Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಕಾಂಪಿಟೇಶನ್ ಸ್ಪರ್ಧೆಯಲ್ಲಿ ವೃಷಭ್ ಶೆಣೈ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.  ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯಾಗಿರುವ ವೃಷಭ್ ಶೆಣೈ, ಉದ್ಯಮಿ ಜಿ. ವಿಠಲ ಭಾಸ್ಕರ ಶೆಣೈ ಮತ್ತು ವೈಷ್ಣವಿ ಶೆಣೈ ದಂಪತಿ ಪುತ್ರ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರದ ಅರಿವು, ದೇಶಭಕ್ತಿಯ ಒಳ್ಳೆಯ  ಶಿಕ್ಷಣ ನೀಡುವುದು ಪೋಷಕರ ಮುಂದಿರುವ ಇಂದಿನ ದೊಡ್ಡ ಸವಾಲಾಗಿದೆ. ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ಮತ್ತು ಸಂವೇದನಾಶೀಲ ಆಗಿರುತ್ತದೆ.  ಮನೆ ಮತ್ತು ಶಾಲೆಯ ವಾತಾವರಣದಲ್ಲಿ ಕಾಣುವ ಶಿಸ್ತು ಸಂಸ್ಕಾರಗಳನ್ನು  ಅವು ಚಾಚೂ ತಪ್ಪದೇ  ಅನುಸರಿಸುತ್ತವೆ.  ಸಂಸ್ಕಾರಯುತ  ಶಿಕ್ಷಣ ನೀಡುವುದರಲ್ಲಿ ಸೇವಾ ಸಂಗಮ ಶಿಶು ಮಂದಿರಗಳು  ಸಕಾರಾತ್ಮಕ ಪಾತ್ರ ನಿರ್ವಹಿಸುತ್ತಿವೆ ಎಂದು ಲೇಖಕ ಬೈಂದೂರು ಚಂದ್ರಶೇಖರ ನಾವಡರು ಹೇಳಿದರು. ಅವರು ಬೈಂದೂರು ಶಿವಸಂಗಮ ಶಿಶು ಮಂದಿರದಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಣೆ ಮತ್ತು ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾತೆಯರು ಮತ್ತು ಮಕ್ಕಳು ಬಹಳ ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸೇವಾ ಸಂಗಮ ಶಿಶುಮಂದಿರ ಬೈಂದೂರು ಇದರ ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅವರು ಸಂಕ್ರಾಂತಿ ಹಬ್ಬದ ಆಚರಣೆ ಮತ್ತು ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆಯ ಮಹತ್ವ ವಿವರಿಸಿದರು. ಈ ಸಂದರ್ಭದಲ್ಲಿ ಸೇವಾ ಸಂಗಮ ಟ್ರಸ್ಟಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಲಾವಣ್ಯ ಬೈಂದೂರು ಇದರ ೨೦೨೫-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ನರಸಿಂಹ ಬಿ. ನಾಯಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಚ್. ವಿಶ್ವನಾಥ ಆಚಾರ್ಯ ಪುನರಾಯ್ಕೆಯಾಗಿದ್ದಾರೆ. ಶನಿವಾರ ಸಂಜೆ ಲಾವಣ್ಯ ರಂಗಮನೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು ಗೌರವಾಧ್ಯಕ್ಷರಾಗಿ ಯು. ಶ್ರೀನಿವಾಸ ಪ್ರಭು, ವಿ. ಆರ್. ಬಾಲಚಂದ್ರ, ಉಪಾಧ್ಯಕ್ಷರಾಗಿ ರಾಮ ಕೆ., ರವೀಂದ್ರ ಶ್ಯಾನುಭಾಗ್, ಜತೆಕಾರ್ಯದರ್ಶಿಯಾಗಿ ಗಣೇಶ್ ಪರಮಾನಂದ, ರೋಶನ್ ಕುಮಾರ್, ರಾಜೇಶ್ ನಾಯ್ಕ, ಕೋಶಾಧಿಕಾರಿ ಸುರೇಶ್ ಹುದಾರ್, ಸಂಘಟನಾ ಕಾರ್ಯದರ್ಶಿಯಾಗಿ ಸುಮಂತ್ ಆಚಾರ್ಯ, ಶಶಾಂಕ್ ಕಾರಂತ್, ಶ್ರೀಧರ ವಸ್ರೆ. ವ್ಯವಸ್ಥಾಪಕರಾಗಿ ಹರೆಗೋಡು ಉದಯ್ ಆಚಾರ್ಯ, ಮೂರ್ತಿ ಬೈಂದೂರು, ಸುಬ್ರಹ್ಮಣ್ಯ ಎಸ್., ಗೌರವ ಸಲಹೆಗಾರರಾಗಿ ನಾಕಟ್ಟೆ ನಾಗರಾಜ ಶೆಟ್ಟಿ, ಸದಾಶಿವ ಡಿ. ಪಡುವರಿ, ನಾಗರಾಜ ಗಾಣಿಗ ಬಂಕೇಶ್ವರ, ವಿಶ್ವನಾಥ ಶೆಟ್ಟಿ, ಸುನಿಲ್ ಎಚ್. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ. ಗಣೇಶ್ ಕಾರಂತ್, ಬಿ. ರಾಮ ಟೈಲರ್, ಗಣಪತಿ ಎಸ್., ಗಿರೀಶ್ ಬೈಂದೂರು, ಬಿ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಮೈಸೂರಿನ ಕುಂಬಾರಕೊಪ್ಪಲ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಬಾಲ್‌ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ ಚಾಂಪಿಯನ್‌ಶಿಫ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. ಸೆಮಿಫೈನಲ್‌ನಲ್ಲಿ ಆಳ್ವಾಸ್ ತಂಡ ಅಂಬಾರಿ ಮೈಸೂರು ತಂಡವನ್ನು 35-30, 35-23 ನೇರ ಸೆಟ್‌ಗಳಿಂದ ಸೋಲಿಸಿದರೆ, ಬನಶಂಕರಿ ತಂಡವು ಸೆಮಿಫೈನಲ್‌ನಲ್ಲಿ ವಿಜಯನಗರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು 35-31, 22-35 ಹಾಗೂ 36-34 ಸೆಟ್ ಗಳಿಂದ ಸೋಲಿಸಿ, ಫೈನಲ್ ಹಂತಕ್ಕೆ ಅರ್ಹತೆ ಪಡೆದಿತ್ತು.ಅಂತಿಮ ಸುತ್ತಿನಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಬನಶಂಕರಿ ತಂಡವನ್ನು  36- 34 ಹಾಗೂ 35-21 ನೇರ ಸೆಟ್ ಗಳಿಂದ ಸೋಲಿಸಿ ಜಯ ಗಳಿಸಿತು.ಟೂರ್ನಿಯ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಳ್ವಾಸ್‌ನ ಆಕಾಶ್ ‘ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ’ಯನ್ನು ಪಡೆದುಕೊಂಡರು. ಜೊತೆಯಲ್ಲಿ ಆಳ್ವಾಸ್‌ನ ವಿನಯ್ ‘ಬೆಸ್ಟ್ ಸೆಂಟರ್ ಪ್ಲೇಯರ್ ಪ್ರಶಸ್ತಿ’ ಗಳಿಸಿದರು. ವಿಜೇತರ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಒಂದು ಶಾಲೆಯಲ್ಲಿ ಅಧ್ಯಾಪಕರು, ಎಸ್‌ಡಿಎಂಸಿ, ವಿದ್ಯಾರ್ಥಿಯಿಂದ ಶಾಲೆಯ ಕೀರ್ತಿ ಬೆಳಗಿಸಲು ಸಾಧ್ಯವಿದೆ. ಪೋಷಕರು ಮಕ್ಕಳ ಬೌದ್ಧಿಕ ಮಟ್ಟವನ್ನು ಗಮನಿಸುತ್ತಿರಬೇಕು. ಪಾಲಕರು ತಮ್ಮ ಮಕ್ಕಳ ಸಾಮರ್ಥ್ಯವನ್ನು ಬೇರೆಯವರೊಂದಿಗೆ ಹೋಲಿಸಬಾರದು. ಗುಜ್ಜಾಡಿ ಶಾಲೆಯ ಬೆಳವಣಿಯಲ್ಲಿ ಎಸ್‌ಡಿಎಂಸಿ ಪಾತ್ರ ಗಣನೀಯವಾಗಿದೆ. ಸಾಕಷ್ಟು ಅಭಿವೃದ್ಧಿ ಪರ ಚಿಂತನೆಯನ್ನಿಟ್ಟುಕೊಂಡು ಹಳೆ ವಿದ್ಯಾರ್ಥಿ ಸಂಘದ ಮೂಲಕ ಶಾಲೆಯನ್ನು ಗುಣಾತ್ಮಕ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಿದೆ ಎಂದು ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಹೇಳಿದರು. ಬೈಂದೂರು ವಲಯದ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 105ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಎಲ್.ಮೇಸ್ತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್, ಎಸ್‌ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಶುಭಾಶಂಸನೆಗೈದರು. ಶಾಲೆಯ ಹಳೆ ವಿದ್ಯಾರ್ಥಿ ನಾಗರತ್ನ ಅಶೋಕ ಸ್ವಸ್ತಿ ವಾಚನಗೈದರು. ಶೈಕ್ಷಣಿಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವು ಸಂಪನ್ನಗೊಂಡಿತ್ತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಲೇಖಕಿ, ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ. ಪಾರ್ವತಿ ಜಿ. ಐತಾಳ್ ಅವರು ವಿಜೇತರಿಗೆ ಬಹುಮಾನ ವಿತರಿಸಿ, ಮಾತೃಭಾಷೆ ಹಾಗೂ ಆಂಗ್ಲ ಭಾಷೆಗಳ ಮಹತ್ವವನ್ನು ಮಕ್ಕಳಿಗೆ ಮನದಟ್ಟಾಗುವಂತೆ ವಿವರಿಸಿದರು. ನಾಲ್ಕು ಗೋಡೆಗಳ ನಡುವೆ ಕಲಿಯುವುದಷ್ಟೇ ಶಿಕ್ಷಣವಲ್ಲಾ ಪಠ್ಯಪುಸ್ತಕಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅತಿ ಅವಶ್ಯಕವಾಗಿದೆ. ಬಹುಮಾನಗಳಿಸುವುದೇ ಮುಖ್ಯವಲ್ಲ ಸ್ಪರ್ಧೆಗಳಲ್ಲಿ ಆಗಾಗ್ಗೆ ಭಾಗವಹಿಸುತ್ತಿರುವುದು ತುಂಬಾ ಮುಖ್ಯವಾಗುತ್ತದೆ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವು ಸಾಧನೆಯ ಪಥದಲ್ಲಿ ಸಾಗಲು ಪೂರಕವಾಗಿದ್ದು, ಈ ಶಾಲೆಯಲ್ಲಿ ಅದಕ್ಕೆ ಒತ್ತು ನೀಡಲಾಗುತ್ತಿರುವುದನ್ನು ನೋಡಿ ಪ್ರಶಂಶಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಕಾಂಪಿಟೇಶನ್ ಸ್ಪರ್ಧೆಯಲ್ಲಿ ಕೌಸ್ತುಭ್‌ ಪೂಜಾರಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ. ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕೌಸ್ತುಭ್‌, ಕೇಶವ ಪೂಜಾರಿ ಹಾಗೂ ಭಾರತಿ ಪೂಜಾರಿ ದಂಪತಿಯ ಪುತ್ರಿ. ಈತನಿಗೆ ಶಿಕ್ಷಕರಾದ ಪ್ರಸನ್ನ ಮತ್ತು ಸುನೀತಾ ಅವರು ತರಬೇತಿ ನೀಡಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ವಾರ್ಷಿಕ ಸಂಭ್ರಮವು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನದೊಂದಿಗೆ ಸಂಪನ್ನವಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಅಥಿತಿಯಾಗಿದ್ದ ಶಾಸಕ ಗುರುರಾಜ ಗಂಟಿಹೊಳೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಭಿವೃದ್ಧಿ ಸಮಿತಿ, ಸಾರ್ವಜನಿಕರು, ಶಿಕ್ಷಕರು ದಾನಿಗಳಿಂದ ಅಗತ್ಯ ಪರಿಕರಗಳನ್ನು ಹೊಂದಿಸಿಕೊಂಡು ನಡೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿ, ಇಲ್ಲಿ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯ ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು. ಇನ್ನೋರ್ವ ಅತಿಥಿಯಾಗಿದ್ದ ಹಿರಿಯ ಗುತ್ತಿಗೆದಾರ ಉಪ್ಪಿನಕುದ್ರು ರಾಜೇಶ ಕಾರಂತ ಮಾತನಾಡಿ, ಶಾಲೆಯು ವಿಶಾಲ ನಿವೇಶನವನ್ನು ಹೊಂದಿರುವುದರಿಂದ ಇಲ್ಲಿ ಅಗತ್ಯವಾಗಿರುವ ಸುಸಜ್ಜಿತ, ಬಹೂಪಯೋಗಿ ಕ್ರಿಡಾಂಗಣವನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು. ಶಾಲಾ ಸಂಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಜನಾರ್ದನ ಧ್ವಜಾರೋಹಣ ಗೈದರು. ಮುಖ್ಯೋಪಾಧ್ಯಾಯ ಎಂ. ಭಾಸ್ಕರ ಮಯ್ಯ ವರದಿ ಓದಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ ಖಾರ್ವಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಬಳೆಗಾರ್,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ತೋಟಗಾರಿಕೆ ಇಲಾಖೆ, ಉಡುಪಿ ಇವರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಜ. 26ರಿಂದ 28ರ ವರೆಗೆ ರೈತ ಸೇವಾ ಕೇಂದ್ರ, ಶಿವಳ್ಳಿ ತೋಟಗಾರಿಕೆ ಕ್ಷೇತ್ರ, ದೊಡ್ಡಣಗುಡ್ಡೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸದರಿ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ಯಮದಾರರು, ಯಂತ್ರೋಪಕರಣ ಮಾರಾಟಗಾರರು, ಬ್ಯಾಂಕ್ ಹಾಗೂ ಆಹಾರ ಮಳಿಗೆದಾರರಿಗೆ 100 ಚದರ ಅಡಿ ಗಾತ್ರದ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸದರಿ ಮಳಿಗೆಗೆ ರೂ. 3500/- ರಂತೆ ದರವನ್ನು ನಿಗದಿಪಡಿಸಲಾಗಿದ್ದು, ಸದರಿ ಮಳಿಗೆಗಳಲ್ಲಿ ತೋಟಗಾರಿಕೆ ಚಟುವಟಿಕೆ ಹೊಂದಿರುವವರಿಗೆ ಹಾಗೂ ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುವುದು. ಮಳಿಗೆ ತೆರೆಯಲು ಆಸಕ್ತರು ಮಳಿಗೆಗಳ ಮೊತ್ತವನ್ನು ಆನ್‌ಲೈನ್ ಮೂಲಕವೇ ರೈತ ಸೇವಾ ಕೇಂದ್ರ ಖಾತೆಗೆ ಪಾವತಿಸಿ ತಮ್ಮ ಹೆಸರನ್ನು ಜನವರಿ 20ರ ಒಳಗಾಗಿ ನೊಂದಾಯಿಸಿಕೊಳ್ಳಬಹುದಾಗಿದೆ. ಮಳಿಗೆ ಹೆಸರು ನೋಂದಾಯಿಸಲು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ರಾಜ್ಯವಲಯ, ಉಡುಪಿ ದೂರವಾಣಿ ಸಂಖ್ಯೆ:…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ ಪ್ರವರ್ತಿತ  ಮದರ್ ತೆರೇಸಾಸ್ ಪಿಯು ಕಾಲೇಜಿನ ಪ್ರಥಮ ಪಿಯು ವಾಣಿಜ್ಯ ವಿದ್ಯಾರ್ಥಿಗಳಿಗೆ ʼಮನ್ವಂತರ – 2025ʼ ಕಾಲೇಜು ಮಟ್ಟದ ಪ್ರತಿಭಾನ್ವೇಷಣೆ ಕಾರ್ಯಕ್ರಮ ನಡೆಯಿತು. ಶಿಕ್ಷಣದೊಂದಿಗೆ ಸದಾ ನವೀನತೆಯನ್ನು ಪರಿಚಯಿಸುತ್ತಿರುವ ಸಂಸ್ಥೆಯು ನೂತನವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆ ಮತ್ತು ಆಧುನಿಕತೆ ಹಾಗೂ ವ್ಯವಾಹಾರಿಕ ಜ್ಞಾನವನ್ನು ಪರಿಚಯಿಸಿ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡುವ ಉದ್ದೇಶವೇ ಮನ್ವಂತರ – 2025. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ. ಪಿ. ಎಸ್. ಬಿದ್ಕಲಕಟ್ಟೆ ಉಪಪ್ರಾಂಶುಪಾಲರಾದ ಕರುಣಾಕರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಪ್ರತಿಭಾನ್ವೇಷಣೆ ಕಾರ್ಯಕ್ರಮದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಅತ್ಯುತ್ತಮ ಪ್ರಜೆಗಳಾಗಿ ಇತರರಿಗೆ ಮಾದರಿಯಾಗಬೇಕು ಈ ದಿಶೇಯತ್ತ ಬುನಾದಿ ತರಬೇತಿಯನ್ನು ನೀಡಿ ಸಮಾಜದಲ್ಲಿ ಗುರುತರ ಕಾರ್ಯವನ್ನು ಮಾಡುತ್ತಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಕೊಡುಗೆ ನಿಜಕ್ಕೂ ಶ್ಲಾಘನೀಯ. ಈಗಾಗಲೇ ಹತ್ತು ಹಲವು ಪಾಟೇತರ ಚಟುವಟಿಕೆಯಿಂದ  ಮನೆಮಾತಾಗಿರುವ ಸಂಸ್ಥೆಯ ಹೆಸರು ಇನ್ನೂ ಎತ್ತರಕ್ಕೆ…

Read More