Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಂಕರನಾರಾಯಣ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಕಲ್ಗದ್ದೆ ಹಾಗೂ ಉಪಾಧ್ಯಕ್ಷರಾಗಿ ವತ್ಸಲಾ ಆಯ್ಕೆಯಾಗಿದ್ದಾರೆ ಬಿಜೆಪಿ ಬೆಂಬಲಿತ 16 ಹಾಗೂ ಕಾಂಗ್ರೆಸ್ ಬೆಂಬಲಿತ 2 ಸದಸ್ಯ ಬಲವಿರುವ ಶಂಕರನಾರಾಯಣ ಪಂಚಾಯತಿಯಲ್ಲಿ, ಎರಡನೇ ಅವಧಿಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ ಮೀಸಲಾತಿ ಬಂದಿತ್ತು. ಶಂಕರನಾರಾಯಣ ಪ್ರ.ದ. ಕಾಲೇಜು ಗಂಗರಾಜು ಚುನಾವಣಾಧಿಕಾರಿಯಾಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ, ಉಪ್ಪುಂದ ಇದರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ಆ.17ರಂದು ಸಂಘದ ಆಡಳಿತ ಕಛೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ಮೋಹನ್ ಪೂಜಾರಿ ಉಪ್ಪುಂದ ಹಾಗೂ ಉಪಾಧ್ಯಕ್ಷರಾಗಿ ತಿಮ್ಮಪ್ಪ ಪೂಜಾರಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಹತ್ತು ಸ್ಥಾನಗಳಿಗೆ ನಿರ್ದೇಶಕರ ಅವಿರೋಧ ಆಯ್ಕೆಯಾಗಿತ್ತು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆ ವೇಳೆ ನಿರ್ದೇಶಕರುಗಳಾದ ಸುರೇಶ್ ಪೂಜಾರಿ, ಬಿ. ನಾರಾಯಣ ಪೂಜಾರಿ, ಹೆಚ್. ನರಸಿಂಹ ಪೂಜಾರಿ, ರಾಜು ಪೂಜಾರಿ, ಸಂತೋಷ್, ಮಂಜ ಪೂಜಾರಿ, ಶಾರದಾ, ಲಕ್ಷ್ಮೀ ಹಾಗೂ ಸಂಘದ ಪ್ರಧಾನ ವ್ಯವಸ್ಥಾಪಕ ಮಹೇಶ್ ಹೆಚ್. ಉಪಸ್ಥಿತರಿದ್ದರು. ಚುನಾವಣಾ ಪ್ರಕ್ರಿಯೆಯನ್ನು ಕಿರಣ್ ಕುಮಾರ್ ಅವರು ನಡೆಸಿಕೊಟ್ಟರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಣಿ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಶೋಕ ಭಂಡಾರಿ ಹಾಗೂ ಉಪಾಧ್ಯಕ್ಷರಾಗಿ ಸೌಮ್ಯ ಆಯ್ಕೆಯಾಗಿದ್ದಾರೆ ಕಾಂಗ್ರೆಸ್ ಬೆಂಬಲಿತ 7 ಹಾಗೂ ಬಿಜೆಪಿ ಬೆಂಬಲಿತ 3 ಸದಸ್ಯ ಬಲವಿರುವ ಕೋಣಿ ಪಂಚಾಯತಿಯಲ್ಲಿ, ಎರಡನೇ ಅವಧಿಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಹಿಂದುಳಿದ ಅ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಬಂದಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ಕುಂಜೆ ಗ್ರಾಮ ಪಂಚಾಯತ್ ಮುಂದಿನ ಸಾಲಿನ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ರಾಜೀವ ಶೆಟ್ಟಿ ಬಿಜ್ರಿ ಅವಿರೋಧವಾಗಿ ಆಯ್ಕೆಯಾಗಿದ್ದು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಗರತ್ನ ಇವರು ಆಯ್ಕೆಯಾಗಿರುತ್ತಾರೆ. 11 ಸದಸ್ಯ ಬಲದ ಕರ್ಕುಂಜೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ದೊರೆತಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪರಸ್ಪರ ವಿಚಾರ, ಯೋಜನೆಗಳ ವಿನಿಮಯದಿಂದ ರೋಟರಿ ಕ್ಲಬ್‌ಗಳಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆ ನೆಲೆಯಲ್ಲಿ ಜಂಟಿ ಸಭೆ ನಮ್ಮ ವಿಚಾರ, ಸಂಸ್ಕೃತಿ ವಿನಿಮಯದ ವೇದಿಕೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ಭಟ್ಕಳ ರೋಟರಿ ಕ್ಲಬ್ ಅಧ್ಯಕ್ಷ ಡಾ. ಎಂ.ಎ. ಭಾವಿಕಟ್ಟಿ ಹೇಳಿದರು. ಅವರು ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ರೋಟರಿ ಕ್ಲಬ್ ಬೈಂದೂರು ಹಾಗೂ ರೋಟರಿ ಕ್ಲಬ್ ಭಟ್ಕಳದ ಅಂತರ್ಜಿಲ್ಲಾ ಜಂಟಿ ಸಭೆ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಝೋನ್ 1ರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ ಮಾತನಾಡಿ, ರೋಟರಿ ಚಟುವಟಿಕೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರವೇ ರೋಟರಿ ಆಪ್ತವಾಗುತ್ತದೆ ಹಾಗೂ ಉತ್ತಮ ಸ್ನೇಹ ಸಂಬಂಧಗಳು ಬೆಳೆಯುತ್ತದೆ ಎಂದರು. ಊಭಯ ರೋಟರಿ ಕ್ಲಬ್ಗಳ ಧ್ವಜ ವಿನಿಯಮ ಮಾಡಿಕೊಳ್ಳಲಾಯಿತು. ಕಾರ್ಯದರ್ಶಿಗಳು ಮಾಸಿಕ ವರದಿಯ ವಾಚಿಸಿದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಪೂರ್ವಾಧ್ಯಕ್ಷ ಶ್ರೀಧರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದ ಜಿಎಸ್ಬಿ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಪುರುಷೋತ್ತಮ ಮಾಸದ ಆಚರಣಾ ಸಮಾರಂಭದಲ್ಲಿ, ಇತ್ತೀಚಿಗೆ ನಡೆದ ಸಿಎ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೆ ತೇರ್ಗಡೆ ಹೊಂದಿದ ಶೈಕ್ಷಣಿಕ ಸಾಧಕಿ ಬೈಂದೂರಿನ ಉದ್ಯಮಿ ಕೆ. ವೆಂಕಟೇಶ ಕಿಣಿ, ನಯನಾ ಕಿಣಿ ದಂಪತಿಯ ಪುತ್ರಿ ವೃಂದಾ ವಿ. ಕಿಣಿ ಇವರನ್ನು ಸೋಮವಾರ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಟ್ರಸ್ಟ್ ವತಿಯಿಂದ ದೇವರ ಅನುಗ್ರಹ ಪ್ರಸಾದ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವೃಂದಾ, ಕಾಮರ್ಸ್ ನನ್ನ ಇಷ್ಟದ ಸಬ್ಜೆಕ್ಟ್ ಆಗಿರಲಿಲ್ಲ. ಹೀಗಾಗಿ ಸಿಎ ಮಾಡುವ ಐಡಿಯಾ ಇರಲಿಲ್ಲ. ನನಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಇತ್ತು. ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯುವ ಆಸೆಯಿತ್ತು. ಅದರೆ ಸಕಾಲದಲ್ಲಿ ತಂದೆಯ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನದಂತೆ ಸಿಎ ವಿಷಯವನ್ನು ತೆಗೆದುಕೊಂಡು ಪ್ರಥಮ ಹಂತದಲ್ಲಿಯೇ ಪರೀಕ್ಷೆ ತೇರ್ಗಡೆ ಹೊಂದಲು ಸಾಧ್ಯವಾಗಿದೆ ಎಂದರು. ಶ್ರೀ ವೆಂಕಟರಮಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು. ರಾಜೇಶ ಪೈ, ಉಪಾಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮೇಸ್ತ ಸಮುದಾಯಕ್ಕೆ ಸಂಬಂಧಿಸಿ ಪ್ರಕರಣವೊಂದರ ವಕಾಲತ್ತು ಸಂಬಂಧ ವಕೀಲರಿಗೆ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ ಘಟನೆ ಶಿರೂರಿನಲ್ಲಿ ನಡೆದಿದೆ. ಬೈಂದೂರು ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಗಣೇಶ್ ಮೇಸ್ತ ಎಂಬುವವರು ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿರೂರಿನ ಮೇಸ್ತ ಸಮುದಾಯಕ್ಕೆ ಸಂಬಂಧಿಸಿ ಬೈಂದೂರು, ಕುಂದಾಪುರ ಹಾಗೂ ಹೈಕೋರ್ಟ್ ನಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಒಂದು ತಂಡದ ಪರವಾಗಿ ಗಣೇಶ್ ಮೇಸ್ತ ವಕಾಲತ್ತು ಮಾಡುತ್ತಿದ್ದರು. ಆಗಸ್ಟ್ 16ರ ಬುಧವಾರ ಆಟಿ ಅಮವಾಸ್ಯೆ ಪ್ರಯುಕ್ತ ಶಿರೂರಿನ ಕೋಟೆಮನೆ ದುರ್ಗಾಂಬಿಕೆ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲೆಂದು ವಕೀಲ ಗಣೇಶ ಮೇಸ್ತ ಹೋಗಿದ್ದರು. ಈ ಸಂದರ್ಭ ಮಧ್ಯಾಹ್ನ 12 ಗಂಟೆಗೆ ವಕೀಲರ ಎದುರು ಪಾರ್ಟಿಗಳ ಪೈಕಿ ನವೀನ್ ಮೇಸ್ತ, ಕೆ.ಎನ್.ಆಚಾರ್, ಶ್ರೀಧರ್ ಮೇಸ್ತ, ಗಿರೀಶ್ ಮೇಸ್ತ, ಸುಧಾಕರ ಮೇಸ್ತ, ಅಣ್ಣಪ್ಪ ವಿ ಮೇಸ್ತ, ಪ್ರಕಾಶ್ ವಿ ಮೇಸ್ತ, ರಾಘವೇಂದ್ರ ಗಣಪತಿ ಮೇಸ್ತ, ಚಂದ್ರಶೇಖರ ಮೇಸ್ತ ಸೇರಿದಂತೆ 11 ಜನರ ತಂಡ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲೆಗೆ ನಿರಂತರವಾಗಿ ಗೈರಾಗುತ್ತಿದ್ದ ಆನಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಹಾಗೂ ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿಯನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ ಅವರು ಆದೇಶಿಸಿದ್ದಾರೆ. ಶಿಕ್ಷಕ ಅಂಪಾರು ದಿನಕರ ಶೆಟ್ಟಿ ಶಾಲೆಗೆ ಬರುತ್ತಿಲ್ಲ ಮತ್ತು ಇದರಿಂದ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಸ್ಥಳೀಯರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟ ನೀಡಿದಾಗ ಶಿಕ್ಷಕ ಶಾಲೆಯಲ್ಲಿ ಇರದೇ, ಹಾಜರಿಯನ್ನೂ ಹಾಕದೇ, ಮೇಲಧಿಕಾರಿಗಳ ಗಮನಕ್ಕೂ ತಾರದೇ ಗೈರಾಗಿರುವುದು ಕಂಡು ಬಂದಿತ್ತು. ಇದರ ಆಧಾರದಲ್ಲಿ ಕರ್ತವ್ಯಲೋಪವೆಸಗಿದ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಮೇಲಧಿಕಾರಿಗಳ ಅನುಮತಿ ಪಡೆಯದೆ ಅನಧಿಕೃತವಾಗಿ ನಿರಂತರ ಹಾಗೂ ಗೈರಾಗುತ್ತಿದ್ದ ದಿನಕರ ಶೆಟ್ಟಿ ಹಾಗೂ ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡದೇ ಶಿಕ್ಷಕ ದಿನಕರ ಶೆಟ್ಟಿಗೆ ಬೆಂಬಲ ನೀಡಿದ ಕಾರಣಕ್ಕೆ ಶಾಲೆಯ ಮುಖ್ಯೋಪಾದ್ಯಾಯ ಜನಾರ್ದನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಎಸ್ಡಿಎಂಸಿ ಅಧಕ್ಷರಾದ ಸುಬ್ರಹ್ಮಣ್ಯ ಪೂಜಾರಿಯವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಸುಭಾಷ್ ಪೂಜಾರಿಯವರನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ನಾಗವೇಣಿ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಕಾರ್ಯದರ್ಶಿ ಸುಧಾಕರ ಮೊಗವೀರ , ಕೋಶಾಧಿಕಾರಿ ಮಹಾದೇವ ಬಿಲ್ಲವ , ಸಾಂಸ್ಕೃತಿಕ ಕಾರ್ಯದರ್ಶಿ ರವಿ ಗಾಣಿಗ, ಪತ್ರಕರ್ತ ಮಹೇಶ್ ಗಾಣಿಗ ಪ್ರಗತಿಪರ ಕೃಷಿಕ ರಾಜು ಹುಳವಾಡಿ , ಹನುಮಂತ ಶೇರುಗಾರ್ ಹಾಗೂ ಮಾಜಿ ಯೋಧ ವಿಟ್ಟಲ್ ಶೇರುಗಾರ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕರಾದ ಮುಕ್ತ ಪಿ. ಪ್ರಸ್ತಾಪಿಸಿ, ಸಹ ಶಿಕ್ಷಕಿ ಮಾಲತಿ ಸ್ವಾಗತಿಸಿದರು. ಸಹ ಶಿಕ್ಷಕಿ ಸಂಗೀತ ವಂದಿಸಿ, ಸಹಶಿಕ್ಷಕಿ ಸಾರಿಕಾ ನಿರೂಪಿಸಿದರು. ಗೌರವ ಶಿಕ್ಷಕಿ ನಾಗರತ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಿದ್ಕಲ್ಕಟ್ಟೆಯಲ್ಲಿ ನಿರ್ಮಿಸಲಾದ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಂಗಳವಾರ ಉದ್ಘಾಟಿಸಿದರು. ಈ ವೇಳೆ ಅವರು ಮಾತನಾಡಿ, ಪ್ರಸ್ತುತ ದೇಶದಲ್ಲಿ ಮಹಿಳೆಯರು ರಾಜಕೀಯ, ಆರ್ಥಿಕಸಬಲೀಕರಣದತ್ತ ಮುಖ ಮಾಡಿದ್ದರೇ, ಗ್ರಾಮ ಪಂಚಾಯತಿಗಳ ಮೂಲಕ ಹಳ್ಳಿಗಳ ಸುಧಾರಣೆ ಸಾಧ್ಯವಾಗಿದ್ದರೇ ಅದಕ್ಕೆ ರಾಜೀವ ಗಾಂಧಿಯ ಅವರು ಅಧಿಕಾರ ವಿಕೇಂದ್ರೀಕರಣ ಹಾಗೂ ಮಹಿಳಾ ಮೀಸಲಾತಿಯ ಕೊಡುಗೆ ದೊಡ್ಡದಿದೆ ಎಂದರು. ಅಧಿಕಾರದಲ್ಲಿದ್ದವರು ರಾಜಕಾರಣ ಮಾಡಬಾರದು ಎಂಬುದನ್ನು ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿಸದೇ ಬದಕಿನಲ್ಲಿ ಅಳವಡಿಸಿಕೊಳ್ಳುವ ಕೆಲಸ ಮಾಡಿದರೆ ಊರು ಅಭಿವೃದ್ಧಿಯಾಗುತ್ತದೆ. ಸರಕಾರವೆಂಬುದು ಜನರ ಸೊತ್ತು. ಸರಕಾರದ ಯೋಜನೆಗಳು ಹೆಚ್ಚು ಪ್ರಮಾಣದಲ್ಲಿ ಜನರಿಗೆ ತಲುಪುವಂತೆ ಮಾಡುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು. ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಎಲ್ಲಾ ಶಾಸಕರೊಂದಿಗೆ ಚರ್ಚಿಸಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಪ್ರಸ್ತುತ ನಮ್ಮ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ…

Read More