Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜಿಲ್ಲಾದ್ಯಂತ ಮುಂಗಾರು ಚುರುಕುಗೊಂಡಿದ್ದು ಎಲ್ಲೆಡೆಯೂ ಭಾರಿ ಮಳೆಯಾಗುತ್ತಿದೆ. ಶನಿವಾರ ಬೆಳಿಗ್ಗೆಯಿಂದ ನಿರಂತರವಾಗಿ ಸುರಿದ ಮಳೆಗೆ ಯಡ್ತರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳಿಗೆ ನೀರು ನುಗ್ಗಿದ್ದು, ಮಕ್ಕಳಿಗೆ ರಜೆ ಘೋಷಿಸಲಾಗಿದೆ. ನಿರಂತರ ಮಳೆಯಿಂದಾಗಿ ರಸ್ತೆಯಿಂದ ತಗ್ಗು ಪ್ರದೇಶದಲ್ಲಿರುವ ಯಡ್ತರೆ ಶಾಲೆಯ ಆವರಣಕ್ಕೆ ನೀರು ನುಗ್ಗಿದ್ದು ಹೊರ ಹರಿವು ಇಲ್ಲದೇ ಇದ್ದುದರಿಂದ ವಿದ್ಯಾರ್ಥಿಗಳ ಮೊಣಕಾಲಿನ ತನಕವೂ ನೀರು ತುಂಬಿಕೊಂಡಿತ್ತು. ಎರಡು ತರಗತಿ ಕೊಠಡಿಗಳು ಹಾಗೂ ಶಾಲಾ ಶಿಕ್ಷಕರ ಕಛೇರಿ ಸಂಪೂರ್ಣ ಜಲಾವೃತಗೊಂಡು ಅಪಾಯಕಾರಿ ಸ್ಥಿತಿ ಎದುರಾಗಿದೆ. ಶಾಲೆ ಎದುರಿನ ಚರಂಡಿ ಬ್ಲಾಕ್ ಕಾರಣ:ಶಾಲೆ ಎದುರಿನ ಚರಂಡಿಯನ್ನು ಮುಚ್ಚಿರುವುದರಿಂದ ಶಾಲೆಯೊಳಕ್ಕೆ ಕೃತಕ ನೆರೆ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಿಂದಿನಿಂದಲೂ ಶಾಲೆ ಕಾಂಪೌಂಡ್ ಎದುರಿನ ಚರಂಡಿಯ ಮೂಲಕ ನೀರು ಹರಿದು ಹೋಗಿ ನದಿ ಸೇರುತ್ತಿತ್ತು. ಅದಕ್ಕೆ ತಡೆ ಉಂಟಾಗಿದ್ದು ನೀರು ಹರಿದು ಹೋಗಲು ದಾರಿ ಇಲ್ಲದಾಗಿದೆ. ಸದ್ಯ ತಾತ್ಕಾಲಿಕವಾಗಿ ಶಾಲೆಯ ಹಿಂಭಾಗದ ಗದ್ದೆಗೆ ನೀರು ಹರಿದು ಹೋಗಲು ದಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ರಂಗ ಅಭಿನಯ, ಅಭಿನಯ ಕಲೆ, ರಂಗ ಕೌಶಲ್ಯಗಳಿಗೆ ನಿಕಟವಾದ ಸಂಬಂಧವಿದ್ದು, ಜಾಗತೀಕರಣ ಮತ್ತು ಜಾಗತೀಕರಣೋತ್ತರ ಸಂದರ್ಭದ ಪ್ರಪಂಚದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕೌಶಲ್ಯಗಳಿಗೆ ಪ್ರಾಶಸ್ತ್ಯ ಸಿಗುತ್ತಿದೆ. ಕಲಿಕೆ ನಿಂತ ನೀರಾಗಬಾರದು, ನಿರಂತರವಾಗಿದ್ದರೆ ಮಾತ್ರ ಕೌಶಲ್ಯವನ್ನು ಗಳಿಸಲು ಸಾಧ್ಯ ಎಂದು ಡಾ. ಜಿ. ಶಂಕರ್ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ.ಎಸ್ ಹೇಳಿದರು. ಅವರು ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ನಗರದ ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ. ಸಭಾಂಗಣದಲ್ಲಿ ನಡೆದ ಅಭಿನಯ ಕಲೆಯಿಂದ ಕೌಶಲ್ಯ ಅಭಿವೃದ್ಧಿ- ಒಂದು ದಿನದ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಬದುಕಿನ ವಿವಿಧ ಸ್ತರಗಳಲ್ಲಿ, ಅರ್ಥಗರ್ಭಿತ ಜೀವನ ಕಟ್ಟಿಕೊಳ್ಳಲು ರಂಗ ತರಬೇತಿ ಶಿಬಿರಗಳು ಉಪಯುಕ್ತವಾಗಿವೆ. ಅಂತಹ ಕೌಶಲ್ಯವನ್ನು ಬೆಳೆಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಿ ಎಂದು ಹೇಳಿದರು. ರಂಗ ತರಬೇತಿ ಶಿಬಿರವು ರಂಗ ನಿರ್ದೇಶಕ ಬಾಸುಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂನ್ 11 ರಂದು ಬೆಳಗ್ಗೆ 10.30ಕ್ಕೆ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್‍ನೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 8105618291, 9945856670, 9901472710 ಹಾಗೂ 8105774936 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ, ಉದ್ಯಮಿ ಶ್ರೇಯಸ್ ನಾಯ್ಕ (25) ಎಂಬಾತನನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಲೈಂಗಿಕ ದೌರ್ಜನ್ಯ ಎಸಗುವ ದೃಶ್ಯಗಳನ್ನು ಸೆರೆ ಹಿಡಿದು ತನ್ನ ಖಾಸಗಿ ಲ್ಯಾಪ್ಟಾಪ್ನಲ್ಲಿ ಇರಿಸಿಕೊಳ್ಳುತ್ತಿದ್ದ. ಈತ ಶಾಲೆ, ಕಾಲೇಜು ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಈತ ವಿದ್ಯಾರ್ಥಿನಿಯೊಬ್ಬಳ ಮೇಲೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭವತಿ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ತನ್ನ ಪ್ರಭಾವ ಬಳಸಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮೇ.18ರಂದು ದೂರು ದಾಖಲಾಗಿತ್ತು. ಇದನ್ನೂ ಓದಿ ► ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಶ್ರೇಯಸ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – https://kundapraa.com/?p=72901 . ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ. ಶ್ರೇಯಸ್ ಬಂಧನಕ್ಕೆ ವಿಶೇಷ ತನಿಖಾ ತಂಡ ರಚನೆ ಮಾಡಿ ಹುಡುಕಲಾಗುತ್ತಿತ್ತು. ಅಂತಿಮವಾಗಿ ಸಿದ್ಧಾಪುರದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಮೂಡುಬಿದಿರೆ: ಆಳ್ವಾಸ್ ಪ್ರಗತಿ 2024 – 14ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭ ವಿದ್ಯಾಗಿರಿ ಆಳ್ವಾಸ್ ಕಾಲೇಜು ಆವರಣದಲ್ಲಿ ಜರುಗಿತು. ಎಂಆರ್‌ಜಿ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಪ್ರಕಾಶ್ ಶೆಟ್ಟಿ ಆಳ್ವಾಸ್ ಪ್ರಗತಿ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಅದೃಷ್ಟದ ಜೊತೆಗೆ ಪ್ರಯತ್ನವಿದ್ದಾಗ ಯಾವುದೇ ಕಾರ್ಯದಲ್ಲೂ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು. ಸಾಂಸ್ಕೃತಿಕ,ಕ್ರೀಡೆ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಮೂಡಬಿದ್ರೆಯ ಆಳ್ವಾಸ್ ಸಂಸ್ಥೆ ಹಲವು ವರ್ಷಗಳಿಂದ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗದ ಸದಾವಕಾಶವನ್ನು ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯೆ ಬೇಕು ಆದರೆ, ಅದರ ಜೊತೆಗೆ ಸಾಮಾನ್ಯ ಜ್ಞಾನವು ಹೆಚ್ಚು ಅವಶ್ಯಕ. ಯೋಜನೆ, ಆಡಳಿತ, ವ್ಯವಹಾರದ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಬಹುದು ಎಂದು ಹೇಳಿದರು. ಪ್ರತಿ ಉದ್ಯೋಗಾಕಾಂಕ್ಷಿ ಕಾರ್ಯಪ್ರವೃತ್ತಿ ಮತ್ತು ದೂರದೃಷ್ಟಿಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಇದು ಸಂಪೂರ್ಣವಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉತ್ತರಾಖಂಡದ ಸಹಸ್ತ್ರ ತಾಲ್‌ (ಲೇಕ್‌) ಗೆ ಚಾರಣ ಹೋಗಿ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ರಾಜ್ಯದ 9 ಜನರು ಮೃತಪಟ್ಟಿದ್ದು, ಈ ಪೈಕಿ ಕುಂಭಾಶಿ ಮೂಲದ, ಬೆಂಗಳೂರು ವಾಸಿ ಪದ್ಮನಾಭ ಭಟ್‌ (50) ಅವರೂ ಇದ್ದಾರೆ. ಕುಂಭಾಶಿಯ ಕೊರವಡಿ ರಸ್ತೆಯ ಲ್ಲಿರುವ ಶ್ರೀ ಹರಿಹರ ನಿಲಯವು ಮೃತ ಪದ್ಮನಾಭ ಭಟ್ಟರ ಹಿರಿಯರ ಮೂಲ ಮನೆ. ಪದ್ಮನಾಭ ಅವರ ಹುಟ್ಟು, ವಿದ್ಯಾ ಭ್ಯಾಸ ಬೆಂಗಳೂರಿನಲ್ಲೇ ನಡೆದಿತ್ತು. ಸಿಎ ವ್ಯಾಸಂಗ ಮಾಡಿದ ಅನಂತರ ಖಾಸಗಿ ಕಂಪೆನಿಯೊಂದಕ್ಕೆ ಸೇರಿದ್ದು ಆ ಸಂಸ್ಥೆಯ ವತಿಯಿಂದ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿನ ಸಿಪಿಎ ತೇರ್ಗಡೆಯಾದರು. ಬೆಂಗಳೂರಿಗೆ ಮರಳಿದ ಬಳಿಕ ಖಾಸಗಿ ಕಂಪೆನಿ ಸೇವೆ ಯಲ್ಲಿ ಮುಂದುವರಿಸಿದ್ದರು. ಕುಂಭಾಶಿಯಲ್ಲಿ ಅವರ ಚಿಕ್ಕಪ್ಪನ ಕುಟುಂಬದವರು ವಾಸ್ತವ್ಯ ಇದ್ದಾರೆ. ಪದ್ಮನಾಭರಿಗೆ ಪ್ರವಾಸ, ಚಾರಣ ಇತ್ಯಾದಿ ಆಸಕ್ತಿ. ಆಗಾಗ ಸಹೋದ್ಯೋಗಿಗಳು, ಸ್ನೇಹಿತರೊಡನೆ ಪ್ರವಾಸ ಹೋಗುತ್ತಿದ್ದರು. ಮೇ 29ರಂದು 22 ಜನರ ತಂಡದೊಂದಿಗೆ ಉತ್ತರಾಖಂಡದ ಉತ್ತರ ಕಾಶಿಯ ಬೆಟ್ಟ ಪ್ರದೇಶಕ್ಕೆ ಚಾರಣ ಹೋಗಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ತಾಲೂಕಿನ ಶಿರೂರು ಸೇರಿದಂತೆ ವಿವಿಧ ಭಾಗಗಳಲ್ಲಿ ನಿರಂತರವಾಗಿ ಗೋವು ಕಳ್ಳತನ ಹಾಗೂ ದುಷ್ಕರ್ಮಿಗಳಿಂದ ಜೀವ ಬೇದರಿಕೆ ಒಡ್ಡುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಮೋ ಬಳಗ ಬೈಂದೂರು ಬೈಂದೂರು ತಹಶಿಲ್ದಾರರು ಹಾಗೂ ಪೊಲೀಸರಲ್ಲಿ ಮನವಿ ಮಾಡಿದೆ. ಜೂನ್ 6ರ ಬೆಳಗಿನ ಜಾವ 4ಗಂಟೆಯ ವೇಳೆಯ ಶಿರೂರು ಪೇಟೆಯ ಮಂಜುನಾಥ ಹೋಟೆಲ್ ಎದುರಿನ ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ದುಷ್ಕರ್ಮಿಗಳು ಮಹೇಂದ್ರ ಎಸ್‍.ಯು.ವಿ ವಾಹನದಲ್ಲಿ ತೆರಳಿ ಕದ್ದೊಯ್ದಿದ್ದಾರೆ. ಇದನ್ನು ಪ್ರಶ್ನಿಸಿದ ವ್ಯಕ್ತಿಯೋರ್ವರಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾರೆ. ಒಂದು ವಾರದ ಹಿಂದೆಯೂ ಶಿರೂರು ಮಾರ್ಕೆಟ್ ಅಂಡರ್‍ ಪಾಸ್‍ ಬಳಿ ವಾಹನದಲ್ಲಿ ಬಂದು ಗೋವುಗಳನ್ನು ಹೊತ್ತೊಯ್ದಿರುವ ಬಗ್ಗೆ ಅವರು ದೂರಿನಲ್ಲಿ ತಿಳಿಸಿದ್ದಾರೆ. ಕೆಲ ಸಮಯದಿಂದ ಶಿರೂರು, ಬೈಂದೂರು, ಯಡ್ತರೆ, ಬಾಡ ಹಾಗೂ ಸೂರ್ಕುಂದ ಭಾಗಗಳಲ್ಲಿನ ಮನೆಯ ಕೊಟ್ಟಿಗೆಯಲ್ಲಿನ ದನಕರುಗಳ ಕಳವಾಗುತ್ತಿದ್ದು, ಕೃಷಿ ಹಾಗೂ ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ ದುಷ್ಕರ್ಮಿಗಳು ಘಟನೆಯನ್ನು ತಡೆಯಲು ಬರುವವರಿಗೂ ಬೆದರಿಸುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2024 ರ ಸಾಲಿನ ನೀಟ್ ಪರೀಕ್ಷೆಯಲ್ಲಿ ಎಕ್ಸಲೆಂಟ್ ಪಿ.ಯು ಕಾಲೇಜಿನ ಹಲವು ವಿದ್ಯಾರ್ಥಿಗಳು ದೇಶದಲ್ಲಿಯೇ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಈ ಪೈಕಿ  ಈಶಾ ಶೆಟ್ಟಿ 671 ಅಂಕಗಳನ್ನು ಪಡೆದು ಕಾಲೇಜಿಗೆ ಅತ್ಯಧಿಕ ಅಂಕಗಳಿಸಿ ಕೀರ್ತಿಯನ್ನು ತಂದಿರುತ್ತಾಳೆ. ನಾಗರಾಜ ಉಪ್ಪಾರ 635, ವಿನುತಾ 612, ಅನನ್ಯ ಉಡುಪ 608, ಎಮ್ ಸೃಜನ್ 592, ಸನ್ನಿಧಿ ಕುಲಾಲ್ 590,  ವರುಣ್ ಕೆ.ಪಿ 585, ಶಶಾಂಕ್ ಶೆಟ್ಟಿ 585, ಆಶಿತಾ ಪಿ. 584, ನಿರ್ಮಿತಾ ಎನ್.ಡಿ 583, ರಿತಿಕಾ ಶೆಟ್ಟಿ 563, ರುಮೇಝ್ ಶೇಖ್ 560, ರಕ್ಷಾ ಆರ್. ಪೂಜಾರಿ 557, ನಿಶಾ 536, ಆಕಾಶ್ ಕೆ ಶೆಟ್ಟಿ 520, ಸಂಜನ್ ಕೆ 514 ಮತ್ತು ಸಮೃದ್ಧಿ 513 ಆಂಕಗಳನ್ನು ಪಡೆದು ಕುಂದಾಪುರ ತಾಲೂಕಿನಲ್ಲಿ ಎಕ್ಸಲೆಂಟ್  ಪಿ.ಯು ಕಾಲೇಜು ಪ್ರಥಮ ಸ್ಥಾನವನ್ನು ಗಳಿಸುವುದರೊಂದಿಗೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ► 2024ರ ಸಿಇಟಿ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅರಣ್ಯಭೂಮಿಯ ಒತ್ತುವರಿ, ಅನಿಯಂತ್ರಿತ ವಾಹನ ಬಳಕೆ, ಪ್ಲಾಸ್ಟಿಕ್ ಮತ್ತು ರಾಸಾಯನಿಕ ತ್ಯಾಜ್ಯ ವಸ್ತುಗಳಿಂದ ಪರಿಸರವನ್ನು ಮಲೀನಗೊಳಿಸುವ ಕಾರ್ಯ ನಿತ್ಯ ನಿರಾತಂಕ ಎಲ್ಲೆಡೆಯೂ ನಡೆಯುತ್ತಿದೆ. ಅಪರಿಮಿತ ತ್ಯಾಜ್ಯಗಳಿಂದ ನಮ್ಮ ಪರಿಸರ ಕೆಟ್ಟು ಹೋಗುತ್ತಿದ್ದರೂ ನಾವು ಮಾತ್ರ ಇನ್ನೂ ಅಪೇಕ್ಷಿತ ಮಟ್ಟದಲ್ಲಿ ಈ ಕುರಿತು ಜಾಗರೂಕರಾಗಿಲ್ಲ ಜತೆಗೆ ಸಮಸ್ಯೆಯ ಗಂಭೀರತೆಯನ್ನೂ ಅರಿತಿಲ್ಲ ಎಂದು ಯುವ ಉದ್ಯಮಿ ಅನುದೀಪ್ ಹೆಗ್ದೆ ಹೇಳಿದರು. ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪರಿಸರದ ಕುರಿತು ಉಪನ್ಯಾಸ ನೀಡಿದರು. ಕ್ಷೇತ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಕೊಡಮಾಡಿದ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಿ ಮಾತನಾಡಿದ ಲಾವಣ್ಯ ಅಧ್ಯಕ್ಷ ನರಸಿಂಹ ಬಿ. ನಾಯಕ್, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ತರುವುದೇ ಶಿಕ್ಷಣ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಶಿಕ್ಷಣದ ಉದ್ದೇಶ ಬಹುಮುಖ ವ್ಯಕ್ತಿತ್ವದ ವಿಕಸನ. ಉತ್ತಮ ಶಿಕ್ಷಣ ದೊರೆತಾಗ ಮಾತ್ರ ವ್ಯಕ್ತಿ ಉತ್ತಮ ನಾಗರಿಕನಾಗಿ ಬದುಕಬಲ್ಲ. ಸ್ವತಂತ್ರವಾಗಿ ಯೋಚಿಸಬಲ್ಲ. ದೇಶ,…

Read More

ಕುಂದಾಪುರ ಡಾಟ್ ಕಾಂ ಸುದ್ದಿ.ಕುಂದಾಪುರ: 2024ರ ಸಾಲಿನ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್‍ಗಳನ್ನು ಪಡೆದು ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈಶಾ ಶೆಟ್ಟಿ 224, ನಿಶಾ 245, ಚಿರಾಗ್ 296, ಅನನ್ಯ ಉಡುಪ 530, ನಾಗರಾಜ ಉಪ್ಪಾರ್ 572, ಅನಿರುದ್ದ್ ಎಸ್ ಹತ್ವಾರ್ 787, ವರುಣ್ ಕೆ ಪಿ 1536, ಸನ್ನಿಧಿ ಕುಲಾಲ್ 1692, ಆಕಾಶ್ ಕೆ ಶೆಟ್ಟಿ 1935, ಸನ್ಮಾನ್ 1998 , ತಸ್ಯಾ ಶೆಟ್ಟಿ 2382, ರಿತಿಕಾ ಶೆಟ್ಟಿ 2413, ಎಮ್ ಸ್ರಜನ್ 2939, ಆಶಿತಾ 3008, ಸಾಕ್ಷಿ ಗಣಪತಿ ಹೆಗ್ಡೆ 3597, ಧನುಷ್ 3702, ಶರಣ್ಯ 3829, ರುಮೇಝ್ ಶೇಖ್ 2953, ಪ್ರೀತಮ್ ಶೆಟ್ಟಿ 3976, ಸಂಜನ್ ಕೆ 4091, ನಿರ್ಮಿತಾ ಎನ್ ಡಿ 4181 ಮತ್ತು ವಿನುತಾ 4468 ರ್ಯಾಂಕ್‍ಗಳನ್ನು ಗಳಿಸಿ ರಾಜ್ಯದಲ್ಲಿ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಧ್ಯಾರ್ಥಿಗಳ ಈ ಸಾಧನೆಗೆ…

Read More