ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸೋಲಾರ್ ವಿದ್ಯುತ್ ಶಕ್ತಿ ಉತ್ಪಾದನಾ ಘಟಕವನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು ಉದ್ಘಾಟಿಸಿದರು. ಸೋಲಾರ್ ವಿದ್ಯುತ್ ಶಕ್ತಿ ಘಟಕವನ್ನು ವಿನ್ಯಾಸಗೊಳಿಸಿದ ಪ್ರಸಿದ್ಧಿ ಸೋಲಾರ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಕುಂದಾಪುರ ಘಟಕದ ಪ್ರೋಜೆಕ್ಟ್ ವ್ಯವಸ್ಥಾಪಕರಾದ ಸಂತೋಷ್ ಪೂಜಾರಿ ಅವರು ಕಾಲೇಜಿನಲ್ಲಿ ಸ್ಥಾಪಿಸಲ್ಪಟ್ಟ ಈ ಸೋಲಾರ್ ವಿದ್ಯುತ್ ಶಕ್ತಿ ಮೇಲ್ಚಾವಣಿ ಘಟಕವು 163 ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ತಿಂಗಳು ಸರಿಸುಮಾರು ಇಪ್ಪತ್ತು ಸಾವಿರ ಯುನಿಟ್ಸ್ ವಿದ್ಯುತ್ ಉತ್ಪಾದನೆ ಆಗುತ್ತದೆ. ಅಲ್ಲದೆ ಪ್ರತಿ ತಿಂಗಳು 1,75,000 ರೂಪಾಯಿಗಳು ಉಳಿತಾಯ ಮಾಡಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ, ಕಾಲೇಜಿನ ಅಧೀಕ್ಷಕರಾದ ಗೋಪಾಲ್ ನಾಯ್ಕ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರಿ ಕಾಳವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ವಾರ್ಷಿಕ ವಿಶೇಷ ಶಿಬಿರವು ಸೌಕೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟಕರಾಗಿ ಆಗಮಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭುಜಂಗ ಶೆಟ್ಟಿ ಅವರು ಶ್ರಮ ವಿದ್ಯೆ ಬುದ್ಧಿ ಜ್ಞಾನ ಕೌಶಲ್ಯ ಇತ್ಯಾದಿಗಳನ್ನು ಸಮಾಜದ ದೇಶದ ಒಳಿತಿಗಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಮನೋಭಾವದಿಂದ ನೀಡುವ ಸಹಾಯವೇ ಸೇವೆ. ರಾಷ್ಟೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನು, ಮಾನವೀಯ ಸಂಬಂಧಗಳನ್ನು, ಸಮಯ, ಪಾಲನೆ, ಶಿಸ್ತುಗಳನ್ನು ಕಲಿಸುತ್ತದೆ. ಸೇವೆ ಮತ್ತು ಸಹಬಾಳ್ವೆಯ ಪಾಠವನ್ನು ವಿದ್ಯಾರ್ಥಿಗಳು ಈ ಶಿಬಿರದಿಂದ ಕಲಿಯುವಂತಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ಅವರು ಎನ್.ಎಸ್.ಎಸ್. ನ ಧ್ಯೇಯ ಧೋರಣೆಗಳು ಬದುಕಿನಲ್ಲಿ ಧನಾತ್ಮಕ ಬದಲಾವಣೆಗೆ ಪೂರಕವಾದ ಅಂಶಗಳು ಎಂದರು. ಬದುಕನ್ನು ಅರ್ಥಪೂರ್ಣಗೊಳಿಸಲು ಶಿಬಿರದಲ್ಲಿ ಕಲಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವಿಜಯಲಕ್ಷ್ಮೀ ಟ್ರೇಡರರ್ಸ್ ಮಾಲಕಿ, ಗುರುಪ್ರಸಾದ ಮಹಿಳಾ ಮಂಡಳಿ ಅಧ್ಯಕ್ಷೆ, ಹಿರಿಯ ಕಲಾವಿದೆ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ (76) ಅವರು ಇತ್ತೀಚಿಗೆ ನಿಧನರಾದರು. ತಮ್ಮ ವ್ಯವಹಾರ ಜ್ಞಾನ, ಕ್ರಿಯಾಶೀಲತೆ, ಸಂಘಟನಾ ಶಕ್ತಿ, ಕಲೆ, ಸಾಹಿತ್ಯ, ಸಂಗೀತ, ಜನಪದ ಸಂಸ್ಕೃತಿ ಬಗ್ಗೆ ಆಸಕ್ತಿಯಿಂದ ಸದಾ ಕ್ರಿಯಾಶೀಲರಾಗಿರುತ್ತಿದ್ದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ತಮ್ಮ ಕೃತಿಗಳಾದ ಜೀವನ ಚಕ್ರ, ವೇದ ಸಾರ, ಜೋ… ಜೋ…., ಜಾನಪದ ಜೋಗುಳ ಗೀತೆ, ಕೃತಿಗಳಿಂದಲೂ ಜನಪ್ರಿಯರಾದವರು. ಕೊಂಕಣಿ, ಶಿಶುಗೀತೆಗಳ ಧ್ವನಿ ಪೆಟ್ಟಿಗೆ ಪ್ರಣಾಳಿಕೆ ತಂದವರು. ತಾಲೂಕಿನ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷತೆಯೂ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದವರು. ʼಕೊಂಕಣಿ ಕಲಾ ಸಮಾಜದ’ದ ಅಧ್ಯಕ್ಷರಾಗಿ ಹಲವು ಸಮ್ಮೇಳನ ನಡೆಸಿದವರು. ಕೊಂಕಣಿ ಮಕ್ಕಳ ಸಂಘದ ಮೂಲಕ ಮಕ್ಕಳಿಗೆ ರಂಗ ಕಲೆ, ಯಕ್ಷಗಾನ, ಸಂಗೀತ ತರಬೇತಿ ವ್ಯವಸ್ಥೆ ಮಾಡುತ್ತಿದ್ದರು. ಮಂಗಳೂರಿನ ಚೆಂಬರ್ ಆಫ್ ಕಾಮರ್ಸ್, ಕೆ. ಎಸ್. ಎಸ್. ಐ. ಸಿ. ಸದಸ್ಯರಾಗಿದ್ದ ಅವರು ಜಿಂಗಲ್ ಬೆಲ್ಸ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವರಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅನುಷ್ಠಾನಕ್ಕಾಗಿ ಬೈಂದೂರು ತಾಲೂಕಿನಲ್ಲಿ ಇದುವರೆಗೆ ಸುಮಾರು 158.50 ಕೋಟಿ ರೂ. ವೆಚ್ಚಮಾಡಿದೆ ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಉಪ್ಪುಂದ ಹೇಳಿದರು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯಿಂದ 27,556 ಫಲಾನುಭವಿಗಳ ಖಾತೆಗೆ ರೂ. 80.21 ಕೋಟಿ ಜಮಾ ಆಗಿದೆ. ತಾಂತ್ರಿಕ ಕಾರಣದಿಂದಾಗಿ 479 ಫಲಾನುಭವಿಗಳಿಗೆ ಬಾಕಿಯಿದೆ. ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ಉಪಕೇಂದ್ರ ವ್ಯಾಪ್ತಿಯ 27,748 ಕುಟುಂಬಗಳಿಗೆ 31.19 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1935 ಕುಟುಂಬಗಳಿಗೆ 1.98 ಕೋಟಿ ರೂ. ಸೇರಿದಂತೆ ಸುಮಾರು 33.18 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,182 ಪಡಿತರ ಚೀಟಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೀವನದಲ್ಲಿ ಪಡೆದ ಅನುಭವವನ್ನೇ ಸ್ವಾರಸ್ಯಕರ ಶೈಲಿಯಲ್ಲಿ ಬರೆಯುವುದರಿಂದ ಡಾ. ರಂಜಿತ್ ಕುಮಾರ್ ಶೆಟ್ಟಿ ಅವರ ಬರವಣಿಗೆ ಇಷ್ಟವಾಗುತ್ತದೆ . ಹಾಗಾಗಿ ಅವರ ನೆನಪಿನಾಳದಲ್ಲಿ, 20 ಕಥೆಗಳು, ಜಯಂತಣ್ಣನಿಗಾಗಿ ಕಾದಂಬರಿ ಓದುಗರನ್ನು ತಲುಪಿತು. ಹೊಸತನದ ಕಥೆಯೊಂದಿಗೆ ಹೀಗೂ ಕಾದಂಬರಿ ಬರೆಯಬಹುದು ಎಂದು ಜಾಲಿ ಮತ್ತು ಅಪ್ಪು ಕೃತಿಯಿಂದ ತೋರಿಸಿ ಕೊಟ್ಟಿದ್ದಾರೆ ಎಂದು ಖ್ಯಾತ ಪ್ರಸೂತಿ ತಜ್ಞ ಮಣಿಪಾಲದ ಸೋನಿಯಾ ಆಸ್ಪತ್ರೆಯ ಡಾ. ಗಿರಿಜಾ ರಾವ್ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಡಾ. ರಂಜಿತ್ ಕುಮಾರ್ ಶೆಟ್ಟಿ ಅವರ ಮೂರು ಕೃತಿಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಂವಹನದ ಕೊರತೆ ಮತ್ತು ಪರಸ್ಪರ ಅಪನಂಬಿಕೆ ಡಾಕ್ಟರು ಮತ್ತು ರೋಗಿಗಳ ಸಂಬಂಧ ಕೆಡಲು ಕಾರಣ. ಜನರು ವೈದ್ಯರ ಮೇಲೆ ವಿಶ್ವಾಸವಿಡಬೇಕು. ಗೌರವದ ನಡವಳಿಕೆ ಇರಬೇಕು. ವೈದ್ಯರ ಸೇವೆಯ ವಿಷಯದಲ್ಲಿ ಎಂದೂ ಅಪ್ರಾಮಾಣಿಕರಾಗಿರಬಾರದು. ವೈದ್ಯಕೀಯ ಸೇವೆಯ ಒತ್ತಡದಲ್ಲಿ ರೋಗಿಗಳ ಪೋಷಕರಿಂದ ಬೆಂಬಲವನ್ನು ಪ್ರಾಮಾಣಿಕ ವೈದ್ಯರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಗರದ ಪ್ರತಿಷ್ಠಿತ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ನಾಗರಾಜ್ ಕಾಮಧೇನು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸೊಸೈಟಿಯ ಉಪಾಧ್ಯಕ್ಷರಾಗಿ ಸತೀಶ್ ನರಸಿಂಹ ಶೇರಿಗಾರ್ ಆಯ್ಕೆಯಾದರು. ಈ ವೇಳೆ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಅಜೇಯ ಹವಾಲ್ದಾರ್, ಕೆ.ಅಶೋಕ್ ಬೆಟ್ಟಿನ್, ಕೃಷ್ಣಯ್ಯ ಪಿ. ಮದ್ದೋಡಿ, ಎಂ.ಜಿ. ರಾಜೇಶ್, ಬಿ. ಶ್ರೀಧರ್ ಬೇಲಿಮನೆ, ಶ್ರೀಧರ್ ಪಿ.ಎಸ್. ಕೆ. ಸೂರ್ಯಕಾಂತ್, ರಾಧಾಕೃಷ್ಣ ನಾಯಕ್ ರಶ್ಮಿರಾಜ್ ಮತ್ತು ಶಾರದಾ ವಿಜಯ ಕುಮಾರ್ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ್ ಕಾಮಧೇನು ಮಾತನಾಡಿ, ನಮ್ಮ ಸೊಸೈಟಿಯು ಒಂದು ಸಾವಿರ ಕೋಟಿ ರೂ. ವ್ಯವಹಾರ ಹೊಂದುವ ಗುರಿ ಇದ್ದು ಈ ನಿಟ್ಟಿನಲ್ಲಿ ಎಲ್ಲಾ ನಿರ್ದೆಶಕರ ಸಹಕಾರ ಕೋರಿದರು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆಯನ್ನು ಸಹಕಾರ ಇಲಾಖೆಯ ಉಪ ನಿಬಂಧಕಿ ಸುಕನ್ಯಾ ಅವರು ನಿರ್ವಹಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ರಾಘವೇಂದ್ರ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ಯುಕೆಜಿ ವಿದ್ಯಾರ್ಥಿಗಳ ಪದವಿ ಪದಗ್ರಹಣ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಮುಖ್ಯ ಅತಿಥಿಯಾದ ವಂದನಾ ರೈ ಅವರು ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ಹಸ್ತಾಂತರಿಸಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಕರಾತ್ಮಕ ಚಿಂತನೆ ಹಾಗೂ ಹಣದ ಮೌಲ್ಯದ ಬಗ್ಗೆ ಅರಿವನ್ನು ಮೂಡಿಸಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಪೋಷಕರ ಸಹಕಾರವಿದ್ದಾಗ ಶಾಲೆಯು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ್ ಮೊಗವೀರ ಅವರು ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಾಗ ಅವರ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ,ಆ ಮೂಲಕ ವಿದ್ಯಾರ್ಥಿಗಳು ಶಾಲೆ ಮತ್ತು ಪೋಷಕರಿಗೆ ಹೆಮ್ಮೆ ತರುವ ಕೆಲಸವನ್ನು ಮಾಡುತ್ತಾರೆ ಎಂದರು. ಜನತಾ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಉದಯ ನಾಯ್ಕ ಅವರು ಶಿಕ್ಷಣದ ಜೊತೆಗೆ ಭಾರತೀಯತೆ, ಶಿಸ್ತು, ಸಂಸ್ಕೃತಿ , ಸಂಪ್ರದಾಯವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉತ್ತಮ ಆಡಳಿತಗಾರನಾದ ಶಿವಾಜಿ ಶಿಸ್ತಿನೊಂದಿಗೆ ಮಹಿಳೆಯರನ್ನು ಗೌರವಿಸುವ ವ್ಯಕ್ತಿತ್ವ ಹೀಗಾಗಿ ಶಿವಾಜಿಯ ಬಗೆಗಿನ ಇತಿಹಾಸದ ಅಧ್ಯಯನ ಕೇವಲ ವ್ಯಕ್ತಿಯ ಅಧ್ಯಯನವಾಗದೇ ಆ ಕಾಲಘಟ್ಟದ ಸಂಸ್ಕೃತಿ, ಕಲೆ, ವಾಸ್ತುಶಿಲ್ಪ ಜೀವನಕ್ರಮದ ಅಧ್ಯಯನ ಹೀಗಾಗಿ ಇತಿಹಾಸದ ಓದು ವಿದ್ಯಾರ್ಥಿಗಳ ದೃಷ್ಟಿಕೋನವನ್ನು ಬದಲಾಯಿಸುತ್ತದೆ ಎಂದು ಇತಿಹಾಸ ತಜ್ಞ, ವಾಗ್ಮಿ, ಪ್ರಾಧ್ಯಾಪಕ ರವಿರಾಜ್ ಪರಾಡ್ಕರ್ ಹೇಳಿದರು. ಇಲ್ಲಿನ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅಧ್ಯಯನ ಕೇಂದ್ರ, ಬಸ್ರೂರು ಇವರ ಸಯೋಗದೊಂದಿಗೆ ಕಾಲೇಜಿನ ಇಂಗ್ಲೀಷ್ ಮತ್ತು ಹಿಂದಿ ವಿಭಾಗದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ‘ಶಿವಾಜಿ ಮಹಾರಾಜನ ಕರ್ನಾಟಕದೊಂದಿಗಿನ ಬಾಂಧವ್ಯದ’ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಾಮಾಜಿಕ ಚಿಂತಕ ದೇವು ಹನೆಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಇತಿಹಾಸ ಸಂಕಲನದ ಸಮಿತಿ ಕಿತ್ತೂರಿನ ಮುಖ್ಯಸ್ಥ ಡಾ. ಬಸವರಾಜ ಎನ್. ಮುಖ್ಯ ಅತಿಥಿ ನೆಲೆಯ ಮಾತುಗಳನ್ನಾಡಿದರು. …
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಗಳಾದ ಅನನ್ಯ ಕೆ.ಎ. (258), ಬಿ. ಸುಹಾಸ್ ರಾವ್ (230), ವಂದನಾ ಎಸ್.ಸಿ. (213), ನಿತ್ಯಾ ಸಂಜೀವ ಕುಲಕರ್ಣಿ (204), ನಿಶಿತಾ ಸಿ. ಶೆಟ್ಟಿ (203) ಮತ್ತು ತಸ್ಮಯ್ ಎಮ್. (201) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್ 1 ರಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಜೊತೆಯಲ್ಲಿ ಧನ್ವಿ ಹೆಚ್. ಪೈ (150) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್ 2 ರಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಸಿ.ಎಸ್. ಸಂಯೋಜಕರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 3 ರಿಂದ 7ನೇ ತರಗತಿ ವಿದ್ಯಾರ್ಥಿಗಳು ಫೆ.28 ರಂದು ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಆರಂಭ ಸಭಾಂಗಣದಲ್ಲಿ ಐಕೀ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಆಸೋಸಿಯೇಷನ್ ಚೀಫ್ ಇನ್ಸ್ಪೆಕ್ಟರ್, ಕೊಶಿ ಸಿ ಎ ವಿಜಯನ್ 8ನೇ ಡಾನ್ ಬ್ಲಾಕ್ ಬೆಲ್ಟ್ ಇವರ ಅಡಿಯಲ್ಲಿ ನಡೆದ ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ 72 ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿವಿಧ ಕರಾಟೆ ಬೆಲ್ಟ್ ಮತ್ತು ಸರ್ಟಿಫಿಕೇಟ್ಗಳನ್ನು ಪಡೆದಿರುತ್ತಾರೆ. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಡಾI ರವಿದಾಸ್ ಶೆಟ್ಟಿ, ಕರಾಟೆ ಶಿಕ್ಷಕಿ ಮೇಘನಾ, ವಿದ್ಯಾರ್ಥಿಗಳು ಹಾಜರಿದ್ದರು
