Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಶಾಲಾ ಸಂಸತ್ ಚುನಾವಣೆ ನಡೆಯಿತು. ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆಗೆ ಇಬ್ಬರು ಮತ್ತು ಉಪನಾಯಕನ ಆಯ್ಕೆಗೆ ಇಬ್ಬರು ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದರೆ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆಗೆ ಏಳು ವಿದ್ಯಾರ್ಥಿಗಳು ಮತ್ತು ಉಪನಾಯಕನ ಆಯ್ಕೆಗೆ ಒಂಬತ್ತು ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದರು. ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಮತ ಚಲಾಯಿಸಿದರು. ಮತದಾನ ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಸಲಾಯಿತು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕನಾಗಿ ೧೦ನೇ ತರಗತಿಯ ರಿತೇಶ ಮೊಗವೀರ ಮತ್ತು ಉಪನಾಯಕನಾಗಿ ಜೊಯಲ್ ಫೆರ್ನಾಂಡಿಸ್ ಆಯ್ಕೆಯಾದರು. ಹಿರಿಯ ಪ್ರಾಥಮಿಕ ವಿಭಾಗದಿಂದ ಅನನ್ಯ ವಿದ್ಯಾರ್ಥಿ ನಾಯಕಿಯಾಗಿ ಮತ್ತು ಅಹೀಶ್ ಎಂ.ಕೆ. ಉಪನಾಯಕನಾಗಿ ಆಯ್ಕೆಯಾದರು. ಪ್ರೌಢಶಾಲಾ ವಿಭಾಗದ ಪ್ರಭಾರ ಮುಖ್ಯಶಿಕ್ಷಕಿ ಸುಜಾತ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ನಾಯಕನೆಂದರೆ ಜವಾಬ್ದಾರಿ, ಅಹಂ ತೊರೆದು ವಿಧೇಯತೆಯಿಂದ ಕಾರ್ಯ ನಿರ್ವಹಿಸುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಇಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣ (ಕೃಷಿ ಸಿರಿ ವೇದಿಕೆ)ದಲ್ಲಿ ನಡೆದ ಪುತ್ತಿಗೆಯ ವಿವೇಕಾನಂದ ನಗರ  ಆಳ್ವಾಸ್ ಕೇಂದ್ರೀಯ ಶಾಲೆಯ ‘ಸ್ವಾಗತ ದಿನ ಮತ್ತು ಇನ್ವೆಸ್ಟಿಚರ್ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬನಲ್ಲೂ ತಾನು ನಾಯಕನಾಗಬೇಕೆಂಬ ಹಂಬಲ ಇರಬೇಕು. ನಾಯಕನಾಗಲು ನಾನು ಅರ್ಹನಲ್ಲ ಎಂಬ ಹಿಂಜರಿಕೆ ಇರಬಾರದು. ಪ್ರತಿ ವಿದ್ಯಾರ್ಥಿಗಳು ಇಲ್ಲಿ ನಾಯಕರೇ. ನಾಯಕನಾದವನು ಅಹಂ ತೊರೆದು ತನಗಿರುವ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹಿತವಚನ ಹೇಳಿದರು. ಶಾಲೆಯು ನಮ್ಮ ಪ್ರಗತಿಗೆ ಮಹತ್ವದ ಸಮಯವನ್ನು ಒದಗಿಸುತ್ತದೆ. ಸರಿ ಹಾಗೂ ತಪ್ಪು ಈ ಎರಡೂ ವಿಷಯಗಳಲ್ಲೂ ವಿದ್ಯೆಯನ್ನು ಪಡೆಯುತ್ತೇವೆ. ಆದರೆ ತಪ್ಪೆಂದು ತಿಳಿದ ತಪ್ಪುದಾರಿಗೆ ಸಾಗುವುದು ಸೂಕ್ತವಲ್ಲ ಎಂದರು. ಹಲವಾರು ಕಾರ್ಯಕ್ರಮಗಳು ವಿಭಿನ್ನ ವಿಚಾರಗಳನ್ನು ತಿಳಿಸುತ್ತದೆ. ಈ ಮೂಲಕ ಕಣ್ಣ ಮುಂದೆ ನಡೆಯುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ.22: ಕಳ್ಳತನ ಮಾಡುತ್ತಿರುವಾಗಲೇ ಸಿಸಿ ಕ್ಯಾಮೆರಾ ಲೈವ್ ಮಾನಿಟರಿಂಗ್ ಆಧರಿಸಿ ಕಳ್ಳನೋರ್ವ ಸೆರೆಯಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಳ್ಳಿಕಟ್ಟೆ ಎಂಬಲ್ಲಿ ನಡೆದಿದೆ. ಹೊಸಾಡು ಶಾಖೆಯ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಕಿಟಿಕಿಯ ಸರಳು ಮುರಿದು ಕಳ್ಳತನ ನಡೆದಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ 10 ನಿಮಿಷದಲ್ಲೇ ಕಳ್ಳನ ಹೆಡೆಮುರಿ ಕಟ್ಟಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 1.47 ಕ್ಕೆ ಮುಳ್ಳಿಕಟ್ಟೆಯಲ್ಲಿರುವ ಸಹಕಾರಿ ಸಂಘ ಕಿಟಕಿಯ ಗ್ರಿಲ್ ಒಡೆದು ಕಳ್ಳ ಒಳನುಗ್ಗಿದ್ದಾನೆ. ಕುಂದಾಪುರ ಅಂಕದಕಟ್ಟೆಯಲ್ಲಿರುವ ಸೈನ್ ಇನ್ ಸೆಕ್ಯುರಿಟಿಯ ಸಿಸಿಟಿವಿ ಲೈವ್ ಮಾನಿಟರಿಂಗ್‌ನಲ್ಲಿ ಘಟನೆ ಬೆಳಕಿಗೆ ಬಂದು ಬೀಟ್ ಪೊಲೀಸರಿಗೆ ಮಾಹಿತಿ ನೀಡಲಾಯಿತು. 10 ನಿಮಿಷದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಕಳ್ಳನನ್ನು ಹಿಡಿದರು. ಕಳ್ಳ ಕೇರಳದಿಂದ ಬಂದವನು ಎನ್ನಲಾಗಿದೆ. ಪೊಲೀಸ್ ಇಲಾಖೆಯಿಂದ ಹೆಚ್ಚಿನ ಮಾಹಿತಿ ಕುರಿತು ತನಿಖೆ ನಡೆಯುತ್ತಿದೆ. ಗಂಗೊಳ್ಳಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಸೈನ್ ಇನ್ ಸೆಕ್ಯೂರಿಟಿಯ ಲೈವ್ ಮಾನಿಟರಿಂಗ್ ಸಿಬ್ಬಂದಿಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ಅಡಿ ಜಿಲ್ಲೆಯಲ್ಲಿ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿ ಇರುವ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ನಿರುದ್ಯೋಗಿ ಯುವಕ ಹಾಗೂ ಯುವತಿಯರು ಗರಿಷ್ಠ ಯೋಜನಾ ವೆಚ್ಚ ರೂ. 50 ಲಕ್ಷ ರೂ. ಮೊತ್ತದ ಹೊಸ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಹಾಗೂ ಗರಿಷ್ಠ ಯೋಜನಾ ವೆಚ್ಚ ರೂ. 20 ಲಕ್ಷ ರೂ. ಮೊತ್ತದ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸಲು ಅವಕಾಶವಿದ್ದು, ಯೋಜನಾ ವೆಚ್ಚದ ಶೇ.90 ರಿಂದ 95 ರಷ್ಟು ಸಾಲ ಸೌಲಭ್ಯಕ್ಕಾಗಿ ಬ್ಯಾಂಕುಗಳಿಗೆ ಶಿಫಾರಸ್ಸು ಮಾಡಲಾಗುವುದು. ಯೋಜನಾ ವೆಚ್ಚದ ಮೇಲೆ ಶೇ.15 ರಿಂದ 35 ರವರೆಗೆ ಸಹಾಯಧನ ನೀಡಲಾಗುವುದು. ಅರ್ಜಿದಾರರಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಉತ್ಪಾದನಾ ಘಟಕವಾಗಿದ್ದಲ್ಲಿ 10 ಲಕ್ಷ ರೂ. ಮತ್ತು ಸೇವಾ ಘಟಕವಾಗಿದ್ದಲ್ಲಿ 5 ಲಕ್ಷ ರೂ. ಗಳಿಗಿಂತ ಮೇಲ್ಪಟ್ಟ ಯೋಜನಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.  ಉಡುಪಿ: ಕೇಂದ್ರ ಸರ್ಕಾರವು ಪಿ.ಎಂ ವಿಶ್ವಕರ್ಮ ಯೋಜನೆಯಡಿ ಬಡಗಿತನ / ಮರಗೆಲಸ, ದೋಣಿ ತಯಾರಿಕೆ, ಶಸ್ತ್ರಾಸ್ತ್ರ ತಯಾರಿಕೆ, ಕಮ್ಮಾರಿಕೆ, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಬೀಗ ತಯಾರಕರು, ಆಭರಣ ತಯಾರಿಕೆ, ಕುಂಬಾರಿಕೆ, ಶಿಲ್ಪಿ, ಪಾದರಕ್ಷೆ ತಯಾರಿಕೆ /ಚರ್ಮಗಾರಿಕೆ, ಗಾರೆ ಕೆಲಸದವರು / ಕಲ್ಲು ಕುಟ್ಟಿಗ, ಬುಟ್ಟಿ / ಚಾಪೆ / ಕಸಪೊರಕೆ ತಯಾರಿಕರು / ತೆಂಗಿನನಾರಿನ ಕೆಲಸಗಾರರು, ಗೊಂಬೆ  / ಆಟಿಕೆ ತಯಾರಕರು, ಕ್ಷೌರಿಕ, ಹೂ-ಮಾಲೆ ತಯಾರಕರು, ಅಗಸರು, ಟೈಲರ್, ಮೀನಿನ ಬಲೆಗಳನ್ನು ನೇಯ್ಗೆ ಮಾಡುವವರು ಮುಂತಾದ ವೃತ್ತಿಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದು, ಜಿಲ್ಲೆಯಲ್ಲಿ ಸುಮಾರು 13,500 ವಿವಿಧ ಕುಶಲಕರ್ಮಿಗಳು ಈ ಯೋಜನೆಯ ಸೌಲಭ್ಯ ಪಡೆಯಲು ನೋಂದಣಿ ಮಾಡಿಕೊಂಡಿದ್ದು, ಈವರೆಗೂ ನೋಂದಣಿ ಮಾಡದೇ ಇರುವ ಕುಶಲಕರ್ಮಿಗಳೂ ಸಹಾ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೇಲ್ಕಂಡ ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿರುವ, 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿರುವವರು ಕಳೆದ 5 ವರ್ಷಗಳಲ್ಲಿ ಸ್ವಯಂ ಉದ್ಯೋಗ /…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಸ್ರೂರು ಓಂ ಶ್ರೀ ಯೋಗ ಕೇಂದ್ರದಿಂದ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ .ರಾಧಾಕೃಷ್ಣ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಿತ್ಯದ ಜೀವನದಲ್ಲಿ ಯೋಗದ ಮಹತ್ವದ ಬಗ್ಗೆ ಮಾತನಾಡಿದರು. 2023 -24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 90 ಪ್ರತಿಶತ ಹಾಗೂ ಅಧಿಕ ಅಂಕವನ್ನು ಗಳಿಸಿದ ಬಸ್ರೂರು ಗ್ರಾಮದ ಸಾಧಕ ವಿದ್ಯಾರ್ಥಿ ಗಳಾದ ವಿಭಾ, ಸ್ಪಂದನ ಉಳ್ಳೂರು, ಸಾನಿಕಾ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಉದ್ಯಮಿ ಅನಿಲ್ ಕುಮಾರ್ ಶೆಟ್ಟಿ ಹಾಗೂ ನಿರುಪಮ ಹೆಗ್ಡೆ ಉಪಸ್ಥಿತರಿದ್ದರು. ಓಂ ಶ್ರೀ ಯೋಗ ಕೇಂದ್ರದ ಅಧ್ಯಕ್ಷರಾದ ಪ್ರಭಾಕರ್ ಐತಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಕೆರೆಕಟ್ಟೆ ವಂದಿಸಿದರು. ಶಿಕ್ಷಕಿ ಸಾರಿಕಾ ಅಶೋಕ್ ನಿರೂಪಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಾತಿಗಾಗಿ ಮೆರಿಟ್ ಹಾಗೂ ರೋಸ್ಟರ್‌ಗೆ ಅನುಗುಣವಾಗಿ ಆಫ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜೂನ್ 29 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.dtek.kar.nic.in ಅಥವಾ ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್, ಉಡುಪಿ ದೂ.ಸಂಖ್ಯೆ: 9008626222 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ ಜಂಟಿಯಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರದಲ್ಲಿ ಆಚರಿಸಲಾಯಿತು. ಶಾಲಾ ಯೋಗ ಶಿಕ್ಷಕಿ ಅನ್ವಿತಾ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿದರು. ಜನತಾ ಪದವಿಪೂರ್ವ ಕಾಲೇಜಿನ ಅಂತರರಾಷ್ಟ್ರೀಯ ಮಟ್ಟದ ಯೋಗ ಪ್ರತಿಭೆಗಳಾದ ಧನ್ವಿ ಮರವಂತೆ, ತನ್ವಿತಾ, ನಿರೀಕ್ಷಾ ಇವರಿಂದ ಹಾಗೂ ಶಾಲಾ ಆಯ್ದ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲಾ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ಜನತಾ ಸಮೂಹ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು, ಬೋಧಕ/ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಕುಂದಾಪುರ: ಸತತ ನಾಲ್ಕನೇ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಎರಡು ಲಕ್ಷಗಳ ಅಧಿಕ ಮತಗಳ ಅಂತರದಿಂದ ಚುನಾಯಿತನಾಗಲು ಪಕ್ಷದ ಎಲ್ಲಾ ಕಾರ್ಯಕರ್ತರ ತಳ ಹಂತದ ಪರಿಶ್ರಮ ಬೆಲೆ ಕಟ್ಟಲಾಗದು. ನನ್ನ ಮೇಲೆ ನೀವು ಇಟ್ಟಿರುವ ಅಚಲ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದಲ್ಲಿ ಮತ್ತಷ್ಟು ಹುಮ್ಮಸ್ಸಿನಿಂದ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಕಾರ್ಯನಿರ್ವಹಿಸುತ್ತೇನೆ ಜೊತೆಗೆ ನಿಮ್ಮ ಆಶೋತ್ತರಗಳನ್ನು ನೆರೆವೇರಿಸುವ ಸಂಕಲ್ಪ ತೊಡುತ್ತೇನೆ‌ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಬಿಜೆಪಿ ಬೈಂದೂರು ಮಂಡಲ ವತಿಯಿಂದ ಶುಕ್ರವಾರ ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಕೃತಜ್ಞತಾ – ಅಭಿನಂದನಾ ಸಮಾರಂಭ” ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನಕ್ಕೆ ತಂದಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಂತ್ಯೋದ್ಯಯ ಪರಿಕಲ್ಪನೆಯಡಿ ಜನರ ಜೀವನ ಮಟ್ಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್‌ನಲ್ಲಿ ಯೋಗ ಶಿಕ್ಷಣವನ್ನು 2024-25ನೇ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು ಅಂತರಾಷ್ಟ್ರೀಯ ಯೋಗದಿನಾಚರಣೆಯ ಕಾರ್ಯಕ್ರಮದಲ್ಲಿ ಅದರ ಉದ್ಘಾಟನೆ ನೆರವೇರಿಸಲಾಯಿತು. ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಸಂಯೋಜಕರಾದ ಉಮೇಶ ಶೆಟ್ಟಿ,ಅವಿನಾ,ದಿವ್ಯಾ ಪೂಜಾರಿ ಮತ್ತು ಕುಸುಮಾ ಶೆಟ್ಟಿ ಜಂಟಿಯಾಗಿ ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ನೀಡುವುದರ ಮೂಲಕ ಉದ್ಘಾಟಿಸಿದರು. ಎಲ್.ಕೆ.ಜಿ ಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಹೊಸ ಯೋಗ ಸಮವಸ್ತ್ರದೊಂದಿಗೆ ಸಂಭ್ರಮದಿಂದ ಯೋಗಾಸನದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಯೋಗ ಶಿಕ್ಷಕ ರತ್ನಕುಮಾರ್ ಯೋಗದ ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ ಯೋಗವನ್ನು ನಿತ್ಯಜೀವನದಲ್ಲಿ ಅಳವಡಿಕೊಳುವಂತೆ ಮಾಹಿತಿ ನೀಡಿದರು . ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಯೋಗಾಸನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಕಳೆಯನ್ನು ನೀಡಿದರು

Read More