ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೋಟರಿ ಕ್ಲಬ್ ತೀರ್ಥಹಳ್ಳಿ ಆತಿಥ್ಯದಲ್ಲಿ ನಡೆದ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಅರುಣ್ ಕುಮಾರ್ ಶಿರೂರು ನೇತ್ರತ್ವದ ಬೈಂದೂರು ರೋಟರಿ ತಂಡ ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಮೂಲಕ ವಲಯ 1ರ ಸತತ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಗಳಿಸುವ ಮೂಲಕ ದಾಖಲೆ ನಿರ್ಮಾಣವಾಗಿದೆ.

ರೋಟರಿ ಜಿಲ್ಲಾ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಕಂದಾಯ ಜಿಲ್ಲೆಗಳ 11 ವಲಯದ ಒಟ್ಟು 87 ರೋಟರಿ ಕ್ಲಬ್ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬೈಂದೂರು ರೋಟರಿ ಕುಂದಾಪುರದಲ್ಲಿ ನಡೆದ ವಲಯ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟದ ಅರ್ಹತೆ ಪಡೆದಿತ್ತು.
ಮಹಿಳೆಯರ ಸಿನಿಮಾ ಹಾಡು ಸ್ಪರ್ಧೆಯಲ್ಲಿ ಪೂರ್ಣಿಮಾ ಪ್ರಥಮ, ಡ್ಯುಯೆಟ್ ಹಾಡು ಸ್ಪರ್ಧೆಯಲ್ಲಿ ಉದಯ ಆಚಾರ್, ಪೂರ್ಣಿಮಾ ಪ್ರಥಮ, ಏಕಾಭಿನಯ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಪ್ರಥಮ ಸ್ಥಾನ ಗಳಿಸಿದ್ದಾರೆ.
ರೈತ ಹೋರಾಟ ಕಥೆಯ ನಾಟಕಕ್ಕೆ ಪ್ರಶಸ್ತಿ:
ಬೈಂದೂರಿನಲ್ಲಿ ನಿರಂತರ 432 ದಿನಗಳ ಕಾಲ ರೈತರು ಹೋರಾಟ ನಡೆಸಿ ಐತಿಹಾಸಿಕ ಗೆಲುವು ಸಾಧಿಸಿರುವುದು ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟಿತ್ತು.ರೋಟರಿ ಕ್ಲಬ್ ಬೈಂದೂರು ರೈತರ ಹೋರಾಟದ ಕಥೆಯನ್ನಾಧರಿಸಿ ನಾಟಕ ಪ್ರಹಸನ ಸ್ಪರ್ಧೆಯಲ್ಲಿ ಭಾಗವಹಿಸಿ ಇದೇ ಮೊದಲ ಬಾರಿಗೆ ವಲಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
ಈ ಮೂಲಕ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಸಾರ್ವತ್ರಿಕ ಸಾಧನೆಯ ಗೆಲುವು ಪಡೆದಿದೆ. ನಾಟಕದಲ್ಲಿ ಸುಧಾಕರ ಪಿ. ಬೈಂದೂರು, ಪೂರ್ಣಿಮಾ ಟೀಚರ್, ನಾಗೇಂದ್ರ ಬಂಕೇಶ್ವರ, ಸುಬ್ರಹ್ಮಣ್ಯ ಜಿ. ಉಪ್ಪುಂದ,ಆನಂದ ಮದ್ದೋಡಿ, ಪ್ರಸಾದ ಪ್ರಭು, ಮಣಿಕಂಠ ದೇವಾಡಿಗ, ಅರುಣ್ ಕುಮಾರ್ ಶಿರೂರು, ಜಾನ್ವಿ ಪ್ರಸಾದ ಪ್ರಭು, ಸೌಮ್ಯ ಉಪ್ಪುಂದ, ನಾರಾಯಣ ದೇವಾಡಿಗ, ವೈಷ್ಣವಿ ಪೈ, ಭಾಗವಹಿಸಿದ್ದು. ಉದಯ ಆಚಾರ್, ಸಾತ್ವಿಕ ಪ್ರಭು ಬೆಳಕು ಮತ್ತು ಸಂಗೀತ ನೀಡಿದರು. ಐ. ನಾರಾಯಣ, ವಿಷ್ಣು ಪೈ, ಶಾರದಾ ಟೀಚರ್, ಪೂರ್ಣಿಮಾ ಪೈ ಸಹಕರಿಸಿದರು. ರೋಟರಿ ಗವರ್ನರ್ ಪ್ರಶಸ್ತಿ ವಿತರಿಸಿದರು.

















