ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಡ್ಡರ್ಸೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು. ಉದ್ಯಮಿ ನಾಗೇಂದ್ರ ಅಡಿಗ ವಡ್ಡರ್ಸೆ, ಮಾಲಕರು, ಹೋಟೆಲ್ ಗಣೇಶ ಗ್ರಾಂಡ್ ಆಗುಂಬೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಕಾಲೇಜಿನ ಸಾಂಸ್ಕೃತಿಕ ಸಾಧನೆಗಳನ್ನು, ಶೈಕ್ಷಣಿಕ ಕ್ರಿಯಾ ಚಟುವಟಿಕೆಗಳನ್ನು ಸಾದರಪಡಿಸಿದರು. ಈ ಸಂದರ್ಭ ಅಮಾಸೆಬೈಲು ಡ್ಯುಯಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ ಶುಭ ಹಾರೈಸಿದರು. ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾರಂಗದ ಅಧ್ಯಕ್ಷ ಸಚಿನ್ ಕುಮಾರ್ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಉಡುಪಿ ಪೊಲೀಸ್ ಠಾಣೆಯ ಆರಕ್ಷಕರಾದ ಮಂಜುನಾಥ ಶೆಟ್ಟಿ ಕೊತ್ತಾಡಿ ದಿಕ್ಸೂಚಿ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ್ ಜುವೆಲರ್ಸ್ ಮಾಲಕರಾದ ಪದ್ಮನಾಭ ಆಚಾರ್, ವಡ್ದರ್ಸೆ, ವಿನುತಾ ಶೆಟ್ಟಿ ಕೊತ್ತಾಡಿ, ಮಂಜುಳಾ ವೀರೇಂದ್ರ ಶೆಟ್ಟಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಪೋಷಕರ ಸಭೆಯು ಸಂಸ್ಥೆಯ ಕಾರ್ಯದರ್ಶಿಯವರಾದ ಕೆ. ರಾಧಾಕೃಷ್ಣ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಡಾ. ಎ.ವಿ ಬಾಳಿಗಾ ಆಸ್ಪತ್ರೆ ಉಡುಪಿ ಇಲ್ಲಿಯ ಕ್ಲಿನಿಕಲ್ ಮನಶ್ಯಾಸ್ತ್ರಜ್ಞರಾದ ನಾಗರಾಜಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ “ಪರಿಣಾಮಕಾರಿ ಪೋಷಕತ್ವ”ದ ಬಗ್ಗೆ ತಿಳಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರೇಷ್ಮಾ ಡಿಸೋಜಾ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಪ್ರಮೀಳಾ ಡಿಸೋಜಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ ಅವರು ಸರ್ವರನ್ನು ಸ್ವಾಗತಿಸಿದರು. ಸಂಯೋಜಕ ಶಿಕ್ಷಕ ರವೀಂದ್ರ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿ, ಪ್ರೌಢಶಾಲಾ ಸಂಯೋಜಕ ಶಿಕ್ಷಕ ಮಾಧವ ವಂದನಾರ್ಪಣೆಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಭರತ್ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯುವ ನಾಯಕರಾಗಿ ಗುರುತಿಸಿಕೊಂಡಿದ್ದ ಭರತ್ ಅವರು ಉದ್ಯಮ ಹಾಗೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೇದಮೂರ್ತಿ ರಾಮಚಂದ್ರ ಭಟ್ಟರ ಸ್ಮರಣಾರ್ಥ ಆರಾಧನೆ ಕಾರ್ಯಕ್ರಮದ ಭಾಗವಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಮಾತೃವಂದನಾ ಕಾರ್ಯಕ್ರಮವು ಇತ್ತೀಚಿಗೆ ನೆರವೇರಲ್ಪಟ್ಟಿತು. ಬಾರ್ಕೂರಿನ ಖ್ಯಾತ ವಾಗ್ಮಿಗಳಾದ ಎನ್. ಆರ್. ದಾಮೋದರ ಶರ್ಮ ಅವರು ಈ ಕಾರ್ಯಕ್ರಮವನ್ನು ಸಾಂಗವಾಗಿ ನೆರವೇರಿಸಿಕೊಟ್ಟರು. ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಪಾದ ತೊಳೆದು, ಆರತಿ ಬೆಳಗಿ, ಗೌರವಿಸಿದರು. ಈ ಸಂದರ್ಭದಲ್ಲಿ ಎನ್. ಆರ್. ದಾಮೋದರ ಶರ್ಮರು ಪೋಷಕರು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಭರತಭೂಮಿ ಕರ್ಮಭೂಮಿ, ಧರ್ಮಭೂಮಿ, ಸಾಧನಭೂಮಿಯೆಂದು ವೇದೇತಿಹಾಸಗಳು ಸಾರಿ ಸಾರಿ ಹೇಳುತ್ತಿವೆ. ಏಕೆಂದರೆ ಇಲ್ಲಿ ಜಾತರಾದವರು ಭಾವ ರಾಗ ತಾಳಗಳಿಂದ ಕೂಡಿದ ಜೀವನ ನಡೆಸುತ್ತಾರೆ. ಈಗಿನ ಭಾರತ ಮುಂದೆ ಹೀಗೇ ಮುಂದುವರಿಯಬೇಕಾದರೆ ಉತ್ತಮ ಗುಣಮಟ್ಟದ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಹುಟ್ಟುಹಾಕುವುದು ಅತ್ಯಗತ್ಯ ಎಂದರು. ಮಕ್ಕಳಿಗೆ ಭಾರತೀಯ ಪರಂಪರೆಯ ಬಗ್ಗೆ ಸರಿಯಾದ ಜ್ಞಾನವನ್ನು ನೀಡಬೇಕು. ಇತಿಹಾಸದ ಪ್ರಜ್ಞೆ ಬೇಕು. ಯಾವಾತನು ಇತಿಹಾಸವನ್ನು ಚೆನ್ನಾಗಿ ಅರಿಯುತ್ತಾನೋ ಅವನು ಭದ್ರವಾದ ಭವಿಷ್ಯಕ್ಕೆ ನಾಂದಿಯನ್ನಿಡುತ್ತಾನೆ. ಮಕ್ಕಳು ಮಾತೃದೇವೋ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇತ್ತೀಚೆಗೆ ನಡೆದ ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಯುವ ನಾಯಕ ಸೂರಜ್ ಪೂಜಾರಿ ಅವರು ಅತ್ಯಧಿಕ ಮತಗಳೊಂದಿಗೆ ಆಯ್ಕೆಯಾಗಿದ್ದಾರೆ. ಯುವ ನಾಯಕರಾಗಿ ಗುರುತಿಸಿಕೊಂಡಿರುವ ಸೂರಜ್ ಅವರು ಬಿಇ ಪದವೀಧರರಾಗಿದ್ದು ಬೆಂಗಳೂರಿನಲ್ಲಿ ಖಾಸಗಿ ವೃತ್ತಿಯಲ್ಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇತ್ತೀಚೆಗೆ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಯುವ ನಾಯಕ ಅಕ್ಷಯ್ ಶೆಟ್ಟಿ ಅವರು 2117 ಮತಗಳನ್ನು ಪಡೆದು ಬಹುಮತದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಸಿದ್ದಾಂತದ ಕುರಿತು ಅಪಾರ ಒಲವು ಮತ್ತು ಬದ್ಧತೆಯನ್ನು ಹೊಂದಿರುವ ಅಕ್ಷಯ್ ಶೆಟ್ಟಿಯವರು ಈ ಮೊದಲು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ, ಮುಂದೆ ಕಾಂಗ್ರೆಸ್ ಸೇವಾದಳದ ಸೋಶಿಯಲ್ ಮೀಡಿಯಾ ರಾಜ್ಯಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು. ಕೃಷಿ ಕುಟುಂಬದ ಹಿನ್ನಲೆಯ ಇವರು ಬಿ.ಕಾಂ ಪದವೀಧರರಾಗಿದ್ದು, ಇದೀಗ ವೆಬ್ ಡೆವಲಪರ್ ವೃತ್ತಿ ನಡೆಸುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿಯ ಧರ್ಮದರ್ಶಿಗಳೂ ಮತ್ತು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ನಿರ್ಮಾತೃಗಳಾದ ದಿ. ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ಸಂಸ್ಮರಣೆಯ ಅಂಗವಾಗಿ ಸಂಸ್ಥಾಪಕರ ದಿನಾಚರಣೆಯನ್ನು ಶುಕ್ರವಾರದಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಆರಾಧನೆ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ಬದುಕು ಮತ್ತು ಸಾಧನೆಯ ವಿವಿಧ ಮಜಲುಗಳನ್ನು ಸಂಸ್ಮರಿಸಲಾಯಿತು. ಮುಂಜಾನೆಯ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲ್ಪಟ್ಟವು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್ ಪೋಷಕರನ್ನುಉದ್ದೇಶಿಸಿ ಮಾತನಾಡಿ, ವ್ಯಕ್ತಿಯೊಬ್ಬ ಬದುಕಿದ್ದ ಅವಧಿ ಎಷ್ಟು ಎನ್ನುವುದಕ್ಕಿಂತ ಆತ ಬದುಕಿದ್ದ ರೀತಿ ಹೇಗಿತ್ತು? ಸಮಾಜಕ್ಕೆ ಆತ ನೀಡಿದ ಕೊಡುಗೆ ಏನು? ಎನ್ನುವುದು ಬಹಳ ಮುಖ್ಯ. ಹೂವು ಪರಮಾತ್ಮನ ಪಾದ ಸೇರಿ ಸಾರ್ಥಕ ಪಡೆಯುವಂತೆ, ವೇದಮೂರ್ತಿ ಹೆಚ್. ರಾಮಚಂದ್ರಭಟ್ಟರು ಸಮಾಜದ ಹಿತಕ್ಕಾಗಿ ದುಡಿದು ಸಾರ್ಥಕವನ್ನು ಪಡೆದು, ಕೀರ್ತಿಶೇಷರಾದವರು ಎಂದರು. ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಡ್ಡರ್ಸೆಯಲ್ಲಿ ನಡೆಯುತ್ತಿರುವ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರಮದಾನಕ್ಕೆ ಬಂಡಾಡಿ ಸತೀಶ್ ಶೆಟ್ಟಿ ವಡ್ಡರ್ಸೆ ಅವರು ಚಾಲನೆ ನೀಡಿದರು. ಈ ಸಂದರ್ಭ ಉದ್ಯಮಿ ವಾಸು ಪೂಜಾರಿ ಬನ್ನಾಡಿ, ಫ್ರೆಂಡ್ಸ್ ವಡ್ಡರ್ಸೆ ಇದರ ಅಧ್ಯಕ್ಷ ಉಮೇಶ ಮರಕಾಲ, ಸರಕಾರಿ ಪ್ರೌಢಶಾಲೆ ವಡ್ಡರ್ಸೆಯ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್ ಪಿ., ಕೃಷಿಕರಾದ ರಘುರಾಮ್ ಶೆಟ್ಟಿ, ಬಾಬು ದೇವಾಡಿಗ ವಡ್ಡರ್ಸೆ ಹಾಗೂ ಸಹ ಶಿಬಿರಾಧಿಕಾರಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಕೊತ್ತಾಡಿ ಉಮೇಶ್ ಶೆಟ್ಟಿ ಶುಭ ಹಾರೈಸಿದರು. ಶಿಬಿರಾಧಿಕಾರಿಗಳಾದ ಡಾ| ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು. ಎನ್.ಎಸ್.ಎಸ್. ಸ್ವಯಂಸೇವಕರಾದ ಆಶಿಕ್ ಪ್ರಾರ್ಥಿಸಿ, ಆಕಾಶ ಆಚಾರ್ ಸ್ವಾಗತಿಸಿ, ರಿಷಿತಾ ವಂದಿಸಿ, ರಶ್ಮಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಗೋಳಿಹೊಳೆ ಗ್ರಾಮದ ಹುಂಚನಿ ಜನ್ಮನೆ ತಿರುವಿನಲ್ಲಿ ಮರಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರದೀಪ್ ಎಂಬವರ ತೋಟಕ್ಕೆ ಮಣ್ಣು ಹಾಕಲೆಂದು ಸಾಗುತ್ತಿದ್ದ ಟಿಪ್ಪರ್ ಚಾಲಕನ ಹತೋಟಿ ತಪ್ಪಿ ತಗ್ಗುಪ್ರದೇಶಕ್ಕೆ ಧುಮುಕಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಟಿಪ್ಪರ್ನ ಮುಂಬದಿ ನಜ್ಜುಗುಜ್ಜಾಗಿದ್ದು, ಮಹಾಬಲ, ಹನುಮಂತ ಹಾಗೂ ಚಾಲಕ ಚಂದ್ರ ಸಿಲುಕಿ ಕೊಂಡಿದ್ದರು. ಮೂವರ ಪೈಕಿ ಚಾಲಕ ಚಂದ್ರ ಸ್ಥಳದಲ್ಲೇ ಮೃತ ಪಟ್ಟಿದ್ದರೆ, ಮಹಾಬಲ ಹಾಗೂ ಹನುಮಂತ ಅವರನ್ನು ಹೊರಗೆ ತೆಗೆದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕಿರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ಫೆಬ್ರವರಿ 12 ರಂದು ಬೆಳಗ್ಗೆ 10.30 ಕ್ಕೆ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತಿರ್ಣರಾದ ಅಭ್ಯೃಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕಿರ್ಣ ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 810561829, 9945856670, 9901472710 ಮತ್ತು 8105774936 ಅನ್ನು ಸಂರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
