ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಜಿಎಸ್ಬಿ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಪುರುಷೋತ್ತಮ ಮಾಸದ ಆಚರಣಾ ಸಮಾರಂಭದಲ್ಲಿ, ಇತ್ತೀಚಿಗೆ ನಡೆದ ಸಿಎ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೆ ತೇರ್ಗಡೆ ಹೊಂದಿದ ಶೈಕ್ಷಣಿಕ ಸಾಧಕಿ ಬೈಂದೂರಿನ ಉದ್ಯಮಿ ಕೆ. ವೆಂಕಟೇಶ ಕಿಣಿ, ನಯನಾ ಕಿಣಿ ದಂಪತಿಯ ಪುತ್ರಿ ವೃಂದಾ ವಿ. ಕಿಣಿ ಇವರನ್ನು ಸೋಮವಾರ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಟ್ರಸ್ಟ್ ವತಿಯಿಂದ ದೇವರ ಅನುಗ್ರಹ ಪ್ರಸಾದ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೃಂದಾ, ಕಾಮರ್ಸ್ ನನ್ನ ಇಷ್ಟದ ಸಬ್ಜೆಕ್ಟ್ ಆಗಿರಲಿಲ್ಲ. ಹೀಗಾಗಿ ಸಿಎ ಮಾಡುವ ಐಡಿಯಾ ಇರಲಿಲ್ಲ. ನನಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಇತ್ತು. ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯುವ ಆಸೆಯಿತ್ತು. ಅದರೆ ಸಕಾಲದಲ್ಲಿ ತಂದೆಯ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನದಂತೆ ಸಿಎ ವಿಷಯವನ್ನು ತೆಗೆದುಕೊಂಡು ಪ್ರಥಮ ಹಂತದಲ್ಲಿಯೇ ಪರೀಕ್ಷೆ ತೇರ್ಗಡೆ ಹೊಂದಲು ಸಾಧ್ಯವಾಗಿದೆ ಎಂದರು.
ಶ್ರೀ ವೆಂಕಟರಮಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು. ರಾಜೇಶ ಪೈ, ಉಪಾಧ್ಯಕ್ಷ ಯು. ಶಾಂತಾರಾಮ ಪ್ರಭು, ಖಜಾಂಚಿ ಮಂಜುನಾಥ ಮಹಾಲೆ, ಜೊತೆಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್, ಶ್ರೀ ವರಲಕ್ಷ್ಮೀವೃತ ಸೇವಾ ಸಮಿತಿ ಅಧ್ಯಕ್ಷೆ ಸವಿತಾ ಎಸ್. ಪ್ರಭು ಹಾಗೂ ಉದ್ಯಮಿ ಕುಂಜಾಲು ವೆಂಕಟೇಶ ಕಿಣಿ, ನಯನಾ ಕಿಣಿ ಇದ್ದರು.










