Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯಲ್ಲಿ 2022-23 ಹಾಗೂ 2023-24 ರಲ್ಲಿ ಉತ್ತೀರ್ಣರಾದ ಪದವಿ, ಸ್ನಾತಕೋತರ ಪದವಿ ಮತ್ತು ಡಿಪ್ಲೋಮಾಗಳ ವಿದ್ಯಾರ್ಥಿಗಳು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಜನವರಿ 6 ರಿಂದ 20 ರವರೆಗೆ ವಿಶೇಷ ನೋಂದಣಿ ಅಭಿಯಾನವನ್ನು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಸಂಕೀರ್ಣದ ಬಿ. ಬ್ಲಾಕ್, ರೂ.ನಂ. 201 ರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಇಲ್ಲಿ ಅಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳು ಹಾಗೂ ಡಿಪ್ಲೋಮಾ ಕಾಲೇಜುಗಳಲ್ಲಿಯೂ ವಿಶೇಷ ನೋಂದಣಿ ಅಭಿಯಾನವನ್ನು ಆಯೋಜಿಸಲಾಗಿದ್ದು, ಆಯಾ ತಾಲೂಕಿನ ಅಭ್ಯರ್ಥಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ಪ್ರತಿ ತಿಂಗಳು ಪದವಿಧರರಿಗೆ 3,000 ರೂ. ಹಾಗೂ ಡಿಪ್ಲೋಮಾದಾರರಿಗೆ 1,500 ರೂ. ಗಳನ್ನು ನಿರುದ್ಯೋಗ ಭತ್ಯೆಯ ಮೂಲಕ ನೀಡಲಾಗುವುದು. ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೊರೈಸಿದ ಅಭ್ಯರ್ಥಿಗಳು ಕೂಡ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು: 2024-25 ರಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೆ.ಎಸ್.ಹೆಗ್ಡೆ ಮತ್ತು ಎ.ಬಿ. ಶೆಟ್ಟಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ದಿ. ನಾರಾಯಣ ಬಿಲ್ಲವ ಮತ್ತು ದಿ. ಜಾನಕಿ ನಾರಾಯಣ ಬಿಲ್ಲವ ನೆನಪಿನಲ್ಲಿ ಉಚಿತ ದಂತ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಶಿಬಿರವು ಶಿರೂರು ಪಿ.ಎಂ. ಶ್ರೀ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಜ.12 ರಂದು ಪೂ.9 ರಿಂದ ಅ.2ರ ತನಕ ನಡೆಯಲಿದೆ. ಶಿಬಿರದಲ್ಲಿ ನುರಿತ ದಂತ ವೈದ್ಯರು, ಕಿವಿ ಮೂಗು ಗಂಟಲು ತಜ್ಞರು, ಮಕ್ಕಳ ತಜ್ಞರು ಹಾಗೂ ಇತರೇ ತಜ್ಞ ವೈದ್ಯರಿಂದ ದಂತ ತಪಾಸಣೆ, ಇಸಿವೆ, ರಕ್ತ ಪರೀಕ್ಷೆ, ಶುಗರ್ ಟೆಸ್ಟ್ ಕಿವು ಮೂಗು ಗಂಟಲು ಪರೀಕ್ಷೆ, 12 ವರ್ಷ ಒಳಗಿನ ಮಕ್ಕಳಿಗೆ ತಪಾಸಣೆ, ಇತ್ಯಾದಿ ಆರೋಗ್ಯ ತಪಾಸಣೆ ಮಾಡಲಾಗುವುದು. ಅಗತ್ಯ ಲಭ್ಯ ಔಷಧಿಗಳನ್ನು ಒದಗಿಸಲಾಗುತ್ತದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾಸ್ ಪಿಯು ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯು ಹೋಮ್ ಸೈನ್ಸ್ ವಿದ್ಯಾರ್ಥಿಗಳಿಗೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಳ್ಳಲಾಯಿತು.   ತಾಳಿಪಾಡಿ ನೇಕಾರರ ಸಹಕಾರಿ ಸಂಘ ಕಿನ್ನಿಗೋಳಿ, ಮೂಲ್ಕಿ, ದಕ್ಷಿಣಕನ್ನಡ ಜಿಲ್ಲೆ ಇಲ್ಲಿಗೆ ಭೇಟಿ ನೀಡಿ, ಕೈಮಗ್ಗದ ಸೀರೆ ತಯಾರಿ, ವಿವಿಧ ಪರಿಸರ ಸ್ನೇಹಿ ಬಣ್ಣಗಳ ಬಳಕೆ, ಓಝೋಪ್ರೀ ಬಣ್ಣದ ಬಳಕೆ, ನವೀನ ವಿನ್ಯಾಸ, ಲಾಳಿ, ಪನ್ನೆ, ಕಾಲುಮಣೆ, ಅಚ್ಚು, ಕೈಮಗ್ಗದಲ್ಲಿ ಸಾಮಾನ್ಯವಾಗಿ ತಯಾರುಮಾಡುವ ವಿವಿಧ ಬಟ್ಟೆಗಳ ಮಾಹಿತಿ, ಅಚ್ಚಿನ ಕುಣಿಕೆಗಳ ಮೂಲಕ ಹಾಸುನೂಲುಗಳ ಹಾದು ಹೋಗುವಿಕೆ, ಎಳೆಗಳ ಸಮೂಹ ಮತ್ತು ನೇಕಾರರ ಇತಿಹಾಸ ಮತ್ತು ಕೈಮಗ್ಗದ ಉತ್ಪಾದನೆ ಪ್ರಾಯೋಗಿಕವಾಗಿ ನೋಡಿ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಂಡರು. ಮಾಧವ ಶೆಟ್ಟಿಗಾರ್ ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಉಪನ್ಯಾಸಕಿ ವಿನಂತಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಯಾವುದೇ ಊರು ಪ್ರಸಿದ್ಧಿಗೆ ಬರಬೇಕಿದ್ದರೂ ಅಲ್ಲಿನ ಸಂಸ್ಕೃತಿಯ ಬೇರು ಗಟ್ಟಿಯಾಗಿರಬೇಕು. ಜೊತೆಗೆ ಜನರಲ್ಲಿ ಸಾಂಸ್ಕೃತಿಕ ಮನೋಭಾವವಿದ್ದರೆ ಬದುಕು ಸಂದರವಾಗುತ್ತದೆ ಎಂದು ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ.ಎಸ್ ಹೇಳಿದರು. ಅವರು ಸಮಷ್ಟಿ ಪ್ರತಿಷ್ಠಾನ ರಿ. ಹಾಗೂ ಸ್ನೇಹ ತರಂಗ ಬೈಂದೂರು ಸಹಯೋಗದೊಂದಿಗೆ ಸುರಭಿ ರಿ. ಬೈಂದೂರು ಸಂಸ್ಥೆಯ ರಜತಯಾನ ತಿಂಗಳ ತಿರುಳು ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಶಾರದಾ ವೇದಿಕೆಯಲ್ಲಿ ಹಮ್ಮಿಕೊಂಡ ಯಕ್ಷ – ಗೊಂಬೆ ವೈಭವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಧರ್ಮ ಹಾಗೂ ಸಂಸ್ಕೃತಿಗೆ ನಿಕಟವಾದ ನಂಟಿದೆ. ಅಧರ್ಮದ ಕಾರ್ಯವನ್ನು ಮಾಡದಿರುವುದೇ ಧರ್ಮ ಎಂದು ಭಾವಿಸಬೇಕಾಗುತ್ತದೆ. ಜನರಿಗೆ ಉತ್ತಮ ಸಂದೇಶ ನೀಡುವ, ಮನಸ್ಸನ್ನು ಉಲ್ಲಾಸಗೊಳಿಸುವ ಹಾಗೂ ಒಳಿತನ್ನು ಮಾಡುವ ಕಾರ್ಯವನ್ನು ಸಂಘ ಸಂಸ್ಥೆಗಳ ಮೂಲಕ ಮಾಡಬೇಕಾಗಿದೆ ಎಂದರು. ಉದ್ಯಮಿ ನಾಕಟ್ಟೆ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ. ಶಂಕರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ 9ನೇ ಪುಣ್ಯತಿಥಿ ಆರಾಧನಾ ಮಹೋತ್ಸವ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಂಗಳವಾರ ನಡೆಯಿತು. ಬೆಳಿಗ್ಗೆ ಸ್ತೋತ್ರ ಪಠಣ, ಮಧ್ಯಾಹ್ನ ಶ್ರೀದೇವರಿಗೆ ಮಹಾಮಂಗಳಾರತಿ, ಗುರುಪೂಜೆ, ಪುಷ್ಪಾರ್ಚನೆ, ತೀರ್ಥ ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ತಾಂತ್ರಿಕ ವೇದಮೂರ್ತಿ ಜಿ. ರಾಘವೇಂದ್ರ ಆಚಾರ್ಯ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಡಾ. ಕಾಶೀನಾಥ ಪೈ ಮತ್ತು ಎಂ.ಜಿ. ಪ್ರಕಾಶ ಪೈ ಅವರು ಶ್ರೀಗಳ ಗುರು ಗುಣಗಾನ ಮಾಡಿದರು. ರಾತ್ರಿ ಭಜನೆ, ಶ್ರೀದೇವರಿಗೆ ಪ್ರಸನ್ನಪೂಜೆ, ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಮೋಹನದಾಸ ಭಟ್ ನೇತೃತ್ವದಲ್ಲಿ ಧಾರ್ಮಿಕ ಅನುಷ್ಠಾನಗಳು ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪುರೋಹಿತರು, ಅರ್ಚಕರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು ಮತ್ತಿತರರು ಉಪಸ್ಥಿತರಿದ್ದರು.  

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಈಗಾಗಲೇ ವಿದ್ಯಾರ್ಜನೆ ಮುಗಿಸಿರುವ ಹಳೆಯ ವಿದ್ಯಾರ್ಥಿಗಳಿಗಾಗಿ ಸಮ್ಮಿಲನ ಕಾರ್ಯಕ್ರಮವು ಇತ್ತೀಚಿಗೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಡಿಯಲ್ಲಿ ಬಾಲಕರಿಗಾಗಿ ಕ್ರಿಕೆಟ್, ಅಂಬಾರಿ ರೇಸ್, ರನ್ನಿಂಗ್ ರೇಸ್ ಹಾಗೂ ಬಾಲಕಿಯರಿಗಾಗಿ ಥ್ರೋ ಬಾಲ್, ಗೋಣಿಚೀಲ ಓಟ, ರಂಗೋಲಿ, ಮೆಹಂದಿ ಬಿಡಿಸುವ ಸ್ಪರ್ಧೆಗಳನ್ನು ನಡೆಸಲಾಯಿತು. ಸಂಜೆಯ ಅವಧಿಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಂತಾರಾಷ್ಟ್ರೀಯ ಮಟ್ಟದ ಜಾದೂಗಾರರಾದ ಸತೀಶ್ ಹೆಮ್ಮಾಡಿ ಸಾರಥ್ಯದ ‘ಭ್ರಮಾಲೋಕ’ ಜಾದೂ ತಂಡದಿಂದ ಮನಮೋಹಕ ಜಾದೂ ಪ್ರದರ್ಶನ ಹಾಗೂ ಕುಂದಾಪುರ ತಾಲ್ಲೂಕಿನ ಖ್ಯಾತ ಸುಗಮ ಸಂಗೀತ ಗಾಯಕರುಗಳಾದ ಡಾ. ಗಣೇಶ್ ಗಂಗೊಳ್ಳಿ ಮತ್ತು ರಾಜೇಶ್ ಶ್ಯಾನುಭಾಗ್ ರಿಂದ ‘ಸಂಗೀತ ರಸಸಂಜೆ ಕಾರ್ಯಕ್ರಮಗಳು ನಡೆಯಲ್ಪಟ್ಟವು. ಇದೇ ಸಂದರ್ಭದಲ್ಲಿ ಸುರತ್ಕಲ್ ಗೋವಿಂದದಾಸ ಕಾಲೇಜಿನ ಉಪನ್ಯಾಸಕರಾದ ಚವನ್ ಹೆಗ್ಡೆ ಮತ್ತು ತಂಡದವರು ವಿಶಿಷ್ಟ ಟೆಲಿಸ್ಕೊಪ್ ನ ಮೂಲಕ ಆಕಾಶಕಾಯಗಳನ್ನು ದರ್ಶಿಸಿ, ಅವುಗಳ ಸ್ಥಾನ ಮತ್ತು ಪರಿಭ್ರಮಣ, ಸೂರ್ಯ ಮತ್ತು ಚಂದ್ರ ಗ್ರಹಣಗಳ ಕುರಿತಾದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳದಲ್ಲಿ ಕ್ರಿಯೇಟಿವ್ ನುಡಿಹಬ್ಬ ಮತ್ತು ವಾರ್ಷಿಕೋತ್ಸವ ಸಮಾರಂಭ ಕ್ರಿಯೇಟಿವ್ ಆವಿರ್ಭವವು “ವಿವಿಧತೆಯಲ್ಲಿ ಏಕತೆ” ಎಂಬ ಪರಿಕಲ್ಪನೆಯೊಂದಿಗೆ ಬಹಳ ವೈಭವಪೂರ್ಣವಾಗಿ ಮೂಡಿಬಂದಿತು. ಪ್ರೇಮಕವಿ ಎಂದೇ ಕರೆಯಲ್ಪಡುವ ಖ್ಯಾತ ಸಾಹಿತಿಗಳಾದ ಬಿ. ಆರ್. ಲಕ್ಷ್ಮಣರಾವ್ ಹಾಗೂ ನಡೆದಾಡುವ ಗ್ರಂಥಾಲಯ ಎಂದೇ ಪ್ರಸಿದ್ಧರಾದ ಡಾ. ಸೋಮೇಶ್ವರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳ ಸಮ್ಮುಖದಲ್ಲಿ ಎರಡು ಹಂತಗಳಲ್ಲಿ ಸಂವಾದ ಕಾರ್ಯಕ್ರಮವು ಖ್ಯಾತ ನಿರೂಪಕ ಅವಿನಾಶ್ ಕಾಮತ್ ಅವರ ಮುಖೇನ ನಡೆಸಲ್ಪಟ್ಟಿತು. ” ಕವಿತೆ ಹುಟ್ಟುವ ಸಮಯ “ಸಂವಾದ ಕಾರ್ಯಕ್ರಮದಲ್ಲಿ ಬಿ. ಆರ್. ಲಕ್ಷ್ಮಣರಾವ್ ಅವರು ಸಂವಾದ ನಡೆಸುತ್ತಾ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ ಹಾಡುಗಳ ನಿರಂತರತೆಗೆ ಕಾರಣ ಮುಂದಿನ ಪೀಳಿಗೆಯಾಗಿರುವ ವಿದ್ಯಾರ್ಥಿಗಳು ಎಂದರು. ಮಜಾ ಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ ಮತ್ತು ತಂಡದವರಿಂದ ಬಿ ಆರ್ ಲಕ್ಷ್ಮಣರಾವ್ ವಿರಚಿತ ಕವಿತೆಗಳ ಗಾಯನ ಕಾರ್ಯಕ್ರಮ ಜರುಗಿತು. ಪ್ರಖ್ಯಾತ ವೈದ್ಯ, ಕ್ವಿಜ್ ಮಾಸ್ಟರ್, ಲೇಖಕರು ಹಾಗೂ ಅಂಕಣಕಾರರಾದ ಡಾ. ನಾ ಸೋಮೇಶ್ವರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಪ್ರತಿಯೊಂದು ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೇರಬೇಕಾದರೆ ಆ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗೆಯೇ ಈ ಶಾಲೆಯಲ್ಲಿಯೂ ಕೂಡ ಹಳೆವಿದ್ಯಾರ್ಥಿಗಳು ದಾನಿಗಳ ಸಹಕಾರದಿಂದ ಸುಮಾರು ರೂ.15 ಲಕ್ಷದ ವೆಚ್ಚದಲ್ಲಿ ಸಭಾಭವನವನ್ನು ನಿರ್ಮಿಸುವ ಮೂಲಕ ಇತರರಿಗೂ ಮಾದರಿಯಾಗಿದ್ಧಿರಿ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.  ರಾಗಿಹಕ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಮತ್ತು ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಮಕ್ಕಳಿಗೆ ವಾಹನ ವ್ಯವಸ್ಥೆ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ವಿವಿಧ ಯೋಜನೆ ರೂಪಿಸಿರುವುದು ಕೂಡ ಶ್ಲಾಘನೀಯ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ರವಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಿಗೆ ಮತ್ತು ಈ ಹಿಂದೆ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು.. ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ರವೀಂದ್ರ ಪೂಜಾರಿ ಮತ್ತು ತಂಡದವರು ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದರು. ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಹಳೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ದೇಶವು ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಇಡಬೇಕಾದರೆ ಮಹಿಳಾ ಶಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂದಿನ ದಿನಮಾನಗಳಲ್ಲಿ ಸಂಘಟನೆಗಳ ಮೂಲಕ ಮಹಿಳೆಯರು ಒಗ್ಗೂಡಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗೆಗಿನ ಅರಿವು ಅತೀ ಅಗತ್ಯ. ಅಂತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ನಾಗೂರು ಶಾಂತೇರಿ ಕಾಮಾಕ್ಷಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಂದು ನಡೆದ ಜೆಸಿಐ ಉಪ್ಪುಂದ ಸುಪ್ರಿಂ ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗಂಡು ಹೆಣ್ಣು ಎಂಬ ಭೇಧವಲ್ಲದೇ ಪ್ರತಿಯೊಬ್ಬರಲ್ಲಯೂ ಕೂಡ ಒಂದೊಂದು ವಿಶೇಷ ಶಕ್ತಿಯಿದ್ದು, ಅಭಿವೃದ್ಧಿಗೆ ಪೂರಕವಾಗಿ ಮಾನವ ಸಂಪನ್ಮೂಲ ಬಳಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು. ನಿರ್ಗಮಿತ ಅಧ್ಯಕ್ಷೆ ಸುಮಾ ಆಚಾರ್ ಸ್ವಾಗತಿಸಿ, ಗತವರ್ಷದ ವರದಿ ಮಂಡಿಸಿ, 2025ನೇ ಸಾಲಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆ, ತಾಲೂಕು ಕಚೇರಿ, ಉಪ ವಿಭಾಗ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರುಗಳು ಸರಿಯಾದ ಮಾಹಿತಿಯೊಂದಿಗೆ ಪಟ್ಟಿಯಲ್ಲಿ ಇವೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ – ಅಂತಿಮ ಮತದಾರರ ಪಟ್ಟಿಯನ್ನು ಹಸ್ತಾಂತರಿಸಿ ಮಾತನಾಡಿದರು. ಜಿಲ್ಲೆಯ ವಿಧಾನಸಭಾವಾರು ಅಂತಿಮ ಮತದಾರರ ಪಟ್ಟಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,17,890 ಪುರುಷರು, 1,22,914 ಮಹಿಳೆಯರು ಹಾಗೂ 2 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,40,806 ಮತದಾರರು, ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,01,959 ಪುರುಷರು, 1,10,025 ಮಹಿಳೆಯರು ಹಾಗೂ 2 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,11,986 ಮತದಾರರು, ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,06,782…

Read More