Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಸುರಭಿ ರಿ. ಬೈಂದೂರು ಸಂಸ್ಥೆಯ ಮೂಲಕ ಕಳೆದ 10 ವರ್ಷಗಳಿಂದ ನಾಡಿನ ಸಾಂಸ್ಕೃತಿಕ ಕ್ಷೇತ್ರದ ಖ್ಯಾತನಾಮರಿಗೆ ನೀಡಲಾಗುತ್ತಿರುವ ಬಿಂದುಶ್ರೀ ಪ್ರಶಸ್ತಿಯನ್ನು ಈ ಭಾರಿ ನಾಡಿನ ಖ್ಯಾತ ಸಾಹಿತಿ, ವೈದ್ಯ, ನಿರೂಪಕ ಡಾ. ನಾ. ಸೋಮೇಶ್ವರ ಅವರಿಗೆ ನೀಡಲಾಗುತ್ತಿದೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸುರಭಿ, ಜನವರಿ 29ರಿಂದ 5 ದಿನಗಳ ಕಾಲ ಸುರಭಿ ಜೈಸಿರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜನವರಿ 30ರಂದು ಡಾ. ನಾ. ಸೋಮೇಶ್ವರ ಅವರಿಗೆ 11ನೇ ಬಿಂದುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.  ಡಾ. ನಾ. ಸೋಮೇಶ್ವರ:ಡಾ. ನಾ. ಸೋಮೇಶ್ವರ ಅವರು ವಿದ್ಯುನ್ಮಾನ ಮಾಧ್ಯಮ ಮತ್ತು ಬರವಣಿಗೆಗಳ ಮೂಲಕ ಜನರ ಹೃದಯ ತಟ್ಟಿದವರು. ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ಅವರು ಕಳೆದ 22 ವರ್ಷಗಳಿಂದ ನಡೆಸುತ್ತಿರುವ ಈ ಕಾರ್ಯಕ್ರಮ 4,800ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿದೆ. ಸೋಮೇಶ್ವರ ಅವರು ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಾಲಿಗ್ರಾಮ ಸಮೀಪದ ಕೋಡಿ ಕನ್ಯಾಣ ಸಮುದ್ರ ಕಿನಾರೆಯಲ್ಲಿ  ಸುಮಾರು 35-45 ವರ್ಷದ ಅಪರಿಚಿತ ಮಹಿಳೆಯ ಶವವು ಕೊಳೆತೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪರಿಚಿತ ಮಹಿಳೆಯ ಶವವು ಕೊಳೆತ ರೀತಿಯಲ್ಲಿ ತೇಲುತ್ತಿರುವುದನ್ನು ನೋಡಿ ಸ್ಥಳೀಯರು, ಕೂಡಲೇ ಕೋಟ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿರುತ್ತಾರೆ. ಪೊಲೀಸ್ ಉಪನಿರೀಕ್ಷಕರಾದ ರಾಘವೇಂದ್ರ ಸಿ. ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಮೃತದೇಹವು ಬೇರೆ ಕಡೆಯ ನೀರಿನಲ್ಲಿ ಅಥವಾ ಸಮುದ್ರದಲ್ಲಿ ಬಿದ್ದು ಮೃತಪಟ್ಟು ತೇಲಿ ಬಂದಿರುವ ಬಗ್ಗೆ ಸಂಶಯಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ ಮತ್ತು ವಾರ್ತಾಭಾರತಿ ಡಿಜಿಟಲ್ ಚಾನಲ್ ಇವರ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ನಡೆಸುವ ’ನಮ್ಮ ಸಂವಿಧಾನ – ನಮ್ಮ ಹೆಮ್ಮೆ’ ವಿಶೇಷ ಸಂವಾದ ಕಾರ್ಯಕ್ರಮ ಮತ್ತು ಚಿತ್ರೀಕರಣ ಸೋಮವಾರದಂದು ಕ್ರಿಯೇಟಿವ್ ’ಚಿಂತಕರ ಚಾವಡಿ’ ಸಪ್ತಗಿರಿ ಕ್ಯಾಂಪಸ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂವಾದಕರಾಗಿ ನಿವೃತ್ತ ಪ್ರಾಧ್ಯಾಪಕರು ಹಾಗೂ ಖ್ಯಾತ ವಾಗ್ಮಿಗಳು ಸುರೇಂದ್ರ ಶೆಟ್ಟಿ ಕೊಕ್ಕರ್ಣೆ ಭಾಗವಹಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. “ಸಂವಿಧಾನ ಎನ್ನುವುದು ಭಾರತ ದೇಶದ ಪ್ರತಿಯೊಬ್ಬ ನಾಗರಿಕನ ಧರ್ಮಗ್ರಂಥ. ಅದನ್ನು ಪ್ರತಿಯೊಬ್ಬರೂ ಓದಲೇಬೇಕು. ಸಂವಿಧಾನದಲ್ಲಿರುವ ಕಾಯ್ದೆ ಕಾನೂನುಗಳ ಬಗ್ಗೆ ತಿಳಿದುಕೊಂಡು ಅದರಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಆದ್ಯ ಕರ್ತವ್ಯ. ಸಂವಿಧಾನ ರಚನೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸಂವಿಧಾನವನ್ನು ನಮಗೆ ನೀಡಿರುವುದು ಪ್ರತಿಯೊಬ್ಬ ಭಾರತೀಯ ನಾಗರಿಕನು ನೆಮ್ಮದಿಯಿಂದ ಜೀವಿಸಲಿ ಎಂದು. ಸಂವಿಧಾನದಲ್ಲಿ ನೀಡಿರುವ ಹಕ್ಕುಗಳ ಬಗ್ಗೆ ಮಾತ್ರ ನಾವು ಮಾತನಾಡುತ್ತೇವೆ ಆದರೆ ಅದರಲ್ಲಿ ಅಡಕವಾಗಿರುವ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಜಿಲ್ಲಾಡಳಿತ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ-2025 ರ ಸಮಾರೋಪ ಸಮಾರಂಭವು ಜನವರಿ 23 ರಂದು ಸಂಜೆ 5 ಗಂಟೆಗೆ ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸದರಿ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರಾದ ಗೌರವಾನ್ವಿತ ಥಾವರ್ ಚಂದ್ ಗೆಹೋಟ್, ರಾಜ್ಯದ ಗೃಹ ಸಚಿವರಾದ ಡಾ.ಜಿ ಪರಮೇಶ್ವರ ಹಾಗೂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಆಳ್ವಾಸ್ ಮೂಡಬಿದಿರೆ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡದ ಕೊಡುಗೆ ಅಪಾರ. ಇಂದು 7 ನೇ ತಲಾಂತರದಲ್ಲಿ ನಡೆಯುತ್ತಿರುವ ಈ ಕಲೆಯನ್ನು ನಾವೆಲ್ಲರೂ ಸೇರಿ ಉಳಿಸಬೇಕು ಎಂದು ಡಾ. ಹರಿಕೃಷ್ಣ ಪುನರೂರು ಅವರು ಹೇಳಿದರು. ಅವರು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆದ ಗೊಂಬೆಯಾಟ ಅಕಾಡೆಮಿಯ 10ನೇ ವಾರ್ಷಿಕೋತ್ಸವ ಹಾಗೂ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2024ರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ. ಎಲ್. ಸಾಮಗರು ಅವರು ಸಮಾರಂಭವನ್ನು ಉದ್ಘಾಟಿಸಿ, ಯಕ್ಷಗಾನದ ಇತಿಹಾಸಕ್ಕಿಂತ ಗೊಂಬೆಯಾಟ ಕಲೆಯೇ ಪುರಾತನವಾದದ್ದು ಎಂದು ಅಭಿಪ್ರಾಯಪಟ್ಟರು. ಗಂಗೊಳ್ಳಿ ಹಾಲ್ಮಕ್ಕಿ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿಯಿಂದ ವಿಷ್ಣು ಸಹಸ್ರನಾಮದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಂಗೊಳ್ಳಿಯ ಡಾ. ಕಾಶೀನಾಥ್ ಪೈ ಅವರು ಪ್ರಾರ್ಥಿಸಿದರು. ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಕುಂದಾಪುರದ ಮೊಕ್ತೇಸರರಾದ ರಾಧಾಕೃಷ್ಣ ಶೆಣೈ, ಶ್ರೀ ಮಹಾಲಿಂಗೇಶ್ವರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗವು ಯಕ್ಷಿ ಟೆಕ್‌ ಸೊಲ್ಯೂಶನಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಜೊತೆಗಿನ ಸಹಯೋಗದಲ್ಲಿ 2025ರ ಕಾಲೇಜು ಆವರಣದಲ್ಲಿ ಯಶಸ್ವಿಯಾಗಿ ಇಂಟರ್ನ್‍ಶಿಪ್ ಡ್ರೈವ್‍ನ್ನು ಆಯೋಜಿಸಿತು. ಕಾರ್ಯಕ್ರಮವನ್ನು ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಮಹೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಸ್ವಾಗತ ನೀಡಿ, ಇಂಟರ್ನ್‍ಶಿಪ್ ಮೂಲಕ ತರಬೇತಿ ಪಡೆಯುವ ಮಹತ್ವವನ್ನು ವಿವರಿಸುವ ಮೂಲಕ ಪ್ರಾರಂಭಿಸಿದರು. ಯಕ್ಷಿ ಟೆಕ್ ಸೊಲ್ಯೂಶನಸ್ ಸಂಸ್ಥೆಯ ಪ್ರತಿನಿಧಿ ಪವನ್ ಅವರು ಸಂಸ್ಥೆಯ ಹಿನ್ನೆಲೆ ಮತ್ತು ಉದ್ಯೋಗಾವಕಾಶಗಳ ಬಗ್ಗೆ ವಿವರಿಸಿದರು. ಅಂತಿಮ ವರ್ಷದ ಬಿಎಸ್ಸಿ ಮತ್ತು ಬಿಸಿಎ ವಿದ್ಯಾರ್ಥಿಗಳು ಡ್ರೈವ್‍ನಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿ ಮತ್ತು ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಅವರು ಅಂತಿಮ ಸುತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಕಾರ್ಯಕ್ರಮವು ವಿದ್ಯಾಸಂಸ್ಥೆ ಮತ್ತು ಕೈಗಾರಿಕೆ ನಡುವೆ ಸಹಕಾರವನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಲವ್ಲೀ ಪ್ರೊಫೆಷನಲ್ ವಿವಿ ಜಲಂಧರ್ ಪಂಜಾಬ್ ನಲ್ಲಿ ನಡೆದ  ಅಖಿಲ ಭಾರತ ಅಂತರ್ ವಿವಿ ವೇಟ್ ಲಿಫ್ಟಿಂಗ್ ಚಾಂಪಿಯಶಿಪ್‌ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದ ಮಂಗಳೂರು ವಿವಿ ರನ್ನರ್ಸ್ ಅಪ್  ಪ್ರಶಸ್ತಿಯನ್ನು ಪಡೆದುಕೊಂಡಿತು. 32 ವರ್ಷಗಳ ಬಳಿಕ ರನ್ನರ್ಸ್ ಅಪ್ ಪ್ರಶಸ್ತಿ ಪಡೆದು ಮಂಗಳೂರು ವಿವಿ ಪ್ರಶಂಸೆಗೆ ಪಾತ್ರವಾಗಿದೆ.  ವಿವಿ ಮಂಗಳೂರು ವಿವಿಯ ಒಟ್ಟು  9 ವಿದ್ಯಾರ್ಥಿಗಳ ತಂಡದಲ್ಲಿ  ಆಳ್ವಾಸ್ ಸಂಸ್ಥೆಯ 6 ವಿದ್ಯಾಥಿಗಳು ಭಾಗಿಯಾಗಿದ್ದರು . ಆಳ್ವಾಸ್ ಕಾಲೇಜಿನ ಪ್ರಶಾಂತ್‌ಗೆ ಬೆಳ್ಳಿ, ಪ್ರತ್ಯುಶ್‌ಗೆ ನಾಲ್ಕನೇ ಸ್ಥಾನ, ಜೋಸುವ ರಾಜಕುಮಾರ್‌ಗೆ ನಾಲ್ಕನೇ ಸ್ಥಾನ ಪಡೆದರು. ಮಂಗಳೂರು ವಿವಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಲು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳ ಕೊಡುಗೆ ಪ್ರಮುಖವಾಗಿದೆ. ಡಿಸೆಂಬರ್‌ನಲ್ಲಿ ಆಚಾರ್ಯ ನಾಗಾರ್ಜುನ ಯೂನಿವರ್ಸಿಟಿ ಗುಂಟೂರ್‌ನಲ್ಲಿ  ನಡೆದ  ದಕ್ಷಿಣ ಭಾರತ ಅಂತರ್ ವಿ. ವಿ ಚಾಂಪಿಯಶಿಪ್‌ನಲ್ಲಿ 3 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿತ್ತು. ಇತಿಹಾಸದಲ್ಲೇ ಮೊದಲ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ, ಶಿಸ್ತು ಇರಬೇಕು. ರಾಮಾಯಣ, ಮಹಾಭಾರತ ಹಾಗೂ ಪುರಾಣ ಮತ್ತು ಗ್ರಂಥಗಳಲ್ಲಿ ಅಡಕವಾಗಿ ಅನೇಕ ವಿಷಯಗಳು ಇಂದಿನ ಮಕ್ಕಳಿಗೆ ತಿಳಿದಿಲ್ಲ. ಪಠ್ಯ ಪುಸ್ತಕದಲ್ಲಿ ಇರುವ ವಿಷಯಗಳನ್ನು ಮಾತ್ರ ಮಕ್ಕಳಿಗೆ ಹೇಳಲಾಗುತ್ತಿದೆ. ಇದರಿಂದ ನಮ್ಮ ಇತಿಹಾಸ ನಮ್ಮ ಮಕ್ಕಳಿಗೆ ತಿಳಿಯುತ್ತಿಲ್ಲ. ಹೀಗಾಗಿ ಪುರಾಣಗಳನ್ನು, ಧಾರ್ಮಿಕ ಗ್ರಂಥಗಳನ್ನು ಪಠಣ ಮಾಡಬೇಕು. ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಮಹಾಬಲೇಶ್ವರ ಐತಾಳ್ ಉಪ್ಪುಂದ ಹೇಳಿದರು. ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಆಶ್ರಯದಲ್ಲಿ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ಸಹಯೋಗದೊಂದಿಗೆ ಗಂಗೊಳ್ಳಿಯ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆಯ ಟಿ. ವಿಮಲಾ ವಿ.ಪೈ ಸಭಾಂಗಣದಲ್ಲಿ ಶನಿವಾರ ಜರಗಿದ ಅಜಿತ್ ಕುಮಾರ ಅವರ ಪುಣ್ಯತಿಥಿ ’ಸೇವಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಯುವ ಜನರ ಶಕ್ತಿ ಅಪವ್ಯಯವಾಗುತ್ತಿದೆ ಎಂಬುದನ್ನ ಮನಗಂಡ ಅಜಿತ್ ಕುಮಾರ್‌ರು 1981 ಸೇವಾ ಪ್ರವೃತಿ ಘಟಕವನ್ನು ಸ್ಥಾಪಿಸಿ ಸೇವಾವೃತಿಗಳ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ ಮಟ್ಟದ ಅಬಾಕಸ್ ಸ್ಪರ್ದೆಯಲ್ಲಿ ಕುಂದಾಪುರದ ಓಕ್‌ವುಡ್ ಇಂಡಿಯನ್ ಸ್ಕೂಲ್‌ನ 4ನೇ ತರಗತಿಯ ವಿದ್ಯಾರ್ಥಿ ಲಕ್ಷ್ ರಾಜೇಶ್ ಪ್ರಥಮ ಸ್ಥಾನ ಪಡೆದಿದ್ದಾನೆ. ಇತ್ತೀಚಿಗೆ ಚಿತ್ರದುರ್ಗದಲ್ಲಿ ನಡೆದ 19ನೇ ರಾಜ್ಯಮಟ್ಟದ ಐಡಿಯಲ್ ಪ್ಲೇ ಅಬಾಕಸ್ ಮೆಂಟಲ್ ಅರಿಥಮೆಟಿಕ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದನು. ಈತನಿಗೆ ಕುಂದಾಪುರದ ಸೆಂಟರ್ ಮುಖ್ಯಸ್ಥರಾದ ಪ್ರಸನ್ನ ಕೆ. ಬಿ. ಮತ್ತು ಮಹಾಲಕ್ಷ್ಮಿ ಅವರು ತರಬೇತಿ ನೀಡಿರುತ್ತಾರೆ. ಈತ ಅರಾಟೆಯ ರೇಷ್ಮಾ ಮತ್ತು ರಾಜೇಶ್ ದಂಪತಿಯ ಪುತ್ರ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕೃಷಿ ಇಲಾಖೆಯ ವತಿಯಿಂದ ಅನುಷ್ಟಾನಗೊಳಿಸುತ್ತಿರುವ ಆಹಾರ ಮತ್ತು ಪೌಷ್ಟಿಕ ಭದ್ರತೆ (ಎಫ್.ಎನ್.ಎಸ್) ಯೋಜನೆಯಡಿ ತಾಂತ್ರಿಕ ಸಹಾಯಕರ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಬಿ.ಎಸ್.ಸಿ (ಕೃಷಿ) ಪದವೀಧರರಾಗಿರುವ, ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರುವ ಹಾಗೂ ಕೃಷಿ ಸಂಶೋಧನೆ ಮತ್ತು ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಅನುಭವ ಇರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜನವರಿ 22 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರು, ಸಿ ಬ್ಲಾಕ್, 2 ನೇ ಮಹಡಿ, ಕೊಠಡಿ ಸಂಖ್ಯೆ: ಸಿ-304, ರಜತಾದ್ರಿ, ಮಣಿಪಾಲ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More