Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ‘ಬಡವರು, ದೀನ ದಲಿತರು, ಅಂಗವಿಕಲರಿಗಾಗಿ ಬದುಕು ಮುಡುಪಾಗಿಟ್ಟಿದ್ದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಈ ಪ್ರಶಸ್ತಿ ಅರ್ಪಣೆ’ ಎಂದು ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಭಾವುಕರಾದರು. ಇಲ್ಲಿನ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಬುಧವಾರ ಸಂಜೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ’30ನೇ ವರ್ಷದ ಆಳ್ವಾಸ್ ವಿರಾಸತ್’ನಲ್ಲಿ ಪ್ರತಿಷ್ಠಿತ ’ಆಳ್ವಾಸ್ ವಿರಾಸತ್-2024’ ಪ್ರಶಸ್ತಿಯನ್ನು ಸ್ವೀಕರಿಸಿದ ಅವರು ಮನದುಂಬಿ ಮಾತನಾಡಿದರು. ಶಿಸ್ತು, ಸಂಯಮ, ಸಮಯ ಬಹಳ ದೊಡ್ಡದು. ಅದನ್ನು ತೋರಿಸಿದ ಡಾ.ಎಂ. ಮೋಹನ ಆಳ್ವ ಅವರ ಸಾಧನೆ ಅನನ್ಯ. ಅವರಿಂದ 101 ವರ್ಷ ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದರು. ಇಂತಹ ಕಾರ್ಯಕ್ರಮ ಕಷ್ಟದ ಕಾರ್ಯ ಎಂದು ಉಲ್ಲೇಖಿಸಿದರು. ತಂದೆ- ತಾಯಿಗಳ ಬಳಿಕ ಗುರುವೇ ನಮ್ಮ ಪುಣ್ಯ ಗವಾಯಿಗಳು ರಾಜ್ಯದಲ್ಲಿ ಹಿಂದೂಸ್ತಾನಿ ಸಂಗೀತ ಪಸರಿಸಲು ಕಾರಣ. ಅದಕ್ಕಾಗಿ ಜೀವನ ಮುಡುಪಾಗಿಟ್ಟ ಮಹಾತ್ಮ ಎಂದರು. ಪ್ರಶಸ್ತಿ ಹುಡುಕಿಕೊಂಡು ಬರಬೇಕು. ನಾವು ಅದರ ಹಿಂದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ‘ಮಕ್ಕಳ ಸಂತೆ’ ಬಿಜಿನೆಸ್ ಡೇ ಕಾರ್ಯಕ್ರಮ ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆ ಕಾರ್ಯಕ್ರಮ ಗಂಗೊಳ್ಳಿಯ ಎಸ್.ವಿ. ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ಗುರುವಾರ ನಡೆಯಿತು. ಗಂಗೊಳ್ಳಿಯ ಉದ್ಯಮಿ ವಿನೋದ್ ಪೈ ಮಕ್ಕಳ ಸಂತೆಯನ್ನು ಮತ್ತು ಗಂಗೊಳ್ಳಿ ಕ್ಲಸ್ಟರ್‌ನ ಸಿಆರ್‌ಪಿ ಪ್ರದೀಪ್ ಕುಮಾರ್ ಶೆಟ್ಟಿ ವಿಜ್ಞಾನ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗಂಗೊಳ್ಳಿಯ ವಿವಿಧ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಾದ ಗೋಪಾಲ ದೇವಾಡಿಗ, ರಾಘವೇಂದ್ರ ಶೇರುಗಾರ್, ಭಗಿನಿ ಕ್ರೆಸೆನ್ಸ್, ಸಭಾ ಭಾನು ಮತ್ತು ಸುಮಯ್ಯ ಮಕ್ಕಳ ಸಂತೆಯ ವಿವಿಧ ಮಳಿಗೆಗಳನ್ನು ಉದ್ಘಾಟಿಸಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ. ಸಿ. ಅಧ್ಯಕ್ಷತೆ ವಹಿಸಿದ್ದಾರೆ. ಜಿಎಸ್‌ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶೀನಾಥ್ ಪೈ, ಕಾರ್ಯದರ್ಶಿ ಎಚ್. ಗಣೇಶ ಕಾಮತ್, ಸಂಚಾಲಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ,ಡಿ.13: ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತಿಗೆ ಡಿ.10ರಂದು ನಡೆದ ಚುನಾವಣೆಯ ಫಲಿತಾಂಶವು ಗುರುವಾರ ರಾತ್ರಿ ಹೊರಬಿದ್ದಿದ್ದು ಕಾಂಗ್ರೆಸ್‌ – ಎಸ್‌ಡಿಪಿಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಒಟ್ಟು 33 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ 12, ಎಸ್‌ಡಿಪಿಐ ಬೆಂಬಲಿತ 7, ಬಿಜೆಪಿ ಬೆಂಬಲಿತ 12 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್‌ – ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳ ಚುನಾವಣಾ ಮೈತ್ರಿ ಇದ್ದುದರಿಂದ ಒಂದೂವರೆ ದಶಕದ ಬಳಿಕ ಕಾಂಗ್ರೆಸ್‌ ಬೆಂಬಲಿತರು ಗಂಗೊಳ್ಳಿ ಗ್ರಾಮ ಪಂಚಾಯತಿಯ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಗಂಗೊಳ್ಳಿಯ ಒಟ್ಟು 8 ವಾರ್ಡ್‌ಗಳಲ್ಲಿ 1ನೇ ವಾರ್ಡಿನ ಒಟ್ಟು ಐದು ಸ್ಥಾನಗಳಲ್ಲಿ ಗುರುರಾಜ, ರೇಖಾ ಖಾರ್ವಿ ಸರೋಜಕೃಷ್ಣ ಪೂಜಾರಿ, ನಾಗರಾಜ ಖಾರ್ವಿ, ನಾಗರತ್ನ ಶೇರುಗಾ‌ರ್ ಗೆಲುವು ಸಾಧಿಸಿದ್ದಾರೆ. 2ನೇ ವಾರ್ಡಿನಲ್ಲಿ ತಬ್ರರೈಸ್, ಶರೀನಾ, ಅಬೂಬಕ್ಕರ್ ನಾಕುದಾ ಹಾಗೂ ರಜಬ್ ಗೆಲುವು ಸಾಧಿಸಿದ್ದಾರೆ. 3ನೇ ವಾರ್ಡಿನಲ್ಲಿ ದೀಪಾ, ಗೋಪಾಲ್ ಖಾರ್ವಿ, ಮಮತಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯ ಸಂಬಾಲ್ ಉಪಯೋಜೆಯಡಿ ಕಾರ್ಯನಿರ್ವಹಿಸುತ್ತಿರುವ ‘ಸಖಿ’ ಒನ್ ಸ್ಟಾಪ್ ಸೆಂಟರ್ ಯೋಜನೆಯು ಸಂಕಷ್ಟದಲ್ಲಿರುವ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಕಾನೂನು ಮತ್ತು ಪೊಲೀಸ್ ನೆರವು, ತಾತ್ಕಾಲಿಕ ಆಶ್ರಯ ಹಾಗೂ ಆಪ್ತ ಸಮಾಲೋಚನೆ, ಅಗತ್ಯ ತುರ್ತು ಸೇವೆಗಳನ್ನು ನಗರದ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದ ಆವರಣದಲ್ಲಿ  24*7ರಂತೆ ಒದಗಿಸಲಾಗುತ್ತಿದೆ. ತುರ್ತು ಸೇವೆಗಾಗಿ ಸರಕಾರವು ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದು ಸದರಿ ವಾಹನಕ್ಕೆ ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲ ಸಿ.ಕೆ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಾಧಿಕಾರಿ ಅನುರಾಧ ಹಾದಿಮನಿ, ಕಛೇರಿ ಅಧೀಕ್ಷಕರು, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬೈಂದೂರಿನಲ್ಲಿ ಮೊದಲ ಭಾರಿಗೆ ನೂತನ ಮಾದರಿಯ ಬಸ್ಸುಗಳನ್ನು ಪರಿಚಯಿಸಿದ ಏರೋ ಬಸ್‌ (Aero bus) ಸಂಸ್ಥೆ ಇದೀಗ ಹೊಸತಾಗಿ ನಾಲ್ಕು ಬಸ್ಸುಗಳನ್ನು ಗ್ರಾಹಕರ ಸೇವೆಗೆ ಒದಗಿಸಿಕೊಟ್ಟಿದೆ. ಬಸ್ಸಿನಲ್ಲಿ ಶೌಚಾಲಯ ಸಹಿತ ಸೇವೆ ಹೊಂದಿದ್ದು ಗ್ರಾಹಕರಿಗೆ ಅನುಕೂಲಕರವಾಗಿದೆ. ಏರೋ ಬಸ್‌ ಸಂಸ್ಥೆಯು ಆರಂಭಗೊಂಡು ಒಂದು ವರ್ಷದಲ್ಲೇ ಉದ್ಯಮ ವಿಸ್ತರಿಸಿಕೊಂಡಿದ್ದು, ಒಟ್ಟು ಆರು ಬಸ್ಸುಗಳು ಬೈಂದೂರು – ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಿಸಲಿದೆ. ನೂತನ ಬಸ್ಸುಗಳನ್ನು ಲೋಕಾರ್ಪಣೆಗೊಳಿಸಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿಗೆ ವಿವಿಧ ಯೋಜನೆಗಳು ಜಾರಿಯಲ್ಲಿರುವಾಗ ಯುವ ಉದ್ಯಮಿಗಳಿಬ್ಬರು ಜೊತೆಗೂಡಿ ಹೊಸ ಮಾದರಿಯ ಬಸ್‌ ಸೇವೆ ಆರಂಭಿಸಿದ್ದಾರೆ. ಬೆಂಗಳೂರು – ಬೈಂದೂರು ಸಂಪರ್ಕಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಟೂರ್‌ ಪ್ಯಾಕೇಜ್‌ ಆರಂಭಿಸುವ ಯೋಜನೆ ಹೊಂದಿರುವುದು ಶ್ಲಾಘನೀಯ ಎಂದರು. ಈ ವೇಳೆ ಏರೋ ಬಸ್‌ ಸಂಸ್ಥೆಯ ಪಾಲುದಾರರಾದ ಕಿಶನ್‌ ಬೈಂದೂರು, ಜಿತೇಶ್‌ ಪೂಜಾರಿ ಬೆಳಗಾವಿಯ ಎಂ.ಜಿ ಆಟೋಮೋಟಿವ್‌ ಆಪರೇಷನ್‌ ಹೆಡ್‌ ಪ್ರಕಾಶ್‌ ವರ್ಮಾ, ಆಪರೇಷನ್‌…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದರೆ: ಸೌಹಾರ್ದತೆಯಿಲ್ಲದೆ ಬದುಕಿಗೆ ಅರ್ಥವಿಲ್ಲ. ಪ್ರೀತಿ ಸೌಹಾರ್ದತೆಗಾಗಿ ನಾವು ಜೀವನದುದ್ದಕ್ಕೂ ಶ್ರಮಿಸಬೇಕು ಎಂದು  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ’30ನೇ ಆಳ್ವಾಸ್ ವಿರಾಸಾತ್’ ಅಂಗವಾಗಿ ನಡೆಯುತ್ತಿರುವ ರಾಜ್ಯ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್- ರೇಂಜರ್ಸ್ ಸಾಂಸ್ಕೃತಿಕ ಉತ್ಸವದ ಅಂಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಬುಧವಾರ ಅವರು ಉಪನ್ಯಾಸ ನಿಡಿದರು. ಜಾನಪದ ಕಲೆಗಳ ವೈವಿಧ್ಯತೆಯನ್ನು ವಿದ್ಯಾರ್ಥಿಗಳು ಅಪ್ಪಿಕೊಳ್ಳಬೇಕು. ದೇಶದ ಕಲೆಯನ್ನು ಪ್ರೀತಿಸಬೇಕು ಎಂದರು. ಶುಚಿತ್ವವನ್ನು ಬಿಟ್ಟರೆ ಬದುಕೇ ಇಲ್ಲ. ಶುಚಿತ್ವ ಕೇವಲ ಮಾತಿಗೆ, ಬರಹಕ್ಕೆ ಮೀಸಲಾಗಬಾರದು. ನಮ್ಮ ಜೀವನದಲ್ಲಿ ಅಂತರ್ಗತವಾಗಬೇಕು. ಇದರ ಜೊತೆಗೆ ಮಣ್ಣು ಗಾಳಿ ನೀರು ಆಕಾಶವನ್ನು ರಕ್ಷಿಸುವುದು ನಮ್ಮ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೇಂದ್ರ ಸರ್ಕಾರ ಆಯೋಜಿಸಿದ ರಾಷ್ಟ್ರೀಯ ಕಲೋತ್ಸವದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯುಕ್ತಾ ಹೊಳ್ಳ  ಏಕಪಾತ್ರಾಭಿನಯ ವಿಭಾಗದಲ್ಲಿ ಸ್ವಾತಂತ್ರ ಸೇನಾನಿ, ಕ್ರಾಂತಿವೀರ ಶ್ರೀ ಭಗತ್ ಸಿಂಗ್ ಅವರ ಪಾತ್ರವನ್ನು ಅಭಿನಯಿಸಿ ಉಡುಪಿ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಏಕಾಹ ಅಖಂಡ ಭಜನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಆರಂಭವಾಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆ ಬಳಿಕ ಏಕಾಹ ಭಜನೆ ದೀಪ ಸ್ಥಾಪನೆಯ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಜಿ. ಮೋಹನದಾಸ ಭಟ್, ಜಿ. ಪ್ರದೀಪ ಭಟ್ ಮತ್ತು ತಾಂತ್ರಿಕ ಜಿ. ರಾಘವೇಂದ್ರ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಅನುಷ್ಠಾನಗಳು ಜರಗಿತು. ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಜಿ. ರಾಧಾಕೃಷ್ಣ ನಾಯಕ್ ದೀಪ ಪ್ರಜ್ವಲನೆ ಮಾಡಿ ಏಕಾಹ ಭಜನೆಗೆ ಚಾಲನೆ ನೀಡಿದರು. ಮಧ್ಯಾಹ್ನ ಶ್ರೀ ದೇವರಿಗೆ ವಿಶೇಷ ಪೂಜೆ, ವಿರಾಟರೂಪ ದರ್ಶನ, ಸಂಜೆ ಮಕ್ಕಳ ಉತ್ಸವ ಮತ್ತಿತರ ಕಾರ್ಯಕ್ರಮಗಳು ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಡಾ. ಕಾಶೀನಾಥ ಪೈ, ಜಿ. ಗೋವಿಂದ್ರಾಯ ಆಚಾರ್ಯ, ಯು. ಸುರೇಶ ಪೈ, ಬಿ. ವಾಸುದೇವ ಪಡಿಯಾರ್, ಜಿ. ರಾಮಚಂದ್ರ ಪೈ, ಬಿ. ರಾಘವೇಂದ್ರ ಪೈ, ದೇವಸ್ಥಾನದ ವ್ಯವಸ್ಥಾಪಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯ ಇಲಾಖೆ ಭಾರತ ಸರ್ಕಾರ ಇವರ ವತಿಯಿಂದ ನಡೆದ ಕಲಾ ಉತ್ಸವ 2024-25ನೇ ಸಾಲಿನ ಜಿಲ್ಲಾ ಮಟ್ಟದ ವಾದ್ಯ ಸಂಗೀತದಲ್ಲಿ (ಕೊಳಲು) ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ಯಾಮ್ ಜಿ.ಎನ್. ಪೂಜಾರಿ ಅವರು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈತ ಗಂಗೊಳ್ಳಿಯ ಖ್ಯಾತ ಛಾಯಾಗ್ರಾಹಕ ಗಣೇಶ್ ಪೂಜಾರಿ ಮತ್ತು ಪ್ರಾಧ್ಯಾಪಕಿ ಮಾಲತಿ ಗಣೇಶ ಅವರ ಪುತ್ರ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಡಿ. 09 ರಂದು ಪದವಿ ಪೂರ್ವ ಶಿಕ್ಷಣ ಇಲಾಖೆಯವರು 2024- 25ನೇ ಸಾಲಿನಲ್ಲಿ ಪದವಿ ಪೂರ್ವ ಶಿಕ್ಷಣ ಹಂತದ  ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಮೈಸೂರು ವಿಭಾಗೀಯ ಮಟ್ಟದ ಆಶುಭಾಷಣದಲ್ಲಿ  ಪ್ರಥಮ ಪಿಯುಸಿ ವಿದ್ಯಾರ್ಥಿನಿ ವಿಭಾ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ  ಸಲ್ಲಿಸಿದ್ದಾರೆ.

Read More