Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ  ಜೆಸಿಐ ಸಿಟಿ ಕುಂದಾಪುರ ಆಯೋಜನೆಯ ಥಿಂಕಿಂಗ್ ಬಿಗ್ ಗ್ರೋ ಬಿಗ್ ಶೀರ್ಷಿಕೆ ಅಡಿಯಲ್ಲಿ ವೃತ್ತಿ ಕೌಶಲ್ಯ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಕ್ಯೂನಿ ಡಿಕೊಸ್ಟಾ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯದ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದರು. ಸಮಾರಂಭದಲ್ಲಿ ಜೆಸಿಐ ಸಿಟಿ ಕುಂದಾಪುರದ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್, ಜೆಸಿಐ ನಿಕಟಪೂರ್ವ ಅಧ್ಯಕ್ಷರುಗಳಾದ ಹುಸೆನ್‌ ಹೈಕಾಡಿ, ವಿಜಯ ಕುಮಾರ್ ಹಾಗೂ ಜನತಾ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಹರ್ಷ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು,ಬೋಧಕ/ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಅಭಿಜಿತ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು, ಮೇ 28: ಗಾಳ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿ ಕಾಲು ಜಾರಿ ಸೌಪರ್ಣಿಕ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಬಡಾಕೆರೆ ಗ್ರಾಮದ ಕುದ್ರುವಿನ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ತೊಪ್ಲು ನಿವಾಸಿ ಮುಡೂರ ಎಂಬುವರ ಮಗ ಮಂಜು ಮೊಗವೀರ (57) ಎಂದು ಗುರುತಿಸಲಾಗಿದೆ. ಮಂಜು ಮೊಗವೀರ ಸಮುದ್ರ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ತೂಫಾನ್ ಇದ್ದ ಕಾರಣ ಮೀನುಗಾರಿಕೆಗೆ ತೆರಳಿರಲಿಲ್ಲ. ಸೋಮವಾರ ಸಂಜೆ ಬಿಡುವಿದ್ದರಿಂದ ಸೌಪರ್ಣಿಕಾ ನದಿಗೆ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದರು ಎನ್ನಲಾಗಿದೆ. ಕುದ್ರುವಿನ ಬಳಿಯ ಸೌಪರ್ಣಿಕ ನದಿಯಲ್ಲಿ ಗಾಳ ಹಾಕಲು ತೆರಳಿದ್ದ ಮಂಜು ಮೊಗವೀರ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ನಾಪತ್ತೆಯಾಗಿದ್ದ ಮಂಜು ಮೊಗವೀರರನ್ನು ಹುಡುಕಾಡಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ,ಮೇ.27: ಭಿನ್ನ ಮಾದರಿಯ ರಕ್ತದ ಗುಂಪಿಗೆ ಸೇರಿದ ಮೂತ್ರ ಪಿಂಡಗಳನ್ನು (kidney) ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವುದರ ಮೂಲಕ ಕುಂದಾಪುರ ಮೂಲದ ವೈದ್ಯ ಡಾ| ಎ.ಕೆ. ಇಸ್ತಿಯಾಕ್ ಅಹ್ಮದ್ ಮತ್ತು ಅವರ ತಂಡವು ಮಹಿಳೆಯೊಬ್ಬರ ಪ್ರಾಣ ಉಳಿಸಿದೆ. ವೈದ್ಯ ಲೋಕಕ್ಕೆ ಸವಾಲಾಗಿರುವ ಈ ಪ್ರಕರಣವನ್ನು ಕೈಗೆತ್ತಿಕೊಂಡ ಅಬುಧಾಬಿ ಬುರ್ಜಿಲ್‌ ಮೆಡಿಕಲ್ ಸಿಟಿಯಲ್ಲಿ ನೆಫ್ರಾಲಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ತಜ್ಞರಾಗಿರುವ ಡಾ| ಎ.ಕೆ. ಇಸ್ತಿಯಾಕ್ ಅವರು ಅನಿವಾಸಿ ಭಾರತೀಯ ಮಹಿಳೆಯೊಬ್ಬರಿಗೆ ಅವರ ಪತಿಯ ಭಿನ್ನ ರಕ್ತ ಮಾದರಿಯ ಮೂತ್ರಪಿಂಡಗಳನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನಿವಾಸಿ ಭಾರತೀಯರಾದ ರೇವತಿ ಕಾರ್ತಿಕೇಯನ್ ದಂಪತಿ ತಮ್ಮ ಎರಡು ಪುಟ್ಟ ಹಾಗೂ ಮಕ್ಕಳೊಂದಿಗೆ ಅಬುಧಾಬಿಯಲ್ಲಿದ್ದಾರೆ. 32 ವರ್ಷ ಹರೆಯದ ರೇವತಿ ಅವರು ಮೂತ್ರಪಿಂಡಗಳಲ್ಲಿ 2018ರಿಂದ ಸೋಂಕು ಕಂಡು ಬಂದಿತ್ತು. 2022ರ ಅನಂತರ ಹಿಮೋ ಡಯಾಲಿಸಿಸ್‌ನಂತಹ ಹಲವು ಚಿಕಿತ್ಸೆಗಳ ಅನಂತರವೂ ಹೃದಯ ಸ್ತಂಭನದಿಂದ ನಿಷ್ಕ್ರಿಯಗೊಂಡ ಅವರ ಮೂತ್ರ ಪಿಂಡಗಳನ್ನು ಬದಲಾಯಿಸಲೇಬೇಕಾದ ಅನಿವಾರ್ಯ ಬಂದಿತು. ಹಾಗಾಗಿ ದಂಪತಿ ಮೃತ ದೇಹಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ರೈತರ ಮಕ್ಕಳಿಗೆ 10 ದಿನಗಳ ತೋಟಗಾರಿಕೆ ತರಬೇತಿ ಪಡೆಯಲು ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯ ಪೋಷಕರು ಕಡ್ಡಾಯವಾಗಿ ಕೃಷಿ ಜಮೀನು ಹೊಂದಿರಬೇಕು. ಜೊತೆಗೆ ಪಹಣಿ ನೀಡುವುದು ಕಡ್ಡಾಯವಾಗಿರುತ್ತದೆ. ಅರ್ಜಿ ಸಲ್ಲಿಸಲು ಜೂನ್ 3 ಕೊನೆಯ ದಿನ. ಅರ್ಜಿ ನಮೂನೆಯನ್ನು ಇಲಾಖೆಯ https://horticulturedir.karnataka.gov.in ವೆಬ್‌ಸೈಟ್ ಅಥವಾ ತೋಟಗಾರಿಕೆ ಉಪನಿರ್ದೇಶಕರು ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಉಡುಪಿ ಇವರಿಂದ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಬ್ರಹ್ಮಾವರ ತಾಲೂಕು ಕೊಕ್ಕರ್ಣೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2 ವರ್ಷದ ಎಲೆಕ್ಟಿçಷಿಯನ್ ಹಾಗೂ ಫಿಟ್ಟರ್ ಕೋರ್ಸುಗಳ ಪ್ರವೇಶಾತಿಗಾಗಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಇಲಾಖೆಯ www.cite.karnataka.gov.in ವೆಬ್‌ಸೈಟ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಕ್ಕರ್ಣೆ, ಮೊ.ನಂ: 9483593148 ಅಥವಾ ಮೊ.ನಂ:8277558812 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೃಹ ಚೇತನ ಯೋಜನೆಯಡಿ ಆಯ್ಕೆಯಾದ ಕುಟುಂಬಗಳಿಗೆ ಇತ್ತಿಚಿಗೆ ಸಂಘದ ಕಛೇರಿಯಲ್ಲಿ ಚೆಕ್ ವಿತರಣೆ ಮಾಡಲಾಯಿತು. ಕುಂದಾಪುರ ತಾಲೂಕು ಕಮಲಶಿಲೆ ಗ್ರಾಮದ ಸ್ವಾತಿ ಶೆಟ್ಟಿ ಇವರಿಗೆ ಸಂಘದ ದಶಮ ಸಂಭ್ರಮದ ಮಹಾಪೋಷಕರಾದ ಹೈದರಾಬಾದ್ ಹೋಟೆಲ್ ಉದ್ಯಮಿ ಎಚ್. ಚಂದ್ರ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 50,000 ರೂಪಾಯಿ ಹಣವನ್ನು ಹಾಗೂ ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ದಬ್ಬೆಕಟ್ಟೆ ನಿವಾಸಿ ಕುಸುಮ ಶೆಟ್ಟಿ ಅವರಿಗೆ ಸಂಘದ ದಶಮ ಸಂಭ್ರಮದ ಪೋಷಕರಾದ ಹೈದರಾಬಾದ್ ಹೋಟೆಲ್ ಉದ್ಯಮಿಗಳಾದ ಸಳ್ವಾಡಿ ಚಂದ್ರಶೇಖರ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಸಂಘದ ವತಿಯಿಂದ 30,000 ರೂಪಾಯಿ ಹಣವನ್ನು ಚೆಕ್ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಬಿ. ಉದಯ್ ಕುಮಾರ್ ಶೆಟ್ಟಿ, ದಶಮ ಸಂಭ್ರಮದ ಮಹಾ ಪೋಷಕರಾದ ಹೈದರಾಬಾದ್ ಹೋಟೆಲ್ ಉದ್ಯಮಿಗಳಾದ ಹೆಚ್. ಚಂದ್ರ ಶೆಟ್ಟಿ, ಪೋಷಕರಾದ ಅಲ್ತಾರು ಸುಧಾಕರ ಶೆಟ್ಟಿ, ಸಳ್ವಾಡಿ ಚಂದ್ರಶೇಖರ್ ಶೆಟ್ಟಿ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಮೇ.27: ರಾಣಿಬಲೆ ಮೀನುಗಾರರ ಒಕ್ಕೂಟ ರಿ. ಉಪ್ಪುಂದ ಇದರ ವತಿಯಿಂದ ಸಂಘದ ಸದಸ್ಯರ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಇಂದು ಸಂಘದ ವಠಾರದಲ್ಲಿ ನಡೆಯಿತು. ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಆರ್ಥಿಕವಾಗಿ ಸಹಕಾರಿಯಾಗಲು ಹಾಗೂ ಕಲಿಕೆಗೆ ಉತ್ತೇಜ ನೀಡುವ ನಿಟ್ಟಿನಲ್ಲಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡಲಾಗಿದೆ. ಇದರ ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರುವಂತಾಗಬೇಕು ಎಂದರು. ಸಂಘದ ಸದಸ್ಯರ ಎಲ್.ಕೆ.ಜಿ.ಯಿಂದ ಎಸ್.ಎಸ್.ಎಲ್.ಸಿ ವರೆಗಿನ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಮಾರು 6 ಸಾವಿರ ಪುಸ್ತಕ ಕೊಡುಗೆಯಾಗಿ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಖಾರ್ವಿ, ಕೋಶಾಧಿಕಾರಿ ನಾಗೇಶ ಖಾರ್ವಿ, ಜೊತೆ ಕಾರ್ಯದರ್ಶಿ ಸೋಮಶೇಖರ ಖಾರ್ವಿ, ಹಾಗೂ ಕಾರ್ಯಕಾರಿ ಸದಸ್ಯರಾದ ಎ. ಶ್ರೀನಿವಾಸ ಖಾರ್ವಿ, ಎಸ್.ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ಶಂಕರ ಖಾರ್ವಿ, ನವೀನ ಖಾರ್ವಿ, ಶರತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣದಲ್ಲಿ ರೌಪಿಯ ಸಭಾಂಗಣದಲ್ಲಿ ಕಿಂಡರ್ಗಾಟನ್, ಪೂರ್ವಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿ ಶಿಕ್ಷಕರಿಗೆ ಶಿಕ್ಷಣದಲ್ಲಿ ಪರಿಣಾಮಕಾರಿ ಬೋಧನಾ ಕೌಶಲ್ಯ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಪರಿಸರತಜ್ಞೆ, ರಾಷ್ಟ್ರಮಟ್ಟದ ವಿಶೇಷ ಸಂಪನ್ಮೂಲ ವ್ಯಕ್ತಿ ಎಸ್. ಪಲ್ಲವಿ ಅವರು ಹಲವು ಪ್ರಾತ್ಯಕ್ಷಿಕೆಗಳ ಮೂಲಕ ಶಿಕ್ಷಣದಲ್ಲಿ ಪರಿಣಾಮಕಾರಿ ಬೋಧನೇ ಮತ್ತು ಗುಣಾತ್ಮಕ ಶಿಕ್ಷಣದ ಕುರಿತು ತರಬೇತಿ ನೀಡಿದರು. ಜೊತೆಯಲ್ಲಿ ಇಂದಿನ ತಾಂತ್ರಿಕ ಯುಗದಲ್ಲಿ ಶಿಕ್ಷಣಕ್ಷೇತ್ರವು ಪೈಪೋಟಿಯಿಂದ ಕೂಡಿದ್ದು ಶಿಕ್ಷಕರು ವಿದ್ಯಾರ್ಥಿಗಳಿಂದ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ವಿದ್ಯಾರ್ಥಿಸ್ನೇಹಿ ಶಿಕ್ಷಣ ಅತ್ಯಗತ್ಯ ಮತ್ತು ಈ ದಿಶೆಯತ್ತ ಶಿಕ್ಷಕರು ಸಂಯಮದಿಂದ ಸದಾ ಕ್ರಿಯಾಶೀಲರಾಗಿರಬೇಕು ಎಂದು ಶಿಕ್ಷಕರಿಗೆ ಪ್ರಾಯೋಗಿಕವಾಗಿ ಉದಾಹರಣೆಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡಿದರು. ಎಲ್ಲಾ ಶಿಕ್ಷಕರು ಅತ್ಯಂತ ಉತ್ಸಾಹದಿಂದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಆಡಳಿತ ಮಂಡಳಿಯ ಅಧಿಕಾರಿಗಳಾದ ಶಮಿತಾ ರಾವ್, ರೆನಿಟಾ ಲೋಬೊ ಮತ್ತು ಮುಖ್ಯ ಶಿಕ್ಷಕ ರವಿದಾಸ್ ಶೆಟ್ಟಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಆಧುನಿಕ ಜೀವನ ಶೈಲಿಯ ನಡುವೆ ಆರೋಗ್ಯವಂತರಾಗಿ ಬದುಕುವುದು ದೊಡ್ಡ ಸವಾಲು. ಮನುಷ್ಯ ಜೀವನದ ಎಲ್ಲಾ ಸವಾಲುಗಳನ್ನು ಎದುರಿಸುವ ಜಾಣ್ಮೆಯನ್ನು ಕಲಿಯುವುದು ಮುಖ್ಯ ಎಂದು ನಿಮ್ಹಾನ್ಸ್ ಮನೋವೈದ್ಯಕೀಯ ವಿಭಾಗದ ನಿವೃತ್ತ ಉಪನ್ಯಾಸಕ, ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ್ ಹೇಳಿದರು. ಅವರು ಸೋಮವಾರ ಇಲ್ಲಿನ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಒತ್ತಡ ರಹಿತ ಜೀವನ ವಿಷಯವಾಗಿ ಮಾತನಾಡಿದರು. ಯಾರಿಗೆ ಹೃದಯ ಕೊಡೋಣ ಅಂತ ಯೋಚಿಸುವ 25 ವರ್ಷ ವಯಸ್ಸಿನವರಿಗೆ ಹೆಚ್ಚು ಹೃದಯಾಘಾತ ಆಗುತ್ತಿರುವುದು ಗಂಭೀರ ಸಂಗತಿ. ಭಾರತವು ಸಕ್ಕರೆ ಕಾಯಿಲೆಯ ರಾಜಧಾನಿಯಾಗಿದೆ. ಸರಿಯಾದ ಆಹಾರ ಅಭ್ಯಾಸಗಳು, ನಿಯಮಿತ ವ್ಯಾಯಾಮ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ ಎಂದರು. ಭಂಡರ್‌ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯ ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಎ ಡಾ. ನಾಗರಾಜ ಆಚಾರ್ಯ ಯಶಸ್ವಿ ಜೀವನದ ಸೂತ್ರಗಳು ವಿಷಯದ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಹಾಲಿಂಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ ‘ದಿಗಂತ’ದಲ್ಲಿ 2 ಪ್ರಥಮ ಹಾಗೂ 5 ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ. ವಿಜೇತರಾದ ಕಾಲೇಜಿನ ತಂಡವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಸಾಂಸ್ಕೃತಿಕ ತಂಡದ ಸಂಯೋಜಕರಾದ ದೀಪಿಕಾ ಜಿ. ಅಭಿನಂದಿಸಿದ್ದಾರೆ.  

Read More