಅಭ್ಯುದಯಕ್ಕೆ ನೀಡಿರುವ ವಿವಿಧ ಅತ್ಯಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್‌ಸ್ವರೂಪ್) ಅವರಿಗೆ “ರಾಷ್ಟ್ರಕವಿ ಕುವೆಂಪು ಸಾಂಸ್ಕೃತಿಕ ಚೇತನ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳು ಹಾಗೂ ವಿವಿಧ ಹಲವಾರು ಕ್ಷೇತ್ರಗಳ ಗಣ್ಯ ಸಾಧಕರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಕಲಾರಾಧಕರು; ಕಲಾ ಪೋಷಕರೂ ಆದ ಶಯದೇವಿಸುತೆ ಮರವಂತೆಯವರು ಆಧ್ಯಾತ್ಮಿಕ ಚಿಂತಕರಾಗಿ, ಸಂಗೀತ-ಸಾಹಿತ್ಯ ಕಲಾ ಲೋಕದಲ್ಲಿ, ಯಕ್ಷಗಾನ ಕ್ಷೇತ್ರದಲ್ಲಿ, ಪತ್ರಿಕೋದ್ಯಮ ಹಾಗೂ ಹಲವಾರು ಮಾಧ್ಯಮ ರಂಗ -…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಮಕ್ಕಳು ಎಳವೆಯಲ್ಲೇ ದುರಾಸೆಗೆ ಬಲಿಯಾಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ಮೋಜಿಗಾಗಿ ಪ್ರಾರಂಭಿಸಿದ ದುಶ್ಚಟಗಳು ಜೀವವನ್ನೇ ಬಲಿ ತೆಗೆದುಕೊಳ್ಳುತ್ತಿದೆ. ವಿದ್ಯಾವಂತರೇ ಅನೇಕ ಕಾರಣಗಳಿಂದ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಪೋಷಕರು ಮಕ್ಕಳ ಮೇಲಿಟ್ಟಿರುವ ಅತಿಯಾದ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯನ್ನು ಯುವ ಜನತೆ ದುರುಪಯೋಗಪಡಿಸಿಕೊಳ್ಳುತ್ತಿದೆ. ಮಾದಕ ವಸ್ತುಗಳ ಸೇವನೆಗೆ ಬಲಿಯಾಗದಂತೆ ನೋಡಿಕೊಳ್ಳುವುದು ಮತ್ತು ಬಲಿಯಾದವರನ್ನು ಅದರ ದುಷ್ಪರಿಣಾಮಗಳಿಂದ ಮುಕ್ತಿಗೊಳಿಸುವ ಕಾರ್ಯ ನಡೆಯಬೇಕಿದೆ ಎಂದು ಬೈಂದೂರು ತಾಲೂಕು ಜನಜಾಜಗೃತಿ ವೇದಿಕೆ ಸದಸ್ಯ ಬಿ. ರಾಘವೇಂದ್ರ ಪೈ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ತಾಲೂಕು ತ್ರಾಸಿ ವಲಯ, ಜನಜಾಗೃತಿ ವೇದಿಕೆ ತ್ರಾಸಿ ವಲಯ ಮತ್ತು ಎಸ್.ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಸ.ವಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ವನಕೊಡ್ಲು ಗಂಗಾನಾಡು ಶ್ರೀ ಮಹಾಲಿಂಗೇಶ್ವರ ಶ್ರೀ ಮಹಿಷಮರ್ಧಿನಿ ದೇವಾಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಮತ್ತು ನಮ್ಮ ಒಡೆಯನ ಮುಟ್ಟಿ ಪೂಜೆ  ಫೆ. 26 ಬುಧವಾರದಂದು ಮಹಾ ವಿಜೃಂಭಣೆಯಿಂದ ದೇಗುಲದಲ್ಲಿ ನಡೆಯಲಿದೆ. ಫೆ.25ರ ರಾತ್ರಿ ದುರ್ಗಾದೀಪ ನಮಸ್ಕಾರ ಪೂಜೆ ಹಾಗೂ ಫೆ.26ರಂದು ಬೆಳಿಗ್ಗೆ 5.30 ರಿಂದ 6.00ರವರೆಗೆ ಮಹಾಲಿಂಗೇಶ್ವರನಿಗೆ ಮುಟ್ಟಿ ಪೂಜೆ ನಡೆಯಲಿದೆ. ರಾತ್ರಿ 8.00ಕ್ಕೆ ಮಹಾಪೂಜೆ ಹಾಗೂ 9.00 ರಿಂದ ಬಲಿ ಮತ್ತು ಉತ್ಸವಾದಿಗಳು ನಡೆಯಲಿದೆ. ಫೆ.27ರ ಬೆಳಿಗ್ಗೆ 6ಕ್ಕೆ ಶ್ರೀ ದೇವರ ಸನ್ನಿದಿಯಲ್ಲಿ ಪಂಚಗವ್ಯ, ಪುಣ್ಯಾಹ, ನವಕ ಪ್ರಧಾನ ಹೋಮ, ಪಂಚಾಮೃತಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪರಿವಾರ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಗಂಗಾನಾಡು ಶ್ರೀ ಮಹಾಲಿಂಗೇಶ್ವರ ಶ್ರೀ ಮಹಿಷಮರ್ದಿನಿ ದೇವಾಸ್ಥಾನ ವನಕೊಡ್ಲು ಅನುವಂಶಿಕ ಧರ್ಮದರ್ಶಿಗಳಾದ ಯಡ್ತರೆ ರಾಜಮೋಹನ ಶೆಟ್ಟಿ, ಅರ್ಚಕರು ಮತ್ತು ಪರಿಸರದ ಗ್ರಾಮಸ್ಥರು ಉಪಸ್ಥಿತರಿರುವರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶ್ರೀ ಮೈಲಾರೇಶ್ವರ ಯುವಕ ಮಂಡಲ ರಿ., ಕುಂದಾಪುರ ಇವರ 48ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಬಾಲಕಿಯರ ವಿಭಾಗದ ಭಕ್ತಿಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಹಾಗೂ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ಭಾಗ್ಯಲಕ್ಷ್ಮಿ 5ಬಿ ಹಾಗೂ ಗೀತಾ ಶ್ಯಾನುಭಾಗ್ 6ಬಿ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್.ಟಿ.ಎ) ವತಿಯಿಂದ ನಡೆಸಲಾದ ಜೆಇಇ ಬಿ ಆರ್ಕ್ ಮತ್ತು ಜೆಇಇ ಬಿ ಪ್ಲಾನಿಂಗ್‌ನ ಫಲಿತಾಂಶ ಪ್ರಕಟವಾಗಿದ್ದು, ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಈ ವರ್ಷವೂ ಅತ್ಯುನ್ನತ ಫಲಿತಾಂಶ ಪಡೆದುಕೊಂಡಿದೆ. ಬಿ ಆರ್ಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ತೇಜಸ್ ವಿ. ನಾಯಕ್ 99.42 ಪಸೆಂಟೈಲ್, ಸಾಚಿ ಶಿವಕುಮಾರ್ ಕಡಿ 99.33 ಪಸೆಂಟೈಲ್ ಗಳಿಸಿ ಉತ್ತಮ ಸಾಧನೆಗೈದಿದ್ದಾರೆ. ಬಿ ಪ್ಲಾನಿಂಗ್ ಫಲಿತಾಂಶದಲ್ಲಿ ತೇಜಸ್ ವಿ. ನಾಯಕ್ 99.57 ಪಸೆಂಟೈಲ್ ಗಳಿಸಿದ್ದಾರೆ. ಹೀಗೆ ಒಟ್ಟು ಫಲಿತಾಂಶದಲ್ಲಿ 99 ಪಸೆಂಟೈಲಿಗಿಂತ ಅಧಿಕ 2 ವಿದ್ಯಾರ್ಥಿಗಳು, 97 ರಿಂದ ಅಧಿಕ 3, 95ಕ್ಕಿಂತ ಅಧಿಕ ೮ ಹಾಗೂ 16 ವಿದ್ಯಾರ್ಥಿಗಳು 90 ಪಸೆಂಟೈಲಿಗಿಂತ ಅಧಿಕ ಫಲಿತಾಂಶವನ್ನು ದಾಖಲಿಸಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಬೋಧಕ ಬೋಧಕೇತರ ವೃಂದದವರು ಹಾಗೂ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಸಂಯೋಜಕರಾದ ಸುಮಂತ್ ದಾಮ್ಲೆ ಅವರು ಅಭಿನಂದಿಸಿ ಶ್ಲಾಘಿಸಿದ್ದಾರೆ. ತೇಜಸ್ ವಿ. ನಾಯಕ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಜಪ್ತಿ ಇಂಬಾಳಿಯ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದಲ್ಲಿ ನೂತನ ಶಿಲಾಮಯ ಗುಡಿ ಲೋಕಾರ್ಪಣೆ, ಪುನಃ ಪ್ರತಿಷ್ಠಾ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವವು ಫೆ.28 ರಿಂದ ಮಾ.03 ರ ತನಕ ಸನ್ನಿಧಾನದಲ್ಲಿ ನಡೆಯಲಿದೆ. ಫೆ.28 ಶುಕ್ರವಾರ ಬೆಳಿಗ್ಗೆ 8.00ರಿಂದ ಫಲನ್ಯಾಸ, ಪ್ರಾರ್ಥನೆ, ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಋತ್ವಿಗರಣ, ಮಧುಪರ್ಕಪೂಜೆ, ವೇದ ಪಾರಾಯಣ ಪ್ರಾರಂಭ, ಮಹಾಗಣಪತಿ ಹೋಮ, ನವಗ್ರಹ ಹೋಮ ಸಂಜೆ 5.00ರಿಂದ ಶಸ್ತ್ರ ಪೂಜೆ, ಗೇಹ ಪರಿಗ್ರಹ, ಸ್ಥಾನ ಶುದ್ದಿ, ಪ್ರಾಸಾದ ಶುದ್ದಿ, ವಾಸ್ತು ಪೂಜೆ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ಬಲಿದಾನ ನಡೆಯಲಿದೆ. ಫೆ.01 ಶನಿವಾರ ಬೆಳಿಗ್ಗೆ 8.00 ರಿಂದ ಗುರುಗಣಪತಿ ಪೂಜೆ, ಸ್ವಸ್ತಿಪುಣ್ಯಾಹ ವಾಚನ. ಮಂಟಪ ಸಂಸ್ಕಾರ, ಬಿಂಬಶುದ್ದಿ ಕಲಶಸ್ಥಾಪನೆ, ಬಿಂಬಶುದ್ಧಿ ಹೋಮ, ಅಗ್ನಿ ಜನನ, ಶಯ್ಯಾ ಕಲ್ಪನ, ಸಂಜೆ 5.00 ರಿಂದ ಬಿಂಬಧ್ಯಾನಾಧಿವಾಸ ಪೂಜೆ, ಅಧಿವಾಸಾಧಿ ಹೋಮಗಳು, ಚಕ್ರಾಬ್ಬ ಮಂಡಲ ಪೂಜೆ, ಗೋದೋಹನ, ಪಾಯಸ ಪೂಜೆ ನಡೆಯಲಿದೆ. ಫೆ.02 ಭಾನುವಾರ ಬೆಳಿಗ್ಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯಿಂದ ನೀಡಲಾಗುವ ಮೆಡಲ್ ಆಫ್ ಮೇರಿಟ್ ಸೇವಾ ಪದಕಕ್ಕೆ ಉಡುಪಿ ಜಿಲ್ಲೆಯಿಂದ ಗುಣರತ್ನ ಅವರು ಆಯ್ಕೆಯಾಗಿದ್ದು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಸೇವಾ ಪದಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

Read More