ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಿರಿಯ ಉದ್ಯಮಿ ಹಾಗೂ ಕುಂದಾಪುರ ವರ್ತಕರ ಸಂಘದ ಮಾಜಿ ಅಧ್ಯಕ್ಷ ಕೆ. ಕೇಶವ ಪ್ರಭು (86) ಶನಿವಾರ ರಾತ್ರಿ ನಿಧನರಾದರು.
ಕುಂಭಾಸಿ ದಿ.ವೆಂಕಟರಮಣ ಪ್ರಭು ಮನೆತನದ ಹಿರಿಯರಾದ ಅವರು ಕುಂದಾಪುರದಲ್ಲಿ ಮೆ. ವೆಂಕಟರಮಣ ಪ್ರಭು ಸಂಸ್ಥೆ ಮೂಲಕ ಹಲವು ದಶಕಗಳಿಂದ ವ್ಯವಹಾರೋದ್ಯಮ ನಡೆಸುತ್ತಿದ್ದರು. ಅವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ಎರಡು ದಶಕ ಸೇವೆ ಸಲ್ಲಿಸಿದ್ದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದರು .
ಅವರು ಪತ್ನಿ , ಓರ್ವ ಪುತ್ರ , ಪುತ್ರಿ, ಸಹೋದರರು, ನಾಲ್ವರು ಸಹೋದರಿಯರಯನ್ನು ಅಗಲಿದ್ದಾರೆ.