ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 97ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ತಿಮ್ಮಪ್ಪ ಹೆಗಡೆ, ಡಾ. ಕಾಶೀನಾಥ್ ಪೈ ಗಂಗೊಳ್ಳಿ, ಗಿರೀಶ್ ನಾಗೇಶ್ ಪ್ರಭು, ಪ್ರಕಾಶ್ ಪ್ರಭು, ಉದಯ ಭಂಢಾರ್‌ಕಾರ್, ವೆಂಕಟರಮಣ ಬಿಡುವಾಳ್ ಮತ್ತು ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಉಪಸ್ಥಿತರಿದ್ದರು.
ಶ್ರೀ ವೀರ ವೆಂಕಟೇಶ ಭಜನಾ ಮಂಡಳಿ, ರಥಬೀದಿ, ಮಂಗಳೂರು ಇದರ ಹಿರಿಯ ಕಲಾವಿದ ತಿಮ್ಮಪ್ಪ ಹೆಗಡೆ ಅವರನ್ನು ತಂಡದ ಪರವಾಗಿ ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಶ್ರೀ ವೀರ ವೆಂಕಟೇಶ ಭಜನಾ ಮಂಡಳಿ, ರಥಬೀದಿ, ಮಂಗಳೂರು ಇದರ ಸದಸ್ಯರು ನಡೆಸಿಕೊಟ್ಟ ಭಜನಾ ಕಾರ್ಯಕ್ರಮ ನೆರೆದ ಎಲ್ಲಾ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು.
ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ಅವರು ಕಾರ್ಯಕ್ರಮ ನಿರೂಪಿಸಿದರು.