Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಜನತಾ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಪ್ರಾಯೋಜಿತ ಇಂಟರಾಕ್ಟ್ ಕ್ಲಬ್ 2022-23ನೇ ಸಾಲಿನ ಪದಪ್ರದಾನ ಸಮಾರಂಭ ಇತ್ತೀಚಿಗೆ ಜರುಗಿತು. ಮುಖ್ಯ ಅತಿಥಿಗಳಾಗಿ ಖ್ಯಾತ ದಂತ ವೈದ್ಯರಾದ ರೊ. ಡಾ. ರಾಜಾರಾಮ್ ಶೆಟ್ಟಿ ಜೀವನಶೈಲಿ ಮತ್ತು ಶಿಕ್ಷಣದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ರೋಟರಿ ಕುಂದಾಪುರದ ಅಧ್ಯಕ್ಷರಾದ ವೆಂಕಟೇಶ್ ನಾವುಂದ ಇಂಟರಾಕ್ಟ್ ಅಧ್ಯಕ್ಷೆ ಕು. ಕೃತಿಕಾ ಮತ್ತು ತಂಡದವರಿಗೆ ಪದ ಪ್ರದಾನ ಮಾಡಿ ರೋಟರಿ ಬಗ್ಗೆ ಮಾಹಿತಿ ನೀಡಿ ಶುಭಾಶಯ ಕೋರಿದರು. ಕಾರ್ಯದರ್ಶಿ ರೊ. ನಾಗರಾಜ್ ಶೆಟ್ಟಿ ಇಂಟರಾಕ್ಟ್ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಮಂಜು ಕಾಳವರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಶಿಕ್ಷಕ ಜಗದೀಶ್ ಶೆಟ್ಟಿ ನಿರೂಪಣೆ ಮಾಡಿದರು. ಇಂಟ್ರಾಕ್ಟ್ ಕಾರ್ಯದರ್ಶಿ ಪ್ರೀತಮ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೀನುಗಾರಿಕೆ ಮುಗಿಸಿಕೊಂಡು ಹಿಂದಿರುಗುತ್ತಿದ್ದ ದೋಣಿಗೆ ತೆರೆಯೊಂದು ಅಪ್ಪಳಿಸಿ ಕಲ್ಲಿಗೆ ಬಡಿದ ಪರಿಣಾಮ ದೋಣಿಗೆ ಹಾನಿಯಾದ ಘಟನೆ ಅ.22ರಂದು ನಡೆದಿದೆ. ಕಿರಿಮಂಜೇಶ್ವರ ಗ್ರಾಮದ ಕೊಡೇರಿ ನಿವಾಸಿ ಪ್ರತಿಮಾ ಎಂಬುವವರಿಗೆ ಸೇರಿದ ದೋಣಿಯಲ್ಲಿ ಮೂವರು ಮೀನುಗಾರರು ಮೀನುಗಾರಿಕೆ ಮುಗಿಸಿಕೊಂಡು ಹಿಂದಿರುತ್ತಿದ್ದರು. ಕೊಡೇರಿ ಬಂದರು ಸಮೀಪಿಸುತ್ತಿದ್ದಂತೆ ನೀರಿನ ಸೆಳೆದ ಹೆಚ್ಚಾಗಿ ದೊಡ್ಡದಾದ ತೆರೆಯೊಂದು ದೋಣಿಗೆ ಬಡಿದ ಪರಿಣಾಮ, ದೋಣಿಯು ಬ್ರೇಕ್ ವಾಟರ್ ಕಲ್ಲಿಗೆ ಬಡಿದು ಹಾನಿಯಾಗಿದೆ. ಘಟನೆಯಲ್ಲಿ ದೋಣಿಯ ಇಂಜಿನ್ ಮತ್ತು ಬಲೆ ನೀರು ಪಾಲಾಗಿದ್ದು, ಒಟ್ಟು ರೂ.3,00,000 ದಷ್ಟು ನಷ್ಟ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯದಲ್ಲಿ ಇತ್ತೀಚಿಗೆ ಗಂಗೊಳ್ಳಿಯ ರೋಟರಾಕ್ಟ್ ಕ್ಲಬ್ ಪದಪ್ರಧಾನ ಸಮಾರಂಭ ಜರುಗಿತು. 2022 23ನೇ ಸಾಲಿನ ರೋಟರಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಶ್ರೇಯಾ. ಜಿ ಹಾಗೂ ಕಾರ್ಯದರ್ಶಿಯಾಗಿ ಕಿರಣ್ ಆಯ್ಕೆಯಾದರು. ರೋಟರಾಕ್ಟ್ ಡಿಸ್ಟ್ರಿಕ್ಟ್ ಚೇರ್ಮನ್ ಜೈ ವಿಠ್ಠಲ್, ಪದಪ್ರಧಾನ ನೆರವೇರಿಸಿದರು. ರೊಟ್ರಾಕ್ಟ್ ವೈಸ್ ಚೇರ್ಮನ್ ಚಂದ್ರ ಪೂಜಾರಿ, ರೊಟ್ರ್ಯಾಕ್ ಜೋನಲ್ ಕೋ ಆರ್ಡಿನೇಟರ್ ಜಾನ್ಸನ್ ಡಿ ಅಲ್ಮೇಡಾ ಪದ ಪ್ರದಾನ ಸಮಾರಂಭವನ್ನು ನೆರವೇರಿಸಿದರು. ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್ ಕೆ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಶುಭ ಹಾರೈಸಿದರು. ಗಂಗೊಳ್ಳಿ ರೋಟರಿ ಕ್ಲಬ್ ನ ಯೂಥ್ ಸರ್ವಿಸ್ ಚೇರ್ಮನ್ ನಾಗೇಂದ್ರ ಪೈ . ಕ್ಲಬ್ನ್ ನ ಕಾರ್ಯದರ್ಶಿ ಚಂದ್ರಕಲಾ ಎಸ್ ಉಪಸ್ಥಿತರಿದ್ದರು ನಿರ್ಗಮನ ರೋಟರಾಕ್ಟ್ ಅಧ್ಯಕ್ಷೆ ಅಮೀಕ್ಷಾ ಡಿ ನಾಯ್ಕ್ ಅತಿಥಿಗಳನ್ನು ಸ್ವಾಗತಿಸಿ ಹಿಂದಿನ ಸಾಲಿನ ರೋಟರಾಕ್ಟ್ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ರೋಟರಿ ಕ್ಲಬ್ಬಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು,ಅ.26: ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದ ವೇಳೆ ಕಿರಿದಾದ ಕಾಲುಸಂಕ ದಾಟುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದ ಸನ್ನಿಧಿಯ ಪೋಷಕರಾದ ಬೋಳಂಬಳ್ಳಿ ಗ್ರಾಮದ ಮಕ್ಕಿಮನೆ ಮನೆ ನಿವಾಸಿ ಪ್ರದೀಪ್ ಪೂಜಾರಿ ಮತ್ತು ಸುಮಿತ್ರಾ ದಂಪತಿಯನ್ನು ಸಂಸದರಾದ ಬಿ. ವೈ. ರಾಘವೇಂದ್ರ ಅವರು ಭೇಟಿಮಾಡಿ, ಧೈರ್ಯ ತುಂಬಿ ವೈಯುಕ್ತಿಕವಾಗಿ ಧನ ಸಹಾಯವನ್ನು ಮಾಡಿದರು. ಈ ಸಂದರ್ಭ ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯರುಗಳಾದ ಬಾಬು ಶೆಟ್ಟಿ, ಶಂಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಸುಣ್ಣಾರಿಯ ಎಕ್ಸಲೆಂಟ್ ಸ್ಕೂಲ್ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಸಾಧನೆಗೈಯುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಚಾಪನ್ನು ಮೂಡಿಸುತ್ತಿದ್ದು, ಸಂಸ್ಥೆಯು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತದೆ ಎಂದು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಶೆಟ್ಟಿ ಹೇಳಿದರು. ಅವರು ಗುರುವಾರ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಬಾಲಕ – ಬಾಲಕಿಯರ ಚದುರಂಗ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರದ ವಿದ್ಯಾರ್ಥಿಗಳಾದ ಮಾನಸ ಪ್ರಥಮ ಸ್ಥಾನಿಯಾಗಿ ಹಾಗೂ ನಿಹಾಲ್ ಎನ್ ಶೆಟ್ಟಿ ತೃತೀಯ ಸ್ಥಾನಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಉಡುಪಿ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿರುವ ಏಕೈಕ ಕಾಲೇಜು ಎಂಬ ಹೆಗ್ಗಳಿಕೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನದ್ದಾಗಿದೆ ಎಂದರು. ಉಡುಪಿ ಜಿಲ್ಲಾ ಮಟ್ಟದ ಶಿಕ್ಷಣ ಇಲಾಖೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ರೈಲು ಡಿಕ್ಕಿಯಾಗಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನದ ವೇಳೆ ಶಿರೂರು ಗ್ರಾಮದ ನಿರೋಡಿ ಸಮೀಪ ನಡೆದಿದೆ. ಶಿರೂರು ಮುದ್ರುಮಕ್ಕಿ ನಿವಾಸಿ ನರಸಿಂಹ ಪೂಜಾರಿ ಎಂಬುವವರ ಪುತ್ರ ಸಂಪತ್ ಪೂಜಾರಿ (17) ಮೃತ ದುರ್ದೈವಿ. ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾದ ಸಂಪತ್, ಮಧ್ಯಾಹ್ನ ವೇಳೆ ನಿರೋಡಿಯ ತನ್ನ ಅಜ್ಜಿಯ ಮನೆಯಿಂದ ಮುದ್ರುಮಕ್ಕಿಯ ತಂದೆಯ ಮನೆಗೆ ಹೋಗುವ ಸಲುವಾಗಿ ರೈಲು ಹಳಿಯ ಮೇಲೆ ತೆರಳಿದ್ದಾನೆ. ಈ ವೇಳೆ ಹೆಡ್ ಪೋನ್ ಹಾಕಿಕೊಂಡಿದ್ದರಿಂದ ರೈಲು ಹಿಂದಿನಿಂದ ಬಂದಿರುವುದು ತಿಳಿಯದೇ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ನಾಳೆ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದುದರಿಂದ ಇಂದು ಕಾಲೇಜಿಗೆ ರಜೆ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮಾಹಿತಿ ಕಲೆಹಾಕಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ, ಕೊಲ್ಲೂರು ಶ್ರೀ ಮೂಕಾಂಬಿಕಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮಾನಸ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ನಮ್ಮ ಗುರಿ ತುಂಬಾ ಆಳವಾಗಿರಬೇಕು ಮತ್ತು ತುಂಬಾ ದೊಡ್ಡ ಕನಸುಗಳನ್ನು ಹೊಂದಿರಬೇಕು. ಅದಕ್ಕೆ ತಕ್ಕಂತೆ ನಮ್ಮ ಕಠಿಣ ಪರಿಶ್ರಮ ಮತ್ತು ಹೋರಾಟವಿದ್ದರೆ ಗುರಿ ಬೇಗ ತಲುಪಬಹುದು ಎಂದು ಕುಂದಾಪುರ ಉಪವಲಯದ ಅರಣ್ಯ ಅಧಿಕಾರಿ ಹಸ್ತಾ ಶೆಟ್ಟಿ (ಎಸಿಎಫ್) ಹೇಳಿದರು. ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಸಿಎ/ಸಿಎಸ್ ತರಬೇತಿ ಶಿಕ್ಷಣ ಸಂಸ್ಥೆ ಮತ್ತು ಲಯನ್ಸ್ ಕ್ಲಬ್ ತಲ್ಲೂರು ಜಂಟಿ ಆಶ್ರಯದಲ್ಲಿ ಶಿಕ್ಷ ಪ್ರಭ ಅಕಾಡೆಮಿಯ ಆಡಿಟೋರಿಯಂನಲ್ಲಿ ಆಯೋಜಿಸಲಾದ ವಿದ್ಯಾರ್ಥಿಗಳಿಗೆ ಹಣ್ಣಿನ ಗಿಡ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾಧನೆಗೆ ಬಡತನ ಅಡ್ಡಿಯಾಗಲಾರದು. ಹಾಗಿದ್ದರೆ ನಾನು ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ತಲ್ಲೂರಿನ ಅದ್ಯಕ್ಷರಾಗಿರುವ ಬಿ. ಗೋಪಾಲ ಶೆಟ್ಟಿಯವರು ತಲ್ಲೂರು ಲಯನ್ಸ್ ಕ್ಲಬ್ ಖಜಾಂಚಿ ಟಿ. ನಾರಾಯಣ ಶೆಟ್ಟಿ, ಶಿಕ್ಷ ಪ್ರಭ ಸಂಸ್ಥೆಯ ಸಂಸ್ಥಾಪಕರಾದ ಪ್ರತಾಪಚಂದ್ರ ಶೆಟ್ಟಿ, ಭರತ್ ಶೆಟ್ಟಿ ಉಪಸ್ಥಿತರಿದ್ದರು. 150ಕ್ಕೂ ಹೆಚ್ಚು ಅಧಿಕ ಹಣ್ಣಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಆ.24: ಸೈಂಟ್ ಕ್ಷೇವಿಯರ್ ಆಂಗ್ಲ ಮಾದ್ಯಮ ಸ್ಕೂಲ್ ಉದ್ಯಾವರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ದೆಯಲ್ಲಿ ಕುಂದಾಪುರದ ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿಯ ಒಂಬತ್ತು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ವಿದ್ಯಾರ್ಥಿಗಳಾದ ಯಶಸ್ವಿ ಪೂಜಾರಿ, ವರ್ನಿತ ಕುಂದರ್, ಜೋಷ್ವಿನ್, ಶ್ರೀದನ್ ಇವರೆಲ್ಲ ಹೈಸ್ಕೂಲ್ ವಿಭಾಗದಲ್ಲಿ ಶ್ರಾವ್ಯ, ಜೋಶ್ವಿನ್, ನಮಿಶ್ ಪೂಜಾರಿ, ಪ್ರದ್ಯುಮ್ನ ಅಡಿಗ, ವರ್ಷಿನಿ ಕುಂದರ್ ಪ್ರೈಮರಿ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಆ.24: ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಬೈಂದೂರು ತಾಲೂಕು ಕೇಂದ್ರ ಸಮಿತಿ ಮತ್ತು ಬೈಂದೂರು ತಾಲೂಕು ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷರಾದ ರಘುರಾಮ ಕೆ. ಪೂಜಾರಿ, ಭಜನಾ ಪರಿಷತ್ ಅಧ್ಯಕ್ಷರಾದ ಕೃಷ್ಣ ಪೂಜಾರಿ ಶಿರೂರು, ನಿಕಟಪೂರ್ವ ಕೇಂದ್ರ ಸಮಿತಿ ಅಧ್ಯಕ್ಷರಾದಕೃಷ್ಣ ಪೂಜಾರಿ, ವಂಡ್ಸೆ ವಲಯಅಧ್ಯಕ್ಷರಾದ ವೀಣಾ ಆಚಾರ್ಯ, ಕಿರಿಮಂಜೇಶ್ವರ ವಲಯಾಧ್ಯಕ್ಷರಾದ ದಿನೇಶ್ ಆಚಾರ್ಯ, ತ್ರಾಸಿ ವಲಯ ಅಧ್ಯಕ್ಷರಾದ ನಾಗರಾಜ ಖಾರ್ವಿ, ಕೊಲ್ಲೂರು ವಲಯಾಧ್ಯಕ್ಷರಾದ ಜಯರಾಮ್ ಪೂಜಾರಿ, ಗೋಳಿಹೊಳೆ ವಲಯಾಧ್ಯಕ್ಷರಾದ ಮಂಜುನಾಥ್ ಪೂಜಾರಿ, ಹಟ್ಟಿಯಂಗಡಿ ವಲಯಾಧ್ಯಕ್ಷರಾದ ನಿತ್ಯಾನಂದ ಆಚಾರ್ಯ, ಭಜನಾ ಪರಿಷತ್ ವಲಯ ಸಂಯೋಜಕರಾದ ಮಂಜುನಾಥ್ ಉಪ್ಪುಂದ, ಮಂಜುನಾಥ್ ಕಿರಿಮಂಜೇಶ್ವರ, ಕಿರಿಮಂಜೇಶ್ವರ ವಲಯದ ನಿಕಟಪೂರ್ವ ಅಧ್ಯಕ್ಷರಾದ ಸುಮಾ ಆಚಾರ್ಯ, ಬೈಂದೂರು ತಾಲ್ಲೂಕು ಯೋಜನಾಧಿಕಾರಿ ಕೆ. ವಿನಾಯಕ್ ಪೈ, ಬೈಂದೂರು ವಲಯ ಮೇಲ್ವಿಚಾರಕ ರಾಮಚಂದ್ರ, ಬೈಂದೂರು ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ…

Read More