Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರೋಗ್ಯ ಭಾಗ್ಯ ಯೋಜನೆಯಡಿ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಜನ್ನಾಲ್‌ನ ಶಂಕರ ಪೂಜಾರಿ ಅವರ ಅನಾರೋಗ್ಯ ನಿಮಿತ್ತ ವೈದ್ಯಕೀಯ ಚಿಕಿತ್ಸೆಗಾಗಿ ಸಂಘದ ವತಿಯಿಂದ 10,000 ರೂಪಾಯಿಯನ್ನು ಚೆಕ್ ಮೂಲಕ ಹಸ್ತಾಂತರಿಸಲಾಯಿತು. ಶಂಕರ ಪೂಜಾರಿ ಮಗಳಾದ  ಶ್ರೀರಕ್ಷಾ ಇವರಿಗೆ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಚೆಕ್‌ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ  ಡಾ. ಬಿ.ಬಿ ಹೆಗ್ಡೆ.ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ಪ್ರಶಾಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮನೆಯ ಗೇಟಿನ ಮುಂಭಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಶಿರೂರು ಗ್ರಾಮದ ಹಡವಿನಕೋಣೆ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಹಡವಿನಕೋಣೆ ಮುದ್ರುಮಕ್ಕಿ ಸಮೀಪದ ನಿವಾಸಿ ಕುರುಡಿ ಇರ್ಷಾದ್ (52) ಮೃತಪಟ್ಟಿದ್ದಾರೆ. ರಾತ್ರಿ ಸುರಿದ ಗಾಳಿ ಮಳೆಗೆ ಹಡವಿನಕೋಣೆಯಿಂದ ಮುದ್ರುಮಕ್ಕಿಗೆ ತೆರಳುವ ಮಾರ್ಗದಲ್ಲಿ ಇದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಬೆಳಿಗ್ಗೆ ಮನೆಯೊಳಕ್ಕೆ ಸತ್ತುಹೋಗಿತ್ತು ಇಲಿಯನ್ನು ಹೊರಕ್ಕೆ ಬೀಸಾಡುವ ಸಲುವಾಗಿ ಗೇಟ್ ಹೊರಕ್ಕೆ ಬಂದಾಗ ಅಚಾನಕ್ಕಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಿದ್ದು, ಈ ವೇಳೆ ವಿದ್ಯುತ್ ತಗುಲು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ದೊರೆತ ತಕ್ಷಣ ಈ ಭಾಗದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಮೃತರು ಮಡದಿ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಬೈಂದೂರು ಮೆಸ್ಕಾಂನ ಸಹಾಯಕ ಇಂಜಿನಿಯರ್‌ ಯಶವಂತ್‌ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಗೋಪಾಡಿ ಗ್ರಾಮದ ದಾಸನಹಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮೇ 16ರ ರಾತ್ರಿ ಪತ್ತೆಯಾಗಿದ್ದು, ಆಕೆಯ ಮೃತದೇಹದೊಂದಿಗೆ ಬುದ್ಧಿಮಾಂದ್ಯ ಪುತ್ರಿಯಾದ ಪ್ರಗತಿ 72 ಗಂಟೆಗೂ ಹೆಚ್ಚು ಕಾಲ ಕಳೆದಿರುವುದು ಬೆಳಕಿಗೆ ಬಂದಿದೆ. ಮೂಡುಗೋಪಾಡಿಯದಾಸನಹಾಡಿಯ ಮನೆಯಲ್ಲಿ ಜಯಂತಿ ಅವರು ಪುತ್ರಿ ಪ್ರಗತಿಯೊಂದಿಗೆ ನೆಲೆಸಿದ್ದರು. ಪ್ರಗತಿ ಚಿಕ್ಕಂದಿನಿಂದಲೇ ಬುದ್ಧಿಮಾಂದ್ಯರಾಗಿದ್ದು, ಇತ್ತೀಚೆಗೆ ಮಧುಮೇಹ ಹೆಚ್ಚಾಗಿದ್ದರಿಂದ ಒಂದು ಕಾಲನ್ನೇ ಕತ್ತರಿಸಲಾಗಿತ್ತು. ಅದಾಗಿಯೂ ಪ್ರಗತಿಯನ್ನು ತಾಯಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಅಂದುಕೊಂಡಂತೆ ಆಗಿದ್ದರೆ ಮೇ 14ರಂದು ಆಕೆಗೆ ಕೃತಕ ಕಾಲು ಜೋಡಣೆ ಆಗಬೇಕಿತ್ತು. ಜಯಂತಿ ಅವರ ಪತಿ ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದು, ಕೆಲವು ವರ್ಷಗಳ ಹಿಂದೆಯೇ ಮೃತ ಪಟ್ಟಿದ್ದರು. ಮೇ 12ರಂದು ಜಯಂತಿ ಪುತ್ರಿಯ ಚೇತರಿಕೆಗಾಗಿ ಆನೆಗುಡ್ಡೆ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದರು. ಮೇ 13ರಂದು ಕೋಟೇಶ್ವರ ದೇವ ಸ್ಥಾನಕ್ಕೆ ತೆರಳಲು ಇರುವುದಾಗಿ ಸ್ಥಳೀಯ ರಿಕ್ಷಾ ಚಾಲಕರೊಬ್ಬರಿಗೆ ತಿಳಿಸಿದ್ದರು. ಆ ರಿಕ್ಷಾ ಚಾಲಕ ಮೇ 13ರಂದು ಬೆಳಗ್ಗೆ ಕರೆ ಮಾಡಿದಾಗ ಕರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ಮೇ.4 ರಂದು ನಡೆಸಿದ ಸಿಎಸ್ಇಇಟಿ ಅರ್ಹತಾ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ  ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಧೀರಜ್ 200 ರಲ್ಲಿ119 ಅಂಕಗಳನ್ನು ಪಡೆದು ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾನೆ. ಇನ್ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಅತೀ ಕಷ್ಟಕರವಾದ ಪರೀಕ್ಷೆ ಇದಾಗಿದ್ದು ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಧೀರಜ್ ಪಿಯುಸಿಯಲ್ಲಿಯೇ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿಉಡುಪಿ: ಡೆಂಗ್ಯೂ ಮಲೇರಿಯಾ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಮಾನವ ಸರಪಳಿ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಜಿಲ್ಲಾಡಳಿತ,  ಜಿಲ್ಲಾಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ನಗರ ಸಭೆ ಉಡುಪಿ, ವಿದ್ಯಾರತ್ನ  ಸ್ಕೂಲ್ & ಕಾಲೇಜ್ ಆಫ್ ನರ್ಸಿಂಗ್, ನ್ಯೂ ಸಿಟಿ ನರ್ಸಿಂಗ್ ಕಾಲೇಜ್, ಮಿತ್ರ ಸ್ಕೂಲ್ ಆಫ್ ನರ್ಸಿಂಗ್, ಎಲ್.ಎಮ್.ಹೆಚ್ ಸ್ಕೂಲ್ ಆಫ್ ನರ್ಸಿಂಗ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಹಾಗೂ ವಿಶ್ವ ಮಲೇರಿಯಾ ದಿನಾಚರಣೆಯ ಹಿನ್ನಲೆ ಉಡುಪಿ ನಗರದಲ್ಲಿ ಆಯೋಜಿಸಲಾಗಿತ್ತು. ಜಾಥಾವನ್ನು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಉದ್ಘಾಟಿಸಿ ಮಾತನಾಡಿ, ಮಲೇರಿಯಾ ಹಾಗೂ ಡೆಂಗ್ಯೂ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಅತೀ ಮುಖ್ಯವಾಗಿದ್ದು ಈ ರೋಗಗಳಿಂದ ಆಗುವ ಅಪಾಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದಲೇ ಜಾಥಾವನ್ನು ಕೈಗೊಳ್ಳಲಾಗಿದೆ, ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜನಸಾಮಾನ್ಯರ ಬಾಯಲ್ಲಿ ನಿರೂರಿಸುವ ದೇಹಕ್ಕೆ ಪೌಷ್ಠಿಕತೆ ಒದಗಿಸುವ ಹಣ್ಣುಗಳ ರಾಜನೆಂದು ಪ್ರಸಿದ್ಧಿ ಪಡೆದಿರುವ ವಿವಿದ ಬಗೆಯ ಮಾವಿನ ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉಡುಪಿ ನಗರದ ದೊಡ್ಡಣ್ಣಗುಡ್ಡೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ರಾಮನಗರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮನಗರ ಜಿಲ್ಲೆ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ 20 ಕ್ಕೂ ಹೆಚ್ಚು ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮೇ 16 ರಿಂದ 19 ರವರೆಗೆ ನಡೆಯಲಿದೆ ಮೇಳದಲ್ಲಿ 20ಕ್ಕೂ ಅಧಿಕ ಮಳಿಗೆಯನ್ನು ತೆರೆಯಲಾsಗಿದೆ. ರಾಮನಗರ ಜಿಲ್ಲೆಯ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ (ಶುಗರ್‌ಬೇಬಿ), ಬೈಗಂಪಲ್ಲಿ, ರತ್ನಗಿರಿ, ಆಲ್ಪೋನ್‌ಸ್ ಸಹಿತ ನಾನ ತಳಿಯ ಒಟ್ಟು 40 ಟನ್‌ಗೂ ಹೆಚ್ಚು ಮಾವು ಮೇಳದಲ್ಲಿ ಲಭ್ಯವಿದೆ. ಮಾವು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ.17: ತನ್ನದೆಯಾದ ಕಲ್ಪನೆಯ ಮೂಲಕ ಛಾಯಾಗ್ರಹಣ ಮಾಡುದರ ಮೂಲಕ ಒಂದೋಂದು ಚಿತ್ರಗಳಿಗು ಅವಿನಾಭಾವ ಸಂಭಂಧ ಸೃಷ್ಟಿ ಮಾಡುವ ಕಲಾಕಾರರು ಛಾಯಾಗ್ರಾಹಕರು. ಯಾವುದೇ ಚಿತ್ರ ಕೇವಲವಲ್ಲ ಹಾಗೂ ಆ ಚಿತ್ರವನ್ನು ಸೃಷ್ಟಿಸಿದ ಕಲಾವಿದ,ಛಾಯಾಗ್ರಾಹಕ ಯಾವತ್ತು ಕೇವಲ ಅನ್ನಿಸಿಕೊಳ್ಳುದಿಲ್ಲ ಸಮಾಜದಲ್ಲಿ ಛಾಯಗ್ರಾಹಕರ ಮೌಲ್ಯ ಅಪಾರವಾದದ್ದು ಎಂದು ಪತ್ರಕರ್ತ ಲಕ್ಷ್ಮೀ ಮಚ್ಚಿನ ಹೇಳಿದರು. ಅವರು ಕುಂದಾಪುರದ ಶ್ರೇಯಸ್ಸ್ ಇನ್ ಸಭಾಂಗಣದಲ್ಲಿ ಶುಕ್ರವಾರ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ, ಬೈಂದೂರು ವಲಯದ ವತಿಯಿಂದ ಆಯೋಜಿಸಲಾದ ಕ್ಯಾನಾನ್ ಕಾರ್ಯಗಾರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ,ಬೈಂದೂರು ವಲಯದ ಅಧ್ಯಕ್ಷ ದಿವಾಕರ ಶೆಟ್ಟಿ ವಹಿಸಿದ್ದರು. ಈ ಸಂಧರ್ಭದಲ್ಲಿ ಕ್ಯಾನಾನ್ ತರಬೇತುದಾರ ಮ್ಯಾತಿಯು, ವ್ಯವಹಾರ ವ್ಯವಸ್ಥಾಪಕ ಅಜಯ್, ಸಂಘದ ಗೌರವಾಧ್ಯಕ್ಷರಾದ ಶ್ರೀಧರ್ ಹೆಗ್ಡೆ, ಸಲಹಾ ಸಮಿತಿ ಆದ್ಯಕ್ಷ ದಿನೇಶ್ ಗೋಡೆ, ನಿಕಟ ಪೂರ್ವ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ದಿನೇಶ್ ರಾಯಪ್ಪನ ಮಠ, ಕೋಶಾಧಿಕಾರಿ ಹರೀಶ್ ಹಂಗಳೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕೋಟ: ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಮೋಜು ಮಸ್ತಿಗೆ ಸಮಯ ಮೀಸಲಿಡದೆ, ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹಲವಾರು ವಿಷಯಗಳ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ. ಮಕ್ಕಳಲ್ಲೂ ಕನಸು ಕಾಣುವ ತುಡಿತವಿರುತ್ತದೆ, ಆ ಕನಸಿಗೆ ಬಣ್ಣ ತುಂಬುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರತಿಷ್ಠಾನದ ಟ್ರಸ್ಟಿ ಸುಶೀಲ ಸೋಮಶೇಖರ್ ಅವರು ಹೇಳಿದರು. ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಮೂರು ದಿನಗಳ ಆರ್ಟ್ ಕ್ಯಾಂಪ್ ಆರಾಧನಾ-2024 (ಬೆರಳುಗಳಲ್ಲಿ ಭಾವಗೀತೆ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಕಾರಂತ ಥೀಮ್ ಪಾರ್ಕ್‌ನಲ್ಲಿ ಮಕ್ಕಳಿಗಾಗಿ ಹಲವಾರು ಚಟುವಟಿಕೆ, ತರಬೇತಿ ನಡೆಯುತ್ತಿರುತ್ತದೆ ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಚಿತ್ರಕಲಾ ಶಿಕ್ಷಕಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಬೈಂದೂರು: ಇಲ್ಲಿನ ಉಪ್ಪುಂದ ಶಾಲೆಬಾಗಿಲುನಲ್ಲಿ ಜೆಸಿಐ ಉಪ್ಪುಂದದ ವಿಶಂತಿ ಮಹೋತ್ಸವ ಜೆಸಿಐ ಸಂಭ್ರಮ 2024 ಜರುಗಿತು. ಕಾರ್ಯಕ್ರಮವನ್ನು ಜೆ.ಎನ್.ಎಸ್ ಕನ್ಸ್ಟ್ರಕ್ಷನ್ ಗ್ರೂಪ್ ಆಫ್ ಘಟಪ್ರಭಾ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಜಯಶೀಲ ನಾರಾಯಣ ಶೆಟ್ಟಿ ದೀಪ ಪ್ರಜ್ವಲಿಸಿ 20 ರ ಸವಿನೆನಪಿಗಾಗಿ 20 ಬಲೂನುಗಳನ್ನು ಹಾರಿ ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಾಪಕಾಧ್ಯಕ್ಷರಾದ ದಿವಾಕರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕೇವಲ 15 ಸದಸ್ಯರನ್ನು ಕೂಡಿಕೊಂಡು 2005ರಲ್ಲಿ ಉದ್ಘಾಟನೆಗೊಂಡ ಈ ಸಂಸ್ಥೆ ಕ್ರಮೇಣ ಈ ಭಾಗದ ಜನರ ಸಹಕಾರದಿಂದ ಇಂದು 20 ನೇ ವರ್ಷಕ್ಕೆ ಕಾಲಿರಿಸಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಉಪ್ಪುಂದ ಹೊಳೆಕಡಿಮನೆ ವೆಂಕಟೇಶ್ ಪೂಜಾರಿ ಹಾಗೂ ಕಳೆದ 20 ವರ್ಷಗಳಿಂದ ಜೆಸಿಐ ಉಪ್ಪುಂದ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪ್ಪುಂದ ದೇವಾಡಿಗರ ಸಂಘದ ಗೌರವಾಧ್ಯಕ್ಷರಾದ ಜನಾರ್ದನ ದೇವಾಡಿಗ ಉದ್ಯಮಿಗಳು ಮುಂಬೈ, ವಲಯ 15 ಅಧ್ಯಕ್ಷರಾದ ಸೆನೆಟರ್ ಗಿರೀಶ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ತಾಲೂಕಿನ ಕೋಣಿ ಮೂರೂರು ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ನೂತನ ಅಧ್ಯಕ್ಷರಾಗಿ ನೀರಾಡಿಮಕ್ಕಿ ಸಂದೇಶ್‌ ಕಾಂಚನ್‌, ಕಾರ್ಯದರ್ಶಿಯಾಗಿ ಕಿರಣ್‌ ಆಚಾರ್‌ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾಗಿ ಸುಬ್ಬಣ್ಣ ಕೋಣಿ, ಉಪಾಧ್ಯಕ್ಷರಾಗಿ ಮಹೇಶ್ ಪೂಜಾರಿ, ಕೋಶಾಧಿಕಾರಿಯಾಗಿ ಗಜೇಂದ್ರ ಆಚಾರ್, ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ ಪೂಜಾರಿ ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಧರ ಚಂದನ್, ಸುಧೀರ್ ಪೂಜಾರಿ, ಅಂಕಿತಾ, ತನುಜಾ, ತೇಜಸ್ವಿನಿ, ಕ್ರೀಡಾ ಕಾರ್ಯದರ್ಶಿ ಮಂಜುನಾಥ ಪೂಜಾರಿ, ಜಯಪ್ರಶಾಂತ್ ಪೂಜಾರಿ, ಈಶ್ವರ ಪೂಜಾರಿ, ಪವನ್, ನಿತ್ಯಾನಂದ (ರಾಮ) ,ಮಹೇಶ್ ಬಂಗೇರ,ಶ್ರೇಯಸ್, ಲೆಕ್ಕಪರಿಶೋಧಕರಾದ ರಘು.ವಿ ಪೂಜಾರಿ, ಮನೋಹರ ಹೆಚ್.ಎಂ.ಟಿ, ಉದಯ ಮಲ್ಲನಬೆಟ್ಟು, ಬಾಬು ಬೆನಕ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾದ ಸುಬ್ಬಣ್ಣ ಕೋಣಿಯವರ ಮಾರ್ಗದರ್ಶನದಲ್ಲಿ 26ನೇ ವಾರ್ಷೀಕೋತ್ಸವದ ಆಯವ್ಯಯ ಮಂಡನೆ ಹಾಗೂ 2024- 25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

Read More