Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪೂರ್ವ ಮುಂಗಾರು ಆರಂಭದ ಬೆನ್ನಲ್ಲೇ ಕೃಷಿ ಆಧಾರಿತ ಬೆಳೆಗಳ ಉತ್ತಮ ಇಳುವರಿ ಹಾಗೂ ಮಣ್ಣಿನ ಫಲವತ್ತತೆ ಕಾಪಾಡಲು ಸಂಯುಕ್ತ ರಾಸಾಯನಿಕ ರಸಗೊಬ್ಬರಗಳನ್ನು ಬಳಕೆ ಮಾಡುವಂತೆ ಕೃಷಿ ಇಲಾಖೆ ಶಿಫಾರಸ್ಸು ಮಾಡಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವ ಕೃಷಿ ಬೆಳೆಗಳಿಗೆ ಅಗತ್ಯ ಪ್ರಮಾಣದಲ್ಲೇ ರಸಗೊಬ್ಬರಗಳನ್ನು ರೈತರಿಗೆ ವಿತರಿಸುವುದು ಅತ್ಯವಶ್ಯಕವಾಗಿದ್ದು, ಅತಿಯಾದ ಯೂರಿಯಾ ಬಳಕೆಗೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಲಹೆ ನೀಡಲಾಗಿದೆ. ಪ್ರಮುಖ ಬೆಳೆಯಾದ ಭತ್ತ ಬೆಳೆಗೆ ನೀಡಬೇಕಾಗಿರುವ ರಸಗೊಬ್ಬರದ ಪ್ರಮಾಣವನ್ನು ಹಾಗೂ ವಿವಿಧ ಸಂಯುಕ್ತ ರಸಗೊಬ್ಬರಗಳ ಕಾಂಬಿನೇಷನ್ ಮೂಲಕ ನೀಡಬಹುದಾದ ರಸಗೊಬ್ಬರ ಪ್ರಮಾಣದ ಮಾಹಿತಿಯನ್ನು ಈಗಾಗಲೇ ಜಿಲ್ಲೆಯ ಎಲ್ಲಾ ರಸಗೊಬ್ಬರ ಮಾರಾಟಗಾರರಿಗೆ ನೀಡಿದ್ದು, ರೈತರು ರಸಗೊಬ್ಬರ ಖರೀದಿ ಮಾಡುವಾಗ ಶಿಫಾರಿತ ಪ್ರಮಾಣವನ್ನು ಮಾತ್ರ ಖರಿದೀಸಬೇಕು. ರೈತರು ಬೆಳೆಗಳಿಗೆ ಸಾರಜನಕವನ್ನು ಕೇವಲ ಯೂರಿಯಾ ಮೂಲಕ ನೀಡದೆ ಸಂಯುಕ್ತ ರಸಗೊಬ್ಬರಗಳಾದ 17:17:17, 19:19:19, 10:26:26 ಅಥವಾ ಅಮೋನಿಯಮ್ ಸಲ್ವೇಟ್ ಅನ್ನು ಮೂಲಗೊಬ್ಬರವಾಗಿ ಬಳಸಿ ಯೂರಿಯಾವನ್ನು ಮೇಲು ಗೊಬ್ಬರಕ್ಕಾಗಿ ಮಾತ್ರ ಬಳಸಬೇಕು. ಹಾಗೆಯೇ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್ ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಗ್ರಾಮೀಣ ಭಾಗದ ಪ್ರತಿಷ್ಟಿತ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿರುತ್ತಾರೆ. ಕಾಲೇಜಿನ ವಿದ್ಯಾರ್ಥಿ ಶ್ರಾವ್ಯ ದೇವಾಡಿಗ ರಾಜ್ಯ ಮಟ್ಟದಲ್ಲಿ 52ನೇ ರ‍್ಯಾಂಕ್‌ ಪಡೆದು ಗ್ರಾಮೀಣ ಭಾಗದಲ್ಲೇ ಹೊಸ ಸಂಚಲನ ಮೂಡಿಸಿದ್ದಾಳೆ. ಈಕೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲೂ ರಾಜ್ಯ ಮಟ್ಟದ ಮೂರನೇ ರ‍್ಯಾಂಕ್‌ ಪಡೆದಿರುತ್ತಾಳೆ.ಕಾಲೇಜಿನ 10 ವಿದ್ಯಾರ್ಥಿಗಳು ಸಾವಿರದ ಒಳಗೆ ರ‍್ಯಾಂಕ್‌ ಪಡೆದು ಅಮೋಘ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳಾದ ದೀಕ್ಷಾ 98ನೇ ರ‍್ಯಾಂಕ್‌, ಶ್ರೇಯಸ್ ಪಿ ಗಾಣಿಗ 137, ಮರಿಯಾ ವಿಯೋಲಾ 392 ನೇ ರ‍್ಯಾಂಕ್‌, ಗಗನ್ 415ನೇ ರ‍್ಯಾಂಕ್‌,ಸ್ಮೃತಿಕಾ 741ನೇ ರ‍್ಯಾಂಕ್‌,ನೇ ರ‍್ಯಾಂಕ್‌ ,ಶ್ರದ್ದಾ ಎಸ್ ಮೊಗವೀರ 774 ನೇ ರ‍್ಯಾಂಕ್‌,ಸಹನ್ಯ 776 ನೇ ರ‍್ಯಾಂಕ್‌,ಸಾಕ್ಷಿ ಎಸ್ ಪೂಜಾರಿ 858 ನೇ ರ‍್ಯಾಂಕ್‌ ,ಇಂಚರಾ ಅಶೋಕ್ 952 ನೇ ರ‍್ಯಾಂಕ್‌, ಅಕ್ಷತಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಬೆಳ್ವೆ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಸೋಮವಾರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಹೆಬ್ರಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ತಹಶೀಲ್ದಾರ್ ಪ್ರದೀಪ್ ಕುರುಡೇಕರ, ಬೆಳ್ವೆ ಗ್ರಾಮ ಪಂಚಾಯಿತಿ ಪಿಡಿಒ ಶ್ರೀಮತಿ ಸತೀಶ್ ನಾಯಕ, ಆಡಳಿತ ಅಧಿಕಾರಿ ಜಿ.ಚಿದಾನಂದಪ್ಪ ಸೇರಿದಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳು, ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಮಹಿಳಾ ಸಂಘದ ಸದಸ್ಯರು, ಶಾಸಕರ ಆಪ್ತ ಕಾರ್ಯದರ್ಶಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಭೆಯಲ್ಲಿ ಸಾರ್ವಜನಿಕರು ರಸ್ತೆ, ಕುಡಿಯುವ ನೀರು, ವಸತಿ ಯೋಜನೆ, ಕಂದಾಯ, ಮೆಸ್ಕಾಂ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಅಹವಾಲುಗಳನ್ನು ಸ್ವೀಕರಿಸಿದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಪುವಿನಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಮಾನ್ಯತೆ ಪಡೆದಿರುವ 3 ವರ್ಷಗಳ ಅವಧಿಯ ಡಿಪ್ಲೋಮಾ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ, ಪಿ.ಯು.ಸಿ ಪಾಸ್/ ಫೇಲ್ ಆಗಿರುವ ವಿದ್ಯಾರ್ಥಿಗಳಿಂದ ವೆಬ್‌ಸೈಟ್ www.dte.kar.nic.in ನಲ್ಲಿ ಅಥವಾ ನೇರವಾಗಿ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಧುನಿಕ ಉದಯೋನ್ಮುಖ ಕೋರ್ಸುಗಳಾದ ಆಟೋಮೇಷನ್ & ರೊಬೋಟಿಕ್ಸ್ ವಿಭಾಗ, ಗಣಕಯಂತ್ರ ವಿಭಾಗ, ಯಾಂತ್ರಿಕ ವಿಭಾಗ ಮತ್ತು ವಿದ್ಯುನ್ಮಾನ ವಿಭಾಗಗಳಲ್ಲಿ ಸೀಟುಗಳು ಲಭ್ಯವಿದ್ದು, ಜೂನ್ 30 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್, ಕಾಪು ಮೊ.ನಂ: 9740842743, 9740116084, 9731456754, 9686557675 ಹಾಗೂ 8050015592 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮಾಜ ಸೇವಾ ಟ್ರಸ್ಟ್ ವತಿಯಿಂದ ರವಿವಾರ 2025- 26ನೇ ಸಾಲಿನಲ್ಲಿ  ಎಸ್.ಎಸ್‌.ಎಲ್.ಸಿ ಮತ್ತು ದ್ವಿತೀಯ ಪಿಯಿಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಸಭೆಯ ಅಧ್ಯಕ್ಷತೆ ವಹಿಸಿ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಿದರು. ನಂತರ ಮಾತನಾಡಿ, ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಂಡು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಿ, ಆದರ್ಶ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿಗಾರ್, ವೀರೇಶ್ವರ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿಗಾರ್ ಉಡುಪಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಮಾತನಾಡಿದರು. ಈ ಸಂದರ್ಭದಲ್ಲಿ 245ನೇ ಮಾಸಿಕ ಸತ್ಯನಾರಾಯಣ ಪೂಜಾ ಸೇವಾ ಕರ್ತರಾದ ಶ್ರೀಮತಿ ಪೂರ್ಣಿಮಾ ಮತ್ತು ಭಾಸ್ಕರ್ ಶೆಟ್ಟಿಗಾರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2026ರಲ್ಲಿ ಮತ್ತೊಮ್ಮೆ ಶ್ರೇಷ್ಠ ಸಾಧನೆಯನ್ನು ಮೆರೆದಿದ್ದಾರೆ. ಮೊದಲ 10 ರ‍್ಯಾಂಕ್‌ಗಳಲ್ಲಿ 03 ರ‍್ಯಾಂಕ್, ಮೊದಲ 50 ರ‍್ಯಾಂಕ್‌ಗಳಲ್ಲಿ 15 ರ‍್ಯಾಂಕ್, ಮೊದಲ 100 ರ‍್ಯಾಂಕ್‌ಗಳಲ್ಲಿ 18 ರ‍್ಯಾಂಕ್, ಮೊದಲ 200 ರ‍್ಯಾಂಕ್‌ಗಳಲ್ಲಿ 46 ರ‍್ಯಾಂಕ್, ಮೊದಲ 500 ರ‍್ಯಾಂಕ್‌ಗಳಲ್ಲಿ 187 ರ‍್ಯಾಂಕ್, ಮೊದಲ 1,000 ರ‍್ಯಾಂಕ್‌ಗಳಲ್ಲಿ 429, ಮೊದಲ 2000 ರ‍್ಯಾಂಕ್‌ಗಳಲ್ಲಿ 914 ರ‍್ಯಾಂಕ್‌ಗಳನ್ನು ಆಳ್ವಾಸ್ ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ. ಪಿಸಿಬಿಯಲ್ಲಿ 8 ವಿದ್ಯಾರ್ಥಿಗಳು 180ರಲ್ಲಿ 170ಕ್ಕೂ ಅಧಿಕ ಅಂಕ, 51 ವಿದ್ಯಾರ್ಥಿಗಳು 160ಕ್ಕೂ ಅಧಿಕ, 145 ವಿದ್ಯಾರ್ಥಿಗಳು 150ಕ್ಕೂ ಅಧಿಕ, 951 ವಿದ್ಯಾರ್ಥಿಗಳು 120ಕ್ಕೂ ಅಧಿಕ, 1392 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ. ಪಿಸಿಎಮ್‌ನಲ್ಲಿ ಒರ್ವ ವಿದ್ಯಾರ್ಥಿ 180ರಲ್ಲಿ 170ಕ್ಕೂ ಅಧಿಕ ಅಂಕ, 11 ವಿದ್ಯಾರ್ಥಿಗಳು 160ಕ್ಕೂ ಅಧಿಕ, 35 ವಿದ್ಯಾರ್ಥಿಗಳು 150ಕ್ಕೂ ಅಧಿಕ, 568 ವಿದ್ಯಾರ್ಥಿಗಳು 120ಕ್ಕೂ ಅಧಿಕ, 937 ವಿದ್ಯಾರ್ಥಿಗಳು 100ಕ್ಕೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಅವರು ಕುಟುಂಬ ಸಮೇತರಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದರು. ದೇವರ ದರ್ಶನ ಹಾಗೂ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸ್ವಾಮೀಜಿದ್ವಯರ ಪುತ್ಥಳಿಯ ದರ್ಶನ ಪಡೆದ ಅವರು, ಪುರುಷೋತ್ತಮ ಮಾಸದ ಅಂಗವಾಗಿ ದೇವಸ್ಥಾನದಲ್ಲಿ ನಡೆಯುತ್ತಿರುವ ಮಾಸಾವಧಿ ಅಖಂಡ ಭಜನಾ ಮಹೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. ದೇವಳದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ಮತ್ತು ಜಿ. ಶಂಕರ ಕೆ. ಆಚಾರ್ಯ ಅವರು ನ್ಯಾಯಾಧೀಶರನ್ನು ಪ್ರಸಾದ ನೀಡಿ ಗೌರವಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಏಪ್ರಿಲ್ 23 ಮತ್ತು 24 ರಂದು ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಇಂಜಿನಿಯರಿಂಗ್ ವಿಭಾಗದಲ್ಲಿ  ನಾಗದೇವ್‌ ಎಂ. ಜಿ 28 ನೇ ರ‍್ಯಾಂಕ್ ಪಡೆದುಕೊಂಡು ಅದ್ಭುತ ಸಾಧನೆಗೈದಿದ್ದಾರೆ. ಮಾತ್ರವಲ್ಲದೆ ವಿದ್ಯಾರ್ಥಿಗಳಾದ ಸಂವಿತ್‌ ಅಮಿತ್‌ 55, ಧ್ರುವ ವಿ ಬಿ 71, ತೇಜಸ್‌ ಆರ್‌ ಬಿ 82, ನಮಿತ್‌ ಕೆ ಹೆಗಡೆ 199, ತೇಜಸ್‌ ಹೆಗಡೆ ಹೆಚ್‌ ಡಿ 236, ಸುಕ್ಷೀತ್‌ ಗಿರೀಶ್‌ ಗೌಡ 238, ನಿನಾದ್‌ ರಾಜೇಶ್‌ ನಾಯ್ಕ್‌ 395, ಪ್ರಣಮ್ಯಾ ಭಟ್‌ 490, ಲೇಖನ್‌ ಕಾರಿಯಪ್ಪ 493, ಧನುಷ್‌ ಹೆಚ್‌ ಎ 496 ರ‍್ಯಾಂಕ್ ಗಳಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 22 ವಿದ್ಯಾರ್ಥಿಗಳು 1000 ರ‍್ಯಾಂಕ್ನೊಳಗೆ, 43 ವಿದ್ಯಾರ್ಥಿಗಳು 2000 ರ‍್ಯಾಂಕ್ನೊಳಗೆ ಇದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಕೃಷಿ ವಿಭಾಗದಲ್ಲಿ ಧ್ರುವ ವಿ ಬಿ 11,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಭಾರತೀಯ ಸಾಂಸ್ಕೃತಿಕ ಸಂಬAಧಗಳ ಪರಿಷತ್ (ಐಸಿಸಿಆರ್) ಹಾಗೂ ಕರ್ನಾಟಕ ಸರ್ಕಾರದ ನಡುವೆ ಸಂಸ್ಕೃತಿ, ಕಲೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದ್ದು, ಸಂಸ್ಥೆಯ ವತಿಯಿಂದ ಕಲಾತಂಡಗಳು ಹಾಗೂ ಕಲಾವಿದರನ್ನು ಎಂಪಾನೆಲ್ ಮಾಡುವ ಜೊತೆಗೆ ಅವರ ಪ್ರತಿಭೆಯನ್ನು ಹೆಚ್ಚು ಪ್ರಚರಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಸಾಂಸ್ಕೃತಿಕ ಕಲಾತಂಡಗಳು, ಅಂತರರಾಷ್ಟಿçÃಯ ಮಟ್ಟದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಉತ್ಸವ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಕಲಾವಿದರು ಹಾಗೂ ಕಲಾತಂಡಗಳು ಜೂನ್ 12 ರ ಒಳಗಾಗಿ ವೆಬ್‌ಸೈಟ್ www.kannadasiri.karnataka.gov.in ಅರ್ಜಿಯನ್ನು ಪಡೆದು, ಅವುಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಆಯಾ ಜಿಲ್ಲಾ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪ್ರಸ್ತುತ ತಾಪಮಾನಕ್ಕೆ ಇಡೀ ಮನುಕುಲ ಕಂಗೆಟ್ಟು ಕೂರುವಂತ್ತಾಗಿದೆ ಇದಕ್ಕೆ ಕಾರಣಿಕರ್ತರು ನಾವುಗಳೆ ಏಕೆಂದರೆ ಕಾಡು ಕಡಿದು ನಾಡು ಮಾಡುವ ತವಕದಲ್ಲಿ ಹಸಿರನ್ನೆ ಮರೆತುಬಿಟ್ಟದ್ದೇವೆ. ಈ ದಿಸೆಯಲ್ಲಿ ಪ್ರತಿ ಭಾಗದಲ್ಲೂ ಹಸಿರು ಅಭಿಯಾನಗಳು ರೂಪುಗೊಳ್ಳಬೇಕು ತನ್ಮೂಲಕ ವಾತಾವರಣ ವೈಪರೀತ್ಯಗಳನ್ನು ತಡೆಯುವ ಕಾರ್ಯ ಮಾಡಬೇಕಿದೆ ಎಂದು ಸಾಮಾಜಿಕ ಚಿಂತಕ ಋಷಿರಾಜ್ ಸಾಸ್ತಾನ ನುಡಿದರು. ಅವರು ಪರಿಸರಪ್ರೇಮಿ ಕೊರವಡಿ ಶ್ವೇತ ಶ್ರೀನಿಧಿ ಉಪಾಧ್ಯಾಯರ ಮನೆಯಂಗಳದಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪೇತ್ರಿ ಅನ್ನಪೂರ್ಣ ನರ್ಸರಿ,ಗೀತಾನಂದ ಫೌಂಡೇಶನ್ ಮಣೂರು,ಸುವರ್ಣ ಎಂಟರ್ಪ್ರೈಸಸ್ ಸಹಯೋಗದೊಂದಿಗೆ ಹಸಿರು ಹೆಜ್ಜೆ ಹಸಿರು ಉಸಿರಿನ ಹೆಜ್ಜೆಯ ಪಥ, ಪಂಚವರ್ಣದ ಪ್ರಕೃತಿ ರಥ ಶೀರ್ಷಿಕೆಯಡಿ ೩೦೪ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿ ಪಂಚವರ್ಣದ ಪ್ರಕೃತಿ ಆರಾಧನೆ ಅತ್ಯಂತ ಮುಕ್ತ ಕಂಠದಿಂದ ಶ್ಲಾಘಿಸಿದರು. ಪರಿಸರ ಪ್ರೇಮಿ ಉಪಾಧ್ಯಾ ಮನೆತನಕ್ಕೆ ಸರ್ಮಪಣೆ:ಪಂಚವರ್ಣದ ಹಸಿರು ಹೆಜ್ಜೆ ಮೂರು ತಿಂಗಳುಗಳ ಕಾಲ  ಕುಂದಾಪುರ ಹಾಗೂ ಬ್ರಹ್ಮಾವರ…

Read More