ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಅ.28ರಂದು ಮೈಸೂರಿನ ಶಾರದಾ ವಿಲಾಸ್ ಶಿಕ್ಷಣ ಸಂಸ್ಥೆಗಳ ಶತಮಾನೋತ್ಸವ ಭವನದಲ್ಲಿ ನಡೆದ ಮೈಸೂರು ವಿಭಾಗಮಟ್ಟದ ಟಿಸಿಎಸ್ ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಮದರ್ ತೆರೇಸಾಸ್ ಪದವಿ ಪೂರ್ವ ಕಾಲೇಜು ಶಂಕರನಾರಾಯಣ ಇಲ್ಲಿನ ದ್ವಿತೀಯ ಪಿ. ಯು. ಸಿ ವಿಜ್ಞಾನ ವಿಭಾಗದ ಸುಜನ್ ಶೆಟ್ಟಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಟಿಸಿಎಸ್ ಗ್ರಾಮೀಣ ತಂತ್ರಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಅತ್ಯಂತ ಪೈಪೋಟಿಯಿಂದ ಕೂಡಿದ ಈ ಸ್ಪರ್ಧೆಯಲ್ಲಿ ಚಾಣಾಕ್ಷತನದಿಂದ ಉತ್ತರಿಸಿ ಆಯ್ಕೆ ಯಾಗಿರುತ್ತಾನೆ. ಮಾಹಿತಿ ತಂತ್ರಜ್ಞಾನದಲ್ಲಿ ವಿಶೇಷ ನೈಪುಣ್ಯತೆಯನ್ನು ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಯ ಅಪ್ರತಿಮ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ & ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿರುತ್ತಾರೆ
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿ ಕ್ಲಬ್ ಬೈಂದೂರು, ಜೆಸಿಐ ಬೈಂದೂರು ಸಿಟಿ, ಜೆಸಿಐ ಉಪ್ಪುಂದ, ಜೆಸಿಐ ಶಿರೂರು ಮತ್ತು ಜೆಸಿಐ ಉಪ್ಪುಂದ ಸುಪ್ರಿಮ್ ನೇತೃತ್ವದಲ್ಲಿ ಕೆ.ಎಂ.ಸಿ ಮಣಿಪಾಲದ ಮೂಲಕ ಬೈಂದೂರು ಉತ್ಸವದ ಅಂಗವಾಗಿ ಮಂಗಳವಾರ ಆರೋಗ್ಯ ಮೇಳ – ದಂತ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಹಿರಿಯ ವೈದ್ಯ ಡಾ. ಕೆ. ಪ್ರಭಾಕರ ನಂಬಿಯಾರ್ ಅವರು ಕಾರ್ಯಕ್ರಮ ಉದ್ಘಾಟನಾ ಮಾತನಾಡಿ, ಧಾವಂತದ ಬದುಕಿನ ನಡುವೆ ಪ್ರತಿಯೊಬ್ಬರು ಆರೋಗ್ಯದ ಕಾಳಜಿ ವಹಿಸುವುದು ಮುಖ್ಯ. ಸಂಘ ಸಂಸ್ಥೆಗಳ ಮುಖಾಂತರ ನಡೆಯುವ ಉಚಿತ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಮೋಹನ್ ರೇವಣ್ಕರ್ ವಹಿಸಿದ್ದರು. ಉತ್ಸವ ಸಮಿತಿ ಸಹ ಸಂಚಾಲಕ ಗಣೇಶ್ ಗಾಣಿಗ ಉಪ್ಪುಂದ, ಪುಪ್ಪರಾಜ ಶೆಟ್ಟಿ, ಅನುರಾಧ ಗುರುರಾಜ, ಕೆಎಂಸಿ ಮಣಿಪಾಲದ ದಂತ ವೈದ್ಯ ಡಾ. ಜಿಷ್ಣು, ಜೆಸಿಐ ಬೈಂದೂರು ಸಿಟಿ ಅಧ್ಯಕ್ಷೆ ಅನಿತಾ ಆರ್.ಕೆ., ಜೆಸಿಐ ಉಪ್ಪುಂದ ಸುಪ್ರಿಮ್ ಅಧ್ಯಕ್ಷೆ ಸುಮಾ ಆಚಾರ್ಯ, ಜೆಸಿಐ ಉಪ್ಪುಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನೇರಳಕಟ್ಟೆ – ತಲ್ಲೂರು ರಸ್ತೆಯ ತಲ್ಲೂರು ಗ್ರಾಮದ ಸಹದೇವಿ ಹಾಲ್ ಬಳಿ ಸ್ಕೂಟಿಗೆ ಬೈಕ್ ಢಿಕ್ಕಿಯಾಗಿ, ಸ್ಕೂಟಿ ಸವಾರ ರಾಮಚಂದ್ರ (67) ಗಂಭೀರ ಗಾಯಗೊಂಡಿದ್ದು, ಬೈಕ್ ಸವಾರ ಶಶಾಂಕ್ ಸಹ ಗಾಯಗೊಂಡ ಘಟನೆ ನಡೆದಿದೆ. ಶಶಾಂಕ ಎಂಬುವವನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಾಮಚಂದ್ರ ಅವರ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರಿಗೆ ತಲೆ, ಮುಖ, ಕಾಲಿಗೆ ತೀವ್ರತರದ ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಶಶಾಂಕ್‌ರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಸುವರ್ಣ ಮಹೋತ್ಸವದ ಅಂಗವಾಗಿ ಬಾಲ ಪ್ರತಿಭೆ ವೃಷಾಂಕ್ ವಿ. ಭೋಮ್ಕರ್ ಅವರಿಂದ ಯಕ್ಷಗಾನ ನೃತ್ಯ ಸೇವೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು. ಅವನು ವಿವೇಕ್ ಭೋಮ್ಕರ್ ಮತ್ತು ಶಿವಾನಿ ದಂಪತಿ ಪುತ್ರ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅನಾರೋಗ್ಯ ಮತ್ತು ಕ್ಷೇಮ ಎಂಬುದು ಎರಡು ಭಿನ್ನ ವಿಚಾರಗಳು. ಕ್ಷೇಮ ತರಬೇತಿ ಕೇಂದ್ರವು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆ, ವೈಯಕ್ತಿಕ ಸಂಬಂಧಗಳು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ವಿಚಾರಿಸಿ, ಸಮಾಲೋಚಿಸುವ ಕಾರ್ಯವನ್ನು ಮಾಡುತ್ತವೆ. ಇದೊಂದು ಮಾನಸಿಕ ಆರೋಗ್ಯವನ್ನು ಉನ್ನತೀಕರಣದ ಪರಿಕಲ್ಪನೆಯಾಗಿದೆ ಎಂದು ಉಡುಪಿಯ ಎವಿ ಬಾಳಿಗಾ ಸಂಸ್ಥೆಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಹೇಳಿದರು . ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಳ್ವಾಸ್ ಸೆಂಟರ್ ಫಾರ್ ವೆಲ್ ನೆಸ್ ಟ್ರೈನಿಂಗ್ ಆಶ್ರಯದಲ್ಲಿ ಪದವಿ ಎವಿ ಕೊಠಡಿಯಲ್ಲಿ ಸೋಮವಾರ ನಡೆದ “ವೆಲ್‌ನೆಸ್ ರೂಮ್‌ನ ಉದ್ಘಾಟನೆ, ಬಡ್ಡಿಸ್ ಮೂಮೆಂಟ್ ಚಾಲನೆ ಮತ್ತು ಮಾನಸಿಕ ಸ್ವಾಸ್ಥ್ಯ ಕುರಿತ ಅಧಿವೇಶನ ಕಾರ್ಯಕ್ರಮ” ಉದ್ಘಾಟಿಸಿ ಅವರು ಮಾತನಾಡಿದರು . ಆತಂಕದ ಅಸ್ವಸ್ಥತೆಗಳು, ಖಿನ್ನತೆ, ನಿದ್ರಾ ಭಂಗಗಳು, ಮಾದಕ ವ್ಯಸನ, ಒತ್ತಡ ಸಂಬಂಧಿತ ಸಮಸ್ಯೆಗಳು ಹಾಗೂ ತಿನ್ನುವ ಕ್ರಮದಲ್ಲಿನ ಅಸ್ವಸ್ಥತೆ ಸಾಮಾನ್ಯ ಮಾನಸಿಕ ಆರೋಗ್ಯದ ಮುಖ್ಯ ಸವಾಲುಗಳಾಗಿವೆ ಎಂದರು. ಸಮಯ ನಿರ್ವಹಣೆ, ಒತ್ತಡ ನಿರ್ವಹಣೆ, ಸಾಮಾಜಿಕ ಸಂಪರ್ಕಗಳು, ಅಗತ್ಯವಿದ್ದಾಗ ಸಹಾಯವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಐಡಿಯಲ್ ಪ್ಲೇ ಅಬಾಕಸ್ ಅಂಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಚಿತ್ರದುರ್ಗದ ಮುರುಗಾ ಮಠದಲ್ಲಿ ನಡೆದ 19ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು 7ನೇ ರಾಜ್ಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ಛಾಯಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕುಂದಾಪುರದ ಎಚ್‍ಎಮ್‍ಎಮ್ ಆಂಗ್ಲ ಮಾಧ್ಯಮ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿಯಾಗಿರುವ ಕೋಡಿಯ ವಿಶ್ವನಾಥ ಮುನ್ನ ಹಾಗೂ ರಜನಿ ದಂಪತಿಯ ಪುತ್ರಿ. ಈಕೆ ಪ್ರಸನ್ನ, ಮಹಾಲಕ್ಷ್ಮೀ, ದೀಪಾ ಅವರಿಂದ ತರಬೇತಿ ಪಡೆದಿರುತ್ತಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಗ್ರಾಮೀಣ ಐ. ಟಿ ಕ್ವಿಜ್ ನಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪುನೀತ್ ಆಚಾರ್ಯ, ದಿಲೀಪ್ ಡಿ.ಕೆ, ಅಬು ಸಲಾಮ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಬ್ಯಾಂಕ್ ಕೋಣಿ ಶಾಖೆಯಲ್ಲಿ ನ. 16 ರಂದು ಕಳ್ಳತನಕ್ಕೆ ವಿಫಲಯತ್ನ ನಡೆಸಿದ್ದ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕ ಸಹಿತ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್ (22) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶಪಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಬಹಳಷ್ಟು ಕಾಯಿಲೆಗಳು ಮನುಷ್ಯನನ್ನು ಕಾಡುತ್ತಿದೆ. ಪಾಶ್ಚಿಮಾತ್ಯರ ಅನುಕರಣೆಯಿಂದಾಗಿ ನಮ್ಮ ಜೀವನ ಶೈಲಿಯನ್ನು ಹಾಗೂ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡಿದ್ದೇವೆ. ಇಂದಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದ್ದು, ಕಾಯಿಲೆ ರಹಿತವಾಗಿ ಆರೋಗ್ಯವಂತರಾಗಿ ಬದುಕಲು ಕಾಲ ಕಾಲಕ್ಕೆ ಆರೋಗ್ಯ ತಪಾಣೆ ಮಾಡಿಸಿಕೊಳ್ಳುತ್ತಿರಬೇಕು. ದೇಹದ ರೋಗ ನಿರೋಧಕರ ಶಕ್ತಿಯನ್ನು ವೃದ್ಧಿಸಿಕೊಳ್ಳಲು ನಮ್ಮ ಸುತ್ತಮುತ್ತಲು ದೊರೆಯುವ ಔಷಧಿ ಸಸ್ಯಗಳನ್ನು ಆಹಾರ ರೂಪದಲ್ಲಿ ಹಾಗೂ ಸಣ್ಣಪುಟ್ಟ ಕಾಯಿಲೆಗಳಿಗೆ ಮನೆ ಮದ್ದಾಗಿ ಉಪಯೋಗಿಸಬಹುದು ಎಂದು ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ ಉದ್ಯಾವರ ಇದರ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಹೇಳಿದರು. ನಾಯಕವಾಡಿ-ಗುಜ್ಜಾಡಿ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ಸುವರ್ಣ ಮಹೋತ್ಸವದ ಪ್ರಯುಕ್ತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉಡುಪಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತ್ರಾಸಿ ವಲಯ ಬೈಂದೂರು ತಾಲೂಕು ಮತ್ತು ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ನಾವುಂದದ ರಾ.ಹೆ-66ರಲ್ಲಿ ಪಾದಾಚಾರಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ನಾಯಕನಕಟ್ಟೆ ಸಮೀಪದ ಗೋಳಿಕಟ್ಟೆ ನಿವಾಸಿ ಭದ್ರ (45) ಅಪಘಾತದಲ್ಲಿ ಸಾವನಪ್ಪಿದವರು. ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಭದ್ರ ಎಂಬುವವರಿಗೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಭದ್ರಾ ಅವರನ್ನು ಗಂಗೊಳ್ಳಿಯ ಇಬ್ರಾಹಿಂ ಅವರಿಗೆ ಕರೆ ಮಾಡಿ ಕುಂದಾಪುರಕ್ಕೆ ಕೊಂಡೊಯ್ಯಲಾಯಿತು. ಆದರೆ ಅದಾಗಲೇ ಭದ್ರ ಮೃತಪಟ್ಟಿದ್ದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
