Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕತಾರಿನಲ್ಲಿರುವ ದೋಹಾದಲ್ಲಿ ನಡೆದ ‘ದಕ್ಷಿಣ ಭಾರತ ಪ್ರತಿಭಾನ್ವೇಷಣೆಯ ಪ್ರಶಸ್ತಿ (SIGTA) ಪ್ರದಾನʼ ಸಮಾರಂಭ 2024ರಲ್ಲಿ ಕರ್ನಾಟಕದ ಬೈಂದೂರು ಮೂಲದವರಾದ ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಸಮುದಾಯ ಸಮರ್ಥ ಸೇವಕ ಪ್ರಶಸ್ತಿಯನ್ನು ಇತ್ತೀಚಿಗೆ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಅಪ್ರತಿಮ ಕೊಡುಗೆ ಹಾಗೂ ಅಚಲ ಸೇವೆಯನ್ನು ಗುರುತಿಸಿ ನೀಡಲಾಗಿದೆ. ಮುಂಬರುವ ದಿನಗಳಲ್ಲೂ ಸಮುದಾಯದ ಅಭ್ಯುದಯಕ್ಕೆ ಅವರ ಕೊಡುಗೆ ಮುಂದುವರೆಯಲಿ ಎಂದು ಹಾರೈಸೋಣ. ಅವರು ಕತಾರಿನಲ್ಲಿ ಕಳೆದ 17 ವರ್ಷಗಳಿಗಿಂತ ಹೆಚ್ಚು ಕಾಲ ವಾಸಿಸುತ್ತಿದ್ದು ಹಲವಾರು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಲ್ಲಿ. ತಮ್ಮನ್ನು ತಾವು ತೊಡಗಿಸಿಕೊಂಡು ಭಾರತೀಯ ಸಮುದಾಯದ ಅಭಿವೃದ್ಧಿ ಹಾಗೂ ಏಳಿಗೆಗೆ ಶ್ರಮಿಸುತ್ತಿರುವರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಗೋಳಿಯಂಗಡಿ ಸಮೀಪದ ಬೆಳ್ವೆ ಗ್ರಾಮದ ಕಾರಿಕೊಡ್ಲು ಕ್ರಾಸ್ ನಲ್ಲಿ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿ ಹಾಗೂ ಇನೋರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದ ಘಟನೆ ಶನಿವಾರ ಸಂಜೆ ನಡೆದಿದೆ. ಮೃತಪಟ್ಟ ವ್ಯಕ್ತಿ ಉದಯ್ ಹಾಗೂ ಗಾಯಗೊಂಡ ವ್ಯಕ್ತಿ ಕೃಷ್ಣ ಎಂದು ಗುರುತಿಸಲಾಗಿದೆ. ಕಾರಿಕೊಡ್ಲು ಕ್ರಾಸ್ ಹತ್ತಿರ ಸವಾರ ಉದಯ್ ಮತ್ತು ಸಹಸವಾರ ಕೃಷ್ಣ ಅವರು ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿರುವ ಹೊತ್ತಲ್ಲಿ ಗೋಳಿ ಯಂಗಡಿಯಿಂದ ಕಾಡಿಕೊಡ್ಲು ಕಡೆಗೆ ಸಾಗುತ್ತಿದ್ದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದ್ದು, ಉದಯ್ ಅವರ ತಲೆಗೆ ಗಂಭೀರ ಏಟು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಸಹಸವಾರ ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್‌ನ್ನು ಶಂಕರನಾರಾಯಣ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಡಿಕ್ಕಿ ಹೊಡೆದ ಬಳಿಕ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದ. ಟಿಪ್ಪರ್ ಪರಿಶೀಲಿಸಿದಾಗ ಎರಡೂವರೆ ಯೂನಿಟ್ ಮರಳು ಪತ್ತೆಯಾಗಿದೆ. ಎಲ್ಲಿಂದಲೋ ಮರಳು ಕಳವು ಮಾಡಿ ಅಕ್ರಮ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮರವಂತೆ ಬೀಚ್‌ ಸಮೀಪ ಕಾರಿನಲ್ಲಿ ಎಂಡಿಎಂಎ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಉಡುಪಿ ಸೆನ್ ಅಪರಾಧ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಅಬ್ರಾರ್‌ ಶೇಖ್, ಮೊಹಮ್ಮದ್‌ ಇಸ್ಮಾಯಿಲ್‌ ಫರ್ಹಾನ್, ಮೊಹಮ್ಮದ್‌ ಜಿಯಾಮ್‌ ಬೆಳ್ಳಿ, ನೌಮನ್ ಸಜ್ಜಾದ್‌ ಮುಸ್ತಕೀಮ್‌ ಕೆವಾಕ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಸೆನ್ ಅಪರಾಧ ದಳದ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಸೆನ್ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪವನ್ ನಾಯಕ್, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್‌, ಪ್ರವೀಣ್‌, ರಾಜೇಶ್ , ದಿಕ್ಷೀತ್, ನಿಲೇಶ್, ಮಾಯಪ್ಪ ಗಡದೆ ಮತ್ತು ಸುದೀಪ್ ರವರ ತಂಡ ದಾಳಿ ನಡೆಸಿ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 15 ಗ್ರಾಂ 59 ಮಿಲಿ ಗ್ರಾಂ ತೂಕದ ಅಂದಾಜು ಮೌಲ್ಯ ರೂ. 78,000ದ ಎಂಡಿಎಂಎ ಪೌಡರ್‌, ವಶಕ್ಕೆ ಪಡೆದಿದ್ದಾರೆ. ಆಪಾದಿತರು ಬಳಸಿದ್ದ ಮೊಬೈಲ್ ಪೋನ್-5, ಅಂದಾಜು ಮೌಲ್ಯ ರೂ. 50,000/-, ಪಾರದರ್ಶಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಿ. ಹಾಗೂ  ಬೆಂಗಳೂರಿನ ಸಪ್ನ ಬುಕ್ ಹೌಸ್‌ನ ಸಹಯೋಗದಲ್ಲಿ ನಡೆದ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ  ಡಾ. ಎಂ. ವೀರಪ್ಪ ಮೊಯಿಲಿ ಅವರ  ‘’ವಿಶ್ವಸಂಸ್ಕೃತಿ ಮಹಾಯಾನ’’ – ಸಂಪುಟ-2, ಗದ್ಯ ಮಹಾಕಾವ್ಯ ಲೋಕಾರ್ಪಣೆ ಸಮಾರಂಭ ಭಾನುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿ ಆವರಣದ ಡಾ. ವಿಎಸ್ ಆಚರ‍್ಯ ಸಭಾಭವನದಲ್ಲಿ ಜರುಗಿತು. ಮಹಾಕಾವ್ಯ ಲೋಕಾರ್ಪಣೆಗೊಳಿಸಿ ಮಾತನಾಡಿದ ಮೈಸೂರು ವಿವಿಯ ನಿವೃತ್ತ ಆಂಗ್ಲ ಪ್ರಾಧ್ಯಪಕ ಹಾಗೂ ಖ್ಯಾತ ವಿಮರ್ಶಕ ಪ್ರೋ ನಾಗಣ್ಣ, ಮೊಯಿಲಿಯವರ ಸಂಕಲ್ಪಕ್ಕೂ ಅದರ ಸಾಕ್ಷಾತ್ಕರಕ್ಕೂ ಅಂತರವೇ ಇರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರು  ಬರ್ಹಿಲೋಕದಲ್ಲಿ ಜನಕಲ್ಯಾಣದಲ್ಲಿ ತೊಡಗಿರುವಂತೆ, ಅಂತರದಂಗದಲ್ಲಿ ಹಲವಾರು ವಿಚಾರಗಳಿಗೆ ಅಕ್ಷರ ರೂಪಕೊಡುವಲ್ಲಿ ಧ್ಯಾನಸ್ಥರಾಗಿರುತ್ತಾರೆ. ಇವರು ಅಪರೂಪದ ಚೈತನ್ಯವೇ ಸರಿ.  ವೀರಪ್ಪ ಮೊಯಿಲಿಯವರ  ‘’ವಿಶ್ವಸಂಸ್ಕೃತಿ ಮಹಾಯಾನ’’ದ ಹೋಲಿಕೆ ಏನಾದರೂ ಇದ್ದರೆ,  ಅಮೇರಿಕಾದ ಇತಿಹಾಸತಜ್ಞ  ವಿಲ್ ಡ್ಯೂರಾಂಟ್ ಬರೆದಿರುವ  ‘ನಾಗರೀಕತೆಯ ಕಥೆ’ ಎನ್ನುವ 11 ಸಂಪುಟಕ್ಕೆ ಸರಿಹೊಂದಬಲ್ಲದು. ಪ್ರಾಚ್ಛ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಜ.12: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ನೇತೃತ್ವದ ರೈತಶಕ್ತಿ ಸಹಕಾರಿ ಒಕ್ಕೂಟ 13ರಲ್ಲಿ 11 ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ರೈತಶಕ್ತಿ ಸಹಕಾರಿ ಒಕ್ಕೂಟದಲ್ಲಿ ಸಾಮಾನ್ಯ ಕ್ಷೇತ್ರದಿಂದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಗುರುರಾಜ ಹೆಬ್ಬಾರ್, ಪ್ರಕಾಶ್ ಎನ್. ಪೂಜಾರಿ, ಮಂಜು ದೇವಾಡಿಗ, ರಾಜೇಶ್ ದೇವಾಡಿಗ, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಉದಯ್ ಕುಮಾರ್ ಶೆಟ್ಟಿ, ಮಹಿಳಾ ಮೀಸಲು ಕ್ಷೇತ್ರದಿಂದ ದಿನಿತಾ ಶೆಟ್ಟಿ, ಕೆ. ಲೀಲಾ ಪೂಜಾರಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಈಶ್ವರ ಹಕ್ಲತೋಡು, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಹೂವ ನಾಯ್ಕ್ ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗ ಎ ಕ್ಷೇತ್ರಕ್ಕೆ ಮೋಹನ್ ಪೂಜಾರಿ ಅವರು ಅವಿರೋಧ ಆಯ್ಕೆಯಾಗಿದ್ದರು. ರೈತಬಂಧು ಒಕ್ಕೂಟದಲ್ಲಿ ಸಾಮಾನ್ಯ ಕ್ಷೇತ್ರದಿಂದ ಬಿ.ಎಸ್. ಸುರೇಶ್ ಶೆಟ್ಟಿ, ಭರತ್ ದೇವಾಡಿಗ ಆಯ್ಕೆಯಾಗಿದ್ದಾರೆ. ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಘದ ಚುನಾವಣೆ ನಡೆದಿದ್ದು ಚುನಾವಣಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರ ಆಶ್ರಯದ 2024ರಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಯಲ್ಲಿ ಮನ್ವಿತಾ ಬಿ. ವಿ. ತ್ರಾಸಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಿರಿಯ ದರ್ಜೆ ಪರೀಕ್ಷೆಯಲ್ಲಿ 88.75%ರಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಲಾವಣ್ಯ ಶ್ರೀಧರ ಶೆಟ್ಟಿಗಾರ್ ತ್ರಾಸಿ ಅವರ ಶಿಷ್ಯೆಯಾಗಿದ್ದು, ತ್ರಾಸಿ ವಿಜಯ ಶೆಟ್ಟಿಗಾರ್ ಮತ್ತು ಭುವನೇಶ್ವರಿ ದಂಪತಿ ಪುತ್ರಿ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜ.10 ರಿಂದ 12ರ ವರೆಗೆ ನಡೆದ ಸೌತ್ ಏಶಿಯನ್ ಕ್ರೀಡಾಕೂಟದಲ್ಲಿ ಭಾರತದ ಪ್ರತಿನಿಧಿಯಾಗಿ  4×100 ರಿಲೇ ಓಟದಲ್ಲಿ ಸ್ಪರ್ಧೆಸಿದ ಉಡುಪಿ ಡಿಎಆರ್‌ನ ಮೀಸಲು ಪೊಲೀಸ್  ಸಹಾಯಕ ಉಪನಿರೀಕ್ಷಕ ಶಂಕರ ಪೂಜಾರಿ ಅವರು ಚಿನ್ನದ ಪದಕ ಗಳಿಸಿರುತ್ತಾರೆ. ಈ ಕ್ರೀಡಾಕೂಟದಲ್ಲಿ ದೇಶ ವಿದೇಶಗಳ ಸಾವಿರಾರು ಕ್ರೀಡಾ ಪಟುಗಳು ಭಾಗವಹಿಸಿರುತ್ತಾರೆ. ಮೂಲತಃ ಬೈಂದೂರು ತಾಲೂಕು ಬಿಜೂರಿನವರಾದ ಶಂಕರ ಪೂಜಾರಿ ಅವರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ್ದು, ಓಟ, ರಿಲೇ ಮೊದಲಾದ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ತನಕವೂ ಭಾಗವಹಿಸಿದ್ದಾರೆ. 2014ರಲ್ಲಿ ನಡೆದ 26ನೇ ಮಲೇಷಿಯಾ ಅಥ್ಲೆಟಿಕ್ ಚಾಂಪಿಯನ್’ಶಿಪ್’ನಲ್ಲಿ 2 ಚಿನ್ನ ಹಾಗೂ ಎರಡು ಬೆಳ್ಳಿಯ ಪದಕ ಗೆದ್ದಿದ್ದರು.ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮಾಸ್ಟ್ ಸ್ಪೋರ್ಟ್ಸ್ 2021 ಕ್ರೀಡಾಕೂಟ 100 ಹಾಗೂ 200 ಮೀಟರ್ ಓಟದ ಸ್ವರ್ಧೆಯಲ್ಲಿ ಅವರು ಬೆಳ್ಳಿಯ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಶಂಕರ ಪೂಜಾರಿ ಅವರು ಪ್ರಸ್ತುತ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರ ಆಶ್ರಯದಲ್ಲಿ 2024ರಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಯಲ್ಲಿ ಕುಂದಾಪುರದ ನಮಸ್ವಿ ಎಸ್. ಶೆಟ್ಟಿಗಾರ್ ಅವರು ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ 92.85% ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಶ್ರುತಿ ಭಟ್ ಉದ್ಯಾವರ ಹಾಗೂ ಪ್ರಸ್ತುತ ಆನಂದ್ ಕೇರಳ ಅವರಲ್ಲಿ ಭರತನಾಟ್ಯ ಅಭ್ಯಾಸವನ್ನು ಮಾಡುತ್ತಿದ್ದಳು. ಅವರು ಕುಂದಾಪುರ ತಾಲೂಕಿನ ಶ್ರೀಧರ್ ಕುಮಾರ್ ಹಾಗೂ ಲಾವಣ್ಯ ಶ್ರೀಧರ್ ದಂಪತಿಗಳ ಪುತ್ರಿ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್. ಬೋಸರಾಜು ಇಂದು ಭೇಟಿ ನೀಡಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಳದ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ಈ ವೇಳೆ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ, ಸದಸ್ಯರಾದ ರಾಜೇಶ ಕಾರಂತ್, ಧನಾಕ್ಷಿ ಪೂಜಾರಿ, ಸುಧಾ ಕೆ. ಮೊಗವೀರ, ದೇವಳದ ಕಾರ್ಯನಿರ್ವಾಣಾಧಿಕಾರಿ ಪ್ರಶಾಂತ್ ಶೆಟ್ಟಿ ಮತ್ತು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಪ್ರಾರಂಭಿಕ ಹಂತದ ಸಿಎಮ್‌ಎ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ  ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿಯೇ ಮಹೋನ್ನತ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ವೈಷ್ಣವಿ ಹಾಗೂ ಕಾರ್ತಿಕ್ ಕೆ. ಬಿಲ್ಲವ ಅವರು ಸಿ.ಎಂ.ಎ. ಇಂಟರ್‌ಮೀಡಿಯೇಟ್ ಪ್ರೋಗ್ರಾಮ್‌ಗೆ ಅರ್ಹತೆ ಪಡೆದಿದ್ದಾರೆ. ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ವೀ ರೀಚ್ ಸಂಸ್ಥೆಯ ನುರಿತ ತರಬೇತುದಾರರಿಂದ ವಿದ್ಯಾರ್ಥಿಗಳು ತರಬೇತಿ ಹಾಗೂ ಮಾರ್ಗದರ್ಶನ ಪಡೆದು ಈ ಸಾಧನೆಗೈದಿದ್ದಾರೆ. ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

Read More