ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಕಾಲಿಕ ಮಳೆ ಮತ್ತು ಸಮೃದ್ಧ ಬೆಳೆಗಾಗಿ ಜಗದೊಡೆಯ ಶ್ರೀ ಮದ್ಯೋಗಾನಂದ ಗುರು ನರಸಿಂಹ ಮತ್ತು ಪರಿವಾರ ದೇವತೆಗಳಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೀಯಾಳ ಅಭಿಷೇಕವನ್ನು ಅನೂಚಾನವಾಗಿ ಸೋಮವಾರದಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಭಾಗವಹಿಸಿ ಶ್ರೀ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ ಕಾರಂತರು, ಉಪಾಧ್ಯಕ್ಷ ಸಿ. ಚಂದ್ರ ಶೇಖರ ಉಪಾಧ್ಯ, ಕಾರ್ಯದರ್ಶಿ ಪರಶುರಾಮ ಭಟ್ಟರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಕೆ. ತಾರಾನಾಥ ಹೊಳ್ಳ, ಪ್ರಸನ್ನ ತುಂಗ ಮತ್ತು ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.
ಸಾಲಿಗ್ರಾಮ ದೇವಸ್ಥಾನಕ್ಕೆ ಡಿಸಿ ಭೇಟಿ:
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂ ಟಿ.ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇಗುಲದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಪ್ರಸಾದ ವಿತರಿಸಿ ಗೌರವಿಸಲಾಯಿತು.











