ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 97ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ತಿಮ್ಮಪ್ಪ ಹೆಗಡೆ, ಡಾ. ಕಾಶೀನಾಥ್ ಪೈ ಗಂಗೊಳ್ಳಿ, ಗಿರೀಶ್ ನಾಗೇಶ್ ಪ್ರಭು, ಪ್ರಕಾಶ್ ಪ್ರಭು, ಉದಯ ಭಂಢಾರ್‌ಕಾರ್, ವೆಂಕಟರಮಣ ಬಿಡುವಾಳ್ ಮತ್ತು ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಉಪಸ್ಥಿತರಿದ್ದರು. ಶ್ರೀ ವೀರ ವೆಂಕಟೇಶ ಭಜನಾ ಮಂಡಳಿ, ರಥಬೀದಿ, ಮಂಗಳೂರು ಇದರ ಹಿರಿಯ ಕಲಾವಿದ ತಿಮ್ಮಪ್ಪ ಹೆಗಡೆ ಅವರನ್ನು ತಂಡದ ಪರವಾಗಿ ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಶ್ರೀ ವೀರ ವೆಂಕಟೇಶ ಭಜನಾ ಮಂಡಳಿ, ರಥಬೀದಿ, ಮಂಗಳೂರು ಇದರ ಸದಸ್ಯರು ನಡೆಸಿಕೊಟ್ಟ ಭಜನಾ ಕಾರ್ಯಕ್ರಮ ನೆರೆದ ಎಲ್ಲಾ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು. ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ಅವರು ಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಯಕ್ಷಗಾನ ಹವ್ಯಾಸಿ ಕಲಾತಂಡದ ಮೂಲಕ ಹೊಸ ಕಲಾವಿದರ ಸೃಷ್ಠಿ ಸಾಧ್ಯ, ಯಕ್ಷಗಾನ ನಮಗೆ ಜ್ಞಾನ ವೃದ್ಧಿ ಜೊತೆಗೆ ಬದುಕಿಗೆ ಬೆಳಕು ಚೆಲ್ಲುವ ನೀತಿಗಳನ್ನು ಸಾರುತ್ತದೆ. ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಅವರು ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಯಕ್ಷಸುಮನಸ ಹವ್ಯಾಸಿ ಕಲಾರಂಗ ರಿ. ಕೋಟ ಇವರ ಸಹಯೋಗದಲ್ಲಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಪ್ರಸಾಧನ ಪ್ರಮುಖರು ದಿ. ಬಾಲಕೃಷ್ಣ ನಾಯಕ್ ಹಂದಾಡಿ, ಯಕ್ಷಗಾನ ಭಾಗವತರು ದಿ. ಸುಬ್ರಹ್ಮಣ್ಯ ಧಾರೇಶ್ವರ್, ವೈದ್ಯರು ಹಾಗೂ ಗಾಯಕ ದಿ. ಡಾ. ಸತೀಶ್ ಪೂಜಾರಿ ಅವರಿಗೆ ಸುಮನಸ ನಮನ ಸಲ್ಲಿಸಲಾಯಿತು. ವೇದಿಕೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಇಲ್ಲಿನ ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ಅ.17-18ರಂದು ನಡೆಯಲಿರುವ ಕುಂದಾಪ್ರ ಕನ್ನಡ ಹಬ್ಬದ ಪೂರ್ವಭಾವಿ ಸಭೆ ಕರಾವಳಿ ಸಿರಿ ಕ್ಲಬ್ ಬೆಂಗಳೂರು ನೇತೃತ್ವದಲ್ಲಿ ಶೇಫ್ಟಾಕ್ ಸಂಸ್ಥೆಯ ನಾರಾಯಣಗುರು ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮ ದಿಬ್ಬಣ ತಯಾರಿ ಬಗ್ಗೆ ಚರ್ಚಿಸಿ ಸಲಹೆಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಇತ್ತಿಚಿಗೆ ನಿಧನರಾದ ಕರಾವಳಿಯ ಡಾ|ಸತೀಶ್ ಪೂಜಾರಿ, ಅಶ್ವಿನಿ ಶೆಟ್ಟಿ ಹಾಗೂ ರಮಾನಂದ ಶೆಟ್ಟಿ ಅವರಿಗೆ ನಮನ ಸಲ್ಲಿಸಲಾಯಿತು. ಡಾಕ್ಟರೆಟ್ ಪಡೆದ ದೀಪಕ್ ಶೆಟ್ಟಿ ಬಾರ್ಕೂರು ಅವರನ್ನ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶೇಫ್ಟಾಕ್ ಎಂಡಿ ಗೋವಿಂದ್ ಬಾಬು ಪೂಜಾರಿ, ಅಜಿತ್ ಶೆಟ್ಟಿ, ನರಸಿಂಹ ಬೀಜಾಡಿ ಮೊದಲಾದವರು ಇದ್ದರು. ಕರಾವಳಿ ಸಿರಿ ಕ್ಲಬ್ನ ಚೇತನ್, ಸುಮಂತ್, ರಕ್ಷಿತ್ ಶೆಟ್ಟಿ, ಆರ್ಯ ಕೃಷ್ಣ, ವಸಂತ್ ಸಂಗಮ್, ಗುರುರಾಜ್ ಸಂಗಮ್, ರಾಜೇಶ್ ಹಳಗೇರಿ, ರಂಜಿತ್ ಗಾಣಿಗ, ನಿತಿನ್ ಬಿಲ್ಲವ, ರಾಜೇಶ್ ಚೊಮ್ಮಿ, ಅಜಿತ್ ಹಾಗೂ ಕರಾವಳಿ ಸಿರಿಯ ತಂಡದ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಂಡಾರ್‌ಕರ್ಸ್ ಕಾಲೇಜು ರೇಡಿಯೋ ಕುಂದಾಪ್ರ ೮೯.೬ ಎಫ್. ಎಂ. ಹಾಗೂ ’ಕುಂದಪ್ರಭ’ಸಂಸ್ಥೆ ಆಶ್ರಯದಲ್ಲಿ ರೇಡಿಯೋ ಕುಂದಾಪ್ರ ಸಮುದಾಯ ಬಾನುಲಿ ಕೇಂದ್ರದಲ್ಲಿ ಏರ್ಪಡಿಸಿದ ಕುಂದಾಪ್ರ ಕನ್ನಡ ಹಾಡುಗಾರಿಕೆ – ಕವನ ವಾಚನ ಸ್ಪರ್ಧೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸಂಭ್ರಮ ಪಟ್ಟರು. ಹೆಣೆ ನೀ ಮಿಡ್ಕುದ್ಯಾಕೆ? ಅಲ್ ಹಾಂಗಾಯ್ತಂಬ್ರ, ಮಳಿಗಾಲ ಬಂತ್ಕಾಣಿ, ನಮ್ ಭಾಷಿ ನಮ್ಗ್ ಬೇಕ್, ಕೇಳ್ಕಣಿ, ತಿಳ್ಕಣಿ, ದಮ್ಮಯ್ಯ ಹೊಡಿಬ್ಯಾಡ, ಹುಟ್ದಾರ್ಬಿ ಕಂಡದ್ದೆ ಗೋಳ್, ಹೊಯ್ ಏಗಳಿಕ್ ಬಂದದ್ದ್?, ಹೇಳುಕೆ ನಮ್ಗೆ ನಾಚ್ಕಿ ಆತ್ತಲೆ?, ಚಂದ್ ಗೋಂಪಿ ಊರ್ ಕುಂದಾಪ್ರ, ನೀ ಎಂತಾ ಚಂದು, ಹೊಸ್ತಿನ್ ಅಡ್ಗಿ ಉಂಬೂಕ್ ಚಂದ, ಊರೆಲ್ಲಾ ಅಡಿ ಮೇಲಾಯ್ತಂಬ್ರ, ಸ್ವರಚಿತ ಕವನಗಳು, ಹಾಡುಗಾರಿಕೆ, ವಾಚನ, ಮೆಚ್ಚುಗೆ ಪಡೆದವು. ಹಲವು ವಿದ್ಯಾರ್ಥಿಗಳು ರವಿ ಬಸ್ರೂರು ಅವರ ರಚನೆಯ ಹಾಡುಗಳನ್ನು ಹಾಡಿದರು. ಇನ್ನು ಕೆಲವರು ಡಾ| ಸತೀಶ ಪೂಜಾರಿ ಅವರ “ಎಂತಾ ಚಂದ ನಮ್ಮ್ ಭಾಷಿ” ಹಾಡುಗಳಿಂದ ಅವರನ್ನು ಸ್ಮರಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೀರ್ಘಕಾಲ ಆರೋಗ್ಯವಂತರಾಗಿರಬೇಕೆಂದರೆ ನಮ್ಮ ಬದುಕಿಗೆ ವರ್ಷಗಳನ್ನು ಸೇರಿಸುತ್ತ ಹೋಗುವ ಬದಲು ನಾವು ಬದುಕುವ ವರ್ಷಗಳಿಗೆ ಜೀವ ತುಂಬುತ್ತ ಹೋಗಬೇಕು. ಅದರೊಂದಿಗೆ ನಮ್ಮ ಹದಿಹರೆಯ ಮತ್ತು ಯೌವನವನ್ನು ವಿಸ್ತರಿಸಿಕೊಳ್ಳುತ್ತ ಸಾಗಿ ಮುದಿತನಕ್ಕೆ ವಶವಾಗುವುದನ್ನು ಮುಂದೂಡಬಹುದು ಎಂದು ಉಡುಪಿಯ ಆದರ್ಶ ಆಸ್ಪತ್ರೆಯ ತಜ್ಞವೈದ್ಯ ಡಾ. ಕೆ. ಸುದೀಪ್ ಶೆಟ್ಟಿ ಹೇಳಿದರು. ಮರವಂತೆಯ ಸೇವಾ, ಸಾಂಸ್ಕೃತಿಕ ವೇದಿಕೆ ಸಾಧನಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಇಲ್ಲಿನ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ನಡೆದ ವಯೋವೃದ್ಧರನ್ನು ಕಾಡುವ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು ಕುರಿತು ನಡೆದ ಮಾರ್ಗದರ್ಶನ ಶಿಬಿರದಲ್ಲಿ ಅವರು ಮಾಹಿತಿ, ಮಾರ್ಗದರ್ಶನ ನೀಡಿದರು. ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಜನರನ್ನು ಬಾಧಿಸುವ ಹಲವು ಮನೋದೈಹಿಕ ಸಮಸ್ಯೆಗಳನ್ನು ದೃಕ್ ಮಾಧ್ಯಮ ಬಳಸಿ ವಿವರಿಸಿದ ಅವರು, ಅವುಗಳು ಸನಿಹಕ್ಕೆ ಸುಳಿಯದಂತೆ ನೋಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳನ್ನು ವಿಸ್ತೃತವಾಗಿ ತಿಳಿಸಿಕೊಟ್ಟರು. ವೃದ್ಧಾಪ್ಯದಲ್ಲಿಯೂ ಚಟುವಟಿಕೆಯಿಂದ ಇರಬೇಕಾದ ಅಗತ್ಯವನ್ನು, ರೂಢಿಸಿಕೊಳ್ಳಬೇಕಾದ ಆರೋಗ್ಯಕರ ಜೀವನಶೈಲಿಯನ್ನು ಮನದಟ್ಟು ಮಾಡಿದರು. ಪ್ರಾಥಮಿಕ ಆರೋಗ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿಯ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ರಾಜೀವ್ ಕೊಟ್ಯಾನ್ ಅವರ ಕೆಸರು ಗದ್ದೆಯಲ್ಲಿ ಭತ್ತದ ಸಸಿಯನ್ನು ನಾಟಿಮಾಡಿ ಸಂಭ್ರಮಿಸಿದರು. ಇವರೊಂದಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವಸಂತ ಕುಮಾರ್ ಹಾಗೂ ದೀಪಶ್ರೀಯವರು ಸಹಕರಿಸದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಶಿವಮೊಗ್ಗ – ಕೊಲ್ಲೂರು ಮಾರ್ಗದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ಸೋಮವಾರ ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ 16 ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರಿಗೆ ಗಾಯಗಳಾದ ಮಾಹಿತಿ ದೊರೆತಿದೆ. ಶಿವಮೊಗ್ಗದಿಂದ ಕೊಲ್ಲೂರಿಗೆ ಬರುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದ್ದು ಬಸ್ಸಿನ ಮುಂಭಾಗ ಜಖಂಗೊಂಡಿದೆ. ಬಸ್ಸಿನಲ್ಲಿದ್ದ ಕೊಲ್ಲೂರು ಪಿಯು ಕಾಲೇಜಿನ 10 ವಿದ್ಯಾರ್ಥಿಗಳು ಹಾಗೂ ಹೈಸ್ಕೂಲಿನ 6 ಮಂದಿ ವಿದ್ಯಾರ್ಥಿಗಳು ಸಹಿತ ಪ್ರಯಾಣಿಕರಿಗೆ ಗಾಯಗಳಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ 16 ವಿದ್ಯಾರ್ಥಿಗಳ ಪೈಕಿ 3 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಹಿಂದಿರುಗಿದ್ದಾರೆ. ವಿದ್ಯಾರ್ಥಿಗಳು ರಜೆ ಮುಗಿಸಿ ಸೋಮವಾರ ಮತ್ತೆ ಬಸ್ಸಿನಲ್ಲಿ ಕೊಲ್ಲೂರಿನ ಶಾಲೆಗೆ ವಾಪಾಸ್ಸಾಗುತ್ತಿದ್ದರು. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ಕೊಲ್ಲೂರು ಠಾಣೆಯ ಪಿಸೈಗಳಾದ ವಿನಯ್ ಕೊರ್ಲಹಳ್ಳಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕು ಮಣಿಪಾಲದಲ್ಲಿರುವ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಹಾಗೂ ಬೌದ್ಧ ವರ್ಗದ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಪ್ರವೇಶಾತಿಗೆ ನವೀಕರಣ ವಿದ್ಯಾರ್ಥಿಗಳ ಸೀಟು ಹಂಚಿಕೆಯಾಗಿ ಉಳಿಕೆ ಸೀಟುಗಳಿಗೆ ಸ್ಟೇಟ್ ಹಾಸ್ಟೆಲ್ ಪೋರ್ಟಲ್ ತಂತ್ರಾಂಶದ ಮೂಲಕ ಪಿ.ಯು.ಸಿ ಮತ್ತು ಪಿ.ಯು.ಸಿ ಸಮನಾಂತರ ಕೋರ್ಸಿನ ವಿದ್ಯಾರ್ಥಿಗಳಿಂದ ವೆಬ್‌ಸೈಟ್ https://shp.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಕಛೇರಿ, ಮಣಿಪಾಲ, ಉಡುಪಿ ದೂ.ಸಂ: 0820-2573596, ಸಹಾಯವಾಣಿ ಸಂಖ್ಯೆ: 8277799990 ಅಥವಾ ಉಡುಪಿ ದೂ.ಸಂಖ್ಯೆ: 0820-2574596, ಕಾರ್ಕಳ ದೂ.ಸಂಖ್ಯೆ: 08258-231101 ಹಾಗೂ ಕುಂದಾಪುರ ದೂ.ಸಂಖ್ಯೆ: 08254-230370 ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ಮಳೆಯಿಂದ ಆಗಿರುವ ನಷ್ಟದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಸಾಕಷ್ಟು ಮನೆ, ಕೃಷಿ ಭೂಮಿಗಳಿಗೆ ಹಾನಿಯಾಗಿದ್ದು ಪರಿಹಾರಕ್ಕೆ ಸೂಕ್ತಕ್ರಮವಹಿಸಲಾಗುವುದು. ರಸ್ತೆಗಳು ದುರಸ್ತಿಯಾಗಬೇಕಿದ್ದು, ಅದಕ್ಕಾಗಿ ಕ್ರಮವಹಿಸಲಾಗುವುದು. ಸೋಮೇಶ್ವರ ಗುಡ್ಡ ಜರಿತ ಸೇರಿದಂತೆ ಮಳೆಹಾನಿಯ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅಗತ್ಯವಿರುವಲ್ಲಿ ತಕ್ಷಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಸಂತೃಸ್ಥರಿಗೂ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು. ಈ ವೇಳೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ಎಸ್. ಆರ್. ರಶ್ಮಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
