Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಕುಂದಾಪುರ: ಕುಂದಾಪುರದ ಹೊಸ ಬಸ್‌ ನಿಲ್ದಾಣದಿಂದ ಉಡುಪಿ ಕಡೆಗೆ ಹೊರಟಿದ್ದ ಬಸ್ಸಿನಲ್ಲಿ ಪ್ರಯಾಣಿಕರೋರ್ವರಿಗೆ ಹೃದಯಾಘಾತವಾಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರದಿಂದ ಉಡುಪಿ ಕಡೆಗೆ ಹೊರಟಿದ್ದ ಸಮತಾ ಬಸ್ಸಿನಲ್ಲಿ ಕುಳಿತಿದ್ದ ಕೋಟ ನಿವಾಸಿ ವೆಂಕಟ್ ಎಂಬವರಿಗೆ ತೀವ್ರ ಪ್ರಮಾಣದ ಹೃದಯಾಘಾತದಿಂದ ತನ್ನ ಕಣ್ಣನ್ನು ಮುಚ್ಚಿದ್ದು ಮಾತನಾಡಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದೇ ಅಸ್ವಸ್ಥರಾಗಿದ್ದರು. ಇದನ್ನು ಗಮನಿಸಿದ ನಿರ್ವಾಹಕ ತಕ್ಷಣ ಈ ವಿಷಯವನ್ನು ಚಾಲಕ ರಿತೇಶ್ ಗೆ ತಿಳಿಸಿದ್ದು, ಆತ ಬಸ್ಸನ್ನು ನೇರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲೇ ಇದ್ದ ರಿಕ್ಷಾ ಚಾಲಕರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ವೆಂಕಟ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಅಂಬುಲೆನ್ಸ್ ನಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಬಸ್ ನಿರ್ವಾಹಕ ಮತ್ತು ಚಾಲಕನ ಸಮಯಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಡಿ.25: ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ನೇತೃತ್ವದ ಕಾಂಗ್ರೆಸ್‌ ಬೆಂಬಲಿಯ ಗುಂಪು 13 ಸ್ಥಾನಗಳನ್ನು ಪಡೆದುಕೊಂಡಿದೆ. ಇಂದು 12 ಸ್ಥಾನಗಳಿಗೆ ಚುನಾವಣೆ ನಡೆದಿದ್ದು 1 ಸ್ಥಾನ ಅವಿರೋಧ ಆಯ್ಕೆಯಾಗಿದೆ. ಸಾಮಾನ್ಯ ಕ್ಷೇತ್ರದಿಂದ ಮಹೇಶ ಹೆಗ್ಡೆ ಮೊಳಹಳ್ಳಿ, ಎಚ್. ಹರಿಪ್ರಸಾದ್ ಶೆಟ್ಟಿ, ಜಗನ್ನಾಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಲವಕರ ಶೆಟ್ಟಿ, ಅನಿಲ್‌ ಕುಮಾ‌ರ್ ಶೆಟ್ಟಿ, ಶ್ರೀಮತಿ ಇಂದಿರಾ ಯು ಶೆಟ್ಟಿ ಆಯ್ಕೆಯಾದರು. ಮಹಿಳಾ ಮೀಸಲು ಸ್ಥಾನದಿಂದ ವಾಣಿ ಆರ್ ಶೆಟ್ಟಿ, ಚೈತ್ರ ಅಡಪ ಆಯ್ಕೆಯಾದರು. ಹಿಂದುಳಿದ ವರ್ಗ ‘ಎ’ ಮೀಸಲು ಕ್ಷೇತ್ರದಿಂದ ದಿನೇಶ ಮೊಗವೀರ ಆಯ್ಕೆಯಾದರೆ, ಹಿಂದುಳಿದ ವರ್ಗ ‘ಬಿ’ ಮೀಸಲು ಷೇತ್ರದುಂದ ಉಮೇಶ ಶೆಟ್ಟಿ ಆಯ್ಕೆಯಾದರು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಗಣೇಶ ಆಯ್ಕೆಯಾದರು. ಈ ಹಿಂದೆಯೇ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಕ್ಕೆ ಗಿರೀಶ್ ಅವಿರೋಧ ಆಯ್ಕೆಯಾಗಿದ್ದರು. ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಚುನಾವಣಾ ಅಧಿಕಾರಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಜೇಸಿಐ ಉಪ್ಪುಂದದ 21ನೇ ವರ್ಷದ ಪದಪ್ರದಾನ ಸಮಾರಂಭ ಮಂಗಳವಾರ ಮಾತ್ರಶ್ರೀ ಸಭಾಭವನ ಇಲ್ಲಿನ ಜರುಗಿತು. 2024ನೇ ಸಾಲಿನ ಅಧ್ಯಕ್ಷರಾದ ಜೇಸಿ ಮಂಜುನಾಥ್ ದೇವಾಡಿಗರು ನೂತನ ಅಧ್ಯಕ್ಷರಾದ ಜೇಸಿ ಭರತ್ ದೇವಾಡಿಗ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವೇದಿಕೆಯಲ್ಲಿ ವಲಯಾಧ್ಯಕ್ಷರಾದ ಜೇಸಿಐ ಸೆನೆಟರ್ ಅಭಿಲಾಷ್ ಬಿ.ಎ, ಪದಪ್ರಧಾನ ಅಧಿಕಾರಿ ಅಶ್ವಿನಿ ಐತಾಳ್, ಬಿ.ಎಸ್ ಸುಮುಖ ಗ್ರೂಪ್ ಆಫ್ ಕಂಪೆನಿ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ಶೆಟ್ಟಿ, ಸರಕಾರಿ ನೌಕರರ ಸಂಘ ಬೈಂದೂರು ತಾಲೂಕು ಅಧ್ಯಕ್ಷ ಶೇಖರ್ ಪೂಜಾರಿ, ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ, ಸ್ಥಾಪಕಾಧ್ಯಕ್ಷರಾದ ದಿವಾಕರ್ ಶೆಟ್ಟಿ, ಜೇಸಿರೇಟ್ ಸುಮನಾ ದೇವಾಡಿಗ, ಕಾರ್ಯದರ್ಶಿ ನರಸಿಂಹ ದೇವಾಡಿಗ ಮೊದಲಾವರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷರು ತಮ್ಮ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. 2024ನೇ ಸಾಲಿನ ಅಧ್ಯಕ್ಷರಾದ ಮಂಜುನಾಥ್ ದೇವಾಡಿಗ ಸ್ವಾಗತಿಸಿ ಗತವರ್ಷದ ವರದಿ ಮಂಡಿಸಿ ತಮ್ಮ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಪೂರ್ವಾಧ್ಯಕ್ಷರು ಹಾಗು ಸದಸ್ಯರನ್ನು ಅಭಿನಂದಿಸಿದರು. ಶ್ರೀಲತಾ ದೇವಾಡಿಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಡಿ.25: ಕಾಶ್ಮೀರದ ಮೆಂಧರ್ ಎಂಬಲ್ಲಿ ನಡೆದ ಸೇನಾ ಟ್ರಕ್ ಅಪಘಾತದಲ್ಲಿ ಐವರು ಯೋಧರು‌ ಮೃತಪಟ್ಟಿದ್ದು, ಈ ಪೈಕಿ ತಾಲೂಕಿನ ಬೀಜಾಡಿಯ ಅನೂಪ್ ಪೂಜಾರಿ (31)‌ ಅವರು ಕೂಡ ಹುತಾತ್ಮರಾಗಿದ್ದಾರೆ. ಮಂಗಳವಾರ ಸಂಜೆ ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಗ್ರಾಮದ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ಟ್ರಕ್ ರಸ್ತೆಯಿಂದ 350 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸೇನಾ ವಾಹನಲ್ಲಿ 10 ಯೋಧರು ಪ್ರಯಾಣಿಸುತ್ತಿದ್ದು, ಈ ಪೈಕಿ 5 ಮಂದಿ ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರಗೆ ದಾಖಲಿಸಲಾಗಿದೆ. ಹುತಾತ್ಮ ಯೋಧ ಅನೂಪ್ ಪೂಜಾರಿ ಅವರು ಮರಾಠ ಲೈಟ್ ಇನ್ಫೆಂಟ್ರಿ ಬಟಾಲಿಯನ್‌ನಲ್ಲಿ ಸೇವೆ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಬೀಜಾಡಿ ನಿವಾಸಿ ಚಂದು ಪೂಜಾರಿ, ನಾರಾಯಣ ಪೂಜಾರಿ ದಂಪತಿಗಳ ಪುತ್ರರಾದ ಅನುಪ್ ಅವರಿಗೆ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವಿದೆ. ಕಳೆದ ತಿಂಗಳು ರಜೆಗೆ ಊರಿಗೆ ಬಂದಿದ್ದ ಅವರು ಡಿ.15…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಲ್ಫ್: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯುಎಇ ನಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ದೆಗಳು ಭಾನುವಾರ ದುಬಾಯಿನ ಜಬಿಲ್ ಪಾರ್ಕ್ ನಲ್ಲಿ ನಡೆಯಿತು. ಅನಿವಾಸಿ ಕುಂದಗನ್ನಡಿಗರು ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಭಾಷಿಗರನ್ನು ಒಗ್ಗೂಡಿಸುದರ ಜೊತೆಗೆ ಭಾಷೆಯ ಅಸ್ಥಿತ್ವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಹಲವಾರು ವರ್ಷಗಳಿಂದ ಕೊಲ್ಲಿ ರಾಷ್ಟ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಬರುತ್ತಿದೆ. ಅಂತೆಯೇ ಪ್ರತಿ ವರ್ಷದಂತೆ ಈ ವರ್ಷವು ಕೂಡ ವಿಶೇಷ ರೀತಿಯಲ್ಲಿ ಫಾಮಿಲಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಫರ್ಧೆಗಳು ಅದ್ದೂರಿಯಾಗಿ ನಡೆಯಿತು.‌ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಅರಬ್ಬ ನಾಡಿನಲ್ಲಿ ನೆಲೆಸಿರುವ ಕುಂದಗನ್ನಡಿಗರು ಭಾಗವಹಿಸಿದ್ದರು. ಆಟೋಟ ಸ್ಫರ್ಧೆಗಳಿಗೆ ಐದು ತಂಡಗಳಾಗಿ ಮಾಡಲಾಗಿದ್ದು ಪ್ರತೀ ತಂಡಗಳಿಗೆ ಕುಂದಾಪುರದ ವಿಶೇಷತೆಗಳಲ್ಲಿ ಒಂದಾದ ಪಂಚಗಂಗಾವಳಿ ನದಿಗಳಾದ ಸೌರ್ಪಣಿಕ , ವರಾಹಿ , ಖೇಟಾ , ಕುಬ್ಜಾ ಮತ್ತು ಚಕ್ರಾ ಎಂದು ಕುಂದಾಪುರದಲ್ಲಿ ಸಂಗವಿಸುವ ಐದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡ ಮಾಡುವ 2024ನೇ ಸಾಲಿನ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಗಂಗೊಳ್ಳಿಯ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶಾಮ್ ಜಿ. ಎನ್. ಪೂಜಾರಿ ಆಯ್ಕೆಯಾಗಿದ್ದಾರೆ. ಈತ ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ್ ಪೂಜಾರಿ ಮತ್ತು ಪ್ರಾಧ್ಯಾಪಕಿ ಮಾಲತಿ ಗಣೇಶ ದಂಪತಿಯ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಿಂದ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ ಕೊಗ್ಗ ದೇವಣ್ಣ ಕಾಮತ್ ಅವರ ಸ್ಮರಣಾರ್ಥ ನೀಡಲಾಗುತ್ತಿರುವ 2024-25ನೇ ಸಾಲಿನ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ’ಗೆ ಖ್ಯಾತ ಜಾದೂ ಕಲಾವಿದ, ಲೇಖಕ, ನಟ ಓಂ ಗಣೇಶ್ ಉಪ್ಪುಂದ ಅವರನ್ನು ಸಮಿತಿ ಆಯ್ಕೆ ಮಾಡಿದೆ. ಓಂ ಗಣೇಶ್ ಉಪ್ಪುಂದ ಅವರದ್ದು ಸೃಜನಶೀಲ ವ್ಯಕ್ತಿತ್ವ. ನಾಟಕದಲ್ಲಿ ಅಭಿನಯ, ಆರ್ಕೆಸ್ಟ್ರಾ ತಂಡ ಕಟ್ಟಿ ಹಿನ್ನೆಲೆ ಸಂಗೀತ ನುಡಿಸುವುದರಿಂದ ಆರಂಭಿಸಿ ವಿಶ್ವದಾದ್ಯಂತ ಜಾದೂ ಪ್ರದರ್ಶನ ನೀಡಿ ಜಾದೂ ರಂಗದಲ್ಲಿ ಅಪಾರ ಖ್ಯಾತಿ ಗಳಿಸಿದರು. ಜಾದೂವಿನೊಂದಿಗೆ ಅವರ ಬೆರಳ ನೆರಳಿನಾಟ ಪ್ರದರ್ಶನವೂ ಖ್ಯಾತಿ ಗಳಿಸಿತ್ತು. ಈ ಮಧ್ಯೆ ಹಲವಾರು ಸಿನೆಮಾಗಳಲ್ಲಿ ನಟನೆ, ಪತ್ರಕರ್ತರಾಗಿ ಸೇವೆ, ಉತ್ತಮ ವಾಗ್ಮಿಯಾಗಿ ನೂರಾರು ಕಾರ್ಯಕ್ರಮಗಳಲ್ಲಿ ಪ್ರೇರಣಾದಾಯಕ ಮಾತು, ಲೇಖಕರಾಗಿ ಹಲವು ಪುಸ್ತಕಗಳ ಪ್ರಕಟಣೆ. ಹೀಗೆ ವಿವಿಧ ರಂಗದಲ್ಲಿ ಓಂಗಣೇಶ್ ಅವರು ತೊಡಗಿಕೊಂಡವರು. ಓಂಗಣೇಶ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಮತ್ತು ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭವು ಶನಿವಾರದಂದು ಕೊಡೇರಿ ಶಾಲಾ ಆವರಣದಲ್ಲಿ ಜರಗಿತು. ಅಂದು ಪೂರ್ವಾಹ್ನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ ಖಾರ್ವಿ ಧ್ವಜಾರೋಹಣಗೈದು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುರೇಶ ಎಚ್. ಖಾರ್ವಿ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಪೂಜಾರಿ ಕೊಡೇರಿ, ಹಿರಿಯರು ಕೊಡುಗೈದಾನಿಗಳಾದ ಕೆ. ವಾಸುದೇವ ಕಾರಂತ, ಉದ್ಯಮಿ ಹರಿದಾಸ್ ಪ್ರಭು, ಪಂಚಾಯತ್ ಸದಸ್ಯರುಗಳಾದ ಕೃಷ್ಣ ಖಾರ್ವಿ, ರಮೇಶ ಖಾರ್ವಿ, ನೇತ್ರಾವತಿ, ಶಶಿಕಲಾ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಮಂಜುನಾಥ ದೇವಾಡಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ ಮೊಗವೀರ, ಕಾರ್ಯದರ್ಶಿ ಚಂದ್ರ ಶೆಟ್ಟಿ, ಮುಖ್ಯ ಶಿಕ್ಷಕಿ ಮರ್ಲಿ ಮೊಗವೀರ ವಿದ್ಯಾರ್ಥಿ ನಾಯಕ ರಕ್ಷಕ್ ದೇವಾಡಿಗ ಉಪಸ್ಥಿತರಿದ್ದರು. ಹಲವಾರು ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಮಾಜ ಸಸೂತ್ರವಾಗಿ ನಡೆಯಲು ಸಾಂಸ್ಕೃತಿಕ ವಾತಾವರಣ ಅತ್ಯಗತ್ಯ. ಅದು ಎಷ್ಟು ಮುಖ್ಯ ಎಂಬುದನ್ನು ಹಿರಿಯರು ಕಂಡುಕೊಂಡು ಪೋಷಿಸುತ್ತಾ ಬಂದಿದ್ದರು. ಮುಂದೆಯೂ ಕಥೆ, ಸಂಗೀತ, ನಾಟಕ ಮೊದಲಾದ ಪ್ರಕಾರಗಳನ್ನು ಪೋಷಿಸುವ ಕಾರ್ಯವಾಗಬೇಕಿದೆ ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ನವೀನ್ ಹೆಚ್. ಜೆ ಹೇಳಿದರು. ಅವರು ಶನಿವಾರ ಯುಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ವರ್ಷ ವೈಭವ – 3 ದಿನಗಳ ಯಕ್ಷ – ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಕಲಾಸಕ್ತರೂ ಸಮಾಜವನ್ನು ನೋಡುವ ದೃಷ್ಟಿಕೋನವೂ ಬೆರೆಯಾದದ್ದು. ಅದನ್ನು ಪೋಷಿಸುವುದು ಮುಖ್ಯ. ಬುದ್ದಿ ಮತ್ತು ಮನಸ್ಸು ಒಟ್ಟಾಗಿ ಆಸ್ವಾದಿಸಿದರೆ ಅದೇ ಸುಂದರ ವಾತಾವರಣ ಎಂದರು. ಯಕ್ಷಗಾನ ಭಾಗವತ ಮಂಜುನಾಥ ದಾಸ್ ಅವರನ್ನು ಸನ್ಮಾನಿಸಲಾಯಿತು. ಯುಸ್ಕೋರ್ಡ್ ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಉಪ್ಪುಂದ ಅಧ್ಯಕ್ಷ ಮಂಜುನಾಥ ದೇವಾಡಿಗ, ಡಾ. ಬಿ.ಆರ್.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಸರ್ಕಾರಿ ಶಾಲೆ ಉಳಿದರೆ ಮಾತ್ರ ನಮ್ಮ ಖುಷಿ, ನೆನಪು ಹಾಗೂ ಸುಮಧುರ ಬಾಂಧವ್ಯ ಶಾಶ್ವತವಾಗಿರಲಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಸೂಕ್ತ ಸೌಲಭ್ಯ ಕಲ್ಪಿಸುವ ದೊಡ್ಡ ಕಾರ್ಯ ಆಗಬೇಕಿದೆ. ಎಲ್ಲಾ ಸರ್ಕಾರಿ ಶಾಲೆಗಳು ಉಳಿಯಬೇಕು. ಇದಕ್ಕೆ ಸ್ಥಳೀಯರ ಪ್ರೋತ್ಸಾಹದ ಜೊತೆಗೆ ಶಾಲಾ ಶಿಕ್ಷಕರು ಹಳೆ ವಿದ್ಯಾರ್ಥಿಗಳ ಉತ್ಸಾಹವು ಅಗತ್ಯವಾಗಿದೆ ಎಂದು ಉದ್ಯಮಿ ಎಚ್. ಜಯಶೀಲ ಎನ್. ಶೆಟ್ಟಿ ಹೇಳಿದರು. ಖಂಬದಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ತಮ್ಮ ಸಂಸ್ಥೆಯ ವತಿಯಿಂದ ಕೊಡುಗೆಯಾಗಿ ನೀಡಿದ ಶಾಲಾ ವಾಹನವನ್ನು ಹಸ್ತಾಂತರಿಸಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಅದಕ್ಕೆ ಸರ್ಕಾರಿ ಶಾಲೆಯೇ ಕಾರಣವಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಕೆಲವು ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು, ಪಾಲಕರು ಉತ್ಸಾಹ ತೋರಿದರೆ ಇನ್ನು ಕೆಲವು ಶಾಲೆಯಲ್ಲಿ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಲ್ಲಿನ ಶಿಕ್ಷಕ ವೃಂದ, ಶಾಲಾ ಎಸ್‌ಡಿಎಂಸಿ ಹಾಗೂ…

Read More