Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಕಾರ್ಯನಿರತ ಸಂಘ ಉಡುಪಿ ಜಿಲ್ಲಾ ಸಂಘದ ಅಧೀನ ಸಂಸ್ಥೆಯಾದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ) ಇದರ ನೂತನ ತಾಲೂಕು ಅಧ್ಯಕ್ಷರಾಗಿ ನಾಗರಾಜ್ ರಾಯಪ್ಪನಮಠ ಹಾಗೂ ಕಾರ್ಯದರ್ಶಿಯಾಗಿ ಗಣೇಶ್ ಬೀಜಾಡಿ ಆಯ್ಕೆಯಾಗಿದ್ದಾರೆ. ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ನಾಗರಾಜ ರಾಯಪ್ಪನಮಠ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಗಣೇಶ್ ಬೀಜಾಡಿ ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರಾಗಿ ಚಂದ್ರಮ ತಲ್ಲೂರು, ರಾಘವೇಂದ್ರ ಪೈ, ಜೊತೆ ಕಾರ್ಯದರ್ಶಿಗಳಾಗಿ ಯೋಗೀಶ ಕುಂಭಾಶಿ ಹಾಗೂ ರಾಘವೇಂದ್ರ ಬಳ್ಕೂರು, ಕೋಶಾಧಿಕಾರಿಯಾಗಿ ಲೋಕೇಶ್ ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉದಯ ಕುಮಾರ್, ಶಶಿಧರ ಹೆಮ್ಮಾಡಿ, ಮಂಜುನಾಥ ಶೆಣೈ ಜನ್ನಾಡಿ, ಸತೀಶ್ ಆಚಾರ್ಯ ಉಳ್ಳೂರು, ವಿನಯ್ ಪಾಯಸ್, ರಾಮಕೃಷ್ಣ ಹೇರಳೆ, ಶ್ರೀಕಾಂತ ಹೆಮ್ಮಾಡಿ, ಸಂತೋಷ್ ಕುಂದೇಶ್ವರ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ರಾಜೇಶ್ ಶೆಟ್ಟಿ ಅಲೆವೂರು ಚುನಾವಣೆ ಪ್ರಕ್ರಿಯೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಸ್ರೂರು ಗ್ರಾಮ ಪಂಚಾಯತ್ ಹಿಂಭಾಗದ ಅಶೋಕ ಪಾರ್ಕಿನಲ್ಲಿ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ ಎಂದು ಇತಿಹಾಸ ಸಂಶೋಧಕ ಫ್ರೊ.ಟಿ. ಮುರುಗೇಶ್ ಮಾಹಿತಿ ನೀಡಿದ್ದಾರೆ. ಈ ಕಲ್ಲಿನ ಬಗ್ಗೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕರು ಪ್ರದೀಪ ಕುಮಾರ್ ಬಸ್ರೂರು ಅವರು ಸಂಶೋಧಕರ ಗಮನಕ್ಕೆ ತಂದಿದ್ದಾರೆ. ಬಸ್ರೂರು ಗ್ರಾಮ ಪಂಚಾಯತ್ ಹಿಂಭಾಗದ ಅಶೋಕ ಪಾರ್ಕ್ ಜೀರ್ಣೋದ್ಧಾರ ಕಾರ್ಯವು ಸ್ಧಳೀಯರ ಸಹಕಾರದಲ್ಲಿ ನಡೆಯುತ್ತಿದ್ದು, ಈ ಪಾರ್ಕ ಅಭಿವೃದ್ಧಿ ಕಾರ್ಯದ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ಮೆಂಡನ್ ನೇತೃತ್ವದಲ್ಲಿ ಜಾಗ ಸಮತಟ್ಟು ಮಾಡುವ ಸಂಧರ್ಭ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ. ಕಲ್ಲಿನಲ್ಲಿ ಸೂಯ೯, ಚಂದ್ರ, ಶಿವಲಿಂಗ, ನಂದಿ ವಿಗ್ರಹ ಇರುವುದು ಕಂಡು ಬಂದಿದೆ. ಕಾಲ: ಕೆಳದಿಯ ಸ.ಸೂ ನಾಲ್ಕು ನೂರು ವಷ೯ದ ಹಳೆಯ ಲಿಂಗ ಮುದ್ರಿಕೆ ಕಲ್ಲು ವರದಿಯಂತೆ ಸೂರ್ಯ, ಚಂದ್ರ, ಇರುವ ತನಕ ಅಜರಾಮರವಾಗಿ ಇರಲಿ ಯೆನ್ನುವಂತ ಸಂದೇಶ ನೀಡುವಂತಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ದುಬೈ: ಯುಎಇನಲ್ಲಿನ ಕರ್ನಾಟಕ ಸಂಘ ಶಾರ್ಜಾ ಎರಡು ದಶಕಗಳನ್ನು ಪೂರ್ತಿಗೊಳಿಸಿ, ಇಪ್ಪತ್ತೊಂದನೆಯ ವರ್ಷದತ್ತ ಮುನ್ನಡೆಯುತ್ತಿದ್ದು, ಇದರ ನೂತನ 12ನೇ ಅಧ್ಯಕ್ಷರಾಗಿ ಸತೀಶ್ ಪೂಜಾರಿಯವರು ಎರಡನೆಯ ಬಾರಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. 2023 ಮಾರ್ಚ್ 11ರಂದು ಸಂಜೆ ದುಬಾಯಿ ಫಾರ್ಚೂನ್ ಅಟ್ರಿಯಂ ಹೋಟೆಲ್ ಸಭಾಂಗಣದಲ್ಲಿ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಮಹಾಸಭೆಯು ಪ್ರಾರ್ಥನೆ, ಸ್ವಾಗತದೊಂದಿಗೆ ಪ್ರಾರಂಭವಾಯಿತು. ಪೋಷಕರಾದ ಮಾರ್ಕ ಡೆನಿಸ್ ಡಿ’ಸೋಜಾ ಎರಡು ದಶಕಗಳು ನಡೆದುಬಂದ ಹಾದಿಯ ಸಾಧನೆಗಳ ಮಾಹಿತಿಯನ್ನು ಸಭೆಯ ಮುಂದಿಟ್ಟರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿಯವರು ವಾರ್ಷಿಕ ವರದಿವಾಚಿಸಿ ಅನುಮೋದನೆಯನ್ನು ಪಡೆದುಕೊಂಡರು. ಖಜಾಂಚಿ ಮಹ್ಮದ್ ಅಬ್ರಾರ್ ಆಯವ್ಯಯ ಲೆಕ್ಕ ಪತ್ರವನ್ನು ಮಂಡಿಸಿ ಸರ್ವ ಸದಸ್ಯರ ಅನುಮತಿಯನ್ನು ಪಡೆದುಕೊಂಡರು. ಉಪಾಧ್ಯಕ್ಷರಾದ ನೋಯಲ್ ಅಲ್ಮೆಡಾ ಅವರು ತಮ್ಮ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳ ಯಶಸ್ಸಿನ ಹಿಂದಿನ ರುವಾರಿಗಳ ಸಾಧನೆಗಳನ್ನು ಶ್ಲಾಘಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಧ್ಯಕ್ಷರಾದ ಮಹ್ಮದ್ ಇಬ್ರಾಹಿಂ ಮೂಳೂರ್ ರವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ‘ಮಿನಿ ವಿಧಾನಸೌಧ’ ಮಾರ್ಚ್ 15ರಂದು ಉದ್ಘಾಟನೆಗೆ ಸಜ್ಜಾಗಿದೆ. ಮಾ.15ರ ಬೆಳಿಗ್ಗೆ 10-30ಕ್ಕೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ನೂತನ ಕಟ್ಟಡವನ್ನು ಉದ್ಘಾಟನೆಗೊಳಿಲಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರುಗಳಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್ ಕುಮಾರ್, ಆರ್. ಅಶೋಕ್, ವಿ. ಸೋಮಣ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ. ಬೈಂದೂರಿಗೆ ಮುಕುಟಪ್ರಾಯ:ಅಭಿವೃದ್ಧಿಯ ಪಥದಲ್ಲಿರುವ ಬೈಂದೂರು ತಾಲೂಕಿಗೆ ಮುಕುಟಪ್ರಾಯದಂತೆ ಬೈಂದೂರು ಮಿನಿ ವಿಧಾನಸೌಧ ಕಂಗೊಳಿಸುತ್ತಿದೆ. ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರ ಅವಧಿಯಲ್ಲಿ ತಾಲೂಕು ಘೋಷಣೆಯಾಗಿ ಮಿನಿ ವಿಧಾನಸೌಧದ ನಿರ್ಮಿಸುವ ಪ್ರಕ್ರಿಯೆ ಆರಂಭಗೊಂಡರೇ, ಹಾಲಿ ಸಂಸದರಾದ ಬಿ. ವೈ. ರಾಘವೇಂದ್ರ ಹಾಗೂ ಶಾಸಕರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀರ್ವಾದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನದಲ್ಲಿ ಮಾ.೧೩ರಂದು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಜರುಗಲಿರುವ ಏಕಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಶನಿವಾರ ಹಸಿರು ಹೊರೆಕಾಣಿಕೆ ಪುರ ಮೆರವಣಿಗೆ ನಡೆಯಿತು. ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಹೊರಟ ಹಸಿರು ಹೊರೆಕಾಣಿಕೆ ಪುರ ಮೆರವಣಿಗೆಗೆ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಿರಿಯ ಸದಸ್ಯ ಸುರೇಶ್ ಬೆಟ್ಟಿನ್ ಚಾಲನೆ ನೀಡಿ ಶುಭ ಹಾರೈಸಿದರು. ಸೇವಾಕರ್ತರಾದ ರಾಮಚಂದ್ರ ಮತ್ತು ಕುಟುಂಬಿಕರು, ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಸದಸ್ಯರಾದ ವಾದಿರಾಜ್ ಹೆಬ್ಬಾರ್, ಚಂದ್ರ ಬಿ.ಎನ್, ಪುರಮೆರವಣಿಗೆ ಸಂಚಾಲಕ ರಾಮನಾಯ್ಕ್, ನಾಗಮಂಡಲೋತ್ಸವದ ವಿವಿಧ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ತಟ್ಟಿರಾಯ, ಕೀಲು ಕುದುರೆ, ಪಂಚವಾದ್ಯಗಳು, ಚಂಡೆವಾದನ, ಬ್ಯಾಂಡ್, ಭಜನೆ, ನಾಮಸಂಕೀರ್ತನೆ ಸೇರಿದಂತೆ ಕಳಸ ಹಿಡಿದ ಮಹಿಳೆಯರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಬೈಂದೂರು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯೋಜನೆಯಲ್ಲಿ ಶೈಕ್ಷಣಿಕ ಕಾರ್ಯಗಾರ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವು ಶುಕ್ರವಾರ ಸಾಧನಾ ಸಭಾಭವನ ಮರವಂತೆಯಲ್ಲಿ ಜರುಗಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಉದ್ದೇಶ, ಶಿಕ್ಷಣದಲ್ಲಿ ದೈಹಿಕ ಶಿಕ್ಷಣದ ಪ್ರಾಮುಖ್ಯತೆ, ಏನೇ ಅಡೆ ತಡೆ ಇದ್ದರೂ ಕ್ರೀಡಾ ಪ್ರತಿಭೆಗಳನ್ನು ಹೊರತರುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರದ ಕುರಿತು ಮನಮುಟ್ಟುವಂತೆ ತಿಳಿಸಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪ್ರೋತ್ಸಾಹ ನುಡಿಗಳನ್ನಾಡಿದರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. 2022-23ನೇ ಸಾಲಿನಲ್ಲಿ ಕ್ರೀಡೆಯಲ್ಲಿ ವಿಭಾಗ, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆಗೈದ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಸಾಧನಾ ಸಂಸ್ಥೆಯ ಸ್ಥಾಪಕರು ಹಾಗೂ ನಿವೃತ್ತ ಉಪನ್ಯಾಸಕರಾಗಿರುವ ಎಸ್ ಜನಾರ್ದನ ಅವರು ವಿದ್ಯಾರ್ಥಿಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್ 2022ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ‍್ಸ್ ಕಾಲೇಜಿಗೆ ಎಂಟು ರ‍್ಯಾಂಕ್‌ಗಳು ದೊರಕಿವೆ. ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಬೈಂದೂರು ತಾಲೂಕಿನ ಯಡ್ತೆರೆ ಗ್ರಾಮದ ಗೋವಿಂದ ಪೂಜಾರಿ ಅವರ ಪುತ್ರಿ ದೀಕ್ಷಾ ಅವರಿಗೆ ನಾಲ್ಕನೇ ರ‍್ಯಾಂಕ್ ಮತ್ತು ಬೈಂದೂರು ತಾಲೂಕಿನ ಕೊಡೇರಿ ಗ್ರಾಮದ ಕೃಷ್ಣ ಪೂಜಾರಿ ಅವರ ಅವರ ಪುತ್ರಿ ರಮಿತಾ ಅವರಿಗೆ ಆರನೇ ರ‍್ಯಾಂಕ್ ಕುಂದಾಪುರದ ಕಂದಾವರ ಗ್ರಾಮದ ನಾಗಭೂಷಣ ಅವರ ಪುತ್ರಿ ಸ್ಪೂರ್ತಿ ಅವರಿಗೆ ಎಂಟನೇ ರ‍್ಯಾಂಕ್, ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ರವೀಂದ್ರ ಶೆಟ್ಟಿ ಅವರ ಪುತ್ರ ರಕ್ಷಿತ್ ಕುಮಾರ್ ಶೆಟ್ಟಿ ಅವರಿಗೆ ಒಂಬತ್ತನೇ ರ‍್ಯಾಂಕ್ ದೊರೆತಿದೆ. ಬಿ.ಎಸ್.ಸಿ ಪದವಿ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗುರುದತ್ತ ಪೈ ಅವರ ಪುತ್ರ ಸನತ್ ಗುರುದತ್ತ ಪೈ ಅವರಿಗೆ ಏಳನೇ ರ‍್ಯಾಂಕ್ ದೊರೆತಿದೆ. ಬಿ ಕಾಂ ಪರೀಕ್ಷೆಯಲ್ಲಿ ಕುಂದಾಪುರದ ತಾಲೂಕಿನ ಕೋಟೇಶ್ವರ ಗ್ರಾಮದ ಪ್ರಸನ್ನ ಹೆಬ್ಬಾರ್ ಇವರ…

Read More

ಈ ಚುನಾವಣೆಯಲ್ಲಿ ಬೈಂದೂರು ಬಿಜೆಪಿ ಟಿಕೆಟ್ ದೊರೆಯುವ ಭರವಸೆ ಇದೆ – ಕೆ ಬಾಬು ಶೆಟ್ಟಿ – ಬೈಂದೂರು ಬಿಜೆಪಿ ಮುಖಂಡ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಉಪ್ಪುಂದ ಲೇಡಿ ಜೆಸಿ ವಿಭಾಗದ ವತಿಯಿಂದ ಬೈಂದೂರು ಸಿಟಿ ಜೆಸಿ ಸದಸ್ಯರ ಭಾಗವಹಿಸುವಿಕೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಸನ್ಮಾನ ತರಬೇತಿ ಸಂವಾದ ಹಾಗೂ ಸ್ಪರ್ಧಾ ಕಾರ್ಯಕ್ರಮ ಉಪ್ಪಂದದ ರೈತ ಸೇರಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಂಬದಕೊಣೆ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಉಪ್ಪುಂದ ಇದರ ಅಧ್ಯಕ್ಷರಾದ ಎಸ್ ಪ್ರಕಾಶ್ಚಂದ್ರ ಶೆಟ್ಟಿ ಅವರು ಸೃಷ್ಟಿಯಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯ ಮೇಲೆ ಅವಲಂಬಿತನಾಗಿರುತ್ತಾನೆ ಪ್ರತಿಯೊಬ್ಬ ಮಹಿಳೆಯು ಕೂಡ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದಾಗ ಈ ದೇಶ ಇನ್ನಷ್ಟು ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಬಹು ಅಂಗ ವಿಕಲ ಇಬ್ಬರು ಗಂಡು ಮಕ್ಕಳನ್ನ 45 ವರ್ಷಗಳಿಂದ ಬಹಳ ಜಾಗರೂಕತೆಯಿಂದ ಸಾಕುತ್ತಿರುವ ಮಹಾತಾಯಿ ಗಿರಿಜಾ ಅವರನ್ನು, ಉದ್ಯಮ ಕ್ಷೇತ್ರದಲ್ಲಿ ತನ್ನನ್ನ ತೊಡಗಿಸಿಕೊಂಡ ಲೀಲಾ ಅವರನನ್ನು ಹಾಗೂ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶಿನಿ ಅವರನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜಿಗೆ ಪ್ರಥಮ ರ್ಯಾಂಕ್ ಲಭಿಸಿದೆ. ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ವಿದ್ಯಾರ್ಥಿನಿ ಗೀತಾಂಜಲಿ ಬಿಎಸ್ಸಿ.ಹೆಚ್.ಎಸ್(ಹೋಟೆಲ್ ಮ್ಯಾನೇಜ್ಮೆಂಟ್) 2019-2022 ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ 91% ಅಂಕಗಳೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಕಾಲೇಜಿಗೆ ಕೀರ್ತಿಯನ್ನು ತಂದ ವಿದ್ಯಾರ್ಥಿನಿ ಶೈಕ್ಷಣಿಕ ಸಾಧನೆ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ಡಾ. ಸೀಮಾ ಜಿ. ಭಟ್, ಕಾಲೇಜಿನ ಸಂಸ್ಥಾಪಕರಾದ ಸುಬ್ರಮಣ್ಯ, ನಿರ್ದೇಶಿಕಿ ಮಮತಾ ಹಾಗೂ ಉಪನ್ಯಾಸಕ ವೃಂದದವರು ಶುಭ ಹಾರೈಸಿದ್ದಾರೆ.

Read More