ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪರಿಸರ ಸ್ನೇಹಿ ಕಾರ್ಯಕ್ರಮಗಳೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ನಾಲ್ಕನೇಯ ಬಾರಿಗೆ ರಾಷ್ಟ್ರಮಟ್ಟದ ಪ್ರತಿಷ್ಟಿತ ಗ್ರೀನ್ ಸ್ಕೂಲ್ ಅವಾರ್ಡನ್ನು ತನ್ನದಾಗಿಸಿಕೊಂಡು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಈ ಪ್ರಶಸ್ತಿಯನ್ನು ಪಡೆದ ಉಡುಪಿ ಜಿಲ್ಲೆಯ ಏಕೈಕ ಶಾಲೆ ಎಂಬ ಹಿರಿಮೆಗೆ ಪಾತ್ರವಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆಂಟರ್ ಫಾರ್ ಸೈನ್ಸ್ ಮತ್ತು ಎನ್ವಿರಾನ್ಮೆಂಟ್ (ಸಿಎಸ್ಇ) ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿ 9,000 ಕ್ಕೂ ಹೆಚ್ಚು ಶಾಲೆಗಳು ಸ್ಪಧೆಯಲ್ಲಿ ಭಾಗವಹಿಸಿದ್ದವು. ಶುದ್ಧ ಗಾಳಿ, ಇಂಧನ, ಆಹಾರ, ಭೂಮಿ, ನೀರು, ತ್ಯಾಜ್ಯದ ವ್ಯವಸ್ಥಿತ ನಿರ್ವಹಣೆಯ ಮಾನದಂಡದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಡೆಲ್ಲಿಯ ಇಂಡಿಯನ್ ಹೆಬಿಟ್ಯಾಟ್ನ ಸ್ಟೈನ್ ಅಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿದ್ದು, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಮತ್ತು ಶಾಲೆಯ ಆಡಳಿತಾಧಿಕಾರಿ ವೀಣಾರಶ್ಮಿ ಎಮ್. ಸಮಾರಂಭದಲ್ಲಿ ಪಾಲ್ಗೊಂಡು, ಸಂಸ್ಥೆಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಬೈಂದೂರು ಬ್ಲಾಕ್ ಅಧ್ಯಕ್ಷರನ್ನಾಗಿ ಮೊಹಮ್ಮದ್ ಹಾರೀಸ್ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರ ಶಿಪಾರಸ್ಸಿನ ಮೇರೆಗೆ ರಾಜ್ಯಧ್ಯಕ್ಷ ಡಾ. ಸಿ.ಇ. ರಂಗಸ್ವಾಮಿ ಅವರು ನೇಮಕ ಮಾಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯನ್ನು ಕೊಡಲಾಯಿತು. ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಿ ಪೋಷಕರು ಹಾಗೂ ಶಾಲೆಗೆ ಕೀರ್ತಿ ತರುವಂತವರಾಗಲಿ ಎಂದು ಶುಭ ಹಾರೈಸಿದರು. ಶಾಲಾ ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ. ಹೆಚ್. ಅವರು ಮುಂದಿನ ಉನ್ನತ ವಿದ್ಯಾಭ್ಯಾಸದ ಮಾರ್ಗದರ್ಶನ ನೀಡಿದರು. ಒಂಭತ್ತನೇ ತರಗತಿಯ ವಿದ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಆಯೋಜಿಸಿ ವಿವಿಧ ಸ್ಪರ್ಧೆಗಳನ್ನು ನಡೆಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಿರಂತರ 10 ವರ್ಷಗಳನ್ನು ಕಳೆದು ಹಲವು ಸವಿನೆನಪುಗಳನ್ನು ತಮ್ಮ ನೆನಪಿನ ಬುತ್ತಿಯಲ್ಲಿಟ್ಟುಕೊಂಡು ಮುಂದೆ ಸಾಗುವ ಅನಿವಾರ್ಯತೆಯಿಂದ ವಿದ್ಯಾರ್ಥಿಗಳು ಭಾವುಕರಾದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ನಿತಿನ್ ಡಿ. ಆಲ್ಮೇಡಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ರೋಹಿಣಿ ಕಾರ್ಯಕ್ರಮ ಸಂಘಟಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೈಲು ಡಿಕ್ಕಿ ಹೊಡೆದು ಯುವಕ ಮೃತಪಟ್ಟ ಘಟನೆ ಕಿರಿಮಂಜೇಶ್ವರ ಗ್ರಾಮದ ನಾಗೂರಿನಲ್ಲಿ ನಡೆದಿದೆ. ಮೃತನನ್ನು ಬಿಜೂರು ಗ್ರಾಮದ ದೀಟಿಮನೆ ನಿವಾಸಿ ವಾಸುದೇವ ದೇವಾಡಿಗ (25) ಎಂದು ಗುರುತಿಸಲಾಗಿದೆ. ಸೆಂಟ್ರಿಂಗ್ ವೃತ್ತಿ ಮಾಡಿಕೊಂಡಿರುವ ಅವರು ಕಲ್ಲಂಗಡಿ ಬೆಳೆಗಾರರು. ಫೆ.4ರಂದು ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭ ರೈಲ್ವೆ ಹಳಿಯ ವಾಹನ ನಿಲ್ಲಿಸಿ ತಾನು ಬೆಳೆದ ಕಲ್ಲಂಗಡಿ ಹಣ್ಣು ಲೋಡ್ ಮಾಡಿ ರಸ್ತೆಯಲ್ಲಿ ಜತೆ ಕೆಲಸಗಾರ ರೊಂದಿಗೆ ಮಾತನಾಡಿಕೊಂಡು ಹೋಗೋಣ ಎಂದು ರೈಲ್ವೆ ಹಳೆ ದಾಟುವ ವೇಳೆ ಆಕಸ್ಮಿಕವಾಗಿ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ತಪ್ಪಿಸಿಕೊಳ್ಳಲು ಅವರು ಯತ್ನಿಸಿದರಾದರೂ ದುರ್ದೈವ ಎಂಬಂತೆ ಮುಖ ಭಾಗಕ್ಕೆ ರೈಲು ಡಿಕ್ಕಿ ಹೊಡೆದು ಉರುಳಿದ್ದು, ತಲೆಗೆ ಗಂಭೀರ ಏಟು ತಗುಲಿ ಸಾವನ್ನಪ್ಪಿದ್ದಾರೆ. ಸಹೋದರ ವಿಕ್ರಮ್ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಯುವ ಬಂಟರ ಸಂಘದ ವತಿಯಿಂದ ಉಡುಪಿಯ ಕೊಳಲಗಿರಿಯ ಸಮೀಪ ಇರುವ ಹೋಂ ಡಾಕ್ಟರ್ ಫೌಂಡೇಶನ್ನ ಆಡಳಿತಕ್ಕೂಳಪಟ್ಟ ಸ್ವರ್ಗ ಅಸಹಾಯಕರ ಅರಮನೆ ಅನಾಥಾಶ್ರಮಕ್ಕೆ 35000 ರೂಪಾಯಿ ಮೌಲ್ಯದ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ಹಾಗೂ ಆಶ್ರಮಕ್ಕೆ ಬೇಕಾದ 10000 ಮೌಲ್ಯದ ದಿನಬಳಕೆಯ ವಸ್ತುಗಳನ್ನು ಸಂಘದ ವತಿಯಿಂದ ಸಂಘದ ಗೌರವಾಧ್ಯಕ್ಷರಾದ ವತ್ಸಲಾ ದಯಾನಂದ ಶೆಟ್ಟಿ ಹೋಮ್ ಡಾಕ್ಟರ್ ಫೌಂಡೇಶನ್ ನ ಆಡಳಿತ ನಿರ್ದೇಶಕ ಡಾ. ಶಶಿಕಿರಣ್ ಶೆಟ್ಟಿ ಅವರಿಗೆ ಹಸ್ತಾಂತರ ಮಾಡಿದರು. ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು, ಸ್ಥಾಪಕಾಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ , ನಿಮಿತ ಶೆಟ್ಟಿ ಮತ್ತು ಸ್ವರ್ಗ ಆಶ್ರಮದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅನಿವಾರ್ಯ ವೆಚ್ಚಗಳಿಗೆ ಹಣ ವ್ಯಹಿಸಿ ಹಾಗೂ ಐಷರಾಮಿ ವೆಚ್ಚವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ನೆಮ್ಮದಿಯ ಜೀವನ ಸಾಧ್ಯ. ಹಣವನ್ನು ಸಂಪಾದಿಸುವುದು ಕಲೆ, ಆದರೆ ಅದನ್ನು ಸಮರ್ಪಕವಾಗಿ ಬಳಸುವುದು ಮಹಾನ್ ಕಲೆ ಎಂದು ಆರ್ಥಿಕ ಸಾಕ್ಷರತಾ ತಜ್ಞೆ ಸಪ್ನಾ ಶೆಣೈ ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಘಟಕ – ಸಕ್ಷಮ ವೇದಿಕೆಯ ಅಡಿಯಲ್ಲಿ ಮೂಡುಬಿದಿರೆ ಇನ್ನರ್ ವ್ಹೀಲ್ ಕ್ಲಬ್ ಹಾಗೂ ಮೂಡುಬಿದಿರೆ ಬಂಟ್ಸ್ ಮಹಿಳಾ ಸಂಘದ ಸಹಯೋಗದಲ್ಲಿ ಕಾಲೇಜಿನ ಕುವೆಂಪು ಸಭಾಭವನದಲ್ಲಿ ಬುಧವಾರ ’ಆರ್ಥಿಕ ಅರಿವಿನ ಮೂಲಕ ಮಹಿಳೆಯರ ಬಲಪಡಿಸುವಿಕೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಹೆಚ್ಚಿನ ಸಮಯ ಹಣವನ್ನು ಸಂಪಾದಿಸಲು ಮತ್ತು ಖರ್ಚು ಮಾಡಲು ಕಳೆಯುತ್ತೇವೆ. ಬಹುತೇಕ ಜನರು “ಆದಾಯ – ಖರ್ಚು – ಉಳಿವು” ಎಂಬ ನೀತಿಯಂತೆ ಜೀವನ ಸಾಗಿಸುತ್ತಾರೆ. ಆದರೆ, ಇದು ಹೆಚ್ಚು ಆರ್ಥಿಕ ಒತ್ತಡವನ್ನು ತರಬಲ್ಲದು. ಬದಲಾಗಿ, “ಆದಾಯ – ಉಳಿವು – ಖರ್ಚು” ಎಂಬ ತತ್ವವನ್ನು ಅನುಸರಿಸಿದರೆ ಸುಖ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಶ್ವ ರಾಮಕ್ಷತ್ರಿಯ ಮಹಾಸಂಘ ರಿ. ಕುಂದಾಪುರ ಮತ್ತು ರಾಮಕ್ಷತ್ರಿಯ ಸಂಘಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದು ದಿನದ ಉಚಿತ ಮಾಹಿತಿ ಕಾರ್ಯಗಾರವು ಫೆ.09 ಆದಿತ್ಯವಾರದಂದು ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 2-30ರ ವರೆಗೆ ಬ್ರಹ್ಮಾವರ ತಾಲೂಕಿನ ಉಪ್ಪೂರು ರಾಮಕ್ಷತ್ರಿಯ ಸಭಾಭವನದಲ್ಲಿ ನಡೆಯಲಿದೆ. ಬೆಂಗಳೂರಿನ ಐ.ಎ.ಎಸ್ ದರ್ಶನ ಸಂಸ್ಥೆಯ ಮುಖ್ಯಸ್ಥರಾದ ದರ್ಶನ್ ಗರ್ತಿಕೆರೆ ಈ ಕಾರ್ಯಗಾರ ನಡೆಸಿಕೊಡಲಿದ್ದಾರೆ. ಇವರೊಂದಿಗೆ ನಮ್ಮ ಸಮಾಜದ ಸಾಧಕರು ಉನ್ನತ ಹುದ್ದೆಯಲ್ಲಿರುವವರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಸ್ಪರ್ಧಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರಾದ ಎಚ್.ಆರ್. ಶಶಿಧರ ನಾಯ್ಕ, ಕಾರ್ಯದರ್ಶಿ ಶ್ರೀಧರ್ ಪಿ.ಎಸ್ ಅವರು ಕೋರಿದ್ದಾರೆ. ಕಾರ್ಯಗಾರದ ಉದ್ಘಾಟನೆಯನ್ನು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರಾದ ಎಚ್.ಆರ್. ಶಶಿಧರ ನಾಯ್ಕ ಅವರು ನೆರವೆರಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಡುಪಿ ರಾಮಕ್ಷತ್ರಿಯ ಸಂಘ ರಿ. ಅಧ್ಯಕ್ಷರಾದ ಕೆ.ಟಿ. ನಾಯ್ಕ ಅವರು ವಹಿಸಲಿದ್ದಾರೆ. ಮುಖ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಿ. ಮೈಸೂರಿನ ನಲಿಕಲಿ ಶಿಕ್ಷಕರ ಸಮಿತಿ ವತಿಯಿಂದ ಹಮ್ಮಿಕೊಂಡ ಚಿತ್ರ ಕೊಂದು ಕಥೆ ರಾಜ್ಯಮಟ್ಟದ ಶಾರ್ಟ್ ವಿಡಿಯೋ ಕಥಾ ಸ್ಪರ್ಧೆಯಲ್ಲಿ ಆರಾಧ್ಯ ಎ. ಎಂ. ಅವಳು ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಈಕೆ ತಗ್ಗರ್ಸೆ ಗ್ರಾಮದ ಹಳ್ಳಿ ಹೊಸೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ವಿಧಾನ ಸಭೆ ಸಚಿವಾಲಯದಿಂದ ಪ್ರಥಮ ಬಾರಿಗೆ ನಾಡಿನ ಜನತೆಗೆ ಅತೀ ಅಮೂಲ್ಯವಾದ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಕರ್ನಾಟಕ ವಿಧಾನ ಸಭಾ ಸಚಿವಾಲಯದ ವತಿಯಿಂದ ಫೆಬ್ರವರಿ 27 ರಿಂದ ಮಾರ್ಚ್ 3 ರ ವರೆಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಪುಸ್ತಕ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ನಾಡಿನ ಪ್ರಕಾಶಕರು / ಮಾರಾಟಗರಾರು ನಿಗದಿತ ಅರ್ಜಿ ನಮೂನೆಯನ್ನು ಮುಖ್ಯ ಗ್ರಂಥಪಾಲಕರು, ಕರ್ನಾಟಕ ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು, ಇವರಿಂದ ಅಥವಾ ವಿಧಾನಸಭೆ ಸಚಿವಾಲಯದ ವೆಬ್ಸೈಟ್ www.kla.kar.nic.in ನಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಮೇಳದಲ್ಲಿ ಭಾಗವಹಿಸುವ ಪ್ರಕಾಶಕರು/ಮಾರಾಟಗಾರರು ಮಳಿಗೆಯೊಂದಕ್ಕೆ 1,000 ರೂ.ಗಳ ಭದ್ರತಾ ಠೇವಣಿ ಡಿ.ಡಿ ಯನ್ನು ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು ಇವರ ಹೆಸರಿನಲ್ಲಿ ಸಲ್ಲಿಸುವುದು. ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ 2025 ನೇ ಫೆಬ್ರವರಿ 12 ರಂದು ಸಂಜೆ 5.00 ಗಂಟೆಯೊಳಗೆ ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಚಿಂತನೆಗಳಿಲ್ಲದ ಮನುಷ್ಯ, ಮನಸ್ಸಿಲ್ಲದ ದೇಹ ಯಾವಾಗಲೂ ನಿರ್ಜಿವ ಸ್ಥಿತಿಯಲ್ಲಿರುತ್ತದೆ. ಹಣದ ವ್ಯಾಮೋಹದಿಂದ ದೂರವಾದಾಗ ಸಾಹಿತ್ಯ, ನೃತ್ಯ, ಸಂಗೀತಗಳು ಮೌಲ್ಯವಾಗಿ ಕೊರೆಯುತ್ತಿರುತ್ತದೆ. ಶ್ರೀಮಂತಿಕೆಯ ಉದ್ದೇಶಕ್ಕಿಂತ ಧೀಮಂತ ಮನುಷ್ಯರಾಗುವ ಕನಸು ಕಾಣುವಂತಾಗಬೇಕು ಎಂದು ಮೂಡಬಿದ್ರೆ ಆಳ್ವಾಸ ಶಿಕ್ಷಣ ಪ್ರತಿಷ್ಠಾನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನರಾಂ ಸುಳ್ಯ ಹೇಳಿದರು. ಲಾವಣ್ಯ ಬಂದೂರು ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬಂದೂರು ತಾಲೂಕು ಘಟಕ ಹಾಗೂ ಅಶೋಕ ಜ್ಯುವೆಲ್ಲರ್ಸ್ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಜೆಎನ್ಆರ್ ಕಲಾಮಂದಿರದ ಹೊರಾಂಗಣದಲ್ಲಿ ಮೂಡಬಿದ್ರೆ ಆಳ್ವಾಸ ಶಿಕ್ಷಣ ಪ್ರತಿಷ್ಠಾನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ನಾಟಕ ಪ್ರದರ್ಶನದ ಪೂರ್ವದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು. ರಂಗಭೂಮಿ ಶ್ರಮಜೀವಿಗಳ ಲೋಕ. ವೇದನೆಯನ್ನು ಹಾಡಾಗಿಸಿ, ಸಮುದಾಯವನ್ನು ತಲುಪುವ ಪ್ರಕ್ರಿಯೆಯಲ್ಲಿ ಅದು ನಿರತವಾಗಿದೆ. ಸುಖ:-ದುಖ:ವನ್ನು ಚಂದವಾಗಿ ಅಭಿವ್ಯಕ್ತಿಗೊಳಿಸಲು ರಂಗಭೂಮಿಯಿಂದ ಮಾತ್ರ ಸಾಧ್ಯ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.…
