Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಂಗಪ್ರಕ್ರಿಯೆಗಳ ಹಿಂದೆ ಮನುಷ್ಯನನ್ನು ಸಹ್ಯವಾಗಿ ಹಾಗೂ ಸಂತೋಷವಾಗಿ ಇಡುವ ಒಳ್ಳೆಯ‌ ಉದ್ದೇಶವಿದೆ.‌ ಸಮುದಾಯವನ್ನು ಹಿಡಿದಿಟ್ಟುಕೊಂಡು, ಸಂಸ್ಕಾರಯುತರನ್ನಾಗಿಸುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಅವರು ಗುರುವಾರ ಯುಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ವರ್ಷ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ, ಯಕ್ಷಗಾನದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸತ್ವಯುತವಾಗಿದೆ. ಇಲ್ಲಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮನ್ನು ಸಂಸ್ಕಾರಯುತವನ್ನಾಗಿಸಿದೆ ಎಂದರು. ಯುಸ್ಕೋರ್ಡ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಗಿರೀಶ್ ಶ್ಯಾನುಭಾಗ್, ಲಾವಣ್ಯ ರಿ. ಬೈಂದೂರು ಅಧ್ಯಕ್ಷ ಬಿ. ನರಸಿಂಹ‌ ನಾಯಕ್, ಉಪ್ಪುಂದ ಸಿನಿಯರ್ ಛೇಂಬರ್ ಅಧ್ಯಕ್ಷ ಅಚ್ಚುತ ಬಿಲ್ಲವ, ಜೆಸಿಐ ಬೈಂದೂರು ಸಿಟಿ ಅಧ್ಯಕ್ಷೆ ಅನಿತಾ ಆರ್. ಕೆ. ಉಪಸ್ಥಿತರಿದ್ದರು. ಬಳ್ಳಾರಿಯ ರಂಗಭೂಮಿ‌ ಕಲಾವಿದೆ ಸುಮಂಗಲಾ ಅವರನ್ನು ಸನ್ಮಾನಿಸಲಾಯಿತು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ನೂತನವಾಗಿ ನಿರ್ಮಾಣವಾಗುವ ರಂಗ ಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮ ಡಿ.19ರಂದು ನಡೆಯಿತು. ಹಿರಿಯ ನಾಗರಿಕರಾದ ವಿಶ್ವೇಶ್ವರ ಅಡಿಗ ಶಂಕುಸ್ಥಾಪನೆ ನೆರವೇರಿಸಿ, ಸರಕಾರಿ ಶಾಲೆಯನ್ನು ಉಳಿಸಿ, ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು. ಡಾ. ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ, ನಮ್ಮೂರ ಶಾಲೆಯನ್ನು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದತ್ತು ಸ್ವೀಕಾರ ಮಾಡಿ ವಿದ್ಯಾರ್ಥಿಗಳ  ಕಲಿಕೆಗೆ ಪೂರಕವಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಾಗಿದೆ. ಶಾಲಾ ವಾಹನ ಒದಗಿಸಲಾಗಿದೆ, ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ, ಸ್ಮಾಟ್ ಕ್ಲಾಸ್ ಸೇರಿದಂತೆ ಖಾಸಗಿ ಶಾಲೆಗಳಿಗೆ ಪೈಪೊಟಿಯಂತೆ ಮಾದರಿ ಶಾಲೆಯನ್ನಾಗಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ನಾವು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಲು ಎಲ್ಲರು ಶ್ರಮಿಸಬೇಕು ಎಂದರು. ಉದ್ಯಮಿ ಭಾಸ್ಕರ್ ಪೂಜಾರಿ ಬಿಜೂರು, ಸವಿತಾ ದಿನೇಶ್ ಗಾಣಿಗ, ಶ್ರೀಧರ್ ಬಿಜೂರು, ನಿವೃತ್ತ ಮುಖ್ಯಶಿಕ್ಷಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ಇದರ ವತಿಯಿಂದ ಆಯೋಜಿಸಲಾದ 10 ದಿನಗಳ ಕಸೂತಿ ವಿನ್ಯಾಸ ತರಬೇತಿಯ ಸಮಾರೋಪವು ಗಂಗೊಳ್ಳಿಯ ಸ.ವಿ. ಪದವಿ ಪೂರ್ವ ಕಾಲೇಜಿನ ಲೈಬ್ರೆರಿ ಹಾಲಿನಲ್ಲಿ ನಡೆಯಿತು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬೈಂದೂರು ಕ್ಲಬ್‌ನ ಅಧ್ಯಕ್ಷೆ ಗುಲಾಬಿ ಪೂಜಾರ್ತಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತರಬೇತಿ ಶಿಕ್ಷಕಿ ರಮ್ಯ, ಆಶ್ರಯ ಹೊಲಿಗೆ ತರಬೇತಿ ಸಂಸ್ಥೆಯ ಶಿಕ್ಷಕಿ ಶಾಂತಿ ಖಾರ್ವಿ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಅನುಕೂಲವಾಗುವಂತೆ ಅಗತ್ಯ ಮೂಲಭೂತ ಸೌಕರ್ಯಗಳಾದ ಭೂಮಿ ವಿದ್ಯುಚ್ಛಕ್ತಿ ಸೌಕರ್ಯ ರಸ್ತೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿ ಸಾರ್ವಜನಿಕರಿಗೆ ಉದ್ಯೋಗ ದೊರೆಯುವಂತೆ ಕಾರ್ಯಪ್ರವೃತರಾಗಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಹಾಗೂ ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 155 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಗುರುತಿಸಿದ್ದು, ಈ ಭೂಮಿಗಳ ಭೂ ಸ್ವಾಧೀನ ಪ್ರಕ್ರೀಯೆಗಳನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಿ ಭೂಮಿಯನ್ನು ಕೆ.ಐ.ಡಿ.ಬಿ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದರು. ಬೆಳಪು ಕೈಗಾರಿಕಾ ಪ್ರದೇಶ ಸಂಪರ್ಕ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಜಮೀನನ್ನು ವಿಶೇಷ ಭೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಕನ್ನಡ ಜಾನಪದ ಪರಿಷತ್ ಬೈಂದೂರು ತಾಲೂಕು ಘಟಕ ಹಾಗೂ ಕಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು. ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನಾಡಿನ ಕನ್ನಡ ಜಾನಪದ ಸಾಹಿತ್ಯವು ಎಲ್ಲಾ ಸಾಹಿತ್ಯಕ್ಕೆ ತಾಯಿ ಬೇರು ಇದ್ದಹಾಗೆ ಇಂಥ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ನೀಡುವ ಕೆಲಸವು ಇಂದಿನ ವಿದ್ಯಾರ್ಥಿಗಳಿಂದ ಆಗಬೇಕಿದೆ. ಆ ಕುರಿತಾಗಿ ಕನ್ನಡ ಜಾನಪದ ಪರಿಷತ್ತಿನ ರಾಜ್ಯದ್ಯಕ್ಷರಾದ ಡಾ. ಎಸ್ ಬಾಲಾಜಿ ಅವರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದ್ಯಂತ ಸಂಚರಿಸಿ ಜನಪದ ಸಾಹಿತ್ಯ ಹಾಗೂ ಜಾನಪದ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿದ್ದಾರೆ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಇಂತಹ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಗಣಪತಿ ಅವ್ರತ ವಹಿಸಿದ್ದರು. ಈ ವೇಳೆ ಉಪ್ಪುಂದ ಯಕ್ಷಗಾನದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲದ ಕಚೇರಿಯಲ್ಲಿ 11ನೇ ಬೂತಿನ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರ ಆಯ್ಕೆ ನಡೆಯಿತು. ಬೂತಿನ ಅಧ್ಯಕ್ಷರಾಗಿ ರತ್ನಾಕರ್ ಕುಂದಾಪುರ, ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಕೆ. ಮತ್ತು ಸಮಿತಿಗೆ ಒಟ್ಟು 12 ಜನರನ್ನು ಆಯ್ಕೆ ಮಾಡಲಾಯಿತು. ಶಕ್ತಿಕೇಂದ್ರ ಸಹಯೋಗಿ ರಾಜೇಶ್ ಕಡ್ಗಿಮನೆ ಚುನಾವಣೆ ನಡೆಸಿಕೊಟ್ಟು ಹೊಸ ಸಮಿತಿಗೆ ಶುಭ ಕೋರಿದರು. ಪ್ರಾಸ್ತಾವಿಕ ಮಾತನಾಡಿದ ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಚುನಾವಣಾ ಅಧಿಕಾರಿ ರಾಜೇಶ್ ಕಾವೇರಿ ಬೂತ್ ಸಮಿತಿಯ ಕಾರ್ಯವಿಸ್ತಾರ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ರತ್ನಾಕರ ಕುಂದಾಪುರ ಸ್ವಾಗತಿಸಿ, ನೂತನ ಕಾರ್ಯದರ್ಶಿ ನವೀನ್ ಕುಮಾರ್ ಕೆ. ವಂದನಾರ್ಪಣೆಯನ್ನು ಮಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಉಡುಪಿ, ಡಾ. ಶಿವರಾಮ ಕಾರಂತ  ಟ್ರಸ್ಟ್ ಕೊಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ಕಾರಂತ ಬಾಲಪುರಸ್ಕಾರಕ್ಕೆ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ  10ನೇ ತರಗತಿ ವಿದ್ಯಾರ್ಥಿನಿ ಮನ್ವಿತಾ. ಎಸ್ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸೇನಾಪುರ ಸಮೀಪ ಹೆಚ್ಚೇನು ದಾಳಿಗೆ ಸಿಲುಕಿ ಮೂವರು ಗಾಯಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹೆಮ್ಮಾಡಿ ನಿವಾಸಿ ಯೂಸುಫ್ ಸಾಹೇಬ್ (62) ಮೃತಪಟ್ಟವರು. ಗುಜರಿ ವ್ಯಾಪಾರ ಮಾಡಿಕೊಂಡಿದ್ದ ಅವರು ಬಗ್ವಾಡಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಏಕಾಏಕಿ ಹೆಚ್ಚೇನು ದಾಳಿ ನಡೆಸಿತು. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇತ್ತೀಚಿಗೆ ದೆಹಲಿಯ ಕಿಯೋದಲ್ಲಿ ನಡೆದ ಅಖಿಲ ಭಾರತ ಸಬ್ ಜೂನಿಯರ್ ಕರಾಟೆ ಚಾಂಪಿಯನ್‌ಶಿಪ್‌ 2024ರಲ್ಲಿ 13  ವಯೋಮಿತಿಯ 52 ಕೆಜಿ ಕುಮಿಟೆ ವಿಭಾಗದಲ್ಲಿ ವಕ್ವಾಡಿ  ಗುರುಕುಲ ಪಬ್ಲಿಕ್ ಸ್ಕೂಲ್ಕ್‌ನ ಎಂಟನೇ ತರಗತಿಯ ವಿದ್ಯಾರ್ಥಿನಿ ಝಾರಾ ಕಂಚಿನ ಪದಕ ಪಡೆದಿದ್ದಾಳೆ. ಸಬ್ ಜೂನಿಯರ್ 11  ವಯೋಮಿತಿಯ 45 ಕೆಜಿ ಕುಮಿಟೆ ವಿಭಾಗದಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿ ಸಾನಿಧ್ಯಾ ಸಂತೋಷ್ ನಾಯ್ಕ್‌ ಬೆಳ್ಳಿ ಪದಕ ಪಡೆದಿದ್ದಾಳೆ. ಈ ಕ್ರೀಡಾಕೂಟದಲ್ಲಿ ಬೇರೆ ಬೇರೆ ರಾಜ್ಯದ ಕ್ರೀಡಾಳುಗಳು ಭಾಗವಹಿಸಿದ್ದರು. ಅವರಿಬ್ಫರೂ ಕುಂದಾಪುರದ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ ಮತ್ತು ಶಿಹಾನ್ ಸಂದೀಪ್ ವಿ.ಕೆ. ಅವರಿಂದ ತರಬೇತಿ ಪಡೆಯುತ್ತಿದ್ದಾರೆ . ವಿದ್ಯಾರ್ಥಿನಿಯರ ಈ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಪ್ರಶಂಸಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ದೇವರಿಗೆ ಕುಂಭಾಬಿಷೇಕ ಮಾಡುವುದರಿಂದ ಆಯುಷ್ಯ, ಶ್ರಿಯ ಪ್ರಾಪ್ತಿಯಾಗುತ್ತದೆ. ಮಾಡಿದ ಕೆಲಸ ಅಕ್ಷಯವಾಗುತ್ತದೆ. ಜೀವನದಲ್ಲಿ ಕೀರ್ತಿ ಪ್ರಾಪ್ತಿಯಾಗುತ್ತದೆ. ಯೋಗ್ಯತೆಗೆ ತಕ್ಕಂತೆ ಫಲ, ಪುಣ್ಯ ಸಿಗುತ್ತದೆ. ಸಹಸ್ರ ಕನಕಾಭಿಷೇಕ ಮಾಡುವುದರಿಂದ ದೇಶಕ್ಕೆ, ಸಮಾಜಬಾಂಧವರಿಗೆ ಒಳಿತಾಗುತ್ತದೆ. ಸುಮಾರು 475 ವರ್ಷ ಇತಿಹಾಸವುಳ್ಳ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನವು ಜೀರ್ಣೋದ್ಧಾರಗೊಂಡು, ಬಳಿಕ ಬ್ರಹ್ಮ ರಥೋತ್ಸವ, ಸಹಸ್ರ ಕುಂಭಾಬಿಷೇಕ ನಡೆದು ಸಮಾಜದಲ್ಲಿ ಅಭಿವೃದ್ಧಿ ಕಾಣುವಂತಾಗಿದೆ. ಇಂದು ಶ್ರೀದೇವಿಗೆ ಸಹಸ್ರಾಧಿಕ ಅಷ್ಟತ್ತರ ಶತ (1108) ಸ್ವರ್ಣ ನಾಣ್ಯ ಸಹಿತ ರಜತ ಕುಂಭಾಭಿಷೇಕ ನಡೆದಿದ್ದು, ಇದರ ಪುಣ್ಯದ ಫಲ ಸಮಸ್ತ ಸಮಾಜಬಾಂಧವರಿಗೆ ಪ್ರಾಪ್ತಿಯಾಗಿ ಉತ್ತರೋತ್ತರ ಅಭಿವೃದ್ಧಿ ಆಗಲಿ ಎಂದು ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಹೇಳಿದರು. ಅವರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಜೀರ್ಣೋದ್ಧಾರ ಪುನಃ ಪ್ರತಿಷ್ಠಾ ರಜತ ಮಹೋತ್ಸವ ಪ್ರಯುಕ್ತ ಶ್ರೀದೇವಿಗೆ ಸಹಸ್ರಾಧಿಕ ಅಷ್ಟತ್ತರ ಶತ ಸ್ವರ್ಣ ನಾಣ್ಯ ಸಹಿತ ರಜತ ಕುಂಭಾಭಿಷೇಕವು ನೆರವೇರಿಸಿ ಆಶೀರ್ವಚನ…

Read More