ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿನ ತಾಮ್ರಪಟ ಶಾಸನವು, 46 ಸೆ.ಮೀ. ಉದ್ದ, 33 ಸೆ.ಮೀ. ಅಗಲ ಮತ್ತು 3 ಮಿ.ಮೀ. ದಪ್ಪವಿರುವ ಏಕೈಕ ತಾಮ್ರದ ಹಾಳೆಯಾಗಿದೆ. ಆಯತಾಕಾರದ ಈ ತಾಮ್ರಪಟದ ಎರಡೂ ಬದಿ ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಕಂಡರಿಸಿದ ಬರವಣಿಗೆಯಿದೆ. ಶಾಸನದ ಮುಮ್ಮುಖದಲ್ಲಿ ಹದಿನೇಳು ಸಾಲಿನ ಬರವಣಿಗೆ ಇದೆ, ಹಿಮ್ಮುಖದಲ್ಲಿ ಹದಿಮೂರು ಸಾಲುಗಳ ಬರಹವಿದೆ. ಶಾಸನವು ಶೈವಸ್ತುತಿಯೊಂದಿಗೆ ಆರಂಭವಾಗಿದ್ದು, ನಂತರ ಶಾಲಿವಾಹನ ಶಕ ವರುಷ 1,666 ನೆ ರುಧಿರೋದ್ಗಾರಿ ಸಂವತ್ಸರದ ಆಷಾಢ ಬ 5 ಯಲ್ಲು ಎಂಬ ಕಾಲಮಾನದ ಉಲ್ಲೇಖವಿದೆ. ಶಾಸನೋಕ್ತ ಕಾಲಮಾನವು ಕ್ರಿ.ಶ. 1744ರ ಜುಲೈ 4ಕ್ಕೆ ಸರಿಹೊಂದುತ್ತದೆ. ನಂತರ ಶ್ರೀಮದ್ ಎಡವ ಮುರಾರಿ, ಕೋಟೆ ಕೋಟೆ ಕೋಳಾಹಳ ವಿಶುಧ ವೈದಿಕ ಸಿದ್ಧಾಂತ ಪ್ರತಿಷ್ಠಾಪಕ ಕೆಳದಿ ಸದಾಶಿವರಾಯ ನಾಯಕರ ವಂಶೋದ್ಭವ ಸೋಮಶೇಖರ ನಾಯಕರ ಧರ್ಮಪತ್ನಿ ಚೆನ್ನಮ್ಮಾಜಿಯವರ ಪ್ರಪೌತ್ರರು ಬಸವಪ್ಪ ನಾಯಕರ ಪೌತ್ರರು ಸೋಮಶೇಖರ ನಾಯಕರ ಅನುಜ ವೀರಭದ್ರ ನಾಯಕರ ಪುತ್ರರು ಬಸವಪ್ಪ ನಾಯಕರು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ:ತಾಲೂಕಿನ ಗಿನ್ನೆಸ್ ವಿಶ್ವದಾಖಲೆಯನ್ನು ಸೃಷ್ಟಿಸಿರುವ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯು ಬ್ರೈನ್ ಪೀಡ್ ಸಂಸ್ಥೆ ಅವರು ಕೊಡಮಾಡುವ ಅತ್ಯುತ್ತಮ ಸಹಪಠ್ಯ ಚಟುವಟಿಕೆಗಳು, ಅತ್ಯುತ್ತಮ ಬೋರ್ಡಿಂಗ್ ಶಾಲೆ, ಶಿಕ್ಷಣದಲ್ಲಿ ಜೀವನ ಕೌಶಲ್ಯಗಳ ಸಹಭಾಗಿತ್ವ ಈ ಮೂರು ಪ್ರತಿಷ್ಠಿತ ಶ್ರೇಣಿಗಳಲ್ಲಿ 2024-25ನೇ ಸಾಲಿನ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್ಸ್ ಪಡೆದುಕೊಂಡಿತು. ಪ್ರಶಸ್ತಿ ಪ್ರದಾನ ಸಮಾರಂಭವು ಡಿ.6ರಂದು ಹೈದ್ರಾಬಾದ್ನ ಹಿಟೆಕ್ಸ್ನಲ್ಲಿ ನಡೆದಿದ್ದು, ಶಾಲೆಯ ಸಂಯೋಜಕರಾದ ಸವಿತಾ ಭಟ್ ಶಾಲೆಯ ವತಿಯಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ “ನಮ್ಮ ಶಾಲೆಯು ನೀಡುತ್ತಿರುವ ಅತ್ಯದ್ಭುತ ಶೈಕ್ಷಣಿಕ ಕೊಡುಗೆಗಳಿಗೆ ಸಂದ ಗೌರವವಿದಾಗಿದ್ದು, ನಾವು ನಮ್ಮಯ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಅವರಿಗೆ ಅತ್ಯಾವಶ್ಯಕವಾದ ಜೀವನ ಕೌಶಲ್ಯಗಳನ್ನು ಕಲಿಸಿಕೊಡುವಲ್ಲಿ ವಿಶೇಷ ಪ್ರಾಧಾನ್ಯತೆಯನ್ನು ನೀಡುತ್ತಿದ್ದೇವೆ. ಈ ಗೌರವ ನಮ್ಮೆಲ್ಲರಿಗೆ ಹೆಮ್ಮೆ ತಂದಿದೆ. ಶಾಲೆಯ ಈ ಗುರುತರ ಸಾಧನೆಗೆ ನಮ್ಮ ಪ್ರಾಂಶುಪಾಲರಾದ ಶರಣ ಕುಮಾರರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನ, ಆಡಳಿತಾಧಿಕಾರಿಗಳಾದ ವೀಣಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಯುವಮಾನಸ ಗಾಣಿಗ ಎಜುಕೇಷನಲ್ ಟ್ರಸ್ಟ್ನ ಕಚೇರಿಯಲ್ಲಿ ಶನಿವಾರದಂದು ನಡೆದ ಟ್ರಸ್ಟ್ನ ಕಾರ್ಯಕಾರಿ ಸಭೆಯಲ್ಲಿ ಮಂಜುನಾಥ್ ಶಿಕಾರಿಪುರ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಸವಿತಾ ದಿನೇಶ ಬೈಂದೂರು, ಜೊತೆ ಕಾರ್ಯದರ್ಶಿಯಾಗಿ ಸುಬ್ರಮಣ್ಯ ಜಿ. ಉಪ್ಪುಂದ ಹಾಗೂ ಕೋಶಾಧಿಕಾರಿಯಾಗಿ ಅನಂತ ಗಾಣಿಗ ಅವರನ್ನು ಆಯ್ಕೆ ಮಾಡಲಾಯಿತು. ಯುವ ಮಾನಸ ಗಾಣಿಗ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ ಕಳೆದ 3 ವರ್ಷಗಳ ಹಿಂದೆ ಎಚ್. ಸುಬ್ಬಯ್ಯ ಶಿವಮೊಗ್ಗ ಇವರ ಕನಸಿನ ಕೂಸಿನಂಥೆ ತನ್ನ ಹುಟ್ಟೂರಾದ ಉಪ್ಪುಂದದಲ್ಲಿ ಆರಂಭಿಸಿ, ಗಾಣಿಗ ಸಮುದಾಯದ ಮಕ್ಕಳ ವಿದ್ಯಾಭ್ಯಾಸ ನೆರವಿಗೆ ಮತ್ತು ಸರ್ಕಾರ ಮಟ್ಟದ ಅತ್ಯುನ್ನತ ಹುದ್ದೆ ಗಿಟ್ಟಿಸಲು ಅವಶ್ಯವಾದ ತರಬೇತಿಯನ್ನು ನೀಡುತ್ತಾ ಬಂದಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟವು ಗಾಂಧಿ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಸಿವಿಲ್ ಇಂಜಿನಿಯರ್, ದೊಂಬೆ ಕಾಂಪ್ಲೆಕ್ಸ್ ಮಾಲಕರಾದ ರವೀಂದ್ರ ದೊಂಬೆ ಕ್ರೀಡಾಧ್ವಜವನ್ನು ಆರೋಹಣ ಮಾಡಿ ಮಾತನಾಡಿ, ಕ್ರೀಡಾ ಮನೋಭಾವದಿಂದ ಆಡಿ ತನು ಮನಗಟ್ಟಿ ಮಾಡಿಕೊಳ್ಳುವಂತೆ ಹೇಳಿದರು. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ ಕ್ರೀಡಾ ಜ್ಯೋತಿ ಬೆಳಗಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ವೆಂಕಟ್ರಮಣ ದೇವಾಡಿಗ ಹೇನ್ ಬೇರ್ ವಹಿಸಿದ್ದರು. ಅತಿಥಿಗಳಾಗಿದ್ದ ಪಟ್ಟಣ ಪಂಚಾಯತ್ ನ ನಾಮ ನಿರ್ದೇಶಿತ ಸದಸ್ಯರಾದ ಸದಾಶಿವ ಡಿ. ಪಡುವರಿ ಹಾಗೂ ನಾಗರಾಜ ಗಾಣಿಗ, ಜೆಸಿಐ ಬೈಂದೂರು ಮಾಜಿ ಅಧ್ಯಕ್ಷ ನರೇಂದ್ರ ಶೇಟ್ ಶುಭ ಹಾರೈಸಿದರು. ಉಪಪ್ರಾಂಶುಪಾಲರು ಧನ್ಯವಾದ ಗೈದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಭಾಕರ್ ಹಾಗೂ ಪುಷ್ಪಾ ಟಿಟಿ ಅವರೊಂದಿಗೆ ಎಲ್ಲಾ ಶಿಕ್ಷಕರೂ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಜರಗಿದ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಪೈ ಅವರನ್ನು ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ತಲ್ಲೂರಿನ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ತಾಂಡೇಲ ಮತ್ತು ನಿಕಟಪೂರ್ವ ಅಧ್ಯಕ್ಷ ಎಂ. ನಾಗೇಂದ್ರ ಪೈ ಅವರು ಪ್ರಾರ್ಥನಾ ಪೈ ಅವರನ್ನು ಸನ್ಮಾನಿಸಿ ಗೌರವಿಸಿದರು. ಮುಖ್ಯ ಅತಿಥಿಯಾಗಿ ಜೋನಲ್ ಲೆಫ್ಟಿನೆಂಟ್ ಪ್ರದೀಪ್ ಡಿ.ಕೆ., ಗಂಗೊಳ್ಳಿ ರೋಟರಿ ಮಾಜಿ ಅಧ್ಯಕ್ಷ ಉಮೇಶ ಎಲ್. ಮೇಸ್ತ, ಕಾರ್ಯದರ್ಶಿ ಮಾಲಾಶ್ರೀ ಖಾರ್ವಿ, ಪತ್ರಕರ್ತ ಬಿ. ರಾಘವೇಂದ್ರ ಪೈ, ರಾಧಿಕಾ ಆರ್.ಪೈ, ಗಂಗೊಳ್ಳಿ ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘದ ವತಿಯಿಂದ ಅಂಬೇಡ್ಕರ್ ಅವರ 68ನೇ ಪರಿ ನಿವಾ೯ಣ ದಿನವನ್ನು ಪರಿಶಿಷ್ಠ ವರ್ಗದ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ವಿತರಿಸುವುದರ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ರಮೇಶ್ ಡಿಟಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರತ್ನ ಅವರು ವಹಿಸಿದ್ದರು ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ರಾಜೇಶ್, ಗೀತಾ ಸುರೇಶ್ ಕುಮಾರ್, ರಮೇಶ್ ಮರವಂತೆ, ಶಿವರಾಜ್, ವಿನಯ, ದಯಾನಂದ್. ಪಿ, ಸಂಘದ ಮಹಿಳಾ ಸದಸ್ಯರು ಮತ್ತು ದ.ಸಂ. ಸಮಿತಿ ಸದಸ್ಯರು ವಿದ್ಯಾರ್ಥಿಗಳು ಶಿಕ್ಷಕ ವೃಂದದವರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲೆಯಲ್ಲಿನ ನಿರ್ಮಾಣ ಕಾಮಗಾರಿಗಳ ಅಗತ್ಯ ವಸ್ತುಗಳ ಪೂರೈಕೆಗೆ ಸರ್ಕಾರ ಶೀಘ್ರ ಕ್ರಮ ವಹಿಸಲಿ. ಬಿಜೆಪಿಯ ಶಾಸಕರು ತಮ್ಮ ಅಧಿಕಾರ ಚಲಾಯಿಸಿವುದನ್ನು ಬಿಟ್ಟು ಕಾರ್ಯಾoಗವನ್ನು ಬೊಟ್ಟು ಮಾಡುವುದನ್ನು ನಿಲ್ಲಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ. ಕಾಮಗಾರಿಗಳ ಅಗತ್ಯ ವಸ್ತುಗಳ ಪೂರೈಕೆಯಲ್ಲಿನ ಸಮಸ್ಯೆಗಳಿಗೆ ಶಾಸಕರುಗಳ ನಿಷ್ಕ್ರೀಯತೆಯೇ ಕಾರಣ. ಗಾಣಿಗಾರಿಕೆ, ಅಗತ್ಯ ವಸ್ತುಗಳ ಪೂರೈಕೆಗೆ ನೀತಿ, ನಿಯಮ, ಕಾನೂನುಗಳನ್ನು ರೂಪಿಸುವವರು ಶಾಸನ ಸಭೆಯ ಸದಸ್ಯರು, ಇವರು ರೂಪಿಸಿದ ನೀತಿ, ನಿಯಮ, ಕಾನೂನಿನ ಅಡಿ ಕೆಲಸ ಮಾಡುವವರು ಕಾರ್ಯಾಂಗ. ಇವತ್ತು ಜಿಲ್ಲೆಯ ಶಾಸಕರುಗಳು ಕಾರ್ಯಾಂಗದ ಮೂಲಕ ಕೆಲಸ ಮಾಡಿಸಲು ಸಾಧ್ಯವಾಗದೆ ಇರುವುದು ಶಾಸಕರುಗಳ ನಿಷ್ಕ್ರೀಯತೆಯತೆ ಕಾರಣ ಎಂದರು. ಜನಸಾಮಾನ್ಯರ ಬೇಡಿಕೆ ಪೂರೈಸುವ ಹೊಣೆಗಾರರಾಗಿರುವ ಜನಪ್ರತಿನಿದಿನಗಳು ಅದನ್ನು ಬಿಟ್ಟು ಧರಣಿ ಕೂರುತ್ತೇವೆ ಎನ್ನುವುದು ಕೇವಲ ರಾಜಕಾರಣ ಬಿಟ್ಟರೆ ಬೇರೆ ಏನೂ ಅಲ್ಲ. ಸರ್ಕಾರದ ನೀತಿ, ನಿಯಮ, ಕಾನೂನು ಜನವಿರೋಧಿ ಇದೆ ಎಂದು ಕಂಡುಬಂದರೆ ಅದನ್ನು ಸಡಿಲೀಕರಣಗೊಳಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೋವಾ ಬಂಟರ ಸಂಘದ ವತಿಯಿಂದ ಜ. 19ರಂದು ನಡೆಯಲಿರುವ ರಜತ ಸಂಭ್ರಮ ಕಾರ್ಯಕ್ರಮದ ಲಾಂಛನ ಬಿಡುಗಡೆ ಡಿ. 01 ರಂದು ನಡೆದ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಸಂಘದ ಅಧ್ಯಕ್ಷರಾದ ಕಾವಡಿ ಸದಾಶಿವ ಶೆಟ್ಟಿ ಅನಾವರಣ ಮಾಡಿದರು. ಗೋವಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುನಿಲ್ ಶೆಟ್ಟಿ ಬೆಳ್ಳಂಪಳ್ಳಿ, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ವಿಜಯೇಂದ್ರ ಶೆಟ್ಟಿ ಕಬ್ಯಾಡಿ, ಜಗದೀಶ್ ಶೆಟ್ಟಿ ಪಳ್ಳಿ, ಜೊತೆ ಕಾರ್ಯದರ್ಶಿ ರಾಘವ ಶೆಟ್ಟಿ ಕೊಡ್ಲಾಡಿ, ನಿಕಟ ಪೂರ್ವ ಅಧ್ಯಕ್ಷರಾದ ಶಶಿಧರ ನಾಯ್ಕ್ , ಸಂಘದ ಮಾಜಿ ಉಪಾಧ್ಯಕ್ಷರಾದ ಸುಬ್ರಮಣ್ಯ ಶೆಟ್ಟಿ, ಶಶಿಧರ ರೈ, ಮಾಜಿ ಕಾರ್ಯದರ್ಶಿ ಗಣೇಶ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಿರಿಯ ಉದ್ಯಮಿ ಹಾಗೂ ಕುಂದಾಪುರ ವರ್ತಕರ ಸಂಘದ ಮಾಜಿ ಅಧ್ಯಕ್ಷ ಕೆ. ಕೇಶವ ಪ್ರಭು (86) ಶನಿವಾರ ರಾತ್ರಿ ನಿಧನರಾದರು. ಕುಂಭಾಸಿ ದಿ.ವೆಂಕಟರಮಣ ಪ್ರಭು ಮನೆತನದ ಹಿರಿಯರಾದ ಅವರು ಕುಂದಾಪುರದಲ್ಲಿ ಮೆ. ವೆಂಕಟರಮಣ ಪ್ರಭು ಸಂಸ್ಥೆ ಮೂಲಕ ಹಲವು ದಶಕಗಳಿಂದ ವ್ಯವಹಾರೋದ್ಯಮ ನಡೆಸುತ್ತಿದ್ದರು. ಅವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ಎರಡು ದಶಕ ಸೇವೆ ಸಲ್ಲಿಸಿದ್ದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದರು . ಅವರು ಪತ್ನಿ , ಓರ್ವ ಪುತ್ರ , ಪುತ್ರಿ, ಸಹೋದರರು, ನಾಲ್ವರು ಸಹೋದರಿಯರಯನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯನ್ನು ಕ್ಷಯಮುಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ನೂರು ದಿನಗಳ ಕ್ಷಯರೋಗ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಕ್ಷಯಮುಕ್ತ ವಾತಾವರಣ ನಿರ್ಮಿಸಲು ಹಾಗೂ ಕ್ಷಯರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ 100 ದಿನಗಳ ಅಭಿಯಾನ–ಕ್ಷಯರೋಗ ಉದ್ಘಾಟನಾ ಸಮಾರಂಭ ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯತ್ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಹೊರೆಯಾಗುತ್ತಿರುವ ಹಾಗೂ ಜನರನ್ನು ಭಯಭೀತರನ್ನಾಗಿಸುವಲ್ಲಿ ಕ್ಷಯರೋಗವು ಒಂದಾಗಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಭಾರತಕ್ಕೆ ಸ್ವಾತಂತ್ರö್ಯ ದೊರಕಿನಿಂದಾಗಲೂ ಪ್ರಯತ್ನ ನಡೆಯುತ್ತಲೇ ಇದೆ ಎಂದ ಅವರು, ಸಮುದಾಯದಲ್ಲಿ ಕ್ಷಯರೋಗದ ಕುರಿತು ಮಾಹಿತಿ…
