ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಏ.07: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಕಂಟೈನರ್, ಬೈಕ್ ಹಾಗೂ ನೀರಿನ ಟ್ಯಾಂಕರ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರರು ಇಬ್ಬರು ಸೇರಿದಂತೆ ನಾಲ್ಕು ಜನರು ಗಂಭೀರ ಗಾಯಗೊಂಡ ಘಟನೆ ತಲ್ಲೂರು ಸಮೀಪದ ಜಾಲಾಡಿ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರರಾದ ಬೀಜಾಡಿ ನಿವಾಸಿ ಸಂಜೀವ ಮೊಗವೀರ ಹಾಗೂ ಅವರ ಪತ್ನಿ ರತ್ನಾ ಗಂಭೀರ ಗಾಯಗೊಂಡರೆ, ಲಾರಿಯಲ್ಲಿದ್ದ ಅನಾಜ್ ಹಾಗೂ ಶಾಜೀ ಗಾಯಗೊಂಡು ಆಸ್ಪತ್ರೆ ಸೇರಿದವರು. ಮಹಾರಾಷ್ಟ್ರದಿಂದ ಕರ್ಟನ್ ಬಾಕ್ಸ್ ಗಳನ್ನು ತುಂಬಿಸಿದ್ದ ಕಂಟೈನರ್ ಲಾರಿ ಕೇರಳ ಕಡೆಗೆ ತೆರಳುತ್ತಿತ್ತು. ಜಾಲಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಐ.ಆರ್.ಬಿ. ಕಂಪೆನಿಯ ನೀರಿನ ಟ್ಯಾಂಕರ್ ರಸ್ತೆ ನಡುವಿನ ಗಿಡಗಳಿಗೆ ನೀರು ಹಾಕುತ್ತಿತ್ತು. ಕಂಟೈನರ್ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದೇ ವೇಳೆ ಅದೇ ದಿಕ್ಕಿನಲ್ಲಿ ಸಂಜೀವ ಮೊಗವೀರ ವೀಗೋ ಬೈಕಿನಲ್ಲಿ ಪತ್ನಿ ರತ್ನಾ ಅವರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದವರ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಡುಪಿ ಲೋಕಾಯುಕ್ತ ವಿಭಾಗದ ವತಿಯಿಂದ ಜಿಲ್ಲಾ ಲೋಕಾಯುಕ್ತ ವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ನಿರೀಕ್ಷಕರು ಮತ್ತು ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು ಏಪ್ರಿಲ್ 12 ರಂದು ಬೈಂದೂರು ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರ ವರೆಗೆ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕ ಅಹವಾಲು ಕಾರ್ಯಕ್ರಮ ನಡೆಸಲಿದ್ದಾರೆ. ಉಳಿದ ದಿನಗಳಲ್ಲಿಯೂ ಸಹ ಸಾರ್ವಜನಿಕರು ಅಹವಾಲುಗಳಿದ್ದಲ್ಲಿ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 0820-2958881 ಹಾಗೂ ದೂ.ಸಂಖ್ಯೆ: 0820-2536661 ಅಥವಾ ಅರ್ಜಿದಾರರು ನಮೂನೆ 1 ಮತ್ತು 2 ರಲ್ಲಿ ಭರ್ತಿ ಮಾಡಿ, ಅಫಿಡವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿಗೆ ಅಥವಾ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್ ಅಂಬೇಡ್ಕರ್ ವೀಥಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ ಹಾಗೂ ನೌಕರರ ವಿರುದ್ಧವೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುವಶಕ್ತಿಯಲ್ಲಿ ಚೈತನ್ಯ ಶಕ್ತಿ ತುಂಬುವ ಸಮಗ್ರ ಶಿಕ್ಷಣವನ್ನು ನೀಡಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕರೆ ನೀಡಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ 60ರ ಸಂಭ್ರಮದಲ್ಲಿ “ನಾಟಕೋತ್ಸವ”ವನ್ನು ಉದ್ಘಾಟಿಸಿ ಮಾತನಾಡಿದರು. ಭಾವಿ ಭವಿಷ್ಯವನ್ನು ಕಟ್ಟಿಕೊಡುವ ಯುವಜನತೆಯಲ್ಲಿ ಒಳ್ಳೆಯ ಮನಸ್ಥಿತಿ ಕಟ್ಟುವ ಕೆಲಸವಾಗಬೇಕು. ನಾವು ಜಾಗೃತರಾಗಬೇಕು. ಜಾತಿ,ಮಾತು,ಪಂಥ ಮೀರಿದ ಊರನ್ನು ಕಟ್ಟಬೇಕು. ಸಂಸ್ಕಾರದ ಸಂಸ್ಕೃತಿ ಕಟ್ಟುವುದು ಅವಿಭಾಜ್ಯ ಅಂಗವಾಗಬೇಕು ಅಲ್ಲದೆ ನಮ್ಮಲ್ಲಿ ಸದ್ವಿಚಾರದ ಸೌಂದರ್ಯ ಪ್ರಜ್ಞೆ ಇರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯ ಕೆ. ಶಾಂತಾರಾಮ್ ಪ್ರಭು ವಹಿಸಿದ್ದರು. ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ್ ಕಾಮತ್, ರಾಜೇಂದ್ರ ತೋಳಾರ್, ಸದಾನಂದ ಚಾತ್ರ, ಡಾ.ರಂಜಿತ್ ಕುಮಾರ್ ಶೆಟ್ಟಿ, ಅಭಿನಂದನ್ ಶೆಟ್ಟಿ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ದೇವಳದ ಆಡಳಿತ ಧರ್ಮದರ್ಶಿ ದೇವರಾಯ ಮಂಜುನಾಥ ಶೇರೆಗಾರ ಮತ್ತು ಅನಿತಾ ದೇವರಾಯ ಮಂಜುನಾಥ ಶೇರೆಗಾರ ಜ್ಯೋತಿ ಬೆಳಗಿಸಿ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವಕ್ಕೆ ಚಾಲನೆ ನೀಡಿದರು. ಶೃಂಗೇರಿ ಶ್ರೀ ಶಾರದಾಪೀಠಶ್ವರರ ಮಾರ್ಗದರ್ಶನದೊಂದಿಗೆ ವೇದಮೂರ್ತಿ ಕೆ.ಎಸ್.ಲಕ್ಷ್ಮೀ ನಾರಾಯಣ ಸೋಮಯಾಜಿ ಕಮ್ಮರಡಿ ಮತ್ತು ವೈದಿಕರ ನೇತೃತ್ವದಲ್ಲಿ ಹಾಗೂ ದೇವಳದ ಅರ್ಚಕ ವೃಂದದ ಸಹಕಾರದೊಂದಿಗೆ ವರ್ಧಂತ್ಯುತ್ಸವದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ಯಾಗಮಂಟಪ ಪ್ರವೇಶ, ಪುಣ್ಯಾಹ್ನ, ದೇವಾನಾಂದೀ, ಋತ್ವಿಗರಣೆ, ಪಂಚಗವ್ಯ ಹೋಮ, ಮಹಾಗಣಪತಿ ಹೋಮ, ಕೂಷ್ಮಾಂಡ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ವೇದಪಾರಾಯಣ ಪ್ರಾರಂಭ, ದೇವಿ ಭಾಗವತ ಪುರಾಣ ಪ್ರಾರಂಭ, ಮಹಾಮಂಗಳಾರತಿ, ಅನ್ನಸಂತರ್ಪಣೆಯೊಂದಿಗೆ ಸಂಜೆ ಉದಕ ಶಾಂತಿ ಪಠಣ, ವಾಸ್ತೋಹೋಮ, ಅಘೋರಾಸ್ತ್ರ ಹೋಮ, ಸುದರ್ಶನ ಜಪ, ಹೋಮ, ಸಪ್ತಶುದ್ಧಿ, ಗೋಪೂಜೆ, ಶ್ರೀ ಮಹಾಗಣಪತಿ ಮತ್ತು ಶ್ರೀನಿವಾಸ ದೇವರಿಗೆ ೪೮ ಕಲಶ ಸ್ಥಾಪನೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮನುವಿಕಾಸ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸತಾರದ ಸೇವಾ ಸಾಮಾಜಿಕ ವಿಕಾಸ ಸಂಸ್ಥೆಯಿಂದ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಯುವಕ – ಯುವತಿಯರಿಗೆ ಉಚಿತ ಹೋಟೆಲ್ ಮ್ಯಾನೇಜ್ಮೆಂಟ್ ತರಬೇತಿ ನೀಡಲಾಗುತ್ತಿದೆ. ಕನಿಷ್ಠ 8ನೇ ತರಗತಿ ಉತ್ತೀರ್ಣರಾದ 18 ರಿಂದ 35ರ ವಯೋಮಾನದವರು 2 ತಿಂಗಳ ಅವಧಿಯ ಈ ಕೋರ್ಸಿಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಈ ಉಚಿತ ಹೋಟೆಲ್ ಮ್ಯಾನೇಜ್ಮೆಂಟ್ ಸರ್ಟಿಫಿಕೇಟ್ ತರಬೇತಿಯಲ್ಲಿ ನುರಿತ ತರಬೇತುದಾರರಿಂದ ತರಬೇತಿ, ಉಚಿತ ಸಮವಸ್ತ್ರ, ಉಚಿತ ಬಸ್ ಪಾಸ್ ಸೌಲಭ್ಯವಿರಲಿದೆ. ಅಲ್ಲದೇ ತರಬೇತಿ ಮುಗಿದ ಬಳಿಕ ಹೋಟೆಲ್ ಇಂಡಸ್ಟ್ರೀ, ಕಾರ್ಪೋರೇಟ್ ಕಛೇರಿ, ಏರ್ಪೋರ್ಟ್ ಕ್ಯಾಂಟಿನ್’ಗಳಲ್ಲಿ ಉದ್ಯೋಗಕಾಶ ದೊರಕಿಸಿಕೊಡಲಾಗುತ್ತದೆ. ಕೆಫೆ, ಕ್ಯಾಂಟಿನ್ ಉದ್ಯಮ ಆರಂಭಿಸುವವರಿಗೆ ಬ್ಯಾಂಕುಗಳಿಂದ ಲೋನ್ ಪಡೆಯಲು ನೆರವು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಪ್ಪುಂದ ಅಂಬಾಗಿಲುವಿನ ಲಕ್ಷ್ಮೀ ಆನೆಗಣಪತಿ ಕಾಂಪ್ಲೆಕ್ಸ್ ಮೊದಲ ಮಹಡಿಯಲ್ಲಿ ಸೇವಾ ಸಾಮಾಜಿಕ ವಿಕಾಸ ಸಂಸ್ಥೆಯ ಕಛೇರಿ ಇದ್ದು, ಆಸಕ್ತ ಅಭ್ಯರ್ಥಿಗಳು ಆಧಾರ್ ಕಾರ್ಡ್, ಅಂಕಪಟ್ಟಿ ಹಾಗೂ 2 ಪೋಟೋದೊಂದಿಗೆ ಪ್ರೋಗ್ರಾಂ ಕೋ-ಆರ್ಡಿನೇಟರ್ ಸ್ವಪ್ನಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ ಶಿಬಿರದಲ್ಲಿ ಸಾಧ್ಯವಾಗುತ್ತದೆ ಎಂದು ರಂಗಕರ್ಮಿ ಡಾ. ಸದಾನಂದ ಬೈಂದೂರು ಹೇಳಿದರು. ಅವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು ಮತ್ತು ಜೆಸಿಐ ಬೈಂದೂರು ಸಿಟಿ ಇವರ ಆಶ್ರಯದಲ್ಲಿ ಸೆಂಟರ್ ಫಾರ್ ಅಪ್ಲೈಡ್ ಥಿಯೇಟರ್ ಸೈನ್ಸ್ ಮೈಸೂರು ಮತ್ತು ಚಿತ್ರದುರ್ಗ ಇವರ ತರಬೇತಿ ಸಂಪನ್ಮೂಲ ಸಹಕಾರದಲ್ಲಿ ಕಲೆಯೊಂದಿಗೆ ಕಲಿಕೆ ವಿಶೇಷ ಶಿಬಿರದ ಕಲೆ ಕಲಿಕೆ ಸಂವಾದದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ಯನ್ನು ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ನರೇಂದ್ರ ಶೇಟ್ ವಹಿಸಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ರಂಗಕರ್ಮಿ ನಾ ಶ್ರೀನಿವಾಸ್ , ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯೆ ರಾಧಾ ಕೊಡಗು, ಬೈಂದೂರು ಸಿಟಿ ಜೆಸಿಐನ ಸ್ಥಾಪಕ ಅಧ್ಯಕ್ಷರಾದ ಮಣಿಕಂಠ, ಚಿತ್ರ ಕಲಾವಿದ ಮದನ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಪದವೀಧರ ಮುಖ್ಯೋಪಾಧ್ಯಾಯರಾದ ಶ್ರೀ ಜನಾರ್ಧನ ದೇವಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು ನಾಗರತ್ನ ಸ್ವಾಗತಿಸಿದರು. ಕಲಾವತಿ ಧನ್ಯವಾದ ಸಲ್ಲಿಸಿದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ಸಂಯೋಜಿಸಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ,ಎ:5: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ “ESPERANZA 2K23” ಫ್ರೆಶರ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಆದರದಿಂದ ಸ್ವಾಗತಿಸಿಕೊಂಡರು. ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೆನಿಫರ್ ಫ್ರೀಡಾ ಮಿನೇಜೆಸ್ ಹಾಗೂ ಐ.ಎಂ.ಜೆ. ಸಮೂಹ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊ. ದೋಮ ಚಂದ್ರಶೇಖರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಐ.ಎಂ.ಜೆ.ಐ.ಎಸ್.ಸಿ. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ಮತ್ತು ಬೋಧಕ – ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶೇರಿಲ್ ಸಾರ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ನಿತ್ಯ ಸ್ವಾಗತಿಸಿ, ಗಾಯತ್ರಿ ಧನ್ಯವಾದ ಸಮರ್ಪಣೆ ಮಾಡಿದರು.
ರಾಜಕೀಯ ಪಕ್ಷ, ಚುನಾವಣಾ ಅಭ್ಯರ್ಥಿಯ ಪರ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಕಡ್ಡಾಯ ಕುಂದಾಪ್ರ ಡಾಟ್ ಕಾಂ ವರದಿ.ಉಡುಪಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲಿದ್ದು, ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಕೇಬಲ್ ಟಿವಿ, ಫೇಸ್ಬುಕ್ ವಾಟ್ಸಾಪ್ ಸೇರಿದಂತೆ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳಲ್ಲಿ, ಯಾವುದೇ ರಾಜಕೀಯ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂಸಿಎಂಸಿ) ಇಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಎಂಸಿಎಂಸಿ ಯಿಂದ ಪೂರ್ವಾನುಮತಿ ಪಡೆಯದೇ ಜಾಹೀರಾತು ಪ್ರಸಾರ ಮಾಡುತ್ತಿರುವುದನ್ನು ಪರಿಶೀಲಿಸಲು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಪ್ರತ್ಯೇಕ ಕಚೇರಿಯನ್ನು ತೆರೆದಿದ್ದು, ಇಲ್ಲಿ 24*7 ಜಾಹೀರಾತುಗಳನ್ನು ಪರಿಶೀಲಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಸಾರವಾಗುವ ಎಲ್ಲಾ ಸ್ಥಳೀಯ ಟಿವಿ ಚಾನೆಲ್’ಗಳಲ್ಲಿನ ಕಾರ್ಯಕ್ರಮಗಳನ್ನು ನಿರಂತರವಾಗಿ ವೀಕ್ಷಿಸಲು 3 ಪಾಳಿಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು, 8 ಟಿವಿ ಪರದೆಗಳ ಮೂಲಕ ಸದ್ರಿ ಚಾನೆಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿದಿಸಿದಂತೆ, ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿಗೆ ಹಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಯುವಜನತೆ ಸೇರಿದಂತೆ ಬಹುತೇಕ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿರುವ ಹಿನ್ನಲೆಯಲ್ಲಿ ಇವರನ್ನು ದೃಷ್ಠಿಯಲ್ಲಿಟ್ಟುಕೊಂಡು ಪ್ರೊಪೈಲ್ ಇಮೇಜ್ಗಳನ್ನು ಸಿದ್ದಪಡಿಸಲಾಗಿದೆ. ಮತದಾನದ ಕುರಿತು ಜಾಗೃತಿ ಮೂಡಿಸಲು ಮತದಾನದ ದಿನವಾದ ಮೇ 10 ನ್ನು ಸಾರ್ವಜನಿಕರಿಗೆ ಸದಾ ನೆನಪು ಮಾಡುವಂತೆ, ಪ್ರೊಪೈಲ್ ಇಮೇಜ್ ಗಳನ್ನು ಸಿದ್ದಪಡಿಸಿದ್ದು, ಇವುಗಳನ್ನು ಮೊಬೈಲ್ ನ ಡಿಪಿಯಾಗಿ ಹಾಗೂ ಫೇಸ್ ಬುಕ್ ನಲ್ಲಿ ಸ್ಟಿಕರ್ ಆಗಿ ಬಳಸಲು ಅನುಕೂಲವಾಗುವಂತೆ ರಚಿಸಲಾಗಿದೆ. ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಾದ ಸೈಂಟ್ ಮೇರಿಸ್ ದ್ವೀಪ, ಸಮುದ್ರ ತೀರ, ಕಾಪು ದೀಪ ಸ್ಥಂಭ, ಮರವಂತೆ , ಪಶ್ಚಿಮ ಘಟ್ಟಗಳನ್ನು ಹಿನ್ನಲೆಯಾಗಿ ಇಟ್ಟುಕೊಂಡು 8 ಕ್ಕೂ ಅಧಿಕ ಪ್ರೊಪೈಲ್ ಇಮೇಜ್ ಗಳನ್ನು ಅತ್ಯಂತ ಆಕರ್ಷಕವಾಗಿ ಸಿದ್ದಪಡಿಸಲಾಗಿದ್ದು, ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ನಾಟಕಗಳಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೇ ಹೆಸರು ಮಾಡಿದ ಭೂಮಿಕಾ ರಿ. ಹಾರಾಡಿ ತನ್ನ 25ನೇ ವರ್ಷದ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಭೂಮಿಕಾ ತಂಡವು ತನ್ನ ವಾರ್ಷಿಕ ಸಂಭ್ರಮ ‘ಬಣ್ಣ’ ವಿಶಿಷ್ಠವಾಗಿ ಆಚರಿಸುತ್ತಿದೆ. ಬ್ರಹ್ಮಾವರದ ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನ ಮಕ್ಕಳ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಎ.6ರಿಂದ ಎ.13ರ ರ ತನಕ ನಡೆಯಲಿರುವ ನಾಟಕೋತ್ಸವದಲ್ಲಿ ಎ.6ರಂದು ಶಿಕ್ಷಕರ ಬಳಗ ಉಡುಪಿ ಇವರ ಬರ್ಬರೀಕ, ಎ.7ರಂದು ರಂಗಾಯಣ ಶಿವಮೊಗ್ಗ ಇವರ ಹಕ್ಕಿಕಥೆ, ಎ.8ರಂದು ನವೋದಯ ಮೈಸೂರು ಪ್ರಸ್ತುತಿಯ ಅಯೋಧ್ಯಾ ಕಾಂಡ, ಎ.9ರಂದು ರಂಗಸೌರಭ ಬೆಂಗಳೂರು ಅಭಿನಯದ ನಾಟಕ ಮಾವಿಗುಡಿ ಕಾಲೋನಿ, ಎ.10ರಂದು ಅಮೋಘ ಹಿರಿಯಡ್ಕ ಅಭಿನಯದ ನಾಟಕ ರೈಲುಭೂತ ಎ.11ರಂದು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಪ್ರಸ್ತುತಿಯ ನಾಟಕ ದ್ಯಾಟ್ಸ್ ಆಲ್ ಯುವರ್ ಆನರ್ ನಾಟಕಗಳು ಪ್ರದರ್ಶನಗೊಳ್ಳಲಿದೆ. ಎ.13ರಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮತ್ತು ಕರ್ನಾಟಕ ಜನಪದ ಪರಿಷತ್ತಿನ ಸಹಯೋಗದಲ್ಲಿ ಜನಪದ ವೈವಿದ್ಯ ಜರಗಲಿದೆ.…
