ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿನ ನಿರ್ಮಾಣ ಕಾಮಗಾರಿಗಳ ಅಗತ್ಯ ವಸ್ತುಗಳ ಪೂರೈಕೆಗೆ ಸರ್ಕಾರ ಶೀಘ್ರ ಕ್ರಮ ವಹಿಸಲಿ. ಬಿಜೆಪಿಯ ಶಾಸಕರು ತಮ್ಮ ಅಧಿಕಾರ ಚಲಾಯಿಸಿವುದನ್ನು ಬಿಟ್ಟು ಕಾರ್ಯಾoಗವನ್ನು ಬೊಟ್ಟು ಮಾಡುವುದನ್ನು ನಿಲ್ಲಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.
ಕಾಮಗಾರಿಗಳ ಅಗತ್ಯ ವಸ್ತುಗಳ ಪೂರೈಕೆಯಲ್ಲಿನ ಸಮಸ್ಯೆಗಳಿಗೆ ಶಾಸಕರುಗಳ ನಿಷ್ಕ್ರೀಯತೆಯೇ ಕಾರಣ. ಗಾಣಿಗಾರಿಕೆ, ಅಗತ್ಯ ವಸ್ತುಗಳ ಪೂರೈಕೆಗೆ ನೀತಿ, ನಿಯಮ, ಕಾನೂನುಗಳನ್ನು ರೂಪಿಸುವವರು ಶಾಸನ ಸಭೆಯ ಸದಸ್ಯರು, ಇವರು ರೂಪಿಸಿದ ನೀತಿ, ನಿಯಮ, ಕಾನೂನಿನ ಅಡಿ ಕೆಲಸ ಮಾಡುವವರು ಕಾರ್ಯಾಂಗ. ಇವತ್ತು ಜಿಲ್ಲೆಯ ಶಾಸಕರುಗಳು ಕಾರ್ಯಾಂಗದ ಮೂಲಕ ಕೆಲಸ ಮಾಡಿಸಲು ಸಾಧ್ಯವಾಗದೆ ಇರುವುದು ಶಾಸಕರುಗಳ ನಿಷ್ಕ್ರೀಯತೆಯತೆ ಕಾರಣ ಎಂದರು.
ಜನಸಾಮಾನ್ಯರ ಬೇಡಿಕೆ ಪೂರೈಸುವ ಹೊಣೆಗಾರರಾಗಿರುವ ಜನಪ್ರತಿನಿದಿನಗಳು ಅದನ್ನು ಬಿಟ್ಟು ಧರಣಿ ಕೂರುತ್ತೇವೆ ಎನ್ನುವುದು ಕೇವಲ ರಾಜಕಾರಣ ಬಿಟ್ಟರೆ ಬೇರೆ ಏನೂ ಅಲ್ಲ. ಸರ್ಕಾರದ ನೀತಿ, ನಿಯಮ, ಕಾನೂನು ಜನವಿರೋಧಿ ಇದೆ ಎಂದು ಕಂಡುಬಂದರೆ ಅದನ್ನು ಸಡಿಲೀಕರಣಗೊಳಿಸುವ ಇಲ್ಲಾ ಬದಲಾವಣೆ ಮಾಡುವ ಅಧಿಕಾರ ಇರುವ ಶಾಸನ ಸಭೆಯ ಸದಸ್ಯರು ತಮ್ಮ ಅಧಿಕಾರ ಚಲಾಯಿಸಿವುದನ್ನು ಬಿಟ್ಟು ಕಾರ್ಯಾoಗವನ್ನು ಬೊಟ್ಟು ಮಾಡುವುದು ಸರಿಯಲ್ಲ. ಅಧಿಕಾರಿಗಳೂ ಸಹ ಮನಬಂದಂತೆ ವರ್ತಿಸಲು ಅವರೇನು ಸರ್ವಧಿಕಾರಿಗಳು ಅಲ್ಲಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಬೇಡಿಕೆಗೆ ಅನುಗುಣವಾಗಿ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು. ರಾಜ್ಯ ಸರ್ಕಾರ ಕೂಡ ಆದಷ್ಟು ಬೇಗ ಉಡುಪಿ ಜಿಲ್ಲೆಯಲ್ಲಿನ ನಿರ್ಮಾಣ ಕಾಮಗಾರಿಗಳ ಅಗತ್ಯ ವಸ್ತುಗಳ ಕಾನೂನು ಬದ್ಧ ಪೂರೈಕೆಗೆ ಕೂಡಲೇ ಕ್ರಮವಹಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.