Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯು ತನ್ನಲ್ಲಿರುವ 20 ವಿವಿಧ ಶಿಕ್ಷಣ ಸಂಸ್ಥೆಗಳ ಜೊತೆಗೆ ಫಾರ್ಮಸಿ ಪದವಿ ಕಾಲೇಜನ್ನು ಈ ವರ್ಷವೇ ನೂತನವಾಗಿ ಪ್ರಾರಂಭಿಸುತ್ತಿದೆ. ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ 4 ವರ್ಷಗಳ ಪದವಿ ಶಿಕ್ಷಣ ಇದಾಗಿದ್ದು ಈ ವರ್ಷದಿಂದಲೇ ಅಂದರೆ, 2024-25ನೇ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಅನುಮತಿ ನೀಡಿದ್ದು, ಇದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರಿನಿಂದ ಸಂಯೋಜಿಸಲ್ಪಟ್ಟಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಯ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸುವ ಈ ಕೋರ್ಸ್‌ಗಾಗಿ ಈಗಾಗಲೇ ವಿಶೇಷ ಮುತುವರ್ಜಿವಹಿಸಿದ್ದು ಅನುಭವಿ ಶಿಕ್ಷಕರು, ವಿಶೇಷ ತರಗತಿ ಕೊಠಡಿಗಳು, ಆಧುನಿಕ ಪ್ರಯೋಗಾಲಯ, ನವೀನ ಗ್ರಂಥಾಲಯ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ವಿಶೇಷ ಸವಲತ್ತುಗಳುಳ್ಳ ವಸತಿ ನಿಲಯಗಳನ್ನು ರೂಪಿಸಲಾಗಿದೆ ಎಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ನಮ್ಮ ಜೀವನದಲ್ಲಿ ಔಷಧಿ ಕ್ಷೇತ್ರವು ಅತ್ಯಂತ ಮಹತ್ವದ್ದಾಗಿದ್ದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನಟ ರಿಷಬ್ ಶೆಟ್ಟಿ ಅವರಿಗೆ ಪ್ರದಾನ ಮಾಡಿದರು. ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ಬೆಸ್ಟ್ ಆ್ಯಕ್ಟರ್ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದಾರೆ. 2022ರಲ್ಲಿ ‘ಹೊಂಬಾಳೆ ಫಿಲ್ಸ್’ ಮೂಲಕ ನಿರ್ಮಾಣಗೊಂಡ ‘ಕಾಂತಾರ’ ಸಿನಿಮಾಕ್ಕೆ ಸ್ವತಃ ರಿಷಬ್ ಶೆಟ್ಟಿ ನಿರ್ದೇಶನ ಅವರೇ ನಿರ್ದೇಶನ ಮಾಡಿದ್ದರು. ಭೂತಕೋಲದ ಕಥೆ ಇರುವ ಈ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶಕನಕ್ಕೆ ಯಶ ಕಂಡಿತ್ತು. ಕನ್ನಡ ಮಾತ್ರವಲ್ಲೇ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿಯೂ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಕಾಂತಾರಾ ಪ್ರಿಲ್ವೆಲ್ ಶೂಟಿಂಗ್ ನಡೆಯುತ್ತಿದೆ. ರಿಷಬ್ ಶೆಟ್ಟಿ ಅವರು ಪ್ರಶಸ್ತಿ ಪದಾನ ಸಮಾರಂಭದಲ್ಲಿ ಪಂಚೆ ಧರಿಸಿ ತೆರಳಿದ್ದು ಗಮನ ಸೆಳೆಯಿತು. ಖ್ಯಾತಿಯ ಹೊರತಾಗಿಯೂ ನೆಲದ ಸೊಗಡನ್ನೇ ಅನುಸರಿಸುವ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಿರುಪತಿಗೆ ನೇರ ರೈಲು ಸೇವೆ ಬೇಕೆಂಬ ದಶಕಗಳ ಕನಸು ನನಸಾಗಿದ್ದು, ವಾರಕ್ಕೆರಡು ದಿನವಿರುವ ಕಾಚಿಗುಡ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ ರೈಲನ್ನು ಮುರುಡೇಶ್ವರದ ತನಕ ವಿಸ್ತರಿಸಲಾಗಿದೆ. ಪ್ರತಿ ಬುಧವಾರ ಮತ್ತು ಶನಿವಾರ ಸಂಜೆ 4 ಗಂಟೆಗೆ ಬೈಂದೂರು ಕುಂದಾಪುರ ಉಡುಪಿ ಮಾರ್ಗದ ಮೂಲಕ ಹೊರಡುವ ರೈಲು ಮರುದಿನ ಬೆಳಿಗ್ಗೆ 11 ಗಂಟೆಗೆ ತಿರುಪತಿ ಬಳಿಯ ರೇಣಿಗುಂಟ ನಿಲ್ದಾಣದ ಮೂಲಕ ಹೈದರಾಬಾದಿನ ಕಾಚಿಗುಡ ತಲುಪಲಿದೆ. ವಾರದಲ್ಲಿ 2 ದಿನ ಸಂಚರಿಸುವ ಕಾಚಿಗುಡ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ ರೈಲು ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6-05ಕ್ಕೆ ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣಕ್ಕೆ ಸಂಜೆ 4-45ಕ್ಕೆ ತಲುಪಿ ಅಲ್ಲಿಂದ ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ಬುಧವಾರ ಮತ್ತು ಗುರುವಾರ ಬೆಳಿಗ್ಗೆ 9-30ಕ್ಕೆ ತಲುಪುತ್ತಿತ್ತು. ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ರಾತ್ರಿ 8-05ಕ್ಕೆ ಹೊರಟು ಮರುದಿನ ಬೆಳಿಗ್ಗೆ 11-45ಕ್ಕೆ ತಿರುಪತಿಯ ರೇಣಿಗುಂಟ ನಿಲ್ದಾಣ ತಲುಪುತ್ತಿತ್ತು. ಇದೀಗ ಕಾಚಿಗುಡ – ಮಂಗಳೂರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಮನುಷ್ಯನ ಹೊರನೋಟದ ಲಕ್ಷಣಗಳಿಂದ ಆತನ ವ್ಯಕ್ತಿತ್ವವನ್ನು ಅಳೆಯುವುದು ಮೂರ್ಖತನ. ಒಬ್ಬರ ಪ್ರತಿಭೆಯನ್ನು ಕೌಶಲ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ಅಭಿನಂದಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಯುವ ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ  ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಾದ ದೀಕ್ಷಿತ್ ಮೇಸ್ತ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸೂರಜ್ ಸಾರಂಗ ಇವರ ಮುತುವರ್ಜಿಯಲ್ಲಿ ನಡೆದ ಕ್ರೀಡಾ ತರಬೇತುದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.  ಯಾವುದೇ ರಂಗದಲ್ಲಿ ಉಪಕಾರ ಮಾಡಿದವರನ್ನು ಸ್ಮರಿಸುವುದು ಮತ್ತು ಗೌರವಿಸುವ ಸಂಪ್ರದಾಯವು ಸಮಾಜದಲ್ಲಿ ಉತ್ತಮ ನಡವಳಿಕೆಯನ್ನು ಪ್ರೋತ್ಸಾಹಿಸುವುದಕ್ಕೆ ನೆರವಾಗುತ್ತದೆ. ಇದು ಎಲ್ಲರ ನಡೆಯಾಗಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಿದ ತರಬೇತುದಾರರನ್ನು ಮತ್ತು ಕ್ರೀಡಾ ಕೂಟಕ್ಕೆ ಪ್ರೋತ್ಸಾಹ ನೀಡಿದವರನ್ನು ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿ ಕ್ರೀಡಾ ಪ್ರತಿಭೆಗಳನ್ನು ಅಭಿನಂದಿಸಲಾಯಿತು. ದೈಹಿಕ ಶಿಕ್ಷಣ ಮಾರ್ಗದರ್ಶಕರಾದ ದೀಕ್ಷಿತ್ ಮೇಸ್ತ ಮತ್ತು ಸೂರಜ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಯುವ ಜನರನ್ನು ಸ್ವಾವಲಂಬಿ ಯಾಗಲು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 18 ರಿಂದ 40 ವರ್ಷದೊಳಗಿನ ಎಸ್.ಎಸ್.ಎಲ್.ಸಿ ಉತ್ತೀರ್ಣ ಹಾಗೂ ಅನುತ್ತೀರ್ಣವಾದ ಪರಿಶಿಷ್ಟ ಜಾತಿಯ ಯುವಕ ಹಾಗೂ ಯುವತಿಯರಿಗೆ ನವೆಂಬರ್ 7 ರಿಂದ 26 ರವರೆಗೆ ಒಟ್ಟು 20 ದಿನಗಳ ಹೊಲಿಗೆ ತರಬೇತಿ ಶಿಬಿರ ಹಾಗೂ ಎಸ್.ಎಸ್.ಎಲ್.ಸಿ ಉತ್ತೀರ್ಣ ಹಾಗೂ ಅನುತ್ತೀರ್ಣವಾದ ಪರಿಶಿಷ್ಟ ಜಾತಿಯ ಮಹಿಳಾ ಅಭ್ಯರ್ಥಿಗಳಿಗೆ ನವೆಂಬರ್ 15 ರಿಂದ 26 ರವರೆಗೆ ಒಟ್ಟು 12 ದಿನಗಳ ವಿಡಿಯೋಗ್ರಾಫೀ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಶಿಬಿರಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಊಟೋಪಹಾರ, ಪ್ರಮಾಣ ಪತ್ರ ಹಾಗೂ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಅರ್ಜಿ ಸಲ್ಲಿಸಲು ನವೆಂಬರ್ 2 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶು ಮಂದಿರದ ಆಶ್ರಯದಲ್ಲಿ, ಸುರಭಿ ರಿ. ಬೈಂದೂರು ಸಹಕಾರದಲ್ಲಿ ಶಿಶುಮಂದಿರದ ಬಾಲ ಗೋಕುಲದ ವಿದ್ಯಾರ್ಥಿಗಳಿಗೆ 3 ದಿನಗಳ ದಸರಾ ಬೇಸಿಗೆ ಶಿಬಿರಕ್ಕೆ ಸಾಹಿತಿ ಪುಂಡಲೀಕ ನಾಯಕ್ ಅವರು ಚಾಲನೆ ನೀಡಿದರು. ಈ ವೇಳೆ ಅವರು ಮಾತನಾಡಿ ಬಾಲ್ಯಾವಸ್ಥೆಯಲ್ಲಿಯೇ ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರ, ಕಲೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಶಿಬಿರವು ಉತ್ತಮವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು. ಸೇವಾ ಸಂಗಮ ಟ್ರಸ್ಟ್ ಕುಂದಾಪುರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೇವಾ ಸಂಗಮ ಶಿಶುಮಂದಿರದ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ವಹಿಸಿದ್ದು ಶಿಬಿರದ ಉದ್ದೇಶ ಹಾಗೂ ಕಾರ್ಯಚಟುವಟಿಕೆ ಬಗ್ಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಯೋಗ ಶಿಕ್ಷಕ ಉಪ್ಪುಂದ ಜೆಸಿಐ ಅಧ್ಯಕ್ಷರಾದ ಮಂಜುನಾಥ ದೇವಾಡಿಗ ಶುಭ ಹಾರೈಸಿದರು. ಅನನ್ಯಾ ಆಚಾರ್ ಸ್ವಾಗತಿಸಿ, ಕಾರ್ಯಕ್ರಮವನ್ನು ಸುರಭಿ ನಿರ್ದೇಶಕ ಹಾಗೂ ಸೇವಾ ಸಂಗಮ ಶಿಶು ಮಂದಿರದ ಉಪಾಧ್ಯಕ್ಷರಾದ ಸುಧಾಕರ್ ಪಿ. ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಶ್ರೀ ರಾಮಕ್ಷತ್ರಿಯ ಯುವಕ ಸಮಾಜ ಶ್ರೀ ಸೀತಾರಾಮಚಂದ್ರ ದೇವಸ್ಥಾನದ 38ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭ ಅ.09ರಿಂದ 12ರ ತನಕ ವಿಜೃಂಭಣೆಯಿಂದ ಜರುಗಲಿದೆ. ಅ.09ರಂದು ಬೆಳಿಗ್ಗೆ ಶ್ರೀ ಶಾರದಾಂಬೆಯನ್ನು ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿದ ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಜನಾ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಅ.10ರಂದು ನವಚಂಡಿಕಾ ಯಾಗ ಹಾಗೂ ಅ.11ರಂದು ನವಚಂಡಿಕಾಯಾಗದ ಅಂಗವಾಗಿ ಅನ್ನಸಂತರ್ಪಣೆ ನಡೆಯಲಿದ್ದು, ಅ.12ರಂದು ಶ್ರೀ ಶಾರದಾ ಮೂರ್ತಿಯ ವೈಭವದ ವಿಸರ್ಜನಾ ಮೆರವಣಿಗೆ ಜರುಗಲಿದೆ. ಶಾರದೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳ ಜರುಗಲಿದ್ದು, ಅ.09ರ ಬುಧವಾರ ಮಧ್ಯಾಹ್ನ 2:30ರಿಂದ ಭಕ್ತಿಗೀತೆ, ರಂಗೋಲಿ, ಹೂಮಾಲೆ ಕಟ್ಟುವ ಸ್ಪರ್ಧೆ, ಭಗವದ್ಗೀತಾ ಪಠಣ ಸ್ಪರ್ಧೆ ನಡೆಯಲಿದೆ. ಅಂದು ಸಂಜೆ 5ರಿಂದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ. ಅ.11ರಂದು ರಾಮಕ್ಷತ್ರಿಯ ಸಾಂಸ್ಕೃತಿಕ ವೈಭವ ಸ್ಪರ್ಧೆ ಜರುಗಲಿದೆ. ಅ.10ರಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅರೆಹೊಳೆ ಪ್ರತಿಷ್ಠಾನದ ಬಿಡುವನೇ ಬ್ರಹ್ಮಲಿಂಗ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಅ.10 ಹಾಗೂ 11ರ ಸಂಜೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸ್ಥಳೀಯಾಡಳಿತಕ್ಕೆ ಶಕ್ತಿ ನೀಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಸ್ಥಳೀಯಾಡಳಿತದ ಮೂರು ಸ್ಥರಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿಯವರನ್ನು ಗೆಲ್ಲಿಸಿ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಕರೆ ನೀಡಿದರು . ತೆಕ್ಕಟ್ಟೆ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯ ಅಧ್ಯಕ್ಷತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ವಹಿಸಿದ್ದರು. ಸಭೆಯಲ್ಲಿ ಮಾಜಿ ಸಚಿವರಾದ ಕೆ. ಜಯಪ್ರಕಾಶ ಹೆಗ್ಡೆ , ವಿನಯಕುಮಾರ ಸೊರಕೆ, ಅಭ್ಯರ್ಥಿ ರಾಜು ಪೂಜಾರಿ, ಕೆಪಿಸಿಸಿ ಉಸ್ತುವಾರಿ ಮಿಥುನ್ ರೈ, ಎಂ . ಎಸ್. ಮಹಮದ್, ಕಿಶನ್ ಹೆಗ್ಡೆ ಎಂ. ದಿನೇಶ್ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ಬಿ ಹಿರಿಯಣ್ಣ , ದೇವಾನಂದ ಶೆಟ್ಟಿ, ಪ್ರಸನ್ನ ಶೆಟ್ಟಿ ಕೆರಾಡಿ, ವಿಕಾಸ ಹೆಗ್ಡೆ, ರೇಖಾ ಪೂಜಾರಿ, ದೇವಕಿ ಸಣ್ಣಯ್ಯ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪಿ.ಎಸ್‌.ಇ.ಎಂ.ಆರ್‌ ಶಾಲೆ ಮತ್ತು ಪಿಯು ಕಾಲೇಜು ದಾವಣಗೆರೆ ಆಯೋಜಿಸಿದ ಸಿಬಿಎಸ್‌. ಸಿ ಕ್ಲಸ್ಟರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಫ್‌ ನಲ್ಲಿ ಕುಂದಾಪುರದ ಪ್ರತಿಷ್ಠಿತ ಕ್ರೀಡಾ ತರಬೇತಿ ಸಂಸ್ಥೆಯಾದ ಕುಂದಾಪುರ ಟ್ರ್ಯಾಕ್‌ ಮತ್ತು ಫೀಲ್ಡ್‌ನ ಅಥ್ಲೀಟ್‌ ಆಶಿತ್‌ ಸಂಜಯ್‌ ಕುಮಾರ್‌ ಬಾಲಕರ ಲಾಂಗ್‌ ಜಂಪ್‌ನಲ್ಲಿ ಚಿನ್ನದ ಪದಕ ಪಡೆದು ಸಿ.ಬಿ.ಎಸ್.ಸಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ -2024 ಗೆ ಅರ್ಹತೆ ಪಡೆದಿದ್ದಾರೆ. ಅವರಿಗೆ ಕುಂದಾಪುರ ಟ್ರ್ಯಾಕ್‌ ಮತ್ತು ಫೀಲ್ಡ್‌ನ ಮುಖ್ಯಸ್ಥರು ಹಾಗೂ ತರಬೇತಿದರರಾದ ಪ್ರಶಾಂತ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಅಕ್ಟೋಬರ್ 9 ರಂದು ಬೆಳಗ್ಗೆ 10.30 ಕ್ಕೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಮತ್ತು ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ, 8105618291, 9945856670, 9901472710 ಹಾಗೂ 8105774936 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Read More