Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸರಕಾರ ಲಿಂಗತ್ವ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವರುಗಳಿಗೆ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವರುಗಳನ್ನು ಇದರ ಫಲಾನುಭವಿಗಳನ್ನಾಗಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇರುವ ಲಿಂಗತ್ವ ಅಲ್ಪಸಂಖ್ಯಾತರು ಸರಕಾರ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಲಾಭ ಪಡೆಯುವುದರೊಂದಿಗೆ ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದರು. ಲಿಂಗತ್ವ ಅಲ್ಪಸಂಖ್ಯಾತರು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪುನರ್ವಸತಿ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಧನ ನೀಡುತ್ತಿದೆ. ಸಮುದಾಯ ಆಧಾರಿತ ಸಂಸ್ಥೆಯಲ್ಲಿ ನೋಂದಣಿ ಆಗಿರುವವರು ಈ ಯೋಜನೆ ಲಾಭ ಪಡೆಯಬಹುದಾಗಿದೆ. ಪ್ರಸ್ತುತ ಸಾಲಿನಲ್ಲಿ 15 ಜನರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಒಬ್ಬರೇ ಅರ್ಜಿ ಸಲಿಸಿದ್ದು, ಈ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ( ಪದವಿ ಪೂರ್ವ ವಿಭಾಗ )ಹಾಗೂ ಎಸ್.ಎನ್.ವಿ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲಕ – ಬಾಲಕಿಯರ ಕರಾಟೆ ಪಂದ್ಯಾಟದಲ್ಲಿ ಜನತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು, ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕಗಳನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮೂವರು ವಿದ್ಯಾರ್ಥಿಗಳಾದ ಸಾಯಿ ವಿಘ್ನೇಶ್ (82+kg) ವಿಭಾಗದಲ್ಲಿ ಪ್ರಥಮ ಸ್ಥಾನ, ಅಶ್ಮಿತ್ ಸಿ.ಪೂಜಾರಿ (-45kg) ಪ್ರಥಮ ಸ್ಥಾನ, ಅಮಿತ್ ಕುಮಾರ್ (-54kg) ಪ್ರಥಮ ಸ್ಥಾನ ಹಾಗೂ ನಾಲ್ವರು ವಿದ್ಯಾರ್ಥಿಗಳಾದ ರನಿತಾ(-36 kg), ರಾಹುಲ್ ಜಿ, (-58kg)ಅರ್ಜುನ್ ಎಸ್. ಶೆಟ್ಟಿ, (-50 kg) ನಿಖಿಲ್ ಕಾಂಚನ್. (72+kg).ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುವಕರ ಮಾನಸಿಕ ಸ್ಥಿರತೆ ಗಟ್ಟಿಗೊಳ್ಳ ಬೇಕಾದರೆ  ಶಿಕ್ಷಣದ ಜೊತೆಗೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರೀಡೆಯೂ ಅತ್ಯವಶ್ಯಕ ಎಂಬುದನ್ನು ಬಾಂಡ್ಯ ಎಜುಕೇಷನಲ್ ಟ್ರಸ್ಟ್ಇದರ ಜಂಟಿ ಆಡಳಿತ ನಿರ್ದೇಶಕರು ಕೆ.ಸುಭಾಶ್ಚಂದ್ರ ಶೆಟ್ಟಿ ತಿಳಿಸಿದರು. ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಹಾಗೂ ಗುರುಕುಲ ಪದವಿಪೂರ್ವ ಕಾಲೇಜು ವಕ್ವಾಡಿ, ಕೋಟೇಶ್ವರ ಇದರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರದಂದು ನಡೆದ ಕುಂದಾಪುರ ತಾಲ್ಲೂಕು ಮಟ್ಟದ ಪುಟ್ಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ, ಅವರು ಆಟಗಳಿಗೆ ಮೊದಲು ಕ್ರೀಡಾ ಮನೋಭಾವದ ಅವಶ್ಯಕತೆ ಇದೆ. ಮನಸ್ಸಿನ ಶಾಂತಿಗಾಗಿ ಕ್ರೀಡೆ ಬೇಕು ಕೇವಲ ಬಹುಮಾನ ಗೆಲ್ಲಲು ಅಲ್ಲ ಎಂಬುದಾಗಿ ತಿಳಿಸಿ ಆಗಮಿಸಿದ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಾಂಡ್ಯ ಎಜುಕೇಷನಲ್ ಟ್ರಸ್ಟ ಇದರ ಜಂಟಿ ಆಡಳಿತ ನಿರ್ದೇಶಕಿ ಆಗಿರುವ ಅನುಪಮಾ ಎಸ್. ಶೆಟ್ಟಿ, ಉಡುಪಿ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಉಡುಪಿ ಜಿಲ್ಲೆ ಇದರ ಗೌರವಾಧ್ಯಕ್ಷರು ಜೀವನ್ ಕುಮಾರ್ ಶೆಟ್ಟಿ, ಹಾಗೂ ಕಾರ್ಯದರ್ಶಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪ್ರಸಿದ್ಧ ಯಾತ್ರಾಸ್ಥಳ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ 9 ಜನರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿ ರಚಿಸಿ ಶುಕ್ರವಾರ ಆದೇಶ ಹೊರಡಿಸಲಾಗಿದೆ. ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನಾಗಿ ಮಹಾಲಿಂಗ ನಾಯ್ಕ್‌ ಮೆಟ್ಟಿನಹೊಳೆ ಕಾಲ್ತೋಡು, ಧನಾಕ್ಷಿ ವಿಶ್ವನಾಥ ಯಡ್ತರೆ ಬೈಂದೂರು, ಸುಧಾ ಕೆ ಪಡುವರಿ ಬೈಂದೂರು, ಕೆ. ಬಾಬು ಶೆಟ್ಟಿ ತಗ್ಗರ್ಸೆ ಬೈಂದೂರು, ಸುರೇಂದ್ರ ಶೆಟ್ಟಿ ಕೋಟೇಶ್ವರ ಕುಂದಾಪುರ, ಅಭಿಲಾಷ್‌ ಪಿ.ವಿ ಮಂಗಳೂರು, ಯು. ರಾಜೇಶ್‌ ಕಾರಂತ್‌ ಉಪ್ಪಿನಕುದ್ರು ಕುಂದಾಪುರ, ರಘುರಾಮ ದೇವಾಡಿಗ ಆಲೂರು ಕುಂದಾಪುರ ಅವರನ್ನು ಆಯ್ಕೆ ಮಾಡಲಾಗಿದೆ. ದೇವಳದ ಕಾರ್ಯನಿರ್ವಾಹಕ ಅಧಿಕಾರಿಯನ್ನು ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಸದಸ್ಯರನ್ನು ಓರ್ವರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಕಾರ್ಯದರ್ಶಿ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ 2023-24ನೇ ಸಾಲಿನ ಮಹಾಸಭೆಯು ಇಲ್ಲಿನ ಶ್ರೀ ರಾಮ ಮಂದಿರದಲ್ಲಿ ಶುಕ್ರವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಆನಂದ ಬಿಲ್ಲವ ಮಾತನಾಡಿ, ವರದಿ ವರ್ಷದಲ್ಲಿ ಒಟ್ಟು 13291 ಸದಸ್ಯರೊಂದಿಗೆ 1.72 ಕೋಟಿ ರೂ. ಪಾಲು ಬಂಡವಾಳವನ್ನು ಹೊಂದಿದೆ. ವರ್ಷ ಅಂತ್ಯಕ್ಕೆ 37.04 ಕೋಟಿಗೂ ಮಿಕ್ಕಿ ಠೇವಣಿಯನ್ನು ಹೊಂದಿದ್ದು, ಹೊರಬಾಕಿ ಸಾಲ 1.53 ಕೋಟಿ ರೂ. ಇದೆ. 19.12 ಕೋಟಿ ರೂ.ಗಳನ್ನು ವಿವಿಧ ಸಂಘ/ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ. ವರ್ಷಾಂತ್ಯಕ್ಕೆ ಸಂಘವು 42.65 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಪಾಲು ಮುನಾಫೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸಂಘದ ವ್ಯಾಪ್ತಿಯ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಂಘದ ನಿರ್ದೇಶಕರಾದ ಶ್ರೀನಿವಾಸ ಜತ್ತನ್ ಪೂಜಾರಿ, ಹರೀಶ ಮೇಸ್ತ, ಕೆ.ಮಾಧವ ಖಾರ್ವಿ, ಜಿ.ಗೋಪಾಲ ನಾಯ್ಕ್, ಪ್ರೇಮಾ ಪೂಜಾರಿ, ಯಮುನಾ, ಚಂದ್ರಮತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಅಂಪಾರಿನ ಹೋಟೆಲ್ ಒಂದಕ್ಕೆ ಬಂದಿದ್ದ ಆರೋಪಿಗಳು ಕ್ಯಾಶಿಯರ್‌, ಸಪ್ಲಾಯರ್‌ಗಳಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಅಜಯ್‌ ಅವರು ರಾತ್ರಿ ಹೋಟೆಲ್ಲಿನ ಕ್ಯಾಶಿಯರ್‌ ಆಗಿರುವ ಸಹೋದರ ಸುಜಯ್‌ ಅವರನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಆರೋಪಿಗಳಾದ ಅಭಿ, ಹರೀಶ್‌, ಪ್ರಜ್ವಲ್‌, ಸ್ವರಾಜ್‌ ಮತ್ತು ಇನ್ನೋರ್ವ ವ್ಯಕ್ತಿ ಅಜಯ್‌ ಮತ್ತು ಕ್ಯಾಶಿಯರ್‌ ಸುಜಯ್‌ ಅವರಿಗೆ ಹಲ್ಲೆ ಮಾಡಿದ್ದರು. ಆರೋಪಿ ಸ್ವರಾಜ್‌ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಮತ್ತೋರ್ವ ಕ್ಯಾಶಿಯರ್‌ ಸೀತಾರಾಮ ಮತ್ತು ಸಪ್ಲಾಯರ್‌ಗಳು ಹೆಚ್ಚಿನ ಗಲಾಟೆಯನ್ನು ತಪ್ಪಿಸಲು ಮುಂದಾದರು. ಅನಂತರ ಆರೋಪಿಗಳು ಬೆದರಿಕೆಯನ್ನೂ ಹಾಕಿ ಹೋಗಿದ್ದಾರೆ ಎಂದು ಕ್ಯಾಶಿಯರ್‌ ಸುಜಯ್‌ ಸಹೋದರ ಅಜಯ್‌ ಅವರು ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆಯು ನಾವುಂದದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಇಂದು ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಮಾತನಾಡಿ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು ಹಿಂದಿನ ಸಾಲಿನಲ್ಲಿ ರೂ 324.91 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ, ರೂ. 1.55 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 14 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಂಘವು ಹಿಂದಿನ ಸಾಲಿನಲ್ಲಿ ರೂ 66.64 ಕೋಟಿ ಠೇವಣಿ ಹೊಂದಿ, ಸದಸ್ಯರಿಗೆ ರೂ. 58.86 ಕೋಟಿ ಸಾಲ ನೀಡಿದೆ. ಅದರಲ್ಲಿ ರೂ. 10 ಕೋಟಿಗೂ ಮಿಕ್ಕಿ ಕೃಷಿ ಸಾಲವನ್ನು ಸಂಘವು ಸದಸ್ಯರಿಗೆ ನೀಡಲಾಗಿದೆ. ವಿವಿಧ ನಿಧಿಗಳಲ್ಲಿ 5.33 ಕೋಟಿ ರೂ., ಹೂಡಿಕೆಯಲ್ಲಿ 29.52ಕೋಟಿ ರೂ. ಸಂಚಯಿಸಲಾಗಿದೆ ಎಂದರು. ಸಂಸ್ಥೆಯ ನಿರಂತರವಾಗಿ ಪ್ರಗತಿಯ ಪಥದಲ್ಲಿದ್ದು ಸದಸ್ಯರಿಗೂ ಬಡ್ಡಿಯಲ್ಲಿ ಕಡಿತ, ಕೃಷಿ ಹಾಗೂ ಹೈನುಗಾರಿಕೆಗೆ ಸಾಲ ನೀಡಿ ಪ್ರೋತ್ಸಾಹ ನೀಡುತ್ತಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೇಬಿಸ್ ದಿನಾಚರಣೆಯ ಅಂಗವಾಗಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಹೆಮ್ಮಾಡಿ ಅವರು ರೇಬಿಸ್ ರೋಗದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ| ಅರುಣ್‌ ಪಶು ವೈದ್ಯಾಧಿಕಾರಿಗಳು ಹೆಮ್ಮಾಡಿ, ರೇಬಿಸ್ ರೋಗದ ಮನ್ನೆಚ್ಚೆರಿಕೆಯ ಕ್ರಮಗಳ ಕುರಿತಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಇಲಾಖಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಬೋಧಕ/ಬೋಧಕೇತರ  ವೃಂದದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ವಿಭಾಗ ) ಮತ್ತು ಎಸ್. ಎನ್. ವಿ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲಕ – ಬಾಲಕಿಯರ ಕರಾಟೆ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ  ತರುಣ್  (50kg) ವಿಭಾಗದಲ್ಲಿ  ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಕೆ.ಶ್ರೀನಿತಾ. ಎಸ್. ಕಾಮತ್ (56kg) , ಅಕ್ಷಯ್ (82kg ),ಸಾವಿಯೋ (62 kg)  ವಿಭಾಗದಲ್ಲಿ ಬೆಳ್ಳಿ ಪದಕ  ಪಡೆದು ಅಪೂರ್ವ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ದೈಹಿಕ ಶಿಕ್ಷಣ ಉಪನ್ಯಾಸಕ ಕೃಷ್ಣ ಉಪಸ್ಥಿತರಿದ್ದಾರೆ. ವಿದ್ಯಾರ್ಥಿಗಳ ಯಶಸ್ಸಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ ಹಾಗೂ ಆಂತರಿಕ ಸಮಿತಿ ಆಶ್ರಯದಲ್ಲಿ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ’ಮಹಿಳೆಯರ ಯೋಗ ಕ್ಷೇಮದ ಅನ್ವೇಷಣೆ’ ವಿಷಯದ  ವಿಶೇಷ ಉಪನ್ಯಾಸ  ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಆಳ್ವಾಸ್ ಸೆಂಟರ್ ಫಾರ್ ವೆಲ್‌ನೆಸ್ ಟ್ರೈನಿಂಗ್‌ನ ನಿರ್ದೇಶಕಿ ಡಾ. ದೀಪ ಕೊಠಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಹಲವು ಮಹಿಳಾ ಸಾಧಕರನ್ನು ಪರಿಚಯಿಸುತ್ತಾ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹುರಿದುಂಬಿಸಿದರು. ವಿದ್ಯಾರ್ಥಿಗಳು ಹೆಚ್ಚು ಸಕರಾತ್ಮಕ ವಿಷಯಗಳನ್ನು ಹೇಗೆ ವಿಸ್ತರಿಸಿಕೊಳ್ಳಬೇಕು, ತಮ್ಮಲ್ಲಿರುವ ಭಾವನೆಗಳನ್ನು ಒಪ್ಪಿಕೊಂಡು ಅದರೊಂದಿಗೆ ಬದುಕುವ ಮನೋಸ್ಥೈರ್ಯ ಹೇಗೆ ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು. ಏಕಾಗ್ರತೆ ಮತ್ತು ಸ್ಥಿರತೆಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಜೀವನದಲ್ಲಿ ಕೃತಜ್ಞತೆ ಮತ್ತು ನಿರಂತರ ಕಲಿಕೆ ಎಷ್ಟು ಮುಖ್ಯ ಎಂದು ಉದಾಹರಣೆ ಸಹಿತ ಮಕ್ಕಳಿಗೆ ಮನವರಿಗೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.…

Read More