ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ದಾಖಲೀಕರಣಕ್ಕೆ ಛಾಯಾಚಿತ್ರ ಮಾಧ್ಯಮ ಅತ್ಯಗತ್ಯ ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮುಂಬಾಯಿಯ ಛಾಯಾಚಿತ್ರಗಾರ ಸುಧಾರಕ ಓಳ್ವೆ ಉಡುಪಿ ಪ್ರೆಸ್ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ಸ್ (ಉಪ್ಪಾ) ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಹಿರಿಯ ಛಾಯಾಚಿತ್ರಗಾರ ಲಯನ್ ಕೆ. ನವೀನ್‌ಚಂದ್ರ ಬಲ್ಲಾಳ್‌ರವರನ್ನು ಉಡುಪಿಯ ನವೀನ್ ಸ್ಟುಡಿಯೋದಲ್ಲಿ “ಛಾಯಾ ಸ್ಫೂರ್ತಿ” ಬಿರುದು ನೀಡಿ ಸನ್ಮಾನಿಸಿ ಮಾತನಾಡಿದರು. ಛಾಯಾಗ್ರಹಣವಿಲ್ಲದ ಪ್ರಪಂಚವನ್ನು ನಾವಿಂದು ಊಹಿಸಲೂ ಸಾಧ್ಯವಿಲ್ಲ. ವೃತ್ತಿಯಲ್ಲಿ ಸೇವಾ ಮನೋಭಾವದೊಂದಿಗೆ ವ್ಯವಹರಿಸಿದರೆ ಯಶಸ್ಸು ಖಂಡಿತ ಎಂದರು. ಉಪ್ಪಾ ಪುರಸ್ಕಾರ ಸ್ವಿಕರಿಸಿದ ಕೆ. ನವೀನ್‌ಚಂದ್ರ ಬಲ್ಲಾಳ್ ೩೫ ವರ್ಷದಿಂದ ಈ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದೇನೆ. ಕಪ್ಪು ಬಿಳುಪಿನ ಸಮಯದಲ್ಲಿ ಛಾಯಾಗ್ರಹಣ ಬಹಳ ಕಷ್ಟದ ಕೆಲಸ. ಉಡುಪಿಗೆ ಬಂದ ವಿವಿಐಪಿಗಳ ಫೋಟೋ ತೆಗೆಯಲು ಅಧಿಕೃತ ಛಾಯಾಚಿತ್ರಗ್ರಾಹಕನಾಗಿ ತನ್ನ ಅನುಭವವನ್ನು ಹಂಚಿಕೊಂಡು ಉಪ್ಪಾ ಸಂಘಟನೆಗೆ ಕೃತಜ್ಞತೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಪ್ಪಾದ ಅನಂತಕೃಷ್ಣ ಭಾಗವತ್ ಹಾಗು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶಸೇವೆಯಲ್ಲಿ ತೊಡಗಿ ಪ್ರಾಣತ್ಯಾಗಗೈದ ಹುತಾತ್ಮರನ್ನು ಸ್ಮರಿಸುತ್ತಿರುವ ಸಂದರ್ಭದಲ್ಲಿ ದೇಶವಿರೋಧಿ ಘೋಷಣೆ ಕೂಗುವವರಿಗೆ ಪರೋಕ್ಷವಾಗಿ ರಾಜ್ಯ ಸರಕಾರ ಹೈಕಮಾಂಡ್ ಆದೇಶದಂತೆ ಬೆಂಬಲವಾಗಿ ನಿಂತಿದೆ. ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿ, ಕಿರುಕುಳ ನೀಡಿ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದು ಹೀಗೆಯೇ ಮುಂದುವರಿದರೇ ರಾಜ್ಯದಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಸಿದ್ದಾರೆ. ಶನಿವಾರ ಹೆಮ್ಮಾಡಿ ಜಯಶ್ರಿ ಸಭಾಂಗಣದಲ್ಲಿ ಜರುಗಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಮಾವೇಶ, ಮಂಡಲಗಳ ಪದಗ್ರಹಣ ಹಾಗೂ ಬೈಂದೂರು ತಿರಂಗಾ ಯಾತ್ರೆ ಬೈಕ್ ರ‍್ಯಾಲಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಭಾರಿಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಿ ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶಾದಾದ್ಯಂತ ತಿರಂಗಾ ಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲು ಪ್ರಧಾನಿ ಮೋದಿ ಕರೆ ನೀಡಿದ್ದು ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಿಸುಮಾರು ಮೂವತ್ತೇಂಟು,ಮೂವತೊಂಬತ್ತು ವರ್ಷಗಳ ಸುದೀರ್ಘ ಅವಧಿಯ ನಂತರ ಹೈಸ್ಕೂಲಿನಲ್ಲಿ ಸಹಪಾಠಿಗಳಾಗಿದ್ದವರು ಒಂದೆಡೆ ಸೇರಿದ ಅಪೂರ್ವ ಮಿಲನಕ್ಕೆ ಕುಂದಾಪುರ ಜೆಕೆ ಟವರ‍್ಸ್ ನ ಸಭಾಂಗಣವು ಸಾಕ್ಷಿಯಾಯಿತು. 1977ರ ಸಾಲಿನಲ್ಲಿ ಕುಂದಾಪುರದ ಸೈಂಟ್ ಮೇರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ ಎಸ್.ಎಸ್.ಎಲ್.ಸಿ ತನಕ ಜತೆಯಾಗಿ ವಿದ್ಯಾಭ್ಯಾಸ ಮಾಡಿದ್ದ ಸಹಪಾಠಿಗಳು ಸಾಂಕೇತಿಕವಾಗಿ ಒಗ್ಗೂಡುವ ಸಮಾರಂಭಕ್ಕೆ ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಕುಂದಾಪುರದ ರಾಜೇಂದ್ರ ಹೋಸ್ಕೋಟೆ ಮುನ್ನುಡಿ ಬರೆದರೆ, ಅದಕ್ಕೆ ಜತೆಯಾಗಿ ಚಾಲನೆ ನೀಡಿದವರು ಕುಂದಾಪುರದವರಾಗಿ ವಿದೇಶದಲ್ಲಿ ಉದ್ಯಮಿಯಾಗಿ ಬೆಳೆದು ಇದೀಗ ಮಂಗಳೂರಿನಲ್ಲಿ ನೆಲೆಸಿರುವ ವಿಲ್ಸನ್ ಡಿಸೋಜ, ಹಾಗೂ ಉಡುಪಿ ಮಹಿಳಾ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರಾಮಚಂದ್ರ ಅಡಿಗ ಅವರು. ಮತ್ತೇ ಈ ಅಪರೂಪದ ಮಿಲನಕ್ಕೆ ರೂವಾರಿಯಾಗಿ ನಿಂತವರು ಕುಂದಾಪುರದ ಖ್ಯಾತ ಓರ್ಥೋಪೆಡಿಕ್ ತಜ್ಞ ಡಾ. ಶಿವಕುಮಾರ್, ಮೈಸ್ ಕಂಪ್ಯೂಟರಿನ ವಾಲ್ಟರ್ ಫೆರ್ನಾಂಡೀಸ್. ಸಮಾರಂಭದ ಅರಂಭದಲ್ಲಿ ತಮ್ಮನ್ನು ಅಗಲಿರುವ ಸಹಪಾಠಿಗಳಿಗೆ, ಶಿಕ್ಷಕರಿಗೆ ಶೃದ್ದಾಂಜಲಿ ಅರ್ಪಿಸಿದ ಪುರಾತನ ಗೆಳೆಯರು ಅಂದಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೆಜಿನಲ್ಲಿ ಐದು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನಾಲ್ಕು ನೂತನ ಶೌಚಾಲಯವನ್ನು ಉದ್ಘಾಟನೆ ಹಾಗೂ ರೂ. 54 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 2 ತರಗತಿ ಕೊಠಡಿ ಹಾಗೂ ಹೆಚ್ಚುವರಿ ನಾಲ್ಕು ಶೌಚಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಶಾಸಕ ಕೆ. ಗೋಪಾಲ ಪೂಜಾರಿ ಶಂಕುಸ್ಥಾಪನೆ ನೆರವೇರಿಸಿದರು. ಪ್ರಾಂಶುಪಾಲ ಪಾಲಾಕ್ಷ ಟಿ., ಉಪಪ್ರಾಂಶುಪಾಲೆ ಜ್ಯೋತಿ ಶ್ರೀನಿವಾಸ್, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಿ.ಎಂ. ನಾಗರಾಜ ಗಾಣಿಗ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲೌಕಿಕ ಶಿಕ್ಷಣದಿಂದ ಬದುಕು ಹಸನಾಗಲು ಸಾಧ್ಯವಿಲ್ಲ. ಆಂತರಿಕವಾದ ಮನಸಿನಲ್ಲಿ ಒಳ್ಳೆಯ ಜೀವನಾದರ್ಶಗಳ ಶಿಕ್ಷಣದ ಅಗತ್ಯತೆ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿದೆ ಎಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರು ಅಭಿಪ್ರಾಯಪಟ್ಟರು. ಅವರು ಇಅಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ, ಅಂಬಲಪಾಡಿ, ಮತ್ತು ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ ಇವರ ನೆರವಿನೊಂದಿಗೆ ನಡೆದ ಒಂದು ದಿನದ ಜೀವನ ಮೌಲ್ಯ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣವೆನ್ನುವುದು ನಮ್ಮ ಬದುಕಿನ ಅತಿಮುಖ್ಯವಾದ ಹಂತವಾಗಿದೆ. ಬದುಕು ಸಾಗಿಸಲು ಲೌಕಿಕ ಶಿಕ್ಷಣ ನೆರವಾಗುತ್ತದೆ. ಆದರೆ ಒಳ್ಳೆಯ ಬದುಕು ಮತ್ತು ವ್ಯಕ್ತಿತ್ವ ವಿಕಸನಗೊಳ್ಳಲು ಸುಸಂಸ್ಕೃತವಾಗಲು, ಗೌರವಾನ್ವಿತರಾಗಲು ಇಂಥ ಜೀವನ ಮೌಲ್ಯ ಶಿಕ್ಷಣ ಬೇಕಾಗುತ್ತದೆ. ಸ್ವತಂತ್ರ ಚಿಂತನೆಗೆ , ಉಜ್ವಲ ಭವಿಷ್ಯಕ್ಕೆ ಇಂಥ ಶಿಕ್ಷಣ ಶಿಬಿರಗಳು ನೆರವಾಗುತ್ತವೆ. ಸಂಸ್ಥೆಯ ಈ ಕಾರ್ಯಕ್ರಮ ಇತರ ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು. ದಿನನಿತ್ಯದ ಬದುಕಿನಲ್ಲಿ ಸಾಮಾಜಿಕ ವ್ಯವಸ್ಥೆಯೊಂದಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯನ್ನು ಹತ್ಯೆಗೈದಿರುವುದನ್ನು ಖಂಡಿಸಿ, ಉಭಯ ಕರಾವಳಿ ಜಿಲ್ಲೆಗಳಲ್ಲಿ ಗೋರಕ್ಷರ ಹೆಸರಿನಲ್ಲಿ ನೈತಿಕ ಪೊಲೀಸ್‌ಗಿರಿಗೆ ಮುಂದಾಗುವವರನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಕುಂದಾಪುರ ತಾಲೂಕು ಸಮಿತಿ ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಡಿವೈಎಫ್ ಮಾಜಿ ಮುಖಂಡ ಎಚ್. ನರಸಿಂಹ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್‌ಐ ತಾಲೂಕು ಅಧ್ಯಕ್ಷ ಸಂತೋಷ ಹೆಮ್ಮಾಡಿ, ಉಪಾಧ್ಯಕ್ಷ ಸುರೇಶ್ ಕಲಾಗರ್, ರವಿ.ವಿ.ಎಂ, ರಾಜಾ ಬಿ.ಟಿ.ಆರ್, ಅಕ್ಷಯ ವಡೇರಹೋಬಳಿ, ಗಣೇಶ್ ಕಲ್ಲಾಗರ, ಅಶೋಕ ಹಟ್ಟಿಯಂಗಡಿ, ಸತೀಶ ತೆಕ್ಕಟ್ಟೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎರಡು ಬಾರಿ ಕಳ್ಳತನ ನಡೆದು ಒಂದು ವರ್ಷವಾಗಿದ್ದರೂ ಕಳ್ಳರ ಪತ್ತೆಹಚ್ಚಲು ಪೊಲೀಸರು ವಿಫಲವಾಗಿದ್ದಾರೆ. ತನಿಖೆ ಚುರುಕುಗೊಳಿಸಿ ಆರೋಪಿಗಳ ತಕ್ಷಣ ಪತ್ತೆಹಚ್ಚಬೇಕು ಎಂದು ಸೌಕೂರು ದೇವಸ್ಥಾನ ಭಕ್ತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕುಂದಾಪುರದ ಡಿವೈಎಸ್ಪಿ ಕಛೇರಿಯಲ್ಲಿ ಡಿವೈಎಸ್ಪಿ ಪ್ರವೀಣ್ ನಾಯ್ಕ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿ ಮಾತನಾಡಿದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಮೇಳ ಮಾಲೀಕ ಕಿಶನ್ ಹೆಗ್ಡೆ ಮಾತನಾಡಿ ಒಂದೇ ದೇವಸ್ಥಾನದಲ್ಲಿ ಎರಡು ಭಾರಿ ಕಳ್ಳತನ ನಡೆದಿದ್ದು, ಒಂದು ಬಾರಿ ವ್ಯಕ್ತಿಯ ಚಹರೆ ಗುರುತು ಸಿಸಿ ಕ್ಯಾಮೆರಾದಲ್ಲಿ ಕಾಣಿಸಿದ್ದರೂ ಕೂಡ ಇಲಾಖೆ ಕಳ್ಳರನ್ನು ಹಿಡಿಯಲು ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿದೆ. ಈ ಮೊದಲು ತನಿಖೆ ಕೈಗೆತ್ತಿಕೊಂಡ ಎಸ್ಪಿ ಡಿವೈಎಸ್ಪಿ ಹಾಗೂ ಡಿಸಿ ಬದಲಾವಣೆಗೊಂಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ಪೊಲೀಸ್ ಇಲಾಖೆ ಎಚ್ಚರಿಸುವಗ ಸಲುವಾಗಿ ಡಿವೈಎಸ್ಪಿಗೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಸೌಕೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೋಣಿ ಹೆಚ್‌ಎಂಟಿ ಪ್ರೆಂಡ್ಸ್ ವತಿಯಿಂದ ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ನೂತನ ಧ್ವಜಸ್ತಂಭ, ಕುಡಿಯುವ ನೀರಿನ ಟ್ಯಾಂಕ್, ಕುಕ್ಕರ್ ಹಾಗೂ ಅಗತ್ಯ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ಎನ್.ಕೆ.ಹೆಬ್ಬಾರ್ ಕೋಣಿ, ಶಾಲಾ ಶಿಕ್ಷಕಿ ಗುಲಾಬಿ ಸಹಾಯಕಿ ಯರುನಿಕಾ ಡಿ.ಸೋಜ ಹಾಗೂ ಹೆಚ್‌ಎಂಟಿ ಫ್ರೆಂಡ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಮನುಕುಲದ ಏಳಿಗೆಗೆ ಕೊಡುಗೆ ನೀಡುತ್ತಿರುವ ರೋಟರಿಯ ಸೇವಾಕಾರ್ಯ ಅನನ್ಯವಾಗಿದೆ. ಪ್ರತಿಯೊಂದು ಯುಗದಲ್ಲಿಯೂ ಅಸಮತೋಲನ ಸೃಷ್ಠಿಯಾದಾಗ ಭಗವಂತ ಅವತರಿಸಿ ಲೋಕದಲ್ಲಿ ಶಾಂತಿ ನೆಮ್ಮದಿ ಸಮೃದ್ಧಿಯನ್ನು ನೆಲೆಗೊಳಿಸಿದ್ದಾನೆ ಅದರಂತೆ ಈ ಕಾಲ ಮಾನದಲ್ಲಿ ರೋಟರಿ ಜಗದಗಲ ಹಬ್ಬಿ ಮಾನವೀಯ ಸೇವೆಯಲ್ಲಿ ತೊಡಗಿ ಶಾಂತಿಗಾಗಿ ಶ್ರಮಿಸುತ್ತಿದೆ ಎಂದು ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ ಎ. ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮನುಕುಲದ ಸೇವೆಯಲ್ಲಿ ರೋಟರಿ ಕುರಿತು ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ವಿಪ್ಲವ್ ರಾವ್ ಅವರನ್ನು ೧೦೦ನೇ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು. ಕಾರ್ಯದರ್ಶಿ ಸಾಲಗದ್ದೆ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು. ಸದಸ್ಯರಾದ ಕೆ.ಸಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಯುವಜನ ಸೇವೆ ನಿರ್ದೇಶಕ ರವಿರಾಜ್ ಶೆಟ್ಟಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಲ್ಲಿ ಪ್ರಪ್ರಥಮ ಭಾರಿಗೆ ೪ಜಿ ನೆಟ್‌ವರ್ಕ್ ಸೇವೆ ಕಲ್ಪಿಸಿದ ಖ್ಯಾತಿ ಹೊಂದಿರುವ ಐಡಿಯಾ ನೆಟ್‌ವರ್ಕ್, ತಮ್ಮ ಸೇವೆಗಾಗಿ ಕುಂದಾಪುರದ ಮುಖ್ಯರಸ್ತೆಯ ಪಾರಿಜಾತ ಸರ್ಕಲ್ ಬಳಿ ಸಿಎಸ್‌ಐ ಕಾಂಪ್ಲೆಕ್ಸ್‌ನಲ್ಲಿ ಶುಬಾರಂಭಗೊಂಡಿದೆ. ಕುಂದಾಪುರ ಠಾಣಾಧಿಕಾರಿ ನಾಸಿರ್ ಹುಸೇನ್ ಐಡಿಯಾ ಪಾಯಿಂಟ್ ಉದ್ಘಾಟಿಸಿ ಮಾತನಾಡಿ ಸಂಸ್ಥೆಯ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿ ಸಮಾಜ ಸೇವಕ ಅಬು ಮಹಮ್ಮದ್ ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಕೀಲ ರಾಮದಾಸ್, ಐಡಿಯಾ ಸಂಸ್ಥೆಯ ಎ.ಎಸ್.ಎಮ್ ವಿನಯ್ ಶ್ರಿರಂಗ್, ಸೇಲ್ಸ್ ಮೆನೆಜರ್ ರೊಯ್ಸನ್ ಡಿಸೋಜಾ, ಐಡಿಯಾ ಪಾಯಿಂಟ್ ಮಾಲಕ ಮುಸ್ತಾಫ್ ಹಾಗೂ ಮೊಬೈಲ್ ಎಕ್ಸ್, ಮೊಬೈಲ್ ಎಕ್ಸ್ ಪ್ಯಾಲೇಸ್ ಮತ್ತು ಪೂಟ್ ಎಕ್ಸ್‌ನ ಎಲ್ಲಾ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು. ಐಡಿಯಾ ಸಂಸ್ಥೆಯ ಟ್ರೈನರ್ ಗಂಗಾಧರ್ ಕಾಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
