ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಡಾ. ಬಿ. ಆರ್. ಅಂಬೇಡ್ಕರ್ ಯುವಕ ಮಂಡಲ, ಅಮೃತಾ ಯುವತಿ ಮಂಡಲ, ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿ ಮತ್ತು ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 12ನೇ ವರ್ಷದ ಮುದ್ದು ಕೃಷ್ಣ ವೇಷ ಸ್ಪರ್ಧೆ ಮೇಲ್ ಗಂಗೊಳ್ಳಿಯ ಡಾ.ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ನ ನಿರ್ದೇಶಕಿ ಯಾಮಿನಿ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಮಾಜಿ ಅಧ್ಯಕ್ಷೆ ಸವಿತಾ ಯು. ದೇವಾಡಿಗ ಶುಭಾಶಂಸನೆಗೈದರು. ನಿವೃತ್ತ ಶಿಕ್ಷಕ ಪ್ರೇಮಾನಂದ ಕೆ. ಬಹುಮಾನ ವಿತರಿಸಿದರು. ಶಿಕ್ಷಕಿಯರಾದ ಆಶಾ ಮತ್ತು ಜ್ಯೋತಿ ಹಾಗೂ ಸವಿತಾ ಉಮಾನಾಥ ದೇವಾಡಿಗ ತೀರ್ಪುಗಾರರಾಗಿ ಸಹಕರಿಸಿದರು. ಯುವಕ ಮಂಡಲದ ಅಧ್ಯಕ್ಷ ನಾಗೇಶ ಸ್ವಾಗತಿಸಿದರು. ಯುವತಿ ಮಂಡಲದ ಕಾರ್ಯದರ್ಶಿ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ ಎಚ್.ಜಿ. ವಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಕೊಡಪಾಡಿಯ ಮಾರಿಕಾಂಬಾ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತ್ರಾಸಿಯ ಅಂಬೇಡ್ಕರ್ ಭವನದಲ್ಲಿ ಇತ್ತೀಚಿಗೆ ಜರಗಿತು. ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಕ್ತ ಸಾಲಿನ ಲಾಭಾಂಶದಲ್ಲಿ ಸದಸ್ಯರಿಗೆ ಶೇ.5 ಡಿವಿಡೆಂಡ್ ನೀಡಲು ನಿರ್ಧರಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದೀಪಾ ಅವರು ಸರಕಾರದಿಂದ ಮಹಿಳಾ ಸದಸ್ಯರಿಗೆ ಸಿಗುವ ಹೊಸ ಯೋಜನೆಗಳ ಮಾಹಿತಿ ನೀಡಿದರು. ಸಂಘದ ನಿರ್ದೇಶಕರಾದ ವಿಜಯಾ ಬಿ., ಸುರೇಖಾ ಕಾನೋಜಿ, ಮಹಾಲಕ್ಷ್ಮೀ, ರೇಖಾ ಖಾರ್ವಿ, ಶಾಂತ, ಶಾಂತಿ ಖಾರ್ವಿ, ಸುನೀತಾ ಪೂಜಾರಿ, ರೇಣುಕಾ, ಶ್ಯಾಮಲಾದೇವಿ, ಲಲಿತಾ ಖಾರ್ವಿ, ಶಾಂತಾ ಮರಾಠಿ ನಾಯ್ಕ್ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಶ್ರೀಲವಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಮಿಲಿಂಗೇಶ್ವರ್ ಅವರು 2023-24ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಭಾಸ್ಕರ ಗಾಣಿಗ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷೆ ರತ್ನ ಟಿ. ದೇವಾಡಿಗ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ವಂಡ್ಸೆ ಬಳಿಯ ಕೆಂಚನೂರಿನಲ್ಲಿ ಭಾರೀ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ಬಿದ್ದು ಮಹಿಳೆ ಮತ್ತು ಎರಡು ದನ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಕೆಂಚನೂರು ಗ್ರಾಮದ ಮಲ್ಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರ್ಯ ಅವರ ಪತ್ನಿ ಸುಜಾತಾ ಆಚಾರ್ಯ(44) ಮೃತಪಟ್ಟವರು. ಮನೆಯ ಸಮೀಪ ಮೇಯಲು ಕಟ್ಟಿರುವ ದನವನ್ನು ತರಲು ಬಂದಿದ್ದಾಗ ಗಾಳಿ ಮಳೆಯಿಂದಾಗಿ ಮರ ಬುಡಸಹಿತ ಆಕೆಯ ಮೇಲೆ ಮತ್ತು ಎರಡು ದಿನಗಳ ಮೇಲೆ ಬಿದ್ದಿದೆ. ಸುಜಾತಾ ಅವರು ಪತ್ನಿ ಅಣ್ಣಪ್ಪಯ್ಯ ಆಚಾರ್ಯ ಅಂಗಡಿ ಮಾಡಿಕೊಂಡಿದ್ದು, ನಷ್ಟ ಅನುಭವಿಸಿದ ಕಾರಣ ನಿತ್ಯ ಜೀವನಕ್ಕೆ ದಿನಕೂಲಿ ಕೆಲಸವನ್ನು ಮಾಡುತ್ತಿದ್ದರು.ಅವರಿಗೆ ಓರ್ವ ಪುತ್ರ ಮನೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಖಾಸಗಿ ಶಾಲೆ ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಸುಗಳ ಹಾಲನ್ನು ಮಾರಿ ಹಣ ಸಂಪಾದಿಸುತ್ತಿದ್ದರು. ಕಷ್ಟಪಟ್ಟು ದುಡಿದ ಹಣವನ್ನು ಮನೆ ಕಟ್ಟಲು ಬಳಸುತ್ತಿದ್ದರು. ಈ ದುರ್ಘಟನೆಯಿಂದಾಗಿ ಇಡೀ ಕುಟುಂಬ ಕಂಗಾಲಾಗಿದೆ. ಘಟನಾ ಸ್ಥಳಕ್ಕೆ ಗ್ರಾ.ಪಂ. ಸದಸ್ಯರಾದ ರಾಜೀವ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಕರಾಟೆ ಚಾಂಪಿಯನ್ಶಿಪ್ -2024ರಲ್ಲಿ ಶಿಖಾ 3 ಸುತ್ತಿನ ಗೆಲುವಿನೊಂದಿಗೆ ಚಿನ್ನದ ಪದಕವನ್ನು ಗಳಿಸಿದ್ದಾಳೆ. ಕರಾಟೆ ಚಾಂಪಿಯನ್ಶಿಪ್ -2024ರ ಅಂತಿಮ ಪಂದ್ಯದಲ್ಲಿ 7-0 ಪಾಂಯಿಟ್ನೊಂದಿಗೆ ಗೆಲುವು ಸಾಧಿಸಿದ್ದಾರೆ. ಶಿಖಾ ಕರಾಟೆ ತರಬೇತಿಯನ್ನು ಕುಂದಾಪುರದ ಇವೊಲ್ಯೂಷನ್ ಅಕಾಡೆಮಿ ಆಫ್ ಮೆಟೀರಿಯಲ್ ಆರ್ಟ್ಸ್ & ಫಿಟ್ನೆಸ್ ಸಂಸ್ಥೆಯಲ್ಲಿ ಗುರು ಗ್ರಷಮೇಶ್ ಕುಂದರ್ ಅವರಿಂದ ತರಬೇತಿ ಪಡೆದಿದ್ದಾಳೆ. ಬ್ರಹ್ಮಾವರ ಲಿಟಲ್ರಾಕ್ ಇಂಡಿಯನ್ ಸ್ಕೂಲ್ನ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಶಿಖಾ, ಕುಂದಾಪುರದ ಶ್ರೀದರ್ ಬಿಜೂರು ಹಾಗೂ ದೀಪಿಕಾ ಅವರ ದಂಪತಿಯ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023ನೇ ಸಾಲಿನ ಹಿರಿಯ ಕ್ರೀಡಾಪಟು ಹಾಗೂ ತರಬೇತುದಾರರಾಗಿ ಸಾಧನೆ ಮಾಡಿರುವ ರಾಜ್ಯದ ಹಿರಿಯ ಕ್ರೀಡಾಪಟುಗಳು ಹಾಗೂ ತರಬೇತುದಾರರಿಂದ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಾಗಿ ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 20 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಮೊ. ನಂ: 0820-2521324, 9480886467 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗುರುಕುಲ ಸಂಸ್ಥೆಯಲ್ಲಿ ಗೋಕುಲಾಷ್ಟಮಿಯನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ಸ್ವಪ್ನ ಆಪ್ತ ಸಮಾಲೋಚಕರು ಅವರು ಭಗವದ್ಗೀತೆಯ ವಿವಿಧ ಸಂದೇಶಗಳನ್ನು ಅರ್ಥಪೂರ್ಣವಾಗಿ ತಿಳಿಸುವುದರ ಜೊತೆಗೆ ಪೋಷಕರು ತಮ್ಮ ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು, ಅದರಲ್ಲೂ ಸಣ್ಣ ವಯಸ್ಸಿನಲ್ಲೇ ಹೆಚ್ಚಿನ ಕಥೆಗಳನ್ನು ಹೇಳಿ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಿದಾಗ ಮುಂದೆ ಎಂದು ಅವರು ತಮ್ಮ ಬದುಕಿನಲ್ಲಿ ಎಡುವುದಿಲ್ಲ ಎಂದರು. ಮಕ್ಕಳನ್ನು ಬೆಳೆಸುವಲ್ಲಿ ಶಾಲೆಯ ಶಿಕ್ಷಕರ ಪಾತ್ರಕ್ಕಿಂತಲೂ ಪೋಷಕರ ಪಾತ್ರ ಹಿರಿದಾದ್ದದ್ದು ಅದನ್ನು ಅರಿತು ಮಕ್ಕಳನ್ನು ಬೆಳೆಸಿದ್ದಾದರೆ ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ಬೇರೆ ಏನು ಬೇಕಿಲ್ಲ ಎಂಬುದನ್ನು ಅರ್ಥಪೂರ್ಣವಾಗಿ ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟನ್ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ ಮಾತನಾಡಿ, ನಮ್ಮ ಸನಾತನ ಧರ್ಮದ ಉಳಿವಿಗಾಗಿ ಇಂತಹ ಆಚರಣೆಗಳು ತುಂಬಾ ಮುಖ್ಯ,ಅದರ ಮಹತ್ವವನ್ನು ಈ ಹಂತದಲ್ಲಿ ಮಕ್ಕಳಿಗೆ ತಿಳಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ ಗಂಗೊಳ್ಳಿ ಇವರ ಆಶ್ರಯದಲ್ಲಿ ಪಿಎಂ ಪೋಷಣ್ ಅಭಿಯಾನ್ ಕಾರ್ಯಕ್ರಮದಡಿಯಲ್ಲಿ ತಾಯಂದಿರ ಕೈತುತ್ತು ಕಾರ್ಯಕ್ರಮವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷೆ ಶೋಭಾ ಖಾರ್ವಿ, ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷೆ ಚಂದ್ರಕಲಾ ತಾಂಡೇಲ, ದಾಕುಹಿತ್ಲು ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್, ಎಸ್ಡಿಎಂಸಿ ಸದಸ್ಯರು, ರೋಟರಿ ಸದಸ್ಯರು, ಪೋಷಕರು ಮೊದಲಾದವರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ವತಿಯಿಂದ ಲಕ್ಕಿ ಮದರ್ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 45 ತಾಯಂದಿರು ತಮ್ಮ ಮಕ್ಕಳಿಗೆ ಇಷ್ಟವಾದ ವಿಶಿಷ್ಟ ತಿನಿಸುಗಳನ್ನು ತಯಾರಿಸಿ ತಂದು ತಮ್ಮ ಮಕ್ಕಳಿಗೆ ಕೈಯರೆ ಉಣಬಡಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ, ಕುಂದಾಪುರ ತಾಲೂಕು ಇವರ ಸಹಯೋಗದೊಂದಿಗೆ ಮಧುಮೇಹ ಅರಿವು ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಿಗ್ ಮೆಡಿಕಲ್ ಸೆಂಟರ್ ಉಡುಪಿ ಸಿಟಿ ಇಲ್ಲಿನ ವೈದ್ಯರಾದ ಡಾ| ಶ್ರುತಿ ಬಲ್ಲಾಳ್ ಕಾರ್ಯಕ್ರಮವನ್ನು ಉದ್ದೇಶಿಸಿ ಇತಿ-ಮಿತಿ ಆಹಾರ ಪದ್ಧತಿ ಹಾಗೂ ದೈನಂದಿನ ವ್ಯಾಯಾಮದ ಬದುಕು ಆರೋಗ್ಯವನ್ನು ಸುಸ್ಥಿರದಲ್ಲಿಡುವುದಲ್ಲದೆ, ಮಧುಮೇಹದಂತಹ ಖಾಯಿಲೆ ಬಾರದಂತೆ ತಡೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಸವಿವರವಾಗಿ ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ, ಕುಂದಾಪುರ ತಾಲೂಕು ಇದರ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಚಿಕ್ಕ ವಯಸ್ಸಿನಲ್ಲೇ ಆರೋಗ್ಯದ ಬಗ್ಗೆ ಸಕಲ ಅರಿವು ಅವಶ್ಯಕ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಕಾಲೇಜು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕು ಸಾಹಿತ್ಯ ಪರಿಷತ್ತಿನ 19ನೇ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊಫೆಸರ್ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಅವರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು ಅವರ ಮನೆಯಲ್ಲಿ ವಿದ್ಯುಕ್ತವಾಗಿ ಆಮಂತ್ರಣ ಪತ್ರವನ್ನು ನೀಡುವುದರ ಮುಖೇನ ಸಮ್ಮೇಳನಕ್ಕೆ ಆಹ್ವಾನಿಸಿ ಯಶಸ್ವಿಯಾಗಿ ನಡೆಸಿಕೊಡಲು ಕೋರಿಕೊಂಡರು. ಆಹ್ವಾನ ಸ್ವೀಕರಿಸಿದ ಪ್ರೊಫೆಸರ್ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡುತ್ತಾ, ತಾಲೂಕಿನಲ್ಲಿ ಸಾಹಿತ್ಯ ಸೇವೆಯಲ್ಲಿ ಗಣನೀಯವಾಗಿ ತೊಡಗಿಸಿಕೊಂಡಿರುವ ಅನೇಕ ಹಿರಿಯರ ನಡುವೆ ನನ್ನನ್ನು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕಕ್ಕೆ ಚಿರಋಣಿಯಾಗಿದ್ದೇನೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಆಶಯಗಳಂತೆ ಸಾಹಿತ್ಯ ಸಮ್ಮೇಳನವನ್ನು ಬಹು ಜವಾಬ್ದಾರಿಯಿಂದ ಅಧ್ಯಕ್ಷತೆ ವಹಿಸಿ ನಡೆಸಿಕೊಡುತ್ತೇನೆಂದು ಹೇಳಿದರು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಉಡುಪಿ ತಾಲೂಕು ಸಮ್ಮೇಳನದ ಪೂರ್ವ ಅಧ್ಯಕ್ಷರಾದ ಪ್ರೊಫೆಸರ್ ಉಪೇಂದ್ರ ಸೋಮಯಾ ಜಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಹಿಂದಿ ಉಪನ್ಯಾಸಕರ ಸಂಘದ 2024 -25 ನೇ ಶೈಕ್ಷಣಿಕ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕರಾದ ನಾರಾಯಣ ಈ ನಾಯ್ಕ್ ಆಯ್ಕೆ ಆಗಿರುತ್ತಾರೆ. ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಭೋದಕ ಮತ್ತು ಬೋಧಕೇತರ ವರ್ಗದವರು ಅಭಿನಂದಿಸಿದರು.
