ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿನ ನಾಗರಿಕರು ಮೌಲ್ಯಯುತವಾದ ಆಧಾರ್ ಗುರುತಿನ ಚೀಟಿಯನ್ನು ಹೊಂದುವುದು ಅವಶ್ಯ. ಹೊಸ ನೋಂದಣಿ, ಮರು ನೋಂದಣಿ ಹಾಗೂ ಬಯೋ ಮೆಟ್ರಿಕ್ ನೀಡಿ, ಆಧಾರ್ ಗುರುತಿನ ಚೀಟಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಕರೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ದೇಶದ ಪ್ರತಿಯೊಬ್ಬ ಅರ್ಹ ನಾಗರಿಕರಿಗೆ ವಿಶಿಷ್ಟ ಗುರುತಿನ ಚೀಟಿಯನ್ನು ವಿತರಿಸುತ್ತಿದೆ. ಎಲ್ಲರೂ ಈ ಗುರುತಿನ ಚೀಟಿಯನ್ನು ಹೊಂದಬೇಕು. ಆಧಾರ್ ಗುರುತಿನ ಚೀಟಿ ಹೊಂದದೇ ಇರುವವರು ಅಗತ್ಯ ದಾಖಲೆಗಳನ್ನು ನೀಡಿ ನೋಂದಾಯಿಸಬೇಕು. ಕಡ್ಡಾಯ ಬಯೋ ಮೆಟ್ರಿಕ್, ನವೀಕರಣ ಹಾಗೂ ಸ್ಯಾಚುರೇಷನ್ ಗೊಳಿಸುವುದರೊಂದಿಗೆ ಮೌಲ್ಯಯುತವಾದ ಆಧಾರ್ ಕಾರ್ಡ್ ಹೊಂದಬೇಕು ಎಂದರು. ಜಿಲ್ಲೆಯಲ್ಲಿ ಈವರೆಗೆ 14,16,407 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 5 ವರ್ಷದೊಳಗಿನ 35,750, 5 ರಿಂದ 18 ವರ್ಷದವರು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನೆಹರೂ ಮೈದಾನದಲ್ಲಿ ಯಕ್ಷರಾತ್ರಿ ಸಂಯೋಜನೆಯಲ್ಲಿ ಜ.03 ರಂದು ಯಕ್ಷರಾತ್ರಿ ದಶಯಾನ – 2025 ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸತತ 9 ವರ್ಷಗಳಿಂದ ಯಕ್ಷಗಾನ ಪ್ರದರ್ಶನದ ಜೊತೆಗೆ ಗೌರವ ಪುರಸ್ಕಾರ, ಅಶಕ್ತರಿಗೆ ನೆರವು ಹೀಗೆ ಹಲವಾರು ಯೋಜನೆಗಳನ್ನು ಯಕ್ಷರಾತ್ರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ಯಕ್ಷರಾತ್ರಿಯ ಗೌರವ ಪುರಸ್ಕಾರವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದ ಡಾ. ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು, ಯಕ್ಷರಾತ್ರಿ ಕಲಾಗೌರವವಾಗಿ ಮಂದಾರ್ತಿ ಮೇಳದ ಹಿರಿಯ ಹಾಸ್ಯಗಾರರಾದ ಕಮಲಶಿಲೆ ಮಹಾಬಲ ದೇವಾಡಿಗ, ಪೆರ್ಡೂರು ಮೇಳದ ಪ್ರಧಾನ ಹಾಸ್ಯಗಾರರಾದ ಕಮಲಶಿಲೆ ರವೀಂದ್ರ ದೇವಾಡಿಗ, ಯುವ ಕಲಾವಿದ ಸೌಕೂರು ಮೇಳದ ಹುಟ್ಟೂರ ಗೌರವಿತರಾದ ಸುಬ್ರಹ್ಮಣ್ಯ ಗಾಣಿಗ ಕೋಣಿ ಹಾಗೂ ಯಕ್ಷರಾತ್ರಿ ಯಶೋಗಾತೆ ಪುರಸ್ಕಾರವನ್ನು ಸಮಾಜ ಸೇವಕರಾದ ಪದ್ಮಮ್ಮ ಹೊದ್ರೊಳ್ಳಿ ಅವರಿಗೆ ನೀಡಲಾಗುತ್ತಿದೆ. ಶ್ರೀ ಪೆರ್ಡೂರು ಮೇಳದವರ ಈ ವರ್ಷದ ಎರಡನೇ ಪ್ರಸಂಗ ಶ್ವೇತಾ ಬೊಳ್ಳಂಬಳ್ಳಿ ವಿರಚಿತ ಪ್ರಸಾದ ಕುಮಾರ್ ಮೊಗೆಬೆಟ್ಟು ಪದ್ಯ ರಚನೆಯ ಕ್ಷೀರಾ ಸಮುದ್ರ ಯಕ್ಷಕಾಶಿ ಹೊಸ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉದ್ಯಮಿಯಾಗಿದ್ದ ಐರೋಡಿ ಭಾಸ್ಕರ್ ಎಚ್. ಶೆಟ್ಟಿ (83) ಅವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಡಿ.20ರಂದು ನಿಧನರಾದರು. ಮೃತರು ಪತ್ನಿ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರು ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಪತ್ನಿಯ ತಂದೆ. ಮೃತರ ಅಂತ್ಯಕ್ರಿಯೆ ಡಿ.21 ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಕೊಕ್ಕರ್ಣೆ ಹಳ್ಳಿಯ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಆಜ್ರಿ ಗ್ರಾಮದ ನಿವಾಸಿ ಬಾಬಿ (38) ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಡಿ.16ರಂದು ಇಲಿ ಪಾಷಣ ಸೇವಿಸಿದ್ದರು. ಅವರನ್ನು ಕೂಡಲೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಡಿ. 18ರಂದು ಮೃತಪಟ್ಟಿದ್ದಾರೆ ಎಂದು ಸಹೋದರ ದಿನೇಶ ಅವರು ಪೋಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದ ಬಳಿ ಕಾರು ಸ್ಕೂಟರ್ ಡಿಕ್ಕಿಯಾಗಿ ಸವಾರನಿಗೆ ಗಾಯವಾಗಿದೆ. ನೆಂಚಾರು ಗ್ರಾಮದ ನಿವಾಸಿ ವಿಜಯ (46) ಅವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಕೋಟೇಶ್ವರ ಫ್ಲೈ ಓವರ್ ಬಳಿ ಹಿಂದಿನಿಂದ ಕುಂಭಾಶಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಸಚಿನ್ ಚಲಾಯಿಸುತ್ತಿದ್ದ ಕಾರು ಢಿಕ್ಕಿಯಾಗಿದೆ. ಗಾಯಗೊಂಡಿರುವ ವಿಜಯ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಇದು ಗೂಗಲ್ ಮಾಹಿತಿ ಸುನಾಮಿಯ ಕಾಲ, ಆದರೆ ಶಿಕ್ಷಕರ ಸ್ಥಾನ ತುಂಬಲು ಗೂಗಲ್ಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ನಮ್ಮ ತರಗತಿಯಲ್ಲಿ ಏಕೆ ಕುಳಿತುಕೊಳ್ಳಬೇಕು ಎಂದು ಶಿಕ್ಷಕರು ತಮ್ಮಲ್ಲಿ ಪ್ರಶ್ನಿಸಿಕೊಳ್ಳಬೇಕು. ಆಗ ತರಗತಿಯ ಎಲ್ಲ ವಿದ್ಯಾರ್ಥಿಗಳು ಬುದ್ಧಿವಂತರಾಗುತ್ತಾರೆ ಎಂದು ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಆರ್. ರಾಮಚಂದ್ರ ಶೆಟ್ಟಿ ಹೇಳಿದರು. ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು. ಈ ಪೀಳಿಗೆಯಲ್ಲಿ ಶಿಕ್ಷಕರು ಸಹ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ಅವರು ಪ್ರಸ್ತುತ ತಂತ್ರಜ್ಞಾನದಿಂದ ಮತ್ತು ಪ್ರಸ್ತುತ ಕಲಿಕಾ ಮಾಧ್ಯಮದಿಂದ ಹಿಂದುಳಿಯುತ್ತಾರೆ. ಆದ್ದರಿಂದ ತರಬೇತಿಯ ಅಗತ್ಯವಿದೆ ಎಂದರು. ವಿದ್ಯಾರ್ಥಿಗೆ ಹೊಸ ವಿಷಯಗಳ ಕುರಿತು ಕಲಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಒಬ್ಬ ಶಿಕ್ಷಕ ತನ್ನನ್ನು ತಾನು ನವೀಕರಿಸಿಕೊಳ್ಳಲು ಪ್ರಶ್ನಾರ್ಥಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಂಗಪ್ರಕ್ರಿಯೆಗಳ ಹಿಂದೆ ಮನುಷ್ಯನನ್ನು ಸಹ್ಯವಾಗಿ ಹಾಗೂ ಸಂತೋಷವಾಗಿ ಇಡುವ ಒಳ್ಳೆಯ ಉದ್ದೇಶವಿದೆ. ಸಮುದಾಯವನ್ನು ಹಿಡಿದಿಟ್ಟುಕೊಂಡು, ಸಂಸ್ಕಾರಯುತರನ್ನಾಗಿಸುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಅವರು ಗುರುವಾರ ಯುಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ವರ್ಷ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ, ಯಕ್ಷಗಾನದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸತ್ವಯುತವಾಗಿದೆ. ಇಲ್ಲಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮನ್ನು ಸಂಸ್ಕಾರಯುತವನ್ನಾಗಿಸಿದೆ ಎಂದರು. ಯುಸ್ಕೋರ್ಡ್ ಟ್ರಸ್ಟ್ ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಗಿರೀಶ್ ಶ್ಯಾನುಭಾಗ್, ಲಾವಣ್ಯ ರಿ. ಬೈಂದೂರು ಅಧ್ಯಕ್ಷ ಬಿ. ನರಸಿಂಹ ನಾಯಕ್, ಉಪ್ಪುಂದ ಸಿನಿಯರ್ ಛೇಂಬರ್ ಅಧ್ಯಕ್ಷ ಅಚ್ಚುತ ಬಿಲ್ಲವ, ಜೆಸಿಐ ಬೈಂದೂರು ಸಿಟಿ ಅಧ್ಯಕ್ಷೆ ಅನಿತಾ ಆರ್. ಕೆ. ಉಪಸ್ಥಿತರಿದ್ದರು. ಬಳ್ಳಾರಿಯ ರಂಗಭೂಮಿ ಕಲಾವಿದೆ ಸುಮಂಗಲಾ ಅವರನ್ನು ಸನ್ಮಾನಿಸಲಾಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ನೂತನವಾಗಿ ನಿರ್ಮಾಣವಾಗುವ ರಂಗ ಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮ ಡಿ.19ರಂದು ನಡೆಯಿತು. ಹಿರಿಯ ನಾಗರಿಕರಾದ ವಿಶ್ವೇಶ್ವರ ಅಡಿಗ ಶಂಕುಸ್ಥಾಪನೆ ನೆರವೇರಿಸಿ, ಸರಕಾರಿ ಶಾಲೆಯನ್ನು ಉಳಿಸಿ, ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು. ಡಾ. ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ, ನಮ್ಮೂರ ಶಾಲೆಯನ್ನು ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದತ್ತು ಸ್ವೀಕಾರ ಮಾಡಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಾಗಿದೆ. ಶಾಲಾ ವಾಹನ ಒದಗಿಸಲಾಗಿದೆ, ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ, ಸ್ಮಾಟ್ ಕ್ಲಾಸ್ ಸೇರಿದಂತೆ ಖಾಸಗಿ ಶಾಲೆಗಳಿಗೆ ಪೈಪೊಟಿಯಂತೆ ಮಾದರಿ ಶಾಲೆಯನ್ನಾಗಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ನಾವು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಲು ಎಲ್ಲರು ಶ್ರಮಿಸಬೇಕು ಎಂದರು. ಉದ್ಯಮಿ ಭಾಸ್ಕರ್ ಪೂಜಾರಿ ಬಿಜೂರು, ಸವಿತಾ ದಿನೇಶ್ ಗಾಣಿಗ, ಶ್ರೀಧರ್ ಬಿಜೂರು, ನಿವೃತ್ತ ಮುಖ್ಯಶಿಕ್ಷಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ಇದರ ವತಿಯಿಂದ ಆಯೋಜಿಸಲಾದ 10 ದಿನಗಳ ಕಸೂತಿ ವಿನ್ಯಾಸ ತರಬೇತಿಯ ಸಮಾರೋಪವು ಗಂಗೊಳ್ಳಿಯ ಸ.ವಿ. ಪದವಿ ಪೂರ್ವ ಕಾಲೇಜಿನ ಲೈಬ್ರೆರಿ ಹಾಲಿನಲ್ಲಿ ನಡೆಯಿತು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬೈಂದೂರು ಕ್ಲಬ್ನ ಅಧ್ಯಕ್ಷೆ ಗುಲಾಬಿ ಪೂಜಾರ್ತಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತರಬೇತಿ ಶಿಕ್ಷಕಿ ರಮ್ಯ, ಆಶ್ರಯ ಹೊಲಿಗೆ ತರಬೇತಿ ಸಂಸ್ಥೆಯ ಶಿಕ್ಷಕಿ ಶಾಂತಿ ಖಾರ್ವಿ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಅನುಕೂಲವಾಗುವಂತೆ ಅಗತ್ಯ ಮೂಲಭೂತ ಸೌಕರ್ಯಗಳಾದ ಭೂಮಿ ವಿದ್ಯುಚ್ಛಕ್ತಿ ಸೌಕರ್ಯ ರಸ್ತೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿ ಸಾರ್ವಜನಿಕರಿಗೆ ಉದ್ಯೋಗ ದೊರೆಯುವಂತೆ ಕಾರ್ಯಪ್ರವೃತರಾಗಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಹಾಗೂ ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 155 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಗುರುತಿಸಿದ್ದು, ಈ ಭೂಮಿಗಳ ಭೂ ಸ್ವಾಧೀನ ಪ್ರಕ್ರೀಯೆಗಳನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಿ ಭೂಮಿಯನ್ನು ಕೆ.ಐ.ಡಿ.ಬಿ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದರು. ಬೆಳಪು ಕೈಗಾರಿಕಾ ಪ್ರದೇಶ ಸಂಪರ್ಕ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಜಮೀನನ್ನು ವಿಶೇಷ ಭೂ…
