ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಾಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅದ್ದೂರಿ ಆಗಿ ನಡೆಯಿತು.
ಯೋಗ ಗುರುಗಳು ಆದ ರವಿ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಣ್ಣ ವಯಸ್ಸಿನಲ್ಲಿಯೇ ಯೋಗ ಕಲಿಕೆ ಮತ್ತು ಅಭ್ಯಾಸ ಅರೋಗ್ಯ ಮತ್ತು ಮನಸ್ಸಿಗೆ ತುಂಬಾ ಹಿತ ಎಂದು ಹೇಳಿದರು. ವಿವಿಧ ಯೋಗ ಆಸನಗಳನ್ನು ಪ್ರದರ್ಶಿಸಿದ ಅವರು ಅದರ ಉಪಯೋಗವನ್ನೂ ಹೇಳಿದರು. ಜೆಸಿಐ ಅಧ್ಯಕ್ಷರಾದ ಜೆಸಿ ಪ್ರದೀಪ್ ಹಾಲಾಡಿ, ಮುಖ್ಯ ಅಥಿತಿಗಳಾಗಿ ಜ್ಞಾನೇಶ್ ಶೆಟ್ಟಿ ಮುಂತಾದವರು ಮಾತಾನಾಡಿದರು. ಜೆಸಿಐ ಸದಸ್ಯರು ಮತ್ತು ಮಕ್ಕಳು ಯೋಗವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಶೋಕ್ ಆಚಾರಿ, ಉಪಾಧ್ಯಕ್ಷರಾದ ಗುರು ಪ್ರಸಾದ್ ಶೆಟ್ಟಿ ಮತ್ತು ರಾಘವೇಂದ್ರ ಕುದ್ರುಬೆಟ್ಟು ಹಾಗೂ ಮಂಜುಳ ಶೆಟ್ಟಿ ಮತ್ತು ಆಶಾ ಕುಲಾಲ್ ಮತ್ತು ಜೆಸಿಐ ಸದಸ್ಯರು ಉಪಸ್ಥಿತಿ ಇದ್ದರು.











