ಗ್ರಾಮೀಣ ಯುವಕ ಯುವತಿಯರಿಗೆ 2 ತಿಂಗಳ ಉಚಿತ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮನುವಿಕಾಸ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸತಾರದ ಸೇವಾ ಸಾಮಾಜಿಕ ವಿಕಾಸ ಸಂಸ್ಥೆಯಿಂದ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಯುವಕ – ಯುವತಿಯರಿಗೆ ಉಚಿತ ಹೋಟೆಲ್ ಮ್ಯಾನೇಜ್‌ಮೆಂಟ್ ತರಬೇತಿ ನೀಡಲಾಗುತ್ತಿದೆ.

Call us

Click Here

ಕನಿಷ್ಠ 8ನೇ ತರಗತಿ ಉತ್ತೀರ್ಣರಾದ 18 ರಿಂದ 35ರ ವಯೋಮಾನದವರು 2 ತಿಂಗಳ ಅವಧಿಯ ಈ ಕೋರ್ಸಿಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಈ ಉಚಿತ ಹೋಟೆಲ್ ಮ್ಯಾನೇಜ್‌ಮೆಂಟ್ ಸರ್ಟಿಫಿಕೇಟ್ ತರಬೇತಿಯಲ್ಲಿ ನುರಿತ ತರಬೇತುದಾರರಿಂದ ತರಬೇತಿ, ಉಚಿತ ಸಮವಸ್ತ್ರ, ಉಚಿತ ಬಸ್ ಪಾಸ್ ಸೌಲಭ್ಯವಿರಲಿದೆ. ಅಲ್ಲದೇ ತರಬೇತಿ ಮುಗಿದ ಬಳಿಕ ಹೋಟೆಲ್ ಇಂಡಸ್ಟ್ರೀ, ಕಾರ್ಪೋರೇಟ್ ಕಛೇರಿ, ಏರ್ಪೋರ್ಟ್ ಕ್ಯಾಂಟಿನ್’ಗಳಲ್ಲಿ ಉದ್ಯೋಗಕಾಶ ದೊರಕಿಸಿಕೊಡಲಾಗುತ್ತದೆ. ಕೆಫೆ, ಕ್ಯಾಂಟಿನ್ ಉದ್ಯಮ ಆರಂಭಿಸುವವರಿಗೆ ಬ್ಯಾಂಕುಗಳಿಂದ ಲೋನ್ ಪಡೆಯಲು ನೆರವು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಉಪ್ಪುಂದ ಅಂಬಾಗಿಲುವಿನ ಲಕ್ಷ್ಮೀ ಆನೆಗಣಪತಿ ಕಾಂಪ್ಲೆಕ್ಸ್ ಮೊದಲ ಮಹಡಿಯಲ್ಲಿ ಸೇವಾ ಸಾಮಾಜಿಕ ವಿಕಾಸ ಸಂಸ್ಥೆಯ ಕಛೇರಿ ಇದ್ದು, ಆಸಕ್ತ ಅಭ್ಯರ್ಥಿಗಳು ಆಧಾರ್ ಕಾರ್ಡ್, ಅಂಕಪಟ್ಟಿ ಹಾಗೂ 2 ಪೋಟೋದೊಂದಿಗೆ ಪ್ರೋಗ್ರಾಂ ಕೋ-ಆರ್ಡಿನೇಟರ್ ಸ್ವಪ್ನಾ ( 7204150067, 8660525903 ) ಅವರನ್ನು ಸಂಪರ್ಕಿಸಬಹುದಾಗಿದೆ.

Call now

Leave a Reply