ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಮಂಗಳೂರು, ಪ್ರವರ್ತಿತ ಮದರ್ ತೆರೇಸಾ ಪದವಿಪೂರ್ವ ಕಾಲೇಜು ಶಂಕರನಾರಾಯಣ, ಕುಂದಾಪುರ, ಇಲ್ಲಿನ ವಿದ್ಯಾರ್ಥಿಗಳು ಸೈಂಟ್ ಅಲೋಷಿಯಸ್ ಕಾಲೇಜ ಡೀಮಡ್ ಟು ಬಿ. ಯೂನಿವರ್ಸಿಟಿ ಮಂಗಳೂರು ಆ.31ರಂದು ನಡೆದ ಪದವಿಪೂರ್ವವಿದ್ಯಾರ್ಥಿಗಳ ಅಲೋಷಿಯನ್ ಫೆಸ್ಟ್ ವೈವಿಧ್ಯಮಯ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ರಾಜ್ಯದ ಹಲವು ಪದವಿಪೂರ್ವ ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅದರಲ್ಲಿ ಶಂಕರನಾರಾಯಣ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹತ್ತರವಾದ ಸಾಧನೆಯನ್ನು ಮಾಡಿರುತ್ತಾರೆ.
ಅಲ್ಲಿ ಹಮ್ಮಿಕೊಳ್ಳಲಾದ ವಿಭಿನ್ನ ಸ್ಪರ್ಧೆಗಳಾದ ಬಿಸಿನೆಸ್ ಮ್ಯಾನೇಜರ್ ಸ್ಪರ್ಧೆಯಲ್ಲಿ ನಿಶಾ ದ್ವಿತೀಯ, ಪಿಯುಸಿ ವಾಣಿಜ್ಯ ವಿಭಾಗ ಪ್ರಥಮ. ಐಟಿ ಮ್ಯಾನೇಜರ್ ಸ್ಪರ್ಧೆಯಲ್ಲಿ ಶ್ರೇಯಸ್ ಶೆಟ್ಟಿ ತೃತೀಯ , ಹಾಗೂ ಬಿಸಿನೆಸ್ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ, ವಾಣಿಜ್ಯ ವಿಭಾಗದ ಆದಿತ್ಯ.ಬಿ ಮತ್ತು ಆದಿತ್ಯ. ಡಿ ಪ್ರಥಮ.ಪ್ರಾಡಕ್ಟ್ ಲಾಂಚಿಂಗ್ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ದೃಶ್ಯ ಮತ್ತು ಅಭಿನಯ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ .
ಇದಲ್ಲದೆ ಗುಂಪು ಸ್ಪರ್ಧೆಗಳಾದ ಕಾರ್ಪೊರೇಟ್ ವಾಕ್ ನಲ್ಲಿ ಪ್ರಥಮ ಸ್ಥಾನ, ಮ್ಯಾಡ್ ಆಡ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಸಂಸ್ಥೆಯ ವಿದ್ಯಾರ್ಥಿಗಳ ಗುರುತರ ಪ್ರತಿಭೆಯನ್ನು ಗುರುತಿಸಿ ವಿಶೇಷ ಬಹುಮಾನವನ್ನು ನೀಡಲಾಯಿತು.
ಕುಂದಾಪುರದ ಹಳ್ಳಿಗಾಡಿನ ಕಾಲೇಜಿನ ವಿದ್ಯಾರ್ಥಿಗಳು ನಗರದ ಪ್ರತಿಷ್ಠಿತ ಕಾಲೇಜುಗಳೊಂದಿಗೆ ಪ್ರತಿಸ್ಪರ್ಧಿಯಾಗಿ ಭಾಗವಹಿಸಿ ಅತ್ಯುತ್ತಮ ಪೈಪೋಟಿಯೊಂದಿಗೆ ಸಾಧನೆಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತಾಧಿಕಾರಿಗಳು , ಪ್ರಾಂಶುಪಾಲರು ಹಾಗೂ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.