ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಂಕರನಾರಾಯಣ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಕಲ್ಗದ್ದೆ ಹಾಗೂ ಉಪಾಧ್ಯಕ್ಷರಾಗಿ ವತ್ಸಲಾ ಆಯ್ಕೆಯಾಗಿದ್ದಾರೆ
ಬಿಜೆಪಿ ಬೆಂಬಲಿತ 16 ಹಾಗೂ ಕಾಂಗ್ರೆಸ್ ಬೆಂಬಲಿತ 2 ಸದಸ್ಯ ಬಲವಿರುವ ಶಂಕರನಾರಾಯಣ ಪಂಚಾಯತಿಯಲ್ಲಿ, ಎರಡನೇ ಅವಧಿಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ ಮೀಸಲಾತಿ ಬಂದಿತ್ತು. ಶಂಕರನಾರಾಯಣ ಪ್ರ.ದ. ಕಾಲೇಜು ಗಂಗರಾಜು ಚುನಾವಣಾಧಿಕಾರಿಯಾಗಿದ್ದರು.