ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ವಕ್ವಾಡಿ ಗುರುಕುಲ ಸಮೂಹ ಸಂಸ್ಥೆಯಲ್ಲಿ ಶಾಲಾ ಸಂಸ್ಥಾಪನಾ ದಿನ ಮತ್ತು ವಿವೇಕಾನಂದರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದಿನದ ವಿಶೇಷ ಎಂಬಂತೆ ಶಾಲಾವರಣದಲ್ಲಿ ಎಲ್ಲರನ್ನೂ ಆಕರ್ಷಿಸುವಂತೆ ನಿಂತಿರುವ ಭರತ ಭೂಮಿಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರ ಮೂರ್ತಿಗೆ ಹಾರವನ್ನು ಹಾಕಿ ಪುಷ್ಪನಮನ ಸಲ್ಲಿಸುವ ಮೂಲಕ ಯುವ ದಿನವನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳಿಗೆ ವಿವೇಕಾನಂದರ ಮಹತ್ವದ ಸಂದೇಶಗಳನ್ನು ಮನಮುಟ್ಟುವಂತೆ ತಿಳಿಸಲಾಯಿತು. ಜೊತೆಗೆ ವಿದ್ಯಾರ್ಥಿಗಳು ಹಾಡು ಹಾಡುವ ಮೂಲಕ ವಿವೇಕಾನಂದರ ಗುಣಗಾನ ಮಾಡಿದರು. ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ವಿವೇಕಾನಂದರ ವೇಷ ಭೂಷಣದಿಂದ ಎಲ್ಲರ ಗಮನ ಸೆಳೆದನು. ಜೊತೆಗೆ ಸಂಸ್ಥಾಪನಾ ದಿನದ ಅಂಗವಾಗಿ ಶಾಲೆ ಬೆಳೆದು ಬಂದ ಹಾದಿಯ ಯಶಸ್ಸನ್ನು ಸಹ ಶಿಕ್ಷಕಿ ಸುಲಕ್ಷಣ ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಾಹಕ ರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ವಿವೇಕಾನಂದರ ಧ್ಯೇಯವನ್ನು ನೀವು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ಎಂದು ತಿಳಿಸಿ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಯುವ ಸಮೂಹ ಪ್ರತಿಯೊಂದು ರಾಷ್ಟ್ರಗಳ ದಿವ್ಯ ಸಂಪತ್ತು ಮತ್ತು ದೇಶದ ಆಶಯ ಕೂಡ ಎಂಬುದು ಯಾರು ಕೂಡ ಅಲ್ಲಗೆಳೆಯುವಂತಿಲ್ಲ. ಯುವ ಸಮೂಹದ ಶಕ್ತಿ, ಸಾಮರ್ಥ್ಯಗಳು ಒಂದು ದೇಶದ ಸವಾಂಗೀಣ ಅಭಿವೃದ್ಧಿಗೆ ಪೂರಕ. ಯುವಕರು ಆಧುನಿಕತೆ ಮತ್ತು ತಾಂತ್ರಿಕತೆಯ ಹರಿಕಾರರು ಹಾಗೂ ವಿಭಿನ್ನ ಕ್ಷೇತ್ರದಲ್ಲಿ ಕನಸುಗಳನ್ನು ಕಾಣುವ ಕನಸುಗಾರರು. ಆತ್ಮವಿಶ್ವಾಸ, ಧೈರ್ಯ, ಸ್ಥೈರ್ಯ ಮತ್ತು ಶ್ರಮಗಳ ಸಂಗಮವೇ ಯುವ ಸಮೂಹ. ಯುವ ಶಕ್ತಿಯ ನಿರ್ವಿವಾದಿತ ಸಂಕೇತವಾಗಿ ಬೆಳೆದವರು ಸ್ವಾಮಿ ವಿವೇಕಾನಂದರು ಎಂದು ಭಾರತೀಯ ಸೇನೆಯ ನಿವೃತ್ತ ಇಂಜಿನಿಯರ್ ಬೆಳ್ಳಾಲ ಗೋಪಿನಾಥ ರಾವ್ ಹೇಳಿದರು. ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳು ಗಂಗೊಳ್ಳಿ ಮತ್ತು ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀ ಸರಸ್ವತಿ ವಿದ್ಯಾನಿಧಿ ಗಂಗೊಳ್ಳಿ ಇವರ ಸಹಯೋಗದೊಂದಿಗೆ ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣ ಸಭಾಂಗಣದಲ್ಲಿ ಸೋಮವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಸ್ವಾಮೀ ವಿವೇಕಾನಂದರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಹಿತ್ಯ ಅಥವಾ ಇನ್ಯಾವುದೇ ವಿಚಾರಗಳಿರಲಿ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪ್ರಸ್ತುತ ಪಡಿಸಿದಾಗಲೇ ಅದು ಸೌಂದರ್ಯವನ್ನು ಕಂಡುಕೊಳ್ಳುತ್ತದೆ. ನಿರಂತರ ಅಭ್ಯಾಸ ನಮ್ಮನ್ನು ಪರಿಪೂರ್ಣವಾಗಿಸುತ್ತದೆ ಎಂದು ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರು ಅಭಿಪ್ರಾಯಪಟ್ಟರು. ಅವರು ಗುಜ್ಜಾಡಿ ನಾಯಕವಾಡಿಯ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ಸುವರ್ಣ ಸಂಗಮದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು. ಬೋಳಂಬಳ್ಳಿ ಶ್ರೀ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿಗಳಾದ ಧರ್ಮರಾಜ್ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂತರ್ ಜಿಲ್ಲಾ ಮಟ್ಟದ ಕರೋಕೆ ಟ್ರ್ಯಾಕ್ ಗೀತ ಗಾಯನ ಸ್ಪರ್ಧೆ ಗಾನ ಸಂಭ್ರಮ 2025 ಪ್ರಶಸ್ತಿ ಫಲಕಗಳನ್ನು ಕುಂದಾಪುರದ ಆದರ್ಶ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಆದರ್ಶ ಹೆಬ್ಬಾರ್ ಅನಾವರಣಗೊಳಿಸಿದರು. ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಶುಭ ಹಾರೈಸಿದರು. ಪ್ರೆಸ್ಟೀಜ್ ಪ್ಯಾಲೇಸ್ ಮಾಲೀಕ ಸುಭಾಷ್ ಶೆಟ್ಟಿ, ಗಂಗೊಳ್ಳಿಯ ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ, ಜಾನಪದ ಕಲಾ ತರಬೇತುದಾರ ರಮೇಶ್ ಕಲ್ಮಾಡಿ, ಡಿಪ್ಲೊಮ್ಯಾಟ್ ಬಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕತಾರಿನಲ್ಲಿರುವ ದೋಹಾದಲ್ಲಿ ನಡೆದ ‘ದಕ್ಷಿಣ ಭಾರತ ಪ್ರತಿಭಾನ್ವೇಷಣೆಯ ಪ್ರಶಸ್ತಿ (SIGTA) ಪ್ರದಾನʼ ಸಮಾರಂಭ 2024ರಲ್ಲಿ ಕರ್ನಾಟಕದ ಬೈಂದೂರು ಮೂಲದವರಾದ ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಸಮುದಾಯ ಸಮರ್ಥ ಸೇವಕ ಪ್ರಶಸ್ತಿಯನ್ನು ಇತ್ತೀಚಿಗೆ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಅಪ್ರತಿಮ ಕೊಡುಗೆ ಹಾಗೂ ಅಚಲ ಸೇವೆಯನ್ನು ಗುರುತಿಸಿ ನೀಡಲಾಗಿದೆ. ಮುಂಬರುವ ದಿನಗಳಲ್ಲೂ ಸಮುದಾಯದ ಅಭ್ಯುದಯಕ್ಕೆ ಅವರ ಕೊಡುಗೆ ಮುಂದುವರೆಯಲಿ ಎಂದು ಹಾರೈಸೋಣ. ಅವರು ಕತಾರಿನಲ್ಲಿ ಕಳೆದ 17 ವರ್ಷಗಳಿಗಿಂತ ಹೆಚ್ಚು ಕಾಲ ವಾಸಿಸುತ್ತಿದ್ದು ಹಲವಾರು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಲ್ಲಿ. ತಮ್ಮನ್ನು ತಾವು ತೊಡಗಿಸಿಕೊಂಡು ಭಾರತೀಯ ಸಮುದಾಯದ ಅಭಿವೃದ್ಧಿ ಹಾಗೂ ಏಳಿಗೆಗೆ ಶ್ರಮಿಸುತ್ತಿರುವರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಗೋಳಿಯಂಗಡಿ ಸಮೀಪದ ಬೆಳ್ವೆ ಗ್ರಾಮದ ಕಾರಿಕೊಡ್ಲು ಕ್ರಾಸ್ ನಲ್ಲಿ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿ ಹಾಗೂ ಇನೋರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದ ಘಟನೆ ಶನಿವಾರ ಸಂಜೆ ನಡೆದಿದೆ. ಮೃತಪಟ್ಟ ವ್ಯಕ್ತಿ ಉದಯ್ ಹಾಗೂ ಗಾಯಗೊಂಡ ವ್ಯಕ್ತಿ ಕೃಷ್ಣ ಎಂದು ಗುರುತಿಸಲಾಗಿದೆ. ಕಾರಿಕೊಡ್ಲು ಕ್ರಾಸ್ ಹತ್ತಿರ ಸವಾರ ಉದಯ್ ಮತ್ತು ಸಹಸವಾರ ಕೃಷ್ಣ ಅವರು ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿರುವ ಹೊತ್ತಲ್ಲಿ ಗೋಳಿ ಯಂಗಡಿಯಿಂದ ಕಾಡಿಕೊಡ್ಲು ಕಡೆಗೆ ಸಾಗುತ್ತಿದ್ದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದ್ದು, ಉದಯ್ ಅವರ ತಲೆಗೆ ಗಂಭೀರ ಏಟು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಸಹಸವಾರ ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್ನ್ನು ಶಂಕರನಾರಾಯಣ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಡಿಕ್ಕಿ ಹೊಡೆದ ಬಳಿಕ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದ. ಟಿಪ್ಪರ್ ಪರಿಶೀಲಿಸಿದಾಗ ಎರಡೂವರೆ ಯೂನಿಟ್ ಮರಳು ಪತ್ತೆಯಾಗಿದೆ. ಎಲ್ಲಿಂದಲೋ ಮರಳು ಕಳವು ಮಾಡಿ ಅಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮರವಂತೆ ಬೀಚ್ ಸಮೀಪ ಕಾರಿನಲ್ಲಿ ಎಂಡಿಎಂಎ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಉಡುಪಿ ಸೆನ್ ಅಪರಾಧ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಅಬ್ರಾರ್ ಶೇಖ್, ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್, ಮೊಹಮ್ಮದ್ ಜಿಯಾಮ್ ಬೆಳ್ಳಿ, ನೌಮನ್ ಸಜ್ಜಾದ್ ಮುಸ್ತಕೀಮ್ ಕೆವಾಕ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಸೆನ್ ಅಪರಾಧ ದಳದ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಸೆನ್ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪವನ್ ನಾಯಕ್, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್ , ದಿಕ್ಷೀತ್, ನಿಲೇಶ್, ಮಾಯಪ್ಪ ಗಡದೆ ಮತ್ತು ಸುದೀಪ್ ರವರ ತಂಡ ದಾಳಿ ನಡೆಸಿ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 15 ಗ್ರಾಂ 59 ಮಿಲಿ ಗ್ರಾಂ ತೂಕದ ಅಂದಾಜು ಮೌಲ್ಯ ರೂ. 78,000ದ ಎಂಡಿಎಂಎ ಪೌಡರ್, ವಶಕ್ಕೆ ಪಡೆದಿದ್ದಾರೆ. ಆಪಾದಿತರು ಬಳಸಿದ್ದ ಮೊಬೈಲ್ ಪೋನ್-5, ಅಂದಾಜು ಮೌಲ್ಯ ರೂ. 50,000/-, ಪಾರದರ್ಶಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಿ. ಹಾಗೂ ಬೆಂಗಳೂರಿನ ಸಪ್ನ ಬುಕ್ ಹೌಸ್ನ ಸಹಯೋಗದಲ್ಲಿ ನಡೆದ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ ಡಾ. ಎಂ. ವೀರಪ್ಪ ಮೊಯಿಲಿ ಅವರ ‘’ವಿಶ್ವಸಂಸ್ಕೃತಿ ಮಹಾಯಾನ’’ – ಸಂಪುಟ-2, ಗದ್ಯ ಮಹಾಕಾವ್ಯ ಲೋಕಾರ್ಪಣೆ ಸಮಾರಂಭ ಭಾನುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿ ಆವರಣದ ಡಾ. ವಿಎಸ್ ಆಚರ್ಯ ಸಭಾಭವನದಲ್ಲಿ ಜರುಗಿತು. ಮಹಾಕಾವ್ಯ ಲೋಕಾರ್ಪಣೆಗೊಳಿಸಿ ಮಾತನಾಡಿದ ಮೈಸೂರು ವಿವಿಯ ನಿವೃತ್ತ ಆಂಗ್ಲ ಪ್ರಾಧ್ಯಪಕ ಹಾಗೂ ಖ್ಯಾತ ವಿಮರ್ಶಕ ಪ್ರೋ ನಾಗಣ್ಣ, ಮೊಯಿಲಿಯವರ ಸಂಕಲ್ಪಕ್ಕೂ ಅದರ ಸಾಕ್ಷಾತ್ಕರಕ್ಕೂ ಅಂತರವೇ ಇರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರು ಬರ್ಹಿಲೋಕದಲ್ಲಿ ಜನಕಲ್ಯಾಣದಲ್ಲಿ ತೊಡಗಿರುವಂತೆ, ಅಂತರದಂಗದಲ್ಲಿ ಹಲವಾರು ವಿಚಾರಗಳಿಗೆ ಅಕ್ಷರ ರೂಪಕೊಡುವಲ್ಲಿ ಧ್ಯಾನಸ್ಥರಾಗಿರುತ್ತಾರೆ. ಇವರು ಅಪರೂಪದ ಚೈತನ್ಯವೇ ಸರಿ. ವೀರಪ್ಪ ಮೊಯಿಲಿಯವರ ‘’ವಿಶ್ವಸಂಸ್ಕೃತಿ ಮಹಾಯಾನ’’ದ ಹೋಲಿಕೆ ಏನಾದರೂ ಇದ್ದರೆ, ಅಮೇರಿಕಾದ ಇತಿಹಾಸತಜ್ಞ ವಿಲ್ ಡ್ಯೂರಾಂಟ್ ಬರೆದಿರುವ ‘ನಾಗರೀಕತೆಯ ಕಥೆ’ ಎನ್ನುವ 11 ಸಂಪುಟಕ್ಕೆ ಸರಿಹೊಂದಬಲ್ಲದು. ಪ್ರಾಚ್ಛ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಜ.12: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ನೇತೃತ್ವದ ರೈತಶಕ್ತಿ ಸಹಕಾರಿ ಒಕ್ಕೂಟ 13ರಲ್ಲಿ 11 ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ರೈತಶಕ್ತಿ ಸಹಕಾರಿ ಒಕ್ಕೂಟದಲ್ಲಿ ಸಾಮಾನ್ಯ ಕ್ಷೇತ್ರದಿಂದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಗುರುರಾಜ ಹೆಬ್ಬಾರ್, ಪ್ರಕಾಶ್ ಎನ್. ಪೂಜಾರಿ, ಮಂಜು ದೇವಾಡಿಗ, ರಾಜೇಶ್ ದೇವಾಡಿಗ, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಉದಯ್ ಕುಮಾರ್ ಶೆಟ್ಟಿ, ಮಹಿಳಾ ಮೀಸಲು ಕ್ಷೇತ್ರದಿಂದ ದಿನಿತಾ ಶೆಟ್ಟಿ, ಕೆ. ಲೀಲಾ ಪೂಜಾರಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಈಶ್ವರ ಹಕ್ಲತೋಡು, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಹೂವ ನಾಯ್ಕ್ ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗ ಎ ಕ್ಷೇತ್ರಕ್ಕೆ ಮೋಹನ್ ಪೂಜಾರಿ ಅವರು ಅವಿರೋಧ ಆಯ್ಕೆಯಾಗಿದ್ದರು. ರೈತಬಂಧು ಒಕ್ಕೂಟದಲ್ಲಿ ಸಾಮಾನ್ಯ ಕ್ಷೇತ್ರದಿಂದ ಬಿ.ಎಸ್. ಸುರೇಶ್ ಶೆಟ್ಟಿ, ಭರತ್ ದೇವಾಡಿಗ ಆಯ್ಕೆಯಾಗಿದ್ದಾರೆ. ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಘದ ಚುನಾವಣೆ ನಡೆದಿದ್ದು ಚುನಾವಣಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರ ಆಶ್ರಯದ 2024ರಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಯಲ್ಲಿ ಮನ್ವಿತಾ ಬಿ. ವಿ. ತ್ರಾಸಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಿರಿಯ ದರ್ಜೆ ಪರೀಕ್ಷೆಯಲ್ಲಿ 88.75%ರಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಲಾವಣ್ಯ ಶ್ರೀಧರ ಶೆಟ್ಟಿಗಾರ್ ತ್ರಾಸಿ ಅವರ ಶಿಷ್ಯೆಯಾಗಿದ್ದು, ತ್ರಾಸಿ ವಿಜಯ ಶೆಟ್ಟಿಗಾರ್ ಮತ್ತು ಭುವನೇಶ್ವರಿ ದಂಪತಿ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜ.10 ರಿಂದ 12ರ ವರೆಗೆ ನಡೆದ ಸೌತ್ ಏಶಿಯನ್ ಕ್ರೀಡಾಕೂಟದಲ್ಲಿ ಭಾರತದ ಪ್ರತಿನಿಧಿಯಾಗಿ 4×100 ರಿಲೇ ಓಟದಲ್ಲಿ ಸ್ಪರ್ಧೆಸಿದ ಉಡುಪಿ ಡಿಎಆರ್ನ ಮೀಸಲು ಪೊಲೀಸ್ ಸಹಾಯಕ ಉಪನಿರೀಕ್ಷಕ ಶಂಕರ ಪೂಜಾರಿ ಅವರು ಚಿನ್ನದ ಪದಕ ಗಳಿಸಿರುತ್ತಾರೆ. ಈ ಕ್ರೀಡಾಕೂಟದಲ್ಲಿ ದೇಶ ವಿದೇಶಗಳ ಸಾವಿರಾರು ಕ್ರೀಡಾ ಪಟುಗಳು ಭಾಗವಹಿಸಿರುತ್ತಾರೆ. ಮೂಲತಃ ಬೈಂದೂರು ತಾಲೂಕು ಬಿಜೂರಿನವರಾದ ಶಂಕರ ಪೂಜಾರಿ ಅವರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ್ದು, ಓಟ, ರಿಲೇ ಮೊದಲಾದ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ತನಕವೂ ಭಾಗವಹಿಸಿದ್ದಾರೆ. 2014ರಲ್ಲಿ ನಡೆದ 26ನೇ ಮಲೇಷಿಯಾ ಅಥ್ಲೆಟಿಕ್ ಚಾಂಪಿಯನ್’ಶಿಪ್’ನಲ್ಲಿ 2 ಚಿನ್ನ ಹಾಗೂ ಎರಡು ಬೆಳ್ಳಿಯ ಪದಕ ಗೆದ್ದಿದ್ದರು.ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮಾಸ್ಟ್ ಸ್ಪೋರ್ಟ್ಸ್ 2021 ಕ್ರೀಡಾಕೂಟ 100 ಹಾಗೂ 200 ಮೀಟರ್ ಓಟದ ಸ್ವರ್ಧೆಯಲ್ಲಿ ಅವರು ಬೆಳ್ಳಿಯ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಶಂಕರ ಪೂಜಾರಿ ಅವರು ಪ್ರಸ್ತುತ…
