ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ ಹಾಗೂ ವಿದ್ಯಾರ್ಥಿ ಸಂಸತ್ ಉದ್ಘಾಟನೆಯನ್ನು ದೀಪ ಪ್ರಜ್ವಲಿಸುವ ಮೂಲಕ ನೆರವೆರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ರಾಜೇಶ್ ನಾಯಕ್ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರದ್ದೆ, ಶಿಸ್ತು, ಸತತ ಪ್ರಯತ್ನದೊಂದಿಗೆ ಭಾವಿ ರಾಷ್ಟ್ರದ ಭಾಗ್ಯೋದಯ ಶಿಲ್ಪಿಗಳಾಬೇಕು ಜೊತೆಗೆ ಜೀವನದಲ್ಲಿ ಸಂಸ್ಕಾರಗಳನ್ನು ಅಳವಡಿಸಿಕೊಂಡು ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಕೆ. ರಾಧಾ ಕೃಷ್ಣ ಶೆಣೈ ವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಹಿರಿಯ ರಸಾಯನ ಶಾಸ್ತ್ರ ಉಪನ್ಯಾಸಕರಾದ ರಮಾ ಕಾಂತ್ ರೇವಣಕರ್ ಉಪಸ್ಥಿತರಿದ್ದರು. ಸತೀಶ್ ಹೆಮ್ಮಾಡಿ ಅವರಿಂದ ಜಾದು ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಾದ ಅಮೂಲ್ಯ ಅತಿಥಿಗಳನ್ನು ಪರಿಚಯಿಸಿದರು, ವೈಷ್ಣವಿ ವಂದಿಸಿ, ಸಂಜನಾ ಸ್ವಾಗತಿಸಿ, ಸಿಂಚನಾ ಕಾರ್ಯಕ್ರಮವನ್ನು ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಎನ್.ಎಮ್.ಎಮ್.ಎಸ್ ಪರೀಕ್ಷೆ (National Means cum Merit Scholarship examination) ಬರೆದು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುವ ಹತ್ತನೇ ತರಗತಿ, ಪ್ರಥಮ – ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಕಳೆದ ವರ್ಷ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು ಎನ್.ಎಮ್.ಎಮ್.ಎಸ್ ಪರೀಕ್ಷೆಗೆ ಹಾಜರಾಗಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಎನ್.ಎಸ್.ಪಿ ಪೋರ್ಟಲ್ನಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಈಗಾಗಲೇ ಓಟಿಆರ್ ಸಂಖ್ಯೆ ಅಥವಾ ರೆಫರೆನ್ಸ್ ಸಂಖ್ಯೆ ಪಡೆದವರು ಫೇಸ್ ಅಥೇಂಟಿಕೇಶನ್ ಮಾಡಿಸಿ, ಆಗಸ್ಟ್ 31ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಓಟಿಆರ್ ಸಂಖ್ಯೆ ಅಥವಾ ರೆಫರೆನ್ಸ್ ಸಂಖ್ಯೆ ಪಡೆಯದ ವಿದ್ಯಾರ್ಥಿಗಳು ಮತ್ತು ಈಗ 9ನೇ ತರಗತಿಯಲ್ಲಿ ಕಲಿಯುತ್ತಿರುವ ಹಾಗೂ ವಿದ್ಯಾರ್ಥಿವೇತನಕ್ಕೆ ಆಯ್ಕೆ ಆಗಿರುವ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಮುಖ್ಯಸ್ಥರಿಂದ ಮಾಹಿತಿಯನ್ನು ಪಡೆದು ಓಟಿಆರ್ ಸಂಖ್ಯೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಎನ್.ಎಮ್.ಎಮ್.ಎಸ್ ನೋಡೆಲ್ ಅಧಿಕಾರಿ ಅಥವಾ ಜಿಲ್ಲಾ ನೋಡೆಲ್ ಅಧಿಕಾರಿ, ಡಯಟ್, ಉಡುಪಿ ಇಲ್ಲಿಯ ಉಪನ್ಯಾಸಕ ಚಂದ್ರನಾಯ್ಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಾರಾಹಿ ಯೋಜನೆಯ ಮಾನಿ ಹಾಗೂ ವರಾಹಿ ಪಿಕ್ ಅಪ್ ಆಣೆಕಟ್ಟುಗಳ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ವಾರಾಹಿ ಪಿಕ್ ಅಪ್ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ಯಾವುದೇ ಸಂದರ್ಭದಲ್ಲಿ ವಾರಾಹಿ ಪಿಕ್ ಅಪ್ ಅಣೆಕಟ್ಟಿನ ರೇಡಿಯಲ್ ಗೇಟ್ಸ್ ಮುಖಾಂತರ ನೀರು ಹೊರಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು ಎಚ್ಚರಿಕೆ ನೀಡಿದ್ದಾರೆ. ವಾರಾಹಿ ಪಿಕ್ ಅಪ್ ಅಣೆಕಟ್ಟಿನಲ್ಲಿ ಶೇಖರಣೆಯಾದ ನೀರನ್ನು ಬಳಸಿ ಭೂಗರ್ಭ ವಿದ್ಯುದಾಗಾರದಲ್ಲಿ ಕನಿಷ್ಠ 1000 ದಿಂದ ಗರಿಷ್ಠ 5000 ಕ್ಯೂಸೆಕ್ಸ್ ನಷ್ಟು ನೀರನ್ನು ವಿದ್ಯುತ್ ಉತ್ಪಾದಿಸಿ ನಂತರ ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ ನೀರಿನ ಒಳ ಹರಿವು ಮುಂದುವರೆದಲ್ಲಿ ಹಾಗೂ SLDC (State Load Dispatch Center) ವತಿಯಿಂದ ವಿದ್ಯುತ್ ಉತ್ಪಾದನೆಗೆ ಬೇಡಿಕೆ ಬಾರದಿದ್ದರೆ ನೀರನ ಮಟ್ಟ ಹೆಚ್ಚಾಗಲಿದೆ ಎಂದಿರುವ ಅವರು, ವರಾಹಿ ಪಿಕ್ ಅಪ್ ಆಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ವಿದ್ಯುತ್ ಉತ್ಪಾದನೆಯಿಂದ ಹೊರಬಿಡುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಯೋಗಾಭ್ಯಾಸ ಮಾಡುವುದರಿಂದ ನಮಗೆ ಆಗುವ ಪ್ರಯೋಜನವನ್ನು ಅರಿತುಕೊಂಡು, ಯೋಗವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿನಿತ್ಯ ಒಂದು ಗಂಟೆ ಯೋಗಾಸನ, ಪ್ರಾಣಾಯಾಮವನ್ನು ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದೈಹಿಕವಾಗಿ, ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಸದೃಢರಾಗಿರಲು ಯೋಗ ಸಹಕಾರಿಯಾಗುತ್ತದೆ ಎಂದು ಯೋಗ ತರಬೇತುದಾರರಾದ ಆಟಕೆರೆ ಬಾಬು ಪೈ ಕೋಟೇಶ್ವರ ಹೇಳಿದರು. ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಆಶ್ರಯದಲ್ಲಿ ಶ್ರೀ ಶಾರದೋತ್ಸವದ ಸುವರ್ಣ ಸಂಭ್ರಮ-2024ರ ಪ್ರಯುಕ್ತ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಹತ್ತು ದಿನಗಳ ಕಾಲ ಜರಗಿದ ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಿವೃತ್ತ ಯೋಧ ಟಿ. ದಿನಕರ ಶ್ಯಾನುಭಾಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಯೋಗ ತರಬೇತುದಾರರಾದ ಆಟಕೆರೆ ಬಾಬು ಪೈ ಮತ್ತು ರೂಪಾ ಬಾಬು ಪೈ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾದ ಸೌಪರ್ಣಿಕಾ ಬಸವ ಖಾರ್ವಿ, ಜಿ.ವೆಂಕಟೇಶ ಶೆಣೈ, ನರಸಿಂಹ ದೇವಾಡಿಗ ಓಣಿಮನೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2023-24ನೇ ಶೈಕ್ಷಣಿಕ ಸಾಲಿನಲ್ಲಿ 592 ಅಂಕ ಗಳಿಸಿ, ರಾಜ್ಯಕ್ಕೆ 7ನೇ ಸ್ಥಾನಿಯಾಗಿರುವ ಸಂಜನಾ.ಎನ್ ರವರಿಗೆ ಶಾಲಾ ಸಂಸ್ಥಾಪನಾ ದಿನದಂದು ನಡೆದ ಸಮಾರಂಭದಲ್ಲಿ ಸುಮಾ. ಯು ಪುತ್ರನ್ ಪ್ರೋತ್ಸಾಹಧನದ ಚೆಕ್ ಹಸ್ತಾಂತರಿಸಿದರು. ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಉಮೇಶ್ ಪುತ್ರನ್ ರವರು ಪ್ರತಿ ವರ್ಷ 25,000 ರೂಪಾಯಿಯ ಪ್ರೋತ್ಸಾಹ ಧನವನ್ನು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪಿಸಿಎಂಬಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ನೀಡುತ್ತಾ ಅದನ್ನು ವಿದ್ಯಾರ್ಥಿನಿಗೆ ಹಸ್ತಾಂತರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.18: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 19ರಂದು ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಐಟಿಐ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ ಮತ್ತು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.18: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 19ರಂದು ಬೈಂದೂರು ವಲಯದ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಬೈಂದೂರು ಬಿಇಓ ನಾಗೇಶ್ ನಾಯ್ಕ್ ಅವರು ರಜೆ ಘೋಷಿಸಿದ್ದಾರೆ. ರಜೆಯನ್ನು ಸರಿದೂಗಿಸಿಲು ಶನಿವಾರದಂದು ಪೂರ್ಣ ಅವಧಿಯ ತರಗತಿಗಳನ್ನು ನಡೆಸಲು ಅವರು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಿನಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಬಿಜೂರಿನ ಸಂದೇಶ್ ಜಿ. ದೇವಾಡಿಗ ಉತ್ತಿರ್ಣರಾಗಿರುತ್ತಾರೆ. ಗೋರೆ ಗಾಂವನ ಶಂಭು ಗುಪ್ತಾ ಅಂಡ್ ಕಂಪೆನಿಯಲ್ಲಿ ಆರ್ಟಿಕಲ್ ಶಿಪ್ ಪೂರೈಸಿರುತ್ತಾರೆ. ಅವರು ಮುಂಬೈನ ಜೋಗೇಶ್ವರಿ ಪೂರ್ವದಲ್ಲಿ ವಾಸಿಸುತ್ತಿರುವ ಮೂಲತ: ಅರೆಹೊಳೆ ಚಿತ್ತಾಡಿ ಉಳ್ಳೋಳಿ ಮನೆ ಗೋವಿಂದ ದೇವಾಡಿಗ ಹಾಗೂ ಗಿರಿಜಾರವರ ದಂಪತಿಯ ಪುತ್ರ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಳೆದ ನಾಲ್ಕೈದು ದಿನಗಳಿಂದ ಕರಾವಳಿಯಲ್ಲಿ ನಿರಂತರವಾಗಿ ಗಾಳಿ ಮಳೆಯಾಗುತ್ತಿದ್ದು, ಕೃಷಿ, ತೋಟ ಹಾಗೂ ಆಸ್ತಿಪಾಸ್ತಿಗಳು ಅಪಾರ ಹಾನಿಯಾಗುತ್ತಿದೆ. ಈ ನಡುವೆ ಬುಧವಾರ ರಾತ್ರಿಯ ಸುರಿದ ಗಾಳಿ ಸಹಿತ ಮಳೆಗೆ ತಾಲೂಕಿನ ಬಿಜೂರು ಗ್ರಾಮದ ಮನೆಯೊಂದರ ಮಾಡು, ಗೋಡೆ ನೆಲಸಮವಾಗಿದೆ. ಬಿಜೂರು ಗ್ರಾಮದ ಕಂಚಿಕಾನು ಉಪಾಧ್ಯಾಯರ ಮನೆ ದುರ್ಗಿ ಪೂಜಾರ್ತಿ ಅವರ ಮನೆ ಗಾಳಿಮಳೆಗೆ ಹಾನಿಯಾಗಿದೆ. ರಾತ್ರಿ ಮನೆಯಲ್ಲಿ ಮೂವರು ಮಲಗಿದ್ದ ವೇಳೆ ಮಾಡು ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಒಂದು ಪಾರ್ಶ್ವದ ಮಾಡು, ಗೋಡೆ ಹಾಗೂ ಅಟ್ಟಣಿಗೆಯ ಮಾಡು ಗಾಳಿಯ ರಭಸಕ್ಕೆ ಕುಸಿದು ಬಿದ್ದಿದೆ. ಮಳೆ ಪರಿಸ್ಥಿತಿ ಹೀಗೆ ಮುಂದುವರಿದರೆ ಶಿಥಿಲಗೊಂಡಿರುವ ಮನೆಯ ಸಂಪೂರ್ಣ ಮಾಡು ಕುಸಿದು ಬೀಳುವ ಸಾಧ್ಯತೆ ಇದೆ. ಘಟನೆಯಲ್ಲಿ 5 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ತಹಶಿಲ್ದಾರ್ ಪ್ರದೀಪ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಂದಾಪುರದಲ್ಲಿ ಮನೆ ಮೇಲೆ ಬಿದ್ದ ಮರ:ಕುಂದಾಪುರ ಖಾರ್ವಿಕೇರಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಚೈತ್ರ ಎಮ್. ಪೂಜಾರಿ ತೇರ್ಗಡೆ ಹೊಂದಿದ್ದಾರೆ. ಅವರು ಸಿದ್ದಾಪುರ ಗ್ರಾಮದ ಕೊಲ್ಕೆಬೈಲು ನಿವಾಸಿಯಾಗಿರುವ ಮಹಾಬಲ ಪೂಜಾರಿ ಮತ್ತು ಪ್ರೇಮರವರ ಪುತ್ರಿ.
