ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್ ಸರ್ಜಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು 24,111 ಮತಗಳ ಅಂತರದ ಸೋಲಿಸುವ ಮೂಲಕ ಮೇಲ್ಮನೆ ಪ್ರವೇಶಿಸಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಗುರುವಾರ ಪ್ರಾರಂಭವಾದ ದಕ್ಷಿಣ ಶಿಕ್ಷಕ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಪದವೀದರ ಚುನಾವಣೆಯ ಎಣಿಕೆ ಕಾರ್ಯ ಶುಕ್ರವಾರ ಬೆಳಗ್ಗೆವರೆಗೂ ನಡೆಯಿತು. ಇದರಲ್ಲಿ ದಕ್ಷಿಣ ಹಾಗೂ ನೈರುತ್ಯ ಶಿಕ್ಷಕ ಕ್ಷೇತ್ರಗಳೆರಡರಲ್ಲೂ ಮೈತ್ರಿ ಅಭ್ಯರ್ಥಿಗಳೇ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿಯೇ ಜಯಭೇರಿ ಬಾರಿಸಿದರು. ಇದೇ ವೇಳೆ ಬಿಜೆಪಿಯಿಂದ ಬಂಡಾಯ ಸ್ಪರ್ಧೆ ಮಾಡಿದ್ದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಮುಖಭಂಗವಾಗಿದೆ. ► ಇದನ್ನೂ ಓದಿ ಪರಿಷತ್ ಚುನಾವಣೆ: ಎಸ್.ಎಲ್. ಬೋಜೇಗೌಡಗೆ ಗೆಲುವು, ಡಾ. ಧನಂಜಯ ಸರ್ಜಿಗೆ ಮುನ್ನಡೆ – https://kundapraa.com/?p=72780 . ಬಿಜೆಪಿ-ಜೆಡಿಎಸ್ ಮೈತ್ರಿ ಅಭರ್ಥಿ ಡಾ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನೈರುತ್ಯು ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಡೆಯುತ್ತಿದ್ದು, ಶಿಕ್ಷಕರ ಕ್ಷೇತ್ರದ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಸ್. ಎಲ್. ಭೋಜೇಗೌಡ 5,267 ಮತಗಳಿಂದ ಜಯ ಗಳಿಸಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲೂ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಭೋಜೇಗೌಡ ಅವರು ಒಟ್ಟು 9,829 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಡಾ. ಕೆಕೆ ಮಂಜುನಾಥ್ ವಿರುದ್ಧ 5,267 ಮತಗಳ ಅಂತರದಿಂದ ಗೆದ್ದು 2ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದರು. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 4,562 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು. ನೈಋುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಜೆಡಿಎಸ್ನ ಎಸ್ಎಲ್ ಭೋಜೇಗೌಡ ಮೊದಲ ಪ್ರಾಶಸ್ತ್ಯದಲ್ಲೇ 5,267 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಸತತ 2ನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದರು. 2018ರ ಚುನಾವಣೆಯಲ್ಲಿ ಭೋಜೇಗೌಡರು ಅಂತಿಮ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಎಂಎಲ್ಸಿ ಗಣೇಶ್ ಕಾರ್ಣಿಕ್ ವಿರುದ್ಧ ಜಯಗಳಿಸಿದರೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕುಂಭಾಶಿಯ ಗಾಯತ್ರಿ ಸಭಾಭವನದಲ್ಲಿ ತೆಕ್ಕಟ್ಟೆ ಲಯನ್ಸ್ ಕ್ಲಬ್ ವತಿಯಿಂದ ಸ್ಪಿಂಗ್ ಝೋನ್ ಸೋಶಿಯಲ್ ಕಾರ್ಯಕ್ರಮ ಇತ್ತೀಚಿಗೆ ಆಯೋಜಿಸಲಾಗಿತ್ತು. ಪ್ರಾಂತ್ಯ VI ವಲಯ IIರ ವಲಯಾಧ್ಯಕ್ಷ ಶಂಕರ ಶೆಟ್ಟಿ ಬವಲಾಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಳೆದೊಂದು ವರ್ಷದ ಅವಧಿಯಲ್ಲಿ ವಲಯ IIರ ಎಲ್ಲಾ ಕ್ಲಬ್ಗಳ ಪದಾಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಅವರೆಲ್ಲರನ್ನು ಸನ್ಮಾನಿಸಿದರು. ಈ ಅವಧಿಯಲ್ಲಿ ಸಹಕರಿಸಿದ ಲಯನ್ಸ್ ಜಿಲ್ಲೆ 317Cಯ ಪ್ರಾಂತ್ಯ VI ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲಾ ಕ್ಯಾಬಿನೇಟ್ ಸದಸ್ಯರ ಹಾಗೂ ಪದಾಧಿಕಾರಿಗಳಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. ಪ್ರಥಮ ಉಪ ಗವರ್ನರ್ ಲಯನ್ ಮಹಮದ್ ಹನೀಫ್, ದ್ವಿತೀಯ ಉಪಗವರ್ನರ್ ಸ್ವಪ್ನ ಸುರೇಶ್ ಹಾಗೂ 2026-27ನೇ ಸಾಲಿಗೆ ಗವರ್ನರ್ ಆಗಿ ಆಯ್ಕೆ ಆದ ರಾಜೀವ ಕೋಟ್ಯಾನ್ ಮತ್ತು ಅರುಣ್ ಕುಮಾರ್ ಹೆಗಡೆ ಇವರು ಶುಭಾಶಂಸನೆ ಮಾಡಿದರು ಪ್ರಾಂತ್ಯ V ರ ಅಧ್ಯಕ್ಷ ಏಕನಾಥ ಬೋಳಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: “ಪ್ರಥಮ ಪಿಯುಸಿ ಗಣಕವಿಜ್ಞಾನ ಪಠ್ಯಕ್ರಮ ಬದಲಾವಣೆಯಾದಾಗ ಬರುವ ಮೊದಲ ಹಂತ ಅಂದರೆ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡಲು ಸಮರ್ಥರಾಗಬೇಕು ತಮ್ಮ ವೃತ್ತಿಯಲ್ಲಿ ಇನ್ನೂ ಪರಿಷ್ಕೃತಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹಾಗೂ ಉತ್ತಮ ಅಂಕಗಳಿಸುವಲ್ಲಿ ಪೂರಕ ಶಕ್ತಿಯಾಗಬೇಕು“ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿರವರು ತಿಳಿಸಿದರು. ಉಡುಪಿ ಜಿಲ್ಲಾ ಗಣಕವಿಜ್ಞಾನ ಉಪನ್ಯಾಸಕರ ಸಂಘದ ವತಿಯಿಂದ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲ̧ಯ, ಬಂಟಕಲ್ ಇಲ್ಲಿ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತುಗಳನ್ನಾಡಿದರು. ಉಡುಪಿ ಜಿಲ್ಲಾ ಗಣಕವಿಜ್ಞಾನ ಉಪನ್ಯಾಸಕರಿಗೆ “ಪೈಥಾನ್ ಪ್ರೋಗ್ರಾಂಮಿಂಗ್” ಸವಿವರವಾಗಿ ಪ್ರಾಯೋಗಿಕ ತರಗತಿ ಸಮೇತ ಕಾರ್ಯಗಾರವನ್ನು ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕವಿಜ್ಞಾನ ವಿಭಾಗದ ಉಪನ್ಯಾಸಕರಾದ ರಂಜನ್, ಗುರುಪ್ರಸಾದ್ ಹಾಗೂ ಯಶಸ್ವಿನಿ ನಡೆಸಿಕೊಟ್ಟು ಸೂಕ್ತ ಮಾರ್ಗದರ್ಶನ ನೀಡಿದರು. ಹಿರಿಯ ಉಪನ್ಯಾಸಕಿ ಆನಂದ ತೀರ್ಥ ಪ.ಪೂ ಕಾಲೇಜಿನ ಉಪಪ್ರಾಂಶುಪಾಲರಾದ ಕಮಲಾಕ್ಷಿ ಪ್ರಕಾಶ್ ಮಾತುಗಳನ್ನಾಡುತ್ತಾ, “ಎಲ್ಲಾ ಉಪನ್ಯಾಸಕರು ಒಂದೇ ಸೂರಿನಡಿಯಲ್ಲಿ ಪಠ್ಯಕ್ರಮ ಬದಲಾವಣೆಗೆ ಸೂಕ್ತವಾಗಿ ಹೊಂದಿಕೊಂಡು ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದ ಜ್ಞಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇದರ 8ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯು ಕೊಂಕಣಿ ಖಾರ್ವಿ ಸಭಾಭವನ ತ್ರಾಸಿ ಇಲ್ಲಿ ಜರುಗಿತು. ಸಭೆಯಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಬಿಲ್ಲವರವರು ವರದಿ ಮಂಡಿಸಿ, ಸಂಘವು 76 ಕೋಟಿ ವಾರ್ಷಿಕ ವ್ಯವಹಾರ ನೆಡೆಸಿ 36.05 ಕೋಟಿ ಪಾಲುಬಂಡವಾಳ, ರೂ.18.56 ಕೋಟಿ ಠೇವಣಿ ಹೊಂದಿದ್ದು, 14.69 ಕೋಟಿ ಸಾಲ ನೀಡಿ ಬೇರೆ ಬೇರೆ ಸಂಸ್ಥೆಗಳಲ್ಲಿ 7.52 ಕೋಟಿ ವಿನಿಯೋಗ ಮಾಡಿದ್ದು, ಸಂಘದ ಕಾಯ್ದಿರಿಸಿದ ನಿಧಿ 3.10 ಕೋಟಿ ರೂ, ಒಟ್ಟು ದುಡಿಯುವ ಬಂಡವಾಳ 22.02 ಕೋಟಿಯಷ್ಟಿದ್ದನ್ನು ಹೊಂದಿದೆ. ಸಂಘವು ಆರಂಭದಿಂದಲೂ ಲಾಭದಿಂದ ಮುನ್ನೆಡೆಯುತ್ತಿದ್ದು, 2023-24 ರಲ್ಲಿ 12.6ಲಕ್ಷ ರೂ ಲಾಭ ಬಂದಿರುತ್ತದೆ ಎಂದರು. ಸಭೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್ ಮದನ್ ಕುಮಾರ್, ಮೂರ್ತೆದಾರರ ಸೇವಾ ಸಹಕಾರ ಒಕ್ಕೂಟ ಉಡುಪಿಯ ನಿರ್ದೇಶಕರಾದ ಕೆ. ಮೋಹನ ಪೂಜಾರಿ, ಇತರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಹುಮಾನ ವಿತರಣಾ ಸಮಾರಂಭ ಇತ್ತಿಚಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ ಪ್ರಭು ಅವರು ಹಿತೈನುಡಿಗಳನ್ನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಡಾ. ರೇಖಾ ವಿ ಬನ್ನಾಡಿ ಅವರು ಸಾಧಕ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ವೃಂದವನ್ನು ಕುರಿತು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು ಹಾಗೂ ರಾಜೇಂದ್ರ ತೋಳಾರ್ ಇವರು ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ನೀಡಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಪ್ರೊ. ಸತ್ಯನಾರಾಯಣ ಹತ್ವಾರ್, ಐಕ್ಯೂಎಸಿ ಸಂಯೋಜಕರಾದ ಡಾ. ವಿಜಯ್ ಕುಮಾರ್ ಕೆ. ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. 2022-23 ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಕ್ರೀಡೆ, ಕರಾಟೆ ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ನ ಟಾಸ್ಕ್ಪೋರ್ಸ್ ಸಮಿತಿ ಸಭೆ ಸಮಾರಂಭವು ಗಂಗೊಳ್ಳಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶನಿವಾರ ನಡೆಯಿತು. ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ವೀಣಾ ಜಿ.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಡೆಂಗ್ಯೂ ಕಾಯಿಲೆಗಳ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪರಿಸರದಲ್ಲಿ ಸ್ವಚ್ಛತೆ ನೈರ್ಮಲ್ಯ ಕಾಪಾಡಿಕೊಳ್ಳಲು ಮತ್ತು ಮುಂಗಾರು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು. ಇದೇ ಸಂದರ್ಭ ಡೆಂಗ್ಯೂ ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ, ಬಂದರು ಇಲಾಖೆ ಅಧಿಕಾರಿ ಗೌಸ್ ಅಲಿ, ಗಂಗೊಳ್ಳಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂಜೀವ ಅರಕೇರಿ, ಪೊಲೀಸ್ ಸಿಬ್ಬಂದಿ ಕೇಶವ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ ಎಚ್., ಗ್ರಾಮ ಆಡಳಿತಾಧಿಕಾರಿ ಅಂಜಿನಪ್ಪ ಎಸ್.,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಕಾಂಗ್ರೆಸ್ ಮುಖಂಡರುಗಳಾದ ವಿನಯ ಕುಮಾರ್ ಸೊರಕೆ, ಉದಯ ಶೆಟ್ಟಿ ಮುನಿಯಾಲು, ಅಶೋಕ್ ಕುಮಾರ್ ಕೊಡವೂರು, ಅರವಿಂದ ಪೂಜಾರಿ ನಾಡ, ರಮೇಶ್ ಗಾಣಿಗ ಕೊಲ್ಲರು, ಶೇಖರ್ ಪೂಜಾರಿ ಉಪ್ಪುಂದ, ಹರೀಶ್ ಕುಮಾರ್ ಶೆಟ್ಟಿ ಮೊದಲಾದವರು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ದುಬೈ: ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬೈ ) ಯು ಜೆ.ಎಸ್.ಸ್. ಖಾಸಗಿ ಶಾಲೆಯ ಆಡಿಟೋರಿಯಂನಲ್ಲಿ ಸಂಗೀತ ಸೌರಭ -2024 ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡಿಗರು ದುಬೈನ ಅಧ್ಯಕ್ಷರು, ಉಪಾಧ್ಯಕ್ಷರು, ಗೌರವಾನ್ವಿತ ಗಣ್ಯರು, ಪದಾಧಿಕಾರಿಗರು ದೀಪ ಬೆಳೆಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಕನ್ನಡಿಗರು ದುಬೈ ನ ನೂತನ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಅವರು ನೆರವೇರಿದರು. ಅರುಣ್ ಕುಮಾರ್ ಅವರು ಮಾತನಾಡುತ್ತ, ಕನ್ನಡಿಗರು ದುಬೈನ ಕಳೆದ 20 ವರ್ಷದ ಸಾಧನೆಗಳ ಪಟ್ಟಿಗಳನ್ನು ವಿವರಿಸಿತ್ತಾ, ದುಬೈಯಲ್ಲಿ ಸತತ ಎರಡು ದಶಕಗಳಿಂದ ಸಂಗೀತ ಸೌರಭ ಮತ್ತು ಕರ್ನಾಟಕ ರಾಜ್ಯೋತ್ಸವ ನಡೆಸಿಕೊಂಡು ಬಂದಿರುವ ಏಕೈಕ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಹಾಗೂ ಸಂಗೀತ ಸೌರಭದ ಮೂಲಕ ಹೊಸ ಹೊಸ ಮೈಲುಗಲ್ಲು ಸೃಷ್ಟಿಸಿರುವ ಏಕೈಕ ಸಂಘ ಎಂದು ತಿಳಿಸಿದರು. ಇಂತಹ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿರುವ ಕನ್ನಡಿಗರು ದುಬೈನ ಮಾಜಿ ಅಧ್ಯಕ್ಷರುಗಳಾದ ಸಾದನ್ ದಾಸ್, ವೀರೇಂದ್ರ ಬಾಬು, ಉಮಾ…
181 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕ. ಕೆಟಗರಿ ವಿಭಾಗದಲ್ಲಿ 10ಮಂದಿಗೆ ಅಖಿಲ ಭಾರತ ಮಟ್ಟದ ಟಾಪ್ 1000 ದ ಒಳಗೆ ರ್ಯಾಂಕ್.ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅಖಿಲ ಭಾರತ ಮಟ್ಟದ ಯುಜಿ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಒಂದೇ ಕ್ಯಾಂಪಸನ ಕ್ಲಾಸ್ರೂಮ್ ವ್ಯವಸ್ಥೆಯಲ್ಲಿ 600 ಅಂಕಗಳ ಮೇಲೆ 181 ವಿದ್ಯಾರ್ಥಿಗಳು ಅಂಕ ಪಡೆಯುವ ಮೂಲಕ ಆಳ್ವಾಸ್ ಸಾರ್ವಕಾಲಿಕ ಸಾಧನೆಯನ್ನು ಮೆರೆದಿದೆ. ಆಳ್ವಾಸ ಪ,ಪೂ ಕಾಲೇಜಿನ ವಿದ್ಯಾರ್ಥಿಗಳು 670ಕ್ಕೂ ಅಧಿಕ 11 ವಿದ್ಯಾರ್ಥಿಗಳು, 650 ಕ್ಕೂ ಅಧಿಕ 51 ವಿದ್ಯಾರ್ಥಿಗಳು, 600 ಕ್ಕೂ ಅಧಿಕ 181 ವಿದ್ಯಾರ್ಥಿಗಳು, 550 ಕ್ಕೂ ಅಧಿಕ 371 ವಿದ್ಯಾರ್ಥಿಗಳು ಹಾಗೂ 500 ಕ್ಕೂ ಅಧಿಕ 686 ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವ ಮೂಲಕ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ನಿಂದ ಅಗ್ರಪಂಕ್ತಿಯ ಸಾಧನೆ ನಿರ್ಮಾಣವಾಗಿದೆ. ಆಕಾಶ್ ಬಸವರಾಜ್ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 55 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಪ್ರೀತಮ್ ಎಂ- 691, ಸದಾನಂದ ಗೌಡ ಕುಲಕರ್ಣಿ-…
