ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಾಲಕರ ವಿಭಾಗದಲ್ಲಿ, ಜಿಥಿನ್, ಗೌತಮ್ ಬಾಲಕಿಯರ ವಿಭಾಗದಲ್ಲಿ ರಿತಿಶಾ, ಸಾನ್ವಿ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಸಾರ್ವಜನಿಕ ಉಪಕಾರ ನಿಧಿಯಿಂದ ನೀಡಲಾಗುವ ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ ಸಂಘದ ಗಂಗೊಳ್ಳಿಯ ಪ್ರಧಾನ ಕಚೇರಿಯ ಬೈಲೂರು ಮಂಜುನಾಥ ಶೆಣೈ ಸಭಾ ಭವನದಲ್ಲಿ ಶುಕ್ರವಾರ ಜರಗಿತು. ಸಂಘದ ಅಧ್ಯಕ್ಷ ಜಿ. ವೆಂಕಟೇಶ ಶೆಣೈ, ಉಪಾಧ್ಯಕ್ಷ ಜಿ. ವಿಶ್ವನಾಥ್ ಆಚಾರ್ಯ ಮತ್ತು ನಿಕಟಪೂರ್ವ ಅಧ್ಯಕ್ಷ ಎಚ್. ಗಣೇಶ ಕಾಮತ್ ಅವರು ಕೊಡುಗೆಗಳನ್ನು ವಿತರಿಸಿ ಶುಭ ಹಾರೈಸಿದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಕ್ಷರ ದಾಸೋಹಕ್ಕೆ 1.20 ಲಕ್ಷ ರೂ., ಗಂಗೊಳ್ಳಿ ಸಾರ್ವಜನಿಕ ಶ್ರೀ ಶಾರದೋತ್ಸವ ಸುವರ್ಣ ಮಹೋತ್ಸವಕ್ಕೆ 55,555 ರೂ., ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಲ್ಯಾಪ್ ಟಾಪ್ ಮತ್ತು ಒಂದು ಪ್ರಿಂಟರ್, ಯಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ 50 ಸಾವಿರ ರೂ., ರಾಷ್ಟೀಯ ಸೇವಾ ಯೋಜನೆಗೆ 10 ಸಾವಿರ ರೂ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಒಟ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ’ವೈದ್ಯರು ಮತ್ತು ಎಂಜಿನಿಯರ್ಗಳಿಗೆ ಮಾತ್ರ ಜಗತ್ತಿನಲ್ಲಿ ಬೇಡಿಕೆ ಇರುವುದಲ್ಲ, ಎಲ್ಲ ಕ್ಷೇತ್ರಗಳ ಪರಿಣತರ ಅವಶ್ಯಕತೆ ಇದೆ. ಸೂಕ್ಷ್ಮ ಜೀವವಿಜ್ಞಾನವು ವಿಜ್ಞಾನ ವಿದ್ಯಾರ್ಥಿಗಳಿಗೂ ನವೀನ’ ಎಂದು ಸೈಂಟ್ ಅಲೋಷಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ವೈಶಾಲಿ ರೈ ಹೇಳಿದರು. ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಸೂಕ್ಷ್ಮ ಜೀವವಿಜ್ಞಾನ ವಿಭಾಗವು ಆಯೋಜಿಸಿದ ಪಿಯು ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ’ಮೈಕ್ರೋಸ್ಪಾರ್ಕ್ʼ (ಕಾಣದ ಜಗತ್ತನ್ನು ಅನ್ವೇಷಿಸಿ) ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದ ಹೊಸ ಸಾಧ್ಯತೆ ಮತ್ತು ಆಯಾಮಗಳನ್ನು ಅನ್ವೇಷಿಸಬೇಕು. ನಿಮ್ಮ ಮಾತು ಮತ್ತು ಆಯ್ಕೆಗಳಲ್ಲಿ ಜವಾಬ್ದಾರಿ ಇರಬೇಕು ಎಂದರು. ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ದೀಪ ಕಂಡುಹಿಡಿಯುವ ಪ್ರಯೋಗದಲ್ಲಿ ಸಾವಿರ ಬಾರಿ ವಿಫಲರಾಗಿರಬಹುದು. ಆದರೆ, ಅದು ವೈಫಲ್ಯವಲ್ಲ, ಸಾವಿರ ಸಾಧ್ಯತೆಗಳು ಎಂದು ಅವರು ವಿಶ್ಲೇಷಿಸಿದರು. ಸುಸ್ಥಿರತೆ ಇಂದಿನ ಅಗತ್ಯವಾಗಿದೆ. ಉದ್ಯಮಶೀಲತಾ ಕ್ಷೇತ್ರದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೊಂಬೆಯಾಟದ ಉಳಿವಿಗಾಗಿ ಶ್ರಮಿಸುತ್ತಿರುವ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ನೇತಾರ ಹಾಗೂ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಹೆರಿಟೇಜ್, ಮ್ಯೂಜಿಯಂ ಮತ್ತು ಡಾಕ್ಯೂಮೆಂಟೇಶನ್ ಸೆಂಟರ್ಸ್ ಕಮಿಷನ್ ಆಫ್ ಯುನಿಮಾ ಇಂಟರ್ನ್ಯಾಷನಲ್ ಇವರಿಂದ ಕೊಡಮಾಡುವ “ಯುನಿಮಾ ಹೆರಿಟೇಜ್ ಪ್ರಶಸ್ತಿ 2024”ಕ್ಕೆ (UNIMA Heritage awards) ಭಾಜನರಾಗಿದ್ದಾರೆ. ಕರಾವಳಿ ಜಾನಪದ ರಂಗ ಕಲೆಗಳಲ್ಲಿ ಉಪ್ಪಿನಕುದ್ರು ಯಕ್ಷಗಾನ ಸೂತ್ರದ ಗೊಂಬೆಯಾಟ ಕಲೆ ಅತೀ ವಿಶೇಷ ಹಾಗೂ ವಿಶಿಷ್ಟವಾದದ್ದು. 350 ವರ್ಷದ 6ನೇ ತಲಾಂತರದಲ್ಲಿ ನಡೆಯುತ್ತಿರುವ ಈ ಕಲೆ ಭಾಸ್ಕರ ಕಾಮತ್ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಸರಕಾರದ ಯಾವುದೇ ಧನಸಹಾಯ ನಿರೀಕ್ಷಿಸದೇ ಮುಂದುವರಿಯುತ್ತಿರುವ ಈ ಜಾನಪದ ಕಲೆ ಅನೇಕ ಮಹತ್ತರ ಕಾರ್ಯಗಳನ್ನು ಮಾಡುವ ಮೂಲಕ ಕಲಾಸಕ್ತರ ಗಮನ ಸೆಳೆದಿದೆ. ಉಪ್ಪಿನಕುದ್ರು ಗ್ರಾಮದಲ್ಲಿ “ಗೊಂಬೆಯಾಟ ಅಕಾಡೆಮಿ” ಚಿಂತನೆಯಡಿ ನಿರಂತರ ತನ್ನ ಸೇವೆಯನ್ನು ನೀಡುತ್ತಾ ಬಂದಿರುವ ಸಂಸ್ಥೆಯು ಗೊಂಬೆಯಾಟ ಹೊರತುಪಡಿಸಿ ವಿವಿಧ ಕಲೆಗಳಿಗೂ ವೇದಿಕೆಯಾಗಿದ್ದು ಅದರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2023-24ನೇ ನೇ ಶೈಕ್ಷಣಿಕ ಸಾಲಿನಲ್ಲಿ 6000 ರೂಬಿಕ್ ಕ್ಯೂಬ್ಗಳನ್ನು ಬಳಸಿ ವಿಶ್ವದ ಅತಿ ದೊಡ್ಡ ದ್ವಿಮುಖ ಚಿತ್ರದ ರಚನೆ ಮತ್ತು ಅತಿ ಹೆಚ್ಚು ಜನರ ಪಾಲ್ಗೊಳ್ಳುವಿಕೆಯಲ್ಲಿ ಫಜಲ್ಕ್ಯೂಬ್ ಮೊಸಾಯಿಕ್ ರಚನೆಯ ಮೂಲಕ ಅವಳಿ ಗಿನ್ನೆಸ್ ದಾಖಲೆಯನ್ನು ಸೃಷ್ಟಿಸಿದ್ದ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಗಿನ್ನೆಸ್ ಸಂಸ್ಥೆಯ ಅಧೀಕೃತ ಪದಕ ಮತ್ತು ಪ್ರಮಾಣಪತ್ರ ವಿತರಣೆಯ ಸಮಾರಂಭವು ಜರುಗಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿಧಾನ ಪರಿಷತ್ನ ಮಾಜಿ ಸದಸ್ಯರು, ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರಣಿಕ್ ಮಾತನಾಡುತ್ತಾ, ಶಿಕ್ಷಣವು ಸರ್ವತೋಮುಖವಾಗಿರಬೇಕು. ವಿದ್ಯಾರ್ಥಿಗಳಲ್ಲಿರುವ ಕ್ರಿಯಾಶೀಲತೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾಗೆ ಮಾಡಿದಾಗ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಯ ಪರಿಚಯವಾಗುವುದು. ಗಿನ್ನಿಸ್ ದಾಖಲೆಯು ಅಂತಹ ಉದಾತ್ತ ಉದ್ದೇಶದಿಂದ ಮಾಡಲ್ಪಟ್ಟಿದೆ. ಅದು ವಿದ್ಯಾರ್ಥಿಗಳ ಜೀವನದ ಮಹತ್ವವಾದ ಸಾಧನೆಯಾಗಿದ್ದು, ಪ್ರಮಾಣಪತ್ರವೂ ರಾಷ್ಟ್ರಮಟ್ಟದಲ್ಲಿ ಅವರು ತಮ್ಮನ್ನು ಗುರುತಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರ ಇದರ ಅಧ್ಯಕ್ಷರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕ/ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಒಟ್ಟು 29 ವಿದ್ಯಾರ್ಥಿಗಳು ಪದಕಗಳನ್ನು ಪಡೆಯುವುದರ ಮೂಲಕ ಜಿಲ್ಲಾ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದಿರುತ್ತಾರೆ.14 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.ಕ್ರಮವಾಗಿ ತರಣ್ (61ಕೆ.ಜಿ.ವಿಭಾಗ), ಸಫಾನ್ ಅಲಿ (55ಕೆ.ಜಿ ವಿಭಾಗ), ನಿಖಿಲ್ (60ಕೆ.ಜಿ.ವಿಭಾಗ), ಸ್ರಜನ್ (63ಕೆ.ಜಿ.ವಿಭಾಗ), ಆರ್ಯನ್ (72ಕೆ.ಜಿ.ವಿಭಾಗ), ಪ್ರಣಿತ್ (77ಕೆ.ಜಿ.ವಿಭಾಗ), ಕಿಶನ್ (82ಕೆ.ಜಿ.ವಿಭಾಗ), ಅಲೆನ್ (87ಕೆ.ಜಿ.ವಿಭಾಗ) ಪನ್ನಗ (97ಕೆ.ಜಿ.ವಿಭಾಗ), ಹ್ರತ್ವಿಕ್(97+ಕೆ.ಜಿ.ವಿಭಾಗ) ಅನನ್ಯ (50ಕೆ.ಜಿ.ವಿಭಾಗ), ಅನುಷಾ ಪಿ. (68ಕೆ.ಜಿ.ವಿಭಾಗ), ಅನುಷಾ (72ಕೆ.ಜಿ.ವಿಭಾಗ), ಗಾಯತ್ರಿ (76ಕೆ.ಜಿ.ವಿಭಾಗ). ಬೆಳ್ಳಿಯ ಪದಕ ವಿಜೇತರು ಕ್ರಮವಾಗಿ, ರತನ್ (65ಕೆ.ಜಿ.ವಿಭಾಗ), ಆದಿತ್ಯ (74 ಕೆ.ಜಿ.ವಿಭಾಗ), ಶಶಾಂಕ(82 ಕೆ.ಜಿ.ವಿಭಾಗ), ಅಶ್ವತ್ಥಾಮ್ (97ಕೆ.ಜಿ.ವಿಭಾಗ) ಸ್ಕಂದ (67ಕೆ.ಜಿ.ವಿಭಾಗ) ಸಿಂಚನಾ ಶೆಟ್ಟಿ (57ಕೆ.ಜಿ.ವಿಭಾಗ). ಕಂಚಿನ ಪದಕ ವಿಜೇತರು ಕ್ರಮವಾಗಿ, ಆರ್ಶನ್ (57ಕೆ.ಜಿ.ವಿಭಾಗ) ಸೂರಜ್ (70ಕೆ.ಜಿ.ವಿಭಾಗ), ಸ್ವಸ್ತಿಕ್ (79ಕೆ.ಜಿ.ವಿಭಾಗ), ಮಂದಿರ್ (92ಕೆ.ಜಿ.ವಿಭಾಗ),…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ಮತ್ತು ಇತರೆ ಜನಾಂಗದ ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಂದ ಇಲಾಖೆಯ ವೆಬ್ಸೈಟ್ https://shp.karnataka.gov.in/bcwdನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 8050770004, 8050770005 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಕ್ಟೋಬರ್ 3 ರಂದು ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ವಿಭಾಗ ) ಮತ್ತು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ಶುಭ ಹಾರೈಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರು, ಆನ್ಗಳ್ಳಿ ಗ್ರಾಮ ಪಂಚಾಯತ್, ಹೇರಿಕುದ್ರು ಫ್ರೆಂಡ್ಸ್, ಪಾರ್ವತಿ ಮಹಾಬಲ ಶೆಟ್ಟಿ ಕಣ್ಣಿನ ಆಸ್ಪತ್ರೆ ಶಿರೂರು ಮುದ್ದುಮನೆ ಇವರ ಸಹಯೋಗದೊಂದಿಗೆ ಹೇರಿಕುದ್ರು ಮಾನಸ ಮಂದಿರದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ, ರಕ್ತದೊತ್ತಡ, ಮಧುಮೇಹ ಪರೀಕ್ಷೆ ಶಿಬಿರ ನಡೆಯಿತು. ಹಲವಾರು ಮಂದಿ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶೇಖರ್ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಚ್ ಟ್ಟು, ಬಸ್ರೂರು ವೈದ್ಯಾಧಿಕಾರಿ ವಿದ್ಯಾ, ಡಾ. ಮನೋಜ್ ಭಟ್, ಶಂಕರ್ ಶೆಟ್ಟಿ, ಉದಯ್ ಶೆಟ್ಟಿ ಆಜ್ರಿ, ಊರಿನ ಗ್ರಾಮಸ್ಥರಾದ ಗಣಪಯ್ಯ ಶೆಟ್ಟಿ, ಕೊರಗಯ್ಯ ಶೆಟ್ಟಿ ಉಪಸ್ಥಿತರಿದ್ದರು. ಮಹಾಬಲ ಹೇರಿ ಕುದ್ರು ಕಾರ್ಯಕ್ರಮವನ್ನು ನಿರೂಪಿಸಿ, ಸುನಿಲ್ ಶೆಟ್ಟಿ ಹೇರಿಕುದ್ರು ಧನ್ಯವಾದ ಸಮರ್ಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಮಿಯ್ಯಾಣಿ ಕಾಡಿನತಾರುವಿನಲ್ಲಿ 26ನೇ ವರ್ಷದ ಸೂರ್ಯ ಕಂಬಳೋತ್ಸವ ಅಕ್ಟೋಬರ್ 13ರ ಭಾನುವಾರ ನಡೆಯಲಿದೆ. ಕಂಬಳದಲ್ಲಿ ಹಗ್ಗ ಅತೀ ಕಿರಿಯ ವಿಭಾಗ , ಹಗ್ಗ ಕಿರಿಯ ವಿಭಾಗ, ಹಗ್ಗ ಹಿರಿಯ ವಿಭಾಗ ಹಾಗೂ ಹಲಗೆ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ವಿಜೇತ ಕೋಣಗಳಿಗೆ ಹಾಗೂ ಕೋಣ ಓಡಿಸುವವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಸಂಘಟಕ ಸಂತೋಷ ಪೂಜಾರಿ ಕಾಡಿನತಾರು ತಿಳಿಸಿದ್ದಾರೆ.
