ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ‍್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ದೇವಳದ ಆಡಳಿತ ಧರ್ಮದರ್ಶಿ ದೇವರಾಯ ಮಂಜುನಾಥ ಶೇರೆಗಾರ ಮತ್ತು ಅನಿತಾ ದೇವರಾಯ ಮಂಜುನಾಥ ಶೇರೆಗಾರ ಜ್ಯೋತಿ ಬೆಳಗಿಸಿ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವಕ್ಕೆ ಚಾಲನೆ ನೀಡಿದರು.
ಶೃಂಗೇರಿ ಶ್ರೀ ಶಾರದಾಪೀಠಶ್ವರರ ಮಾರ್ಗದರ್ಶನದೊಂದಿಗೆ ವೇದಮೂರ್ತಿ ಕೆ.ಎಸ್.ಲಕ್ಷ್ಮೀ ನಾರಾಯಣ ಸೋಮಯಾಜಿ ಕಮ್ಮರಡಿ ಮತ್ತು ವೈದಿಕರ ನೇತೃತ್ವದಲ್ಲಿ ಹಾಗೂ ದೇವಳದ ಅರ್ಚಕ ವೃಂದದ ಸಹಕಾರದೊಂದಿಗೆ ವರ್ಧಂತ್ಯುತ್ಸವದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ಯಾಗಮಂಟಪ ಪ್ರವೇಶ, ಪುಣ್ಯಾಹ್ನ, ದೇವಾನಾಂದೀ, ಋತ್ವಿಗರಣೆ, ಪಂಚಗವ್ಯ ಹೋಮ, ಮಹಾಗಣಪತಿ ಹೋಮ, ಕೂಷ್ಮಾಂಡ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ವೇದಪಾರಾಯಣ ಪ್ರಾರಂಭ, ದೇವಿ ಭಾಗವತ ಪುರಾಣ ಪ್ರಾರಂಭ, ಮಹಾಮಂಗಳಾರತಿ, ಅನ್ನಸಂತರ್ಪಣೆಯೊಂದಿಗೆ ಸಂಜೆ ಉದಕ ಶಾಂತಿ ಪಠಣ, ವಾಸ್ತೋಹೋಮ, ಅಘೋರಾಸ್ತ್ರ ಹೋಮ, ಸುದರ್ಶನ ಜಪ, ಹೋಮ, ಸಪ್ತಶುದ್ಧಿ, ಗೋಪೂಜೆ, ಶ್ರೀ ಮಹಾಗಣಪತಿ ಮತ್ತು ಶ್ರೀನಿವಾಸ ದೇವರಿಗೆ ೪೮ ಕಲಶ ಸ್ಥಾಪನೆ, ಅಷ್ಟಾವಧಾನ, ಕಷಾಯ ತೀರ್ಥ ಪ್ರಸಾದ, ಕವಾಟ ಬಂಧನ ಧಾರ್ಮಿಕ ಕಾರ‍್ಯಕ್ರಮಗಳು ದೇವಳದಲ್ಲಿ ನಡೆದವು.
ಸಾಂಸ್ಕೃತಿಕ ಕಾರ‍್ಯಕ್ರಮದ ಅಂಗವಾಗಿ ಕೀರ್ತಿಶೇಷರಾದ ಶ್ರೀಮತಿ ಗೌರಮ್ಮ ಮತ್ತು ಶ್ರೀ ಮಂಜುನಾಥ ಶೇರೆಗಾರರ ವೇದಿಕೆಯಲ್ಲಿ ಸಂಜೆ ಶ್ರೀ ಕಾಂತೇಶ್ವರ ಕಲಾ ತಂಡ ಗೋಪಾಡಿ ಇವರಿಂದ ವೈವಿಧ್ಯಮಯ ಕಾರ‍್ಯಕ್ರಮಗಳು, ಸ್ಥಳೀಯ ಭಜನಾ ಮಂಡಳಿಯಿಂದ ನಿರಂತರ ಭಜನಾ ಕಾರ‍್ಯಕ್ರಮಗಳು ನಡೆದವು.
ದೇವಳದ ವ್ಯವಸ್ಥಾಪಕ ರಾಜಶೇಖರ ಹೆಗ್ಡೆ, ಗಂಗಾಧರ್ ಹೊಸಮನಿ, ವೃಷಭ ಶೇರೆಗಾರ, ಮಿಥನ ಶೇರೆಗಾರ, ಅರ್ಚಕ ವೃಂದ, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಭಕ್ತರು ಉಪಸ್ಥಿತರಿದ್ದರು.